ಹಲ್ಲೆ ಪ್ರಕರಣಗಳು :
ವಾಡಿ ಠಾಣೆ : ಶ್ರೀ ಇರ್ಫನ ತಂದೆ ಮಹ್ಮದ ಇಬ್ರಾಹಿಂ ಸಾಬ ಕೆ.ಇ.ಬಿ
ವಾಲೆ ಸಾ||ಫತೆ
ಮಂಜೀಲ್ ವಾಡಿ ರವರು ದಿನಾಂಕ 28-10-2013 ರಂದು ರಾತ್ರಿ 7-00 ಸುಮಾರು ಅಬ್ಜಲ್ ಈತನು ನಮಾಜ
ಮೂಗಿಸಿಕೊಂಡು ಮನೆಗೆ ಬರುವಾಗ ಶೆಲ್ಲು ತಂದೆ ಮಹ್ಮದ ಪಟೇಲ ಈತನು ಜಗಳ ಮಾಡಿ ಕೈಯಿಂದ ಹೊಡೆಬಡೆ
ಮಾಡಿದ್ದು ಈ ವಿಷಯ ಶಮಶಿರ ತಂದೆ ನಾಸೀರ ಈತನಿಗೆ ಫೊನ ಮಾಡಿ ತಿಳಿಸಿದ್ದಕ್ಕೆ ಅದೆ ವೈಮನಸ್ಸಿನಿಂದ
ರಾತ್ರಿ 8 ಗಂಟೆಯ ಸುಮಾರು ಇರ್ಪಾನ ಈತನು ಒಲಿಮಾ ದಾವತಕ್ಕೆ ಕಮಲಿಬಾಬಾ ದರ್ಗಾದ ಪಕ್ಕದಲ್ಲಿರುವ
ಶಾದಿಖಾನಕ್ಕೆ ಹೊಗುವ ಕಾಲಕ್ಕೆ ಇರ್ಫಾನ ತಂದೆ ಮಹ್ಮದ ಪಟೇಲ್ ಸದ್ದಾಂ ತಂದೆ ಮಹ್ಮದ ಪಟೆಲ್, ಶಲ್ಲು ತಂದೆ ಮಹ್ಮದ ಪಟೆಲ್,
ಇಮ್ರಾನ ಹಾಗು ಸಂಗಡ
8,10 ಜನರು ಕೈಯಲ್ಲಿ ರಾಡ ಮತ್ತು ತಲವಾರ ಹಿಡಿದುಕೊಂಡು ಬಂದವರೆ
ಇರ್ಪಾನ ಈತನಿಗೆ ಸುತ್ತುವರೆದು ತಡೆದು ನಿಲ್ಲಿಸಿ ಇರ್ಪಾನ ಈತನು ಮಾರೊ ಸಾಲೆಕು, ಹಮಾರಾ ಭಾಯಿ ಶಮಶಿರಕೊ ಫೊನ ಕರಕೆ ಬೊಲತಾ ಸಾಲೆ ಅಂತಾ ಬೈಯುತ್ತಿದ್ದಂತೆ
ಸದ್ದಾಂ ತನ್ನ ಕೈಯಲ್ಲಿದ್ದ ತಲವಾರದಿಂದ ತೆರೆಕು ಖಲಾಸ ಕರತಾಹು ಅಂತಾ ಕುತ್ತಿಗೆಗೆ ಹೊಡೆಯಲು
ಹೊದಾಗ ತಪ್ಪಿಸಿಕೊಳ್ಳಲು ಎಟು ತಲೆಯ ಮದ್ಯದಲ್ಲಿ ಬಿದ್ದು ಖಾರಿ ರಕ್ತಗಾಯವಾಗಿದ್ದು ಮೈತುಂಬ
ಗಾಯಗಳಾಗಿದ್ದು ನನಗೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಕುಮಾರಿ ಭೀಮಾರತಿ ತಂದೆ ದೇವಿಂದ್ರಪ್ಪಾ ಭಾಸಗಿ ಸಾ: ಜೋಗೂರು ತಾ:ಜಿ: ಗುಲಬರ್ಗಾ ಇವರು ದಿನಾಂಕ: 28-10-2013 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ತಮ್ಮ ಹೊಲ ಸರ್ವೆ ನಂ: 18 ರಲ್ಲಿ ನಾನು, ನಮ್ಮ ತಾಯಿ ಜಗದೇವಿ ಮತ್ತು ನನ್ನ ತಮ್ಮ ಶರಣು
ಭಾಸಗಿ ಎಲ್ಲರು ಕೂಡಿ ನಮ್ಮ ಹೊಲದಲ್ಲಿ ಹತ್ತಿ ಬೆಳೆಗೆ ಎಣ್ಣೆ ಹೊಡೆಯಲು ಹೋಗಿರುತ್ತೇವೆ. ನಮ್ಮ
ಹೊಲದ ಪಕ್ಕದಲ್ಲಿರುವ ಇರುವ ನಮ್ಮ ದೊಡ್ಡಪ್ಪನಾದ ಬೈಲಪ್ಪಾ ಭಾಸಗಿ ಇವರ ಎತ್ತುಗಳು ಸಾಯಂಕಾಲ 5-00 ಗಂಟೆಯ ಸುಮಾರಿಗೆ ನಮ್ಮ ಹೊಲದಲ್ಲಿ ಬಂದು
ಮೆಣಸಿನ ಬೆಳೆ ಹಾಳು ಮಾಡುತ್ತಿರುವದನ್ನು ನೋಡಿ ನಮ್ಮ ತಮ್ಮನು ದೊಡ್ಡಪ್ಪನಿಗೆ ನಿಮ್ಮ ಎತ್ತುಗಳು
ಹೊಡೆದುಕೊಳ್ಳಿ ಅಂತಾ ಅಂದಾಗ ಸದರಿ ನಮ್ಮ ದೊಡ್ಡಪ್ಪ ಬೈಲಪ್ಪನು ನಮ್ಮ ತಮ್ಮನಿಗೆ ಏ ಭೊಸಡಿ ಮಗನೇ
ನಿಮದು ಬಹಳ ಆಗ್ಯದಾ ಅಂತಾ ಬೈಯುತ್ತಿದ್ದಾಗ ನಾನು ಯಾಕೇ ಬೈಯುತ್ತಿ ದೊಡ್ಡಪ್ಪ ಅಂತಾ ಅಂದಾಗ ನಮ್ಮ
ದೊಡ್ಡಪ್ಪ ಬೈಲಪ್ಪ, ದೊಡ್ಡವ್ವ ಅಂಬಾಬಾಯಿ, ಬೈಲಪ್ಪನ ಮಗ ನಾಗಪ್ಪಾ ಭಾಸಗಿ ಹಾಗೂ ನಮ್ಮೂರಿನ ಶ್ರೀಶೈಲ ಸಣ್ಣಮನಿ, ಹುಲೇಪ್ಪಾ ಸಣ್ಣಮನಿ ಇವರೆಲ್ಲರೂ ಕೂಡಿಕೊಂಡು
ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದವರೇ ಅವರಲ್ಲಿ ದೊಡ್ಡಪ್ಪ ಬೈಲಪ್ಪನು ನನಗೆ ಏ ರಂಡಿ
ನಿಮದು ಬಹಳ ಆಯಿತು ಅಂತಾ ಅನ್ನುತ್ತಾ ನನಗೆ ಕೈಯಿಂದ ಕಪ್ಪಾಳ ಮೇಲೆ ಹೊಡೆದು ಕಾಲಿನಿಂದ ಹೊಟ್ಟೆಯ
ಮೇಲೆ ಒದ್ದು ಗುಪ್ತಗಾಯ ಮಾಡಿರುತ್ತರೆ ಎಲ್ಲರು
ಕುಡಿ ನನಗೆ ಎಳದಾಡಿ ಕಟ್ಟಿಗೆಯಿಂದ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದುರು
ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment