ವರದಕ್ಷಣೆ ಕಿರುಕಳ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಪಾರ್ವತಿ ಗಂಡ ಶಂಕರಗೌಡ ದೇಸಾಯಿ ಸಾ: ಕೊಲಕುಂದಾ ಇವರಿಗೆ ಈಗ್ಗೆ ಸುಮಾರು 11 ವರ್ಷಗಳಹಿಂದೆ ನಮ್ಮ ತಂದೆಯವರಾ ವೆಂಕಟ ರೆಡ್ಡಿ ಇವರು ಕೊಲಕುಂದಾ ಗ್ರಾಮದ ಪರ್ವತ ರೆಡ್ಡಿ ಇವರ ಮಗನಾದ ಶಂಕರ ಗೌಡ ಇವರಿಗೆ ನನಗೆ ಕೊಟ್ಟು ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿರುತ್ತಾರೆ. ನನಗೆ ಒಂದು ಹೆಣ್ಣು ಹಾಗು ಒಂದು ಗಂಡು ಮಕ್ಕಳು ಇರುತ್ತಾರೆ. ಮದುವೆಯ ಕಾಲಕ್ಕೆ ನನ್ನ ತಂದೆಯವರು ನನ್ನ ಗಂಡನಿಗೆ ಒಂದುವರೆ ಲಕ್ಷ ರೂಪಾಯಿ ಹಾಗು ಎರಡು ತೊಲೆ ಬಂಗಾರ ಕೊಟ್ಟಿರುತ್ತಾರೆ. ನನ್ನ ಮಧುವೆಯಾಗಿ ಒಂದು ವರ್ಷದವರೆಗೆ ನನ್ನ ಗಂಡ ನನಗೆ ಸರಿಯಾಗಿ ನೋಡಿಕೊಂಡಿರುತ್ತಾರೆ. ನಂತರ ನನ್ನ ಗಂಡ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ದೈಹಿಕ ಹಾಗು ಮಾನಸಿಕ ಕಿರುಕುಳ ಕೊಡತ್ತಿದ್ದನು. ನಾನು ಹಬ್ಬಕ್ಕೆ ಬಾಂದಾಗ, ನಮ್ಮ ತಂದೆಯವರಿಂದ ರೂ 50,000/- ತೆಗೆದುಕೊಂಡು ಹೊಗಿ ನನ್ನ ಗಂಡನಿಗೆ ಕೊಟ್ಟಿರುತ್ತೇನೆ. ನನ್ನ ತಂದೆಯವರು. ನನ್ನ ಗಂಡನಿಗೆ ಒಂದುಮೊಟಾರ ಸೈಕಲ್ ಕೊಡಿಸಿರುತ್ತಾರೆ. ಹಾಗು ಸಿಮೇಂಟ ಏಜೇನ್ಸಿ ಕೊಡಿಸಿರುತ್ತಾರೆ. ಆದರು ನನ್ನ ಗಂಡ ನಿರಂತರವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ಮೊನ್ನೆ ದಿನಾಂಕ: 27-10-2013 ರಂದು ರಾತ್ರಿ 2200 ಗಂಟೆಯ ಸುಮಾರಿಗೆ ಪುನಃ ನನ್ನ ಗಂಡ ನನಗೆಇನ್ನು 50,000/- ರೂ. ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಜಗಳಾ ತೆಗೆದಿರುತ್ತಾನೆ ಆಗ ನಾನು ನನ್ನ ಗಂಡನಿಗೆ ನಾವು 5 ಜನ ಅಕ್ಕ ತಂಗಿಯಂದಿಯರು ಇರುತ್ತೇವೆ ನಮ್ಮ ತಂದೆ ಎಲ್ಲರಿಗು ನೋಡಿಕೊಳ್ಳಬೇಕು ಆದ್ದರಿಂದ ನಾನು ತವರು ಮನೆಯಿಂದ ಹಣ ತರುವದಿಲ್ಲಾ ಅಂತಾ ಹೇಳಿದಕ್ಕೆ ನನಗೆ ನನ್ನ ಗಂಡ ಅವಾಚ್ಯ ಶಬ್ದಗಳಿಂದ ಬೈದು ನೀನು ತವರು ಮನೆಯಿಂದ ಹಣ ತರುವದಿಲ್ಲಾ ಅಂತಾ ಹೇಳುತಿ ಎಂದು ಕೈಯಿಂದ ಹೊಡೆ ಬಡೆ ಮಾಡಿ, ನನ್ನ ಕುತ್ತಿಗೆ ಹಿಡಿದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಪ್ಪ ತಂದೆ ಚಂದ್ರಶಾ ರವರು ದಿನಾಂಕ: 30-10-2013 ರಂದು ಮಧ್ಯಾಹ್ನ 1=30 ಗಂಟೆ ಸುಮಾರಿಗೆ ಎನ್.ವಿ.ಶಾಲೆಯ ಎದುರಿನ ರೋಡಿನ ಪಕ್ಕದಲ್ಲಿ ನನ್ನ ಸೈಕಲ ರಿಕ್ಷಾ ನಿಲ್ಲಿಸಿ ರೋಡ ದಾಟಿ ಚಹಾ ಕುಡಿದು ವಾಪಸ್ಸ ರೀಕ್ಷಾ ಹತ್ತಿರ ಬರುವಾಗ ಆನಂದ ಹೊಟೇಲ ಕಡೆಯಿಂದ ಮೋ/ಸೈಕಲ್ ನಂ: ಕೆಎ 32 ಇಬಿ 3174 ರ ಸವಾರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 30-10-2013 ರಂದು 01-20 ಪಿ.ಎಮ್ ಕ್ಕೆ ಶ್ರೀ ಧೂಳಪ್ಪಾ ತಂದೆ ಅಂಬಾರಾಯ ನಾಟಿಕಾರ, ಸಾಃ ಶಿವಾಜಿ ನಗರ ಗುಲಬರ್ಗಾ ರವರು ತನ್ನ ಅಟೋರಿಕ್ಷಾ ನಂ. ಕೆ.ಎ 32 ಬಿ 8605 ನೇದ್ದರಲ್ಲಿ ಪಾಂಡು ಇವರನ್ನು ಕೂಡಿಸಿಕೊಂಡು ರಘೋಜಿ ಪೈನಾನ್ಸ ಹತ್ತಿರ ಚಲಾಯಿಸಿಕೊಂಡು ಹೊಗುತ್ತಿದ್ದಾಗ ಕಾರ ನಂ. ಕೆ.ಎ 32 ಜೆಡ್ 3232 ನೇದ್ದರ ಚಾಲಕ ತನ್ನ ಕಾರನ್ನು ಹುಮನಾಬಾದ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಅಟೋರಿಕ್ಷಾಕ್ಕೆ ಎದರುನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಬಲಗಣ್ಣಿನ ಹುಬ್ಬಿಗೆ ಬಾಯಿಯ ಕೆಳತುಟಿಗೆ ರಕ್ತಗಾಯವಾಗಿದ್ದು ತಲೆಗೆ ಮತ್ತು ಎರಡು ಮೊಳಕಾಲುಗಳಿಗೆ ಗುಪ್ತ ಪೆಟ್ಟಾಗಿರುತ್ತದೆ. ಅಟೋರಿಕ್ಷಾ ಕುಳಿತು ಹೊರಟ ಪಾಂಡು ಇವರಿಗೆ ಬಲಗಾಲು ಮೊಳಕಾಲು ಕೆಳಗೆ ರಕ್ತಗಾಯವಾಗಿ ಗುಪ್ತ ಪೆಟ್ಟಾಗಿದ್ದು ಅಪಘಾತ ಪಡಿಸಿದ ಕಾರ ಚಾಲಕ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸೈಯದ ಮಸುದ ಅಲ್ವಿ ತಂದೆ ಸೈಯದ ಮೈನುದ್ದಿನ್ ಅಲ್ವಿ ಸಾ; ಪ್ಲಾಟ ನಮ: 03 ಮಿಸ್ಬಾ ನಗರ ರಿಂಗ್ ರೋಡ ಗುಲಬರ್ಗಾ ರವರು ದಿನಾಂಕ: 29-09-2013 ರಂದು ಬೆಳಿಗ್ಗೆ ತರಕಾರಿ ತಲರು ಕಣ್ಣಿ ಮಾರ್ಕೆಟಗೆ ಬಂದಾಗ ಸಮಯ 11-15 ಎಎಮ್ ಕ್ಕೆ ನಾನು ನಿಲ್ಲಿಸಿದ ಗಾಡಿ ಬಂದು ನೊಡಲಾಗಿ ಕಾಣಲಿಲ್ಲ ನಂತರ ಠಾಣೆಗೆ ಬಂದು ತಿಳಿಸಿರುತ್ತೇನೆ. ಎಲ್ಲಾ ಕಡೆ ಹುಡಕಾಡಿ ಇಂದು ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ನನ್ನ ಹಿರೊಹೊಂಡಾ ಸ್ಪ್ಲೆಂಡರ ಕಪ್ಪು ಬಣ್ಣದ್ದು 2001 ರ ಮಾದರಿ ಅದರ ಪೆಟ್ರೋಲ್ ಟ್ಯಾಂಕ ಗೆ ಎಮ-ಸಿಲ್ ಹಚ್ಚಿದ್ದು ಗಾಡಿ ನಂ: ಕೆಎ- 36 ಜೆ-6778 ಅ.ಕಿ. 22,000/- ರೂ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment