ಪಡಿತರ ಅಕ್ಕಿ ಜಪ್ತಿ :
ಗ್ರಾಮೀಣ ಠಾಣೆ :
ದಿನಾಂಕ 25-10-13 ರಂದು ಸಾಯಂಕಾಲ
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ ವ್ಯಾಪ್ತಿಯ ಪೈಕಿ ರೇವಣಸಿದ್ದೇಶ್ವರ ಕಾಲನಿಯಲ್ಲಿ
ರತ್ನಮ್ಮ ನಿಲಯ ಎಂಬ ಮನೆಯಲ್ಲಿ ಸರಕಾರದಿಂದ ನ್ಯಾಯ
ಬೆಲೆ ಅಂಗಡಿ ಮುಖಾಂತರ ಪಡಿತರ ಚೀಟಿಯ ಮೇಲೆ ವಿತರಣೆಯಾಗುವ ಅಕ್ಕಿ ಚೀಲಗಳನ್ನು ದಾಸ್ತಾನು ಮಾಡಿರುತ್ತಾರೆಂದು ಖಚಿತ ಬಾತ್ಮಿ ಬಂದ
ಮೇರೆಗೆ ಮಾನ್ಯ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ
ಎಸ್.ಪಿ. ಗುಲಬರ್ಗಾ, ಮಾನ್ಯ ಎ.ಎಸ್.ಪಿ. (ಗ್ರಾ) ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಮಾನ್ಯ ಡಿ.ಎಸ್.ಪಿ. (ಪ್ರೋ) ರವರ ನೇತೃತ್ವದಲ್ಲಿ
ಮಾನ್ಯ ಸಿಪಿಐ ಗ್ರಾಮೀಣ ವೃತ್ತ , ಗ್ರಾಮೀಣ ಪೊಲೀಸ ಠಾಣೆಯ ಶ್ರೀ ಸುಭಾಶ್ಚಂದ್ರ ಎ.ಎಸ್.ಐ. ಮತ್ತು
ಸಿಬ್ಬಂದಿಯವರಾದ ಸಿಪಿಸಿ 1061 ನರಸಿಂಹ ಚಾರಿ, ಸಿಪಿಸಿ 678 ಹುಸೇನಬಾಷಾ, ಸಿಪಿಸಿ 550
ರಾಜಕುಮಾರ, ಸಿಪಿಸಿ 261 ಹಣಮಂತ ರವರೊಂದಿಗೆ ಬಾತ್ಮಿಯಂತೆ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಅಕ್ಕಿ
ದಾಸ್ತಾನು ಮಾಡಿದ ರೇವಣಸಿದ್ಧಪ್ಪ @ ಸಿದ್ಧು
ತಂದೆ ರವೀಂದ್ರ ಮಾಹಾಜನ ಸಾ: ರೇವಣಸಿದ್ದೇಶ್ವರ ಕಾಲನಿ ಗುಲಬರ್ಗಾ ಈತನನ್ನು ದಸ್ತಗಿರಿ ಮಾಡಿ ಅವನ
ವಶದಿಂದ 50 ಕೆ.ಜಿ.ಯ 92 ಅಕ್ಕಿ ಚೀಲಗಳು ಅ:ಕಿ:
59,800/- ರೂ. ಮತ್ತು ಟಂಟಂ ಕೆಎ 32 ಎ 3292 ಅ:ಕಿ: 80,000/- ರೂ. ನೇದ್ದವುಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಕ್ರಮ ಮರಳು ಸಾಗಾಣೆ ಮಾಡುವವರ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಆಸೀಫವುಲ್ಲಾ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗುಲಬರ್ಗಾ ರವರು
ಠಾಣೆಗೆ ಹಾಜರಾಗಿ 02 ಜನ ಆರೋಪಿತರು ಮತ್ತು ಜಪ್ತಿ ಪಂಚನಾಮೆ, ಒಂದು ವರದಿಯನ್ನು ಸಲ್ಲಿಸಿದ್ದು
ಅದರ ಸಾರಾಂಶವೆನೆಂದರೇ, ದಿನಾಂಕ 25-10-2013 ರಂದು 03:30 ಎ.ಎಂ ಕ್ಕೆ ಪದ್ಮನಾಭಚಾರ ಉಪ ನಿರ್ದೇಶಕರು
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗುಲಬರ್ಗಾ ಇವರು ಫೋನ್ ಮುಖಾಂತರ ನನಗೆ ತಿಳಿಸಿದ್ದೇನೆಂದರೇ,
ಸೇಡಂ ರೋಡ್ ಕಡೆಯಿಂದ ಕೆಲವು ಟ್ರಾಕ್ಟರ ಚಾಲಕರು ಅನಧಿಕೃತವಾಗಿ ಮರಳು ಸಾಗಾಣಿಕೆ
ಮಾಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದಿರುತ್ತದೆ. ಆದ್ದರಿಂದ ನೀವು ಎಂ.ಬಿ ನಗರ ಪೊಲೀಸ್
ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಸಹಕಾರ ಪಡೆದುಕೊಂಡು ಪಂಚರನ್ನು ಕರೆಯಿಸಿಕೊಂಡು ತಪಾಸಣೆ
ಮಾಡಲು ತಿಳಿಸಿದ ಮೇರೆಗೆ ಮಾನ್ಯರವರ ಆದೇಶದ ಮೇರೆಗೆ ನಾನು ಇಬ್ಬರು ಪಂಚರು ಮತ್ತು ಎಂ.ಬಿ ನಗರ
ಪೊಲೀಸ್ ಠಾಣೆ ಪಿ.ಎಸ್.ಐ (ಅ.ವಿ) ಹಾಗೂ ಅವರ ಸಿಬ್ಬಂದಿಜನರೊಂದಿಗೆ ಸೇಡಂ ರಿಂಗ್ ರೋಡ ಹತ್ತಿರ ನಿಂತು ಹೋಗಿ ಸೇಡಂ ರೋಡ್
ಕಡೆಯಿಂದ ಅನಧಿಕೃತ ಮರಳನ್ನು ಕಳ್ಳತನ ಮಾಡಿಕೊಂಡು 02 ಟ್ರಾಕ್ಟರಗಳು ಮರಳನ್ನು ತುಂಬಿಕೊಂಡು ಸೇಡಂ
ರೋಡ್ ಕಡೆಯಿಂದ ಹುಮನಾಬಾದ ರಿಂಗ್ ರೋಡ್ ಕಡೆಗೆ ಹೋಗುತ್ತಿರುವಾಗ ಸೇಡಂ ರಿಂಗ್ ರೋಡ್ ಹತ್ತಿರ
ನಿಲ್ಲಿಸಲು ತಿಳಿಸಿದ ಮೇರೆಗೆ ಸದರಿ ಟ್ರಾಕ್ಟರ ಚಾಲಕರಿಗೆ ತಮ್ಮ ದಾಖಲಾತಿಗಳು ಕೇಳಿದಾಗ
ಟ್ರಾಕ್ಟರ ಚಾಲಕರು ಮರಳು ತುಂಬಿಕೊಂಡು ಹೊಗುತ್ತಿರುವುದಾಗಲಿ ಹಾಗೂ ಮರಳಿನದಾಗಲಿ ಯಾವುದೆ ಕಾಗದ
ಪತ್ರಗಳು ಹಾಜರು ಪಡಿಸಿರುವುದಿಲ್ಲಾ. ನಂತರ ಸದರಿ ಮರಳನ್ನು ಎಲ್ಲಿಂದ ತರುತ್ತೀರಿ ಅಂತಾ
ಕೇಳಿದಕ್ಕೆ ಚಿತ್ತಾಪೂರ ತಾಲ್ಲೂಕಿನ ಭಾಗೋಡಿಯಿಂದ ತರುತ್ತಿರುತ್ತೇವೆ ಅಂತಾ ತಿಳಿಸಿದ್ದು ನಂತರ
1) Tractor engine No. KA
32 TA 6158 & Trolley No. KA 32 TA 6159 ನೇದ್ದರ ಚಾಲಕನಿಗೆ
ಹೆಸರು ವಿಚಾರಿಸಲು ತನ್ನ ಹೆಸರು ರಿಯಾಜ್ ತಂದೆ ಗಫೂರ ಮಿಯಾ ಮಕಾನ್ದಾರ ವಯಃ 23 ವರ್ಷ ಜಾತಿಃ
ಮುಸ್ಲಿಂ ಉಃ ಟ್ರಾಕ್ಟರ ಚಾಲಕ ಸಾಃ ಬೆಳಗುಂಪಾ ತಾಃ ಚಿತ್ತಾಪೂರ ಜಿಃ ಗುಲಬರ್ಗಾ ಅಂತಾ
ತಿಳಿಸಿದ್ದು ನಂತರ 2) Tractor engine No. KA
32 TA 3254 & Trolley No. KA 32 TA 3255 ನೇದ್ದವನಿಗೆ
ವಿಚಾರಿಸಲು ತನ್ನ ಹೆಸರು ಯಲ್ಲಾಲಿಂಗ ತಂದೆ ಶಂಕರ ಪೂಜಾರಿ ವಯಃ 23 ವರ್ಷ ಜಾತಿಃ ಕುರುಬ ಸಾಃ
ಬೆಳಗುಂಪಾ ತಾಃ ಚಿತ್ತಾಪೂರ ಜಿಃ ಗುಲಬರ್ಗಾ ಅಂತಾ ತಿಳಿಸಿದ್ದು ನಂತರ ಸದರಿ 02 ಟ್ರಾಕ್ಟರಗಳ
ಹಿಂದುಗಡೆ ಇನ್ನೂ 06 ಟ್ರಾಕ್ಟರಗಳು ಬಂದಿದ್ದು ನಾವು ವಿಚಾರಣೆ ಮಾಡುತ್ತಿರುವುದನ್ನು ನೋಡಿ ಸದರಿ
06 ಟ್ರಾಕ್ಟರ ಚಾಲಕರು ತಮ್ಮ ಟ್ರಾಕ್ಟರಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ.
ಸದರಿ 06 ಟ್ರಾಕ್ಟರಗಳ ನಂಬರ ನೋಡಲಾಗಿ 3) Tractor engine No. KA 32 T 7138 & Trolley
No. KA 32 T 7139, 4) Tractor engine No. KA 32 T 1866 & Trolley No. KA 32 T
1867 5) Tractor engine No. KA 32 T 1530 & Trolley No. KA 32 T 1531 6)
Tractor engine No. MYP 4954 & Trolley No. MYP 4955 7) Tractor engine No. KA
32 TA 6004 & Trolley No. KA 32 TA 6005 8) Tractor engine No. KA 32 T 319
& Trolley No. KA 32 T 320 ಅಂತಾ ಇರುತ್ತದೆ. ಸದರಿ 08 ಟ್ರಾಕ್ಟರಗಳ ಅಃಕಿಃ
32,00,000/- ರೂ ಹಾಗು 08 ಟ್ರಾಕ್ಟರಗಳಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಮರಳಿನ ಅಃಕಿಃ
24000/- ರೂ. ನೇದ್ದನ್ನು ಅನಧಿಕೃತವಾಗಿ ಯಾವುದೇ ಪರವಾನಿಗೆ ಹೊಂದದೆ ತಮ್ಮ ಟ್ರಾಕ್ಟರ
ಟ್ರ್ಯಾಲಿಯಲ್ಲಿ ಮರಳನ್ನು ತುಂಬಿಕೊಂಡು ಸರಕಾರದ ಬೊಕ್ಕಸಕ್ಕೆ ಮೋಸ ಮಾಡುವ ಉದ್ದೇಶದಿಂದ ಮರಳನ್ನು
ಕಳುವು ಮಾಡಿಕೊಂಡು ಸಾಗಿಸುತ್ತಿರುವ 08 ಟ್ರಾಕ್ಟರಗಳನ್ನು ಹಾಗು 02 ಜನ ಆರೋಪಿತರನ್ನು ಜಪ್ತಿ ಪಂಚನಾಮೆ ಹಾಜರ ಪಡಿಸಿದರ ಮೇರೆಗೆ
ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಈಶ್ವರಪ್ಪ ತಂದೆ ಮರೆಪ್ಪ ಸಾ|| ಯನಗುಂಟಾ ತಾ|| ಜೇವರ್ಗಿ ಇವರು ಠಾಣೆಗೆ ಬಂದು ಪಿರ್ಯಾದಿ ಅರ್ಜಿ ಹಾಜರ ಪಡಿಸಿದ್ದು ಅದರ ಸಂಕ್ಷಿಪ್ತ
ಸಾರಾಂಶವೆನೆಂದರೆ ದಿನಾಂಕ 25/10/2013 ರಂದು ನನ್ನ ವ್ಯಯಕ್ತಿಕ
ಕೆಲಸಕ್ಕಾಗಿ ನನ್ನ ಊರಾದ ಯನಗುಂಟಾದಿಂದ ಗುಲಬರ್ಗಾಕ್ಕೆ ಮುಂಜಾನೆ 8 ಗಂಟೆಗೆ ಬಂದು ಬಸ್
ನಿಲ್ದಾಣದಲ್ಲಿ ಬಸ್ಸದಿಂದ ಇಳಿಯುವಾಗ ನುಕುನುಗ್ಗಲು ಉಂಟಾಗಿದ್ದು ಆ ವೇಳೆಯಲ್ಲಿ ಯಾರೋ ಕಳ್ಳರು
ನನ್ನ ಪ್ಯಾಂಟ ಜೇಬಿನಲ್ಲಿ ಕೈಹಾಕಿ ಜೇಬುಗಳ್ಳತನ ಮಾಡಿಕೊಂಡು ಹೋಗಿದ್ದು ಅದರಲ್ಲಿ 6500/- ರೂ ನಗದು ಹಣ ಮತ್ತು ಎ.ಟಿ.ಎಮ್. ಕಾರ್ಡ, ಪಾನ್
ಕಾರ್ಡ, ಐ.ಡಿ ಕಾರ್ಡ ಇರುತ್ತವೆ ಅಂತಾ ಸಲ್ಲಿಸಿದ ದುರು
ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment