ಪ್ರಕರಣ ದಾಖಲಾದ 12 ಗಂಟೆಗಳಲ್ಲಿಯೇ ಕಳ್ಳನೋರ್ವನ ಬಂಧನ. ಸುಮಾರು 3 ಲಕ್ಷ
ರುಪಾಯಿ ಬೆಲೆಬಾಳುವ ಬಂಗಾರದ ಆಭರಣಗಳ ವಶ.
ಸ್ಟೇಷನ ಬಜಾರ ಠಾಣೆ : ದಿನಾಂಕ; 23-10-2013 ರಂದು
ಸಂಜೆ ಕುಮಾರಿ ಶಾಂತಾಬಾಯಿ ತಂದೆ ಬಸವರಾಜ ಗಣಜಲಖೇಡ ಸಾ|| ಮನೆ ನಂ; 1-9/2/ಸಿ ಖೂಬಾ ಪ್ಲಾಟ ನಾಗಠಾಣ ಆಸ್ಪಾತ್ರೆ ಎದುರುಗಡೆ
ಗುಲಬರ್ಗಾ. ಇವರ ಮನೆಯಲ್ಲಿ ಕಳ್ಳತನವಾದ ಬಗ್ಗೆ ಸ್ಟೇಷನ ಬಜಾರ ಪೊಲೀಸ್
ಠಾಣೆಯಲ್ಲಿ ಗುನ್ನೆ ನಂ. 236/2013 ಕಲಂ. 380 ಐ.ಪಿ.ಸಿ ಪ್ರಕಾರ ದೂರು ದಾಖಲಾಗಿತ್ತು. ಮಾನ್ಯ ಎಸ್ ಪಿ
ಸಾಹೇಬರು, ಹೆಚ್ಚುವರಿ ಎಸ್ ಪಿ
ಸಾಹೇಬರು ಹಾಗು ಡಿಎಸ್ ಪಿ “ಎ”ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸ್ಟೇಷನ
ಬಜಾರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಬಿ ಬಿ ಭಜಂತ್ರಿ, ಪೊಲೀಸ ಸಬ್ ಇನ್ಸಪೇಕ್ಟರ ಗಳಾದ ಮಲ್ಲಕಾರ್ಜುನ ಬಂಡೆ
ಅಪರಧ ವಿಭಾಗ, ಮುರುಳಿ ಎಮ್ ಎನ್
(ಕಾ&ಸು) ಅಖಂಡಪ್ಪಾ ಎ.ಎಸ್.ಐ, ಸಿಬ್ಬಂದಿ ಜನರಾದ
ಬಸವರಾಜ ಆಲೂರ, ಶಿವರಾಜ, ಅಶೋಕ, ಹಾಜಿಮಲಂಗ್, ಶಿವಾಜಿ ಇವರೂಗಳು
ಕೂಡಿಕೊಂಡು ಆರೋಪಿತನಾದ ಶ್ಯಾಮ ತಂದೆ ಪಿರಪ್ಪಾ ದಿಗ್ಗಾಂವಿ ಸಾ|| ಬಿ.ಶ್ಯಾಮಸುಂದರ ನಗರ ಗುಲಬರ್ಗಾ ಇವನನ್ನು ಬೆಳಗಿನ
ಜಾವ ಬಂದಿಸಿ, ಬಂದಿತನಿಂದ ಸುಮಾರು 3,00,000/- ರೂ ಬೆಲೆ ಬಾಳುವ ಬಂಗಾರದ ಉಂಗುರಗಳನ್ನು ಜಪ್ತಿ ಮಾಡಿಕೊಂಡು
ಪ್ರಕರಣ ಬೇದಿಸಲು ಯಶಸ್ವಿಯಾಗಿರುತ್ತಾರೆ.
ಹಲ್ಲೆ ಪ್ರಕರಣ :
ಮಾಡಬೂಳ ಠಾಣೆ : ಶ್ರೀಮತಿ ಶಾರದಾಬಾಯಿ ಗಂಡ ಜಗನ್ನಾಥ ರಾಠೋಡ ಸಾ: ಕೋರವಾರ ತಾಂಡಾ ತಾ: ಚಿತ್ತಾಪೂರ ರವರು ಜೈನಾಬಾಯಿ ಇವಳೆಗೆ 1 ತಿಂಗಳು ಹಿಂದೆ ಒಂದು ಚೀಲ ಡಿ.ಎ.ಪಿ.ಗೊಬ್ಬರ
ಹಾಗೂ 2000/- ರೂಪಾಯಿ ಕೈಗಡ ರೂಪದಲ್ಲಿ ಕೊಟ್ಟಿದ್ದು ಇಂದು ದಿನಾಂಕ-24/10/2013 ರಂದು 9-30 ಎ.ಎಮ್
ಕ್ಕೆ ಜಾಂಗುಬಾಯಿ ಇವಳ ಮನೆಗೆ ಫಿರ್ಯಾಧಿ ಹೋಗಿದ್ದು ಅದೆ ಸಮಯಕ್ಕೆ ಜೈನಾಬಾಯಿ ಇವಳು ಸಹ ಬಂದಾಗ ಫಿರ್ಯಾಧಿ
ಒಂದು ಚೀಲ ಡಿ.ಎ.ಪಿ.ಗೊಬ್ಬರ ಹಾಗೂ 2000/- ರೂಪಾಯಿ
ಕೂಡು ಅಂತಾ ಕೇಳಿದಕ್ಕೆ ವಸಂತ ಚವ್ಹಾನ ಸಂಗಡ 5 ಜನರು ಕುಡಿಕೊಂಡು ಯಾವ ನಿನ್ನ ರೊಕ್ಕ ಕೊಡುವುದಿದೆ
ಅಂತಾ ಅವಾಚ್ಯವಾಗಿ ಬೈದು ಆರೋಪಿತರೆಲ್ಲರೂ ಕೂಡಿ ಫಿರ್ಯಾಧಿಗೆ ಹಾಗೂ ಆತನ ಮಗನಿಗೆ ಕೈಯಿಂದ ಹೊಡೆಬಡೆ
ಮಾಡಿ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment