ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ
ನಿತೀನ್ ತಂದೆ ನಾರಾಯಣ ಗಿರಿ ಸಾ: ಚಕ್ರಿ ತಾ: ಹದಗಾಂವ
ಜಿಲ್ಲಾ: ನಾಂದೇಡ
ರವರು ಗೊವಿಂದ ಸಿಂದೆ ಸಾ:ರೊಹಿದಾನೂರ ಇವರ ಲಾರಿ ನಂ: ಎಮ್‌ಹೆಚ್-26
ಹೆಚ್-6597 ನೇದ್ದರ ಮೇಲೆ ಕ್ಲಿನರ್ ಅಂತಾ ಕೆಲಸ ಮಾಡಿಕೊಂಡು ಇರುತ್ತೇನೆ. ದಿನಾಂಕ: 18-10-2013
ರಂದು ರಾತ್ರಿ ವೇಳೆಯಲ್ಲಿ ನಾಂದೇಡದಲ್ಲಿ ಇರುವ ಡ್ರಾಕಲ್ ಕಂಪನಿಯಲ್ಲಿ ಲಾರಿಯಲ್ಲಿ ಜಿಪಿ
ಕ್ವಯಿಲ್ಸ್ ಅನ್ನು ಲೋಡ ಮಾಡಿಕೊಂಡು ಕಂಪನಿಯಿಂದ ರಾತ್ರಿ ಹೊರಗೆ ಬಂದು ನಾಂದೇಡ ನಗರದಲ್ಲಿ ಇದ್ದು, ನಿನ್ನೆ ದಿನಾಂಕ: 20-10-2013
ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಬೆಂಗಳೂರಿನ ನೆಲಮಂಗಲಕ್ಕೆ ಹೊರಟ್ಟಿದ್ದು ಸದರಿ
ಲಾರಿಯಲ್ಲಿ ನಾನು ಮತ್ತು ಗೊವಿಂದ ಸಿಂದ ಹಾಗೂ ಲಾರಿಯ ಚಾಲಕರಾದ ಲಕ್ಷ್ಮಣ ಕದಮ್, ಬಾಪುರಾವ ಸಿಂದೆ ಇವರುಗಳು ಇದ್ದು, ಲಾರಿಯನ್ನು ಬಾಪುರಾವ ಸಿಂದೆ ಈತನು
ಚಲಾಯಿಸುತ್ತಿದ್ದನು. ದಿನಾಂಕ: 21-10-2013 ರಂದು ಗುಲಬರ್ಗಾ
ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 218 ರ ರ ಸ್ತೆಯ ಮೇಲೆ ಶಾಹಾಭಾದ ಕ್ರಾಸ ದಾಟಿ ಮುಂದೆ ಭೀಮಾ
ಬ್ರಿಜ್ ಹತ್ತಿರ ಹೋಗುತ್ತಿರುವಾಗ ಲಾರಿಯ ಚಾಲಕನಾದ ಬಾಪುರಾವ ಸಿಂದೆ ಇತನು ಲಾರಿಯನ್ನು
ಅತಿವೇಗದಿಂದ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಿರುವಾಗ ಬೆಳಗ್ಗೆ 6-30 ಗಂಟೆಯ ಸುಮಾರಿಗೆ
ಲಾರಿಯ ಮುಂದಿನ ಎರಡು ಗಾಲಿಯ ಟಾಯರಗಳು ಒಮ್ಮಲೇ ಬ್ಲಾಸ್ಟ ಆಗಿದ್ದರಿಂದ ಲಾರಿಯ ಆಯ ತಪ್ಪಿ ರೋಡಿನ
ಬಲಭಾಗಕ್ಕೆ ತೆಗ್ಗಿನಲ್ಲಿ ಹೋಗಿದ್ದ ರಿಂದ ಲಾರಿಯಲ್ಲಿ ಲೋಡ ಮಾಡಿದ ಜಿಪಿ ಕ್ವಯಿಲ್ಸ್ ಟಿನಗಳು ಕ್ಯಾಬಿನ
ಹರಿದು ಕ್ಯಾಬಿನಲ್ಲಿ ಬಂದು ಕ್ಯಾಬಿನಲ್ಲಿದ್ದ ಗೊವಿಂದ ಸಿಂದೆ ಈತನ ತಲೆಯ ಮೇಲೆ ಬಿದ್ದದ ರಿಂದ
ತಲೆಯು ಪೂರ್ತಿಯಾಗಿ ಒಡೆದು ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಅಲ್ಲದೆ ಲಕ್ಷ್ಮಣ ಕದಮ್ ಈತನ ಮೈ
ಮೇಲೆ ಬಿದ್ದು ಕುತ್ತಿಗೆಯ ಭಾಗಕ್ಕೆ, ಎದೆಯ ಭಾಗಕ್ಕೆ ಭಾರಿ
ಒಳಪೆಟ್ಟಾಗಿ, ಹೊಟ್ಟೆಯ
ಮೇಲೆ, ಎಡಗೈ ಮುಂಗೈ ಹತ್ತಿರ ಭಾರಿ ರಕ್ತಗಾಯವಾಗಿದ್ದಲ್ಲದೆ, ಪಾದಗಳಿಗೆ ಅಲ್ಲಿಲ್ಲ ತೆರಚಿದ ಗಾಯವಾಗಿ ಅವನು ಸಹ ಸ್ಥಳದಲ್ಲಿಯೇ ಮೃತ
ಪಟ್ಟಿರುತ್ತಾನೆ. ನನಗೆ ಎಡಗೈ ಭುಜದ ಮುಳೆ ಮುರಿದಂತೆಯಾಗಿದ್ದು ಇರುತ್ತದೆ. ಲಾರಿ
ಚಲಾಯಿಸುತ್ತಿದ್ದ ಭಾಪುರಾವ ಸಿಂದೆ ಇತನಿಗೆ ಎಡಗಾಲಿನ ಕಪ್ಪಗಂಡ ಮೊಳಕಾಲಿನ ಹತ್ತಿರ ರಕ್ತಗಾಯಗಳಾಗಿರುತ್ತವೆ
ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಲಕ್ಷ್ಮಣ
ತಂದೆ ಹಣಮಂತ ಮಂಜಳಕರ ಸಾ: 16 (ಎ) ಪೊಲೀಸ ಹೆಡ ಕ್ವಾಟರ್ಸ ಗುಲಬರ್ಗಾ ರವರು ದಿನಾಂಕ 20-10-2013 ರಂದು ರಾತ್ರಿ 11-30 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ಎಲ್ 4271 ನೆದ್ದನ್ನು ಚಲಾಯಿಸಿ ಕೊಂಡು
ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಜಗತ ಸರ್ಕಲ್ ರೋಡ ಕಡೆಗೆ ಹೋಗುತ್ತಿದ್ದಾಗ ಎನ್.ಸಿ.ಸಿ. ಆಫೀಸ್
ಎದುರಿನ ರೋಡ ಮೇಲೆ ಮೋ/ಸೈಕಲ್ ನಂ: ಕೆಎ 36 ಜೆ 9846 ರ ಸವಾರನಾದ ಸಂಗಮನಾಥ ಈತನು ತನ್ನ
ಮೋ/ಸೈಕಲನ್ನು ಎಸ್.ಬಿ.ಪೆಟ್ರೋಲ್ ಪಂಪ್ ಕಡೆಯಿಂದ ರಾಂಗ ಸೈಡಿನಿಂದ ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು ಬರುತ್ತಿದ್ದ ಮೋ/ಸೈಕಲಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ
ತಾನು ಕೂಡಾ ಗಾಯಗೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment