Police Bhavan Kalaburagi

Police Bhavan Kalaburagi

Sunday, October 6, 2013

Gulbarga District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ²æà ಗಿರಿಮಲ್ಲಪ್ಪ ತಂದೆ ದೇವಿಂದ್ರಪ್ಪ ತಳವಾರ  ಸಾ: ಸಿನ್ನೂರ ಅಂಕಲಗಿ ತಾ:ಅಫಜಲಪೂರ ರವರು ದಿನಾಂಕ 05-10-2013 ರಂದು ಹುಲೆಪ್ಪಾ ತಂದೆ ಬಾಬುರಾವ ಕೋಡಿ ಸಾ: ಗಣೇಶ ನಗರ ಗುಲಬರ್ಗಾ ರವರ ಮೋಟಾರ ಸೈಕಲ್ ನಂ ಕೆಎ 32 ಎಲ್ 7516 ನೇದ್ದರ ಹಿಂದೆ ಕುಳಿತುಕೊಂಡು ಸಿನ್ನೂರ ಅಂಕಲಗಿ ಗ್ರಾಮದಿಂದ ಗುಲಬರ್ಗಾಕ್ಕೆ ಹಬ್ಬದ ಸಂತೆ ಕುರಿತು  ಹೊರಟಿದ್ದು ಆರೋಪಿತನು ತನ್ನ ಮೋಟಾರಸೈಕಲ್ನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಸುತ್ತಿದ್ದು ನಾನು ಸಾವಕಾಶವಾಗಿ ಚಲಾಯಿಸು ಅಂತಾ ಹೇಳಿದರು ಕೂಡಾ ಬೆಳಗ್ಗೆ 8-30 ಗಂಟೆ ಸುಮಾರಿಗೆ ಕೆರೆ ಭೋಸಗಾ ಕ್ರಾಸ ಟರ್ನಿಂಗನಲ್ಲಿ ಅತೀ ವೇಗದಿಂದ ಟರ್ನ ಮಾಡಿದಾಗ ವೇಗದ ಆಯ ತಪ್ಪಿ ರೋಡಿನ ಬದಿಯಲ್ಲಿ ಮೋಡಾರ ಸೈಕಲ್ ದೋಂದಿಗೆ ಆಯ ತಪ್ಪಿ ಬಿದ್ದಿದ್ದು ಇದರಿಂದ ನನಗೆ ಭಾರಿ ರಕ್ಕಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಯಾಕುಬ ಅಲಿ ತಂದೆ ಶೌಕತ ಅಲಿ ಸಾಃ ಸಂತ್ರಾಸವಾಡಿ ಗುಲಬರ್ಗಾ ರವರು ದಿನಾಂಕ 05-10-2013 ರಂದು 09-30 ಎ.ಎಮ್ ಕ್ಕೆ ತನ್ನ ಮಾವನಾದ ಮಹ್ಮದ ಸಾದತ ಪಾಶಾ ಇಬ್ಬರು ಕೂಡಿಕೊಂಡು ಆದರ್ಶ ನಗರ ಕಾಲೂನಿ ಕಡೆಯಿಂದ ಎಮ್.ಜಿ ರೋಡ ಕಡೆ ನಡೆದುಕೊಂಡು ಬರುತ್ತಿದ್ದಾಗ ಫಿರ್ಯಾದಿಯ ಗ್ಯಾರೇಜ ಹತ್ತಿರ ಅಟೋರಿಕ್ಷ ನಂ. ಕೆ.ಎ 32  8965 ನೇದ್ದರ ಚಾಲಕನು ತನ್ನ  ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡುಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀಮತಿ ನಿಂಗಮ್ಮಾ ಗಂಡ ಶರಣಬಸಪ್ಪಾ ತಳವಾರ, ಸಾಃ ಜಿ.ಡಿ.ಎ ಕಾಲೋನಿ 1 ನೇ ಫೇಸ್ ಗುಲಬರ್ಗಾ ರವರು ದಿನಾಂಕ 05-10-2013 ರಂದು 07-00 ಪಿ.ಎಮ್ ಸುಮಾರಿಗೆ ತನ್ನ ಅತ್ತೆಯಾದ ಮರೆಮ್ಮಾ ಇಬ್ಬರು ಜಿ.ಡಿ.ಎ ಕಾಲೂನಿಯಲ್ಲಿರುವ ತಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ಆರೋಪಿ ರವಿ ತಂದೆ ಗೋವಿಂದ ಜಮಾದಾರ ಈತನು ತನ್ನ ಟಂ.ಟಂ. ವಾಹನ ನಂ. ಕೆ.ಎ 28 ಬಿ 0191 ನೇದ್ದು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮಾತನಾಡುತ್ತಾ ಕುಳಿತಿದ್ದ ನನಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಟಂ. ಟಂ. ಪಲ್ಟಿ ಮಾಡಿ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ, ಲಿತಬಾಯಿ ಗಂಡ ಯಂಕೋಬಾ ಘಂಟೆ ಸಾ: ಬಿರಾಳ (ಕೆ)  ತಾ: ಜೇವರ್ಗಿ ರವರು ದಿನಾಂಕ 03-10-2013 ರಂದು ಸಾಯಂಕಾಲ 6-00 ಗಂಟೆಗೆ ನಾನು ಮತ್ತು ನನ್ನ ಗಂಡ ಕುಡಿಕೊಂಡು ಮೋಟಾ ಸೈಕಲ್ ಮೇಲೆ ಕುಳಿತು ನಮ್ಮ ಮನೆ ಕಡೆಗೆ ಹೋಗುವಾಗ ಅದೆ ವೇಳೆಗೆ  ಪಂಪನಗೌಡ ಮನೆಯ ಎದರು ನಮ್ಮೂರಿನ ಮಾರ್ಥಂಡಪ್ಪ ತಂದೆ ಅಯ್ಯಪ್ಪ ದೊಡ್ಡಮನಿ ಇತನು ಕುಡಿದ ಅಮಲಿನಲ್ಲಿ ಬಂದು ನಮ್ಮ ಮೋಟಾರ ಸೈಕಲ್  ನಿಲ್ಲಿಸಿ ಅವಚ್ಯ  ಶಬ್ದಗಳಿಂದ ಬೈದು ನನ್ನ ಕೈ ಹಿಡಿದು ಎಳೆದು ನನಗೆ  ಮೋಟಾರ ಸೈಲಕನಿಂದ ಕೆಳಗೆ ಬಿಳಿಸಿದಾಗ ನನ್ನ ಗಂಡನು ಯಾಕೆ ಅಂತಾ ಕೆಳಿದಕ್ಕೆ ಬ್ಯಾಡ ಸುಳಿಮಗನೆ ಅಂತಾ  ಆವಚ್ಯ ಶಬ್ದಗಳಿಂದ ಬೈದು ಕೈಯಿಂದ ಕಪಾಳದ ಮೇಲೆ ಹೊಡೆವುವಾಗ ಮತ್ತು ಅವನ ಸಂಭಂದಿಕರಾದ ಶಂಕ್ರೆಪ್ಪ ,ಬಾಬು. ಮಲ್ಲಪ್ಪ, ಇವರೆಲ್ಲರು ಕೂಡಿ ನನ್ನ ಗಂಡನಿಗೆ ಅವಚ್ಯ  ಶಬ್ದಗಳಿಂದ ಬೈಯುವಾಗ ಜಗಳ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


No comments: