ಅಪಘಾತ
ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಪ್ರಭುಲಿಂಗ ತಂದೆ ದಯಾನಂದ ಬಿರಾದಾರ ಸಾ; ಕಲಕುಟಗಿ ತಾ; ಆಳಂದ ಜಿ: ಗುಲಬರ್ಗಾ ಇವರ ತಾಯಿಯಾದ ಶ್ರೀಮತಿ.ಬಸಮ್ಮ ಗಂಡ ದಯಾನಂದ ಬಿರಾದಾರ
ವ; 60 ವರ್ಷ ಇವಳಿಗೆ ಕಣ್ಣಿನ ತೊಂದರೆ ಇದ್ದರಿಂದ ಅವಳನ್ನು ಉಪಚಾರ ಕುರಿತು ಮಹಾಗಾಂವ
ಆಸ್ಪತ್ರೆಗೆ ತೋರಿಸಿಕೊಂಡು ಬರಲು ನಾನು ಮತ್ತು ನನ್ನ ತಾಯಿ ಬಸಮ್ಮ ಮತ್ತು ನನ್ನ ತಮ್ಮನ ಮಗನಾದ
ನಾಗರಾಜ ತಂದೆ ಶಂಭುಲಿಂಗ ಬಿರಾದಾರ ವ: 06 ವರ್ಷ ಈತನನ್ನು ಕರೆದುಕೊಂಡು ಇಂದು ದಿನಾಂಕ: 21-10-2013 ರಂದು ಬೆಳೆಗ್ಗೆ ನಮ್ಮೂರಿನಿಂದ
ಖಾಸಗಿ ಜೀಪಿನಲ್ಲಿ ಕುಳಿತು ಹೊರಟು ಕಮಲಾಪೂರದ ಓಕಳಿ ಕ್ರಾಸ್ ಹತ್ತಿರ ಬಂದು ಜೀಪಿನಿಂದ ಇಳಿದು
ಮುಂದೆ ಗುಲಬರ್ಗಾ - ಹುಮನಾಬಾದ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ರಸ್ತೆಯನ್ನು ನಾವು
ದಾಟುತ್ತಿದ್ದಾಗ ನನ್ನ ತಮ್ಮನ ಮಗ ನಾಗರಾಜ ಈತನು ನಮಗಿಂತ ಸ್ವಲ್ಪ ಮುಂದೆ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಹುಮನಾಬಾದ ಕಡೆಯಿಂದ
ಒಬ್ಬ ಡಿ.ಸಿ.ಎಂ ಟೆಂಪೋ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಬಂದು ರಸ್ತೆ ದಾಟುತ್ತಿದ್ದ ನನ್ನ ತಮ್ಮನ ಮಗ ನಾಗರಾಜ ಈತನಿಗೆ ಡಿಕ್ಕಿ ಹೊಡೆದು ಅಪಘಾತ
ಪಡಿಸಿದನು. ಅಷ್ಟರಲ್ಲಿ ನಾನು, ನನ್ನ ತಾಯಿ ಮತ್ತು ನಮ್ಮ ಪರಿಚಯದ ಬಸವರಾಜ ತಂದೆ ಅಣ್ಣಾರಾವ ಚಿತಲಿ ಸಾ: ಅಂಬಲಗಾ ತಾ; ಆಳಂದ ಎಲ್ಲರೂ ಕೂಡಿ ಓಡಿ ಹೋಗಿ ನೋಡಲಾಗಿ ನಾಗರಾಜನ
ಹೊಟ್ಟೆಯ ಮೇಲೆ ಟೆಂಪೋದ ಮುಂದಿನ ಚಕ್ರ ಹಾದು ಹೋಗಿದ್ದು, ನಾಗರಾಜನ ಮೈಕೈಗಳಿಗೆ ಭಾರಿ ರಕ್ತಗಾಯಗಳಾಗಿದ್ದು
ಆಸ್ಪತ್ರೆಯಗೆ ತೆಗೆದುಕೊಂಡು ಹೋಗಿದ್ದು ವೈದ್ಯರು ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ವಿಶ್ವನಾಥ ತಂ ಭೀಮಸಿಂಗ ಪವಾರ ಸಾ: ಮಹಾಗಾಂವ ತಾಂಡ ರವರು ಮತ್ತು ಪ್ರಕಾಶ
ತಂದೆ ಶಿವರಾಮ ಚವಾಣ ಇವರು ಕ್ರಿಕೇಟ ಆಟ ಆಡುವ
ಸಂಬಂದ ದಿನಾಂಕ 20-10-2013 ರಂದು ತಮ್ಮ ತಾಂಡದವನೆಯಾದ ಸಂಜು ತಂದ ಶಂಕರ ಚವಾಣ ಇತನ ಹತ್ತಿರ ಇದ್ದ ಮೋಟಾರ ಸೈಕಲ ಹೀರೊ ಪ್ರೊ ನಂ ಕೆ,ಎ, 32 ಇಡಿ,
5219 ನೇದ್ದನ್ನು ತೆಗೆದುಕೊಂಡು ಭೂಸಣಗಿಗೆ ತಾಂಡಾದಿಂದ ಬೆಳಗ್ಗೆ 10.00
ಗಂಟೆಗೆ ಹೊರಟು ಅಲ್ಲಿ ಕ್ರಿಕೇಟ ಆಡಿ ಸಾಯಂಕಾಲ 7,00 ಪಿ,ಎಮ್,ಕ್ಕೆ ಮಹಾಗಾಂವ ಕ್ರಾಸಿಗೆ ಬಂದು ಚಾಹ ಕುಡಿದು ಎಲ್ಲಾ ಹುಡುಗರು ಟಂಟಂ ಹಿಡಿದುಕೊಂಡು ತಾಂಡಗೆ
ಹೋಗಿದ್ದು ತಾನು ಪ್ರಕಾಶ ತಂದಿದ್ದ ಸದರ ಮೋಟಾರ ಸೈಕಲ ಮೇಲೆ ಹಿಂದೆ ಕುಳಿತಿದ್ದು ಪ್ರಕಾಶ ಇತನು
ಮೋಟಾರ ಸೈಕಲ ಚಲಾಯಿಸುತ್ತಿದ್ದು 7.45 ಪಿ,ಎಮ್,ಕ್ಕೆ ಮಹಾಗಾಂವ ಕ್ರಾಸದಿಂದ ತಾಂಡಾ ಕಡೆಗೆ ಹೊರಟಿದ್ದು 8.00 ಪಿ,ಎಮ್,ಕ್ಕೆ ಮಹಾಗಾಂವ ಗ್ರಾಮದ ಪ್ರೌಡ ಶಾಲೆ ದಾಟಿ ಸ್ವಲ್ಪ ಮುಂದೆ ಇದ್ದ ಬ್ರಿಡ್ಜ ಹತ್ತಿರ
ಹೋಗುತ್ತಿದ್ದಾಗ ಪ್ರಕಾಶ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿ ಸ್ಕೀಡ್ ಮಾಡಿ ಆ ಬ್ರಿಡ್ಜಗೆ ಡಿಕ್ಕಿ ಹೊಡೆದಿದ್ದರಿಂದ ನನಗೆ ತಲೆಗೆ
ಮೈಕೈಗಳಿಗೆ ಭಾರಿ ರಕ್ತಗಾಯಗಲಾಗಿದ್ದು ಪ್ರಕಾಶನಿಗೆ ನೋಡಲಾಗಿ ತಲೆಗೆ ಭಾರಿ ರಕ್ತಗಾಯವಾಗಿ ಬಹಳ ರಕ್ತ
ಸೋರುತ್ತಿತ್ತು ಮತ್ತು ಎಡಗಾಲ ಪಾದದ ಹತ್ತಿರ ರಕ್ತಗಾಯಗಳಾಗಿದ್ದು ನಂತರ ಬಂದು 108 ದಲ್ಲಿ ಹಾಕಿಕೊಂಡು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತಾರೆ ಪ್ರಕಾಶ ಇನ್ನು
ಮಾತಾಡುತ್ತಿಲ್ಲಾ ಅಂತಾ ಸಲ್ಲಿಸಿದ ದುರು
ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಉದಯ ತಂ ಸುಭಾಶ ದೊಡ್ಡಮನಿ ಸಾ : ಪ್ರಶಾಂತ
ನಗರು (ಎ) ಗುಲಬರ್ಗಾ ರವರು ದಿನಾಂಕ 20-10-2013 ರಂದು ಆತನ ಗೆಳೆಯನಾದ ಕುಸನೂರ ಗ್ರಾಮದ
ಸರಸ್ವತಿಪೂರದ ಸಿದ್ದರಾಜ ತಂ ರಮೇಶ ಒಂಟೆ ಇತನು ಬಂದು ತನ್ನ ಅಜ್ಜಿಗೆ ಹುಮನಾಬಾದ ತಾಲೂಕಿನ
ಗಡವಂತಿ ಗ್ರಾಮಕ್ಕೆ ಹೋಗಿ ಮಾತನಾಡಿಸಿ ಬರೋಣ ನಿನ್ನ ಮೋಟಾರ ಸೈಕಲ ತೊಗು ಅಂತಾ ಅಂದಿದ್ದಕ್ಕೆ
ಪಿರ್ಯಾದಿದಾರನು ತನ್ನ ಮನೆಯಲ್ಲಿದ್ದ ತನ್ನ ಅಣ್ಣನಾದ ಉತ್ತಮ ಇತನ ಟಿ,ವಿ,ಎಸ್, ಸ್ಟಾರ ಸೀಟಿ ನಂ ಕೆ,ಎ,
32 ಡಬ್ಲೂ 7516 ನೇದ್ದನ್ನು ತೆಗೆದುಕೊಂಡಿದ್ದು 3.15 ಪಿ,ಎಮ್,ಕ್ಕೆ ಗುಲಬರ್ಗಾದಿಂದ ಗಡವಂತಿ ಗ್ರಾಮಕ್ಕೆ ಹೊರಟಿದ್ದು 4.45 ಪಿ,ಎಮ್,ಕ್ಕೆ ಸಿದ್ದರಾಜು ಇತನು ಸದರ ಮೋಟಾರ ಸೈಕಲ
ಚಲಾಯಿಸುತ್ತಿದ್ದು ತಾನು ಹಿಂದೆ ಕುಳತಿದ್ದು ಮಹಾಗಾಂವ ಕ್ರಾಸ ಹತ್ತಿರ ಇರುವ ಸಿದ್ದಭಾರತಿ ಶಾಲೆ
ದಾಟುತಿದ್ದಂತೆಯ ಸಿದ್ದರಾಜ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿ ರೋಡಿನ ಎಡಗಡೆ ಇರುವ ಗುಟದ ಕಲ್ಲಿಗೆ ಜೋರಾಗಿ ಹೊಡೆದು ಅಪಘಾತ
ಪಡಿಸಿದ್ದರಿಂದ ನನಗು ಮತ್ತು ಸಿದ್ದರಾಜು ಇತನಿಗು ಕಾಲು ಮತ್ತು ಮೈಕೈಗಳಿಗೆ ಬಾರಿ ರಕ್ತಗಾಯಗಳಾಗಿರುತ್ತವೆ
ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment