ಕಳವು ಪ್ರಕರಣ :
ರೋಜಾ ಠಾಣೆ : ಶ್ರೀ ಮಹ್ಮದ ಅಲಿ ತಂದೆ
ಮಹಿಮೂದ ಅಲಿ ಬಾಗವಾನ ಸಾ: ಅಮೀನಾ ಮಜ್ಜೀದ ಹತ್ತಿರ ಇಸ್ಲಾಮಾಬಾದ ಕಾಲೋನಿ ಗುಲಬರ್ಗಾ ರವರು ಕಳೆದ 4-5
ದಿವಸದಿಂದ ನನ್ನ ಅಣ್ಣನ ಮಗಳ ಮಧುವೆಯಾಗಿದ್ದು ಸಮಾರಂಭ ನಡೆಯುತ್ತಾ ಇದ್ದು ನಮ್ಮ ಮನೆಯವರು ಎಲ್ಲಾ
ಕಡೆ ಸಮಾರಂಬಗಳಲ್ಲಿ ತಿರುಗಾಡುತ್ತಾ ಇರುತ್ತಾರೆ. ನಿನ್ನೆ ದಿನಾಂಕ: 25-10-2013 ರಂದು
ಬೆಳಿಗ್ಗೆ ನಾನು ಕೆಲಸಕ್ಕೆ ಹೋಗಿ ಬಂದು ಮರಳಿ ಮದ್ಯಾನ 12:00 ಗಂಟೆಗೆ ಮನೆಗೆ ಬಂದಿರುತ್ತೇನೆ
ನನ್ನ ಅಣ್ಣನ ಮಗಳ ಮಧುವೆಯಾಗಿದ್ದು ಚಿಟುಗುಪ್ಪಾದಲ್ಲಿ ನಮ್ಮ ಸಂಬಂದಿಕರು ವಲಿಮಾ
ಇಟ್ಟುಕೊಂಡಿದ್ದರಿಂದ ಸಾಯಂಕಾಲ 6:00 ಗಂಟೆಗೆ ನಾನು ವಾಸವಾಗಿರುವ ಇಸ್ಲಾಮಾಬಾದ ಕಾಲೋನಿಯ ಮನೆಗೆ
ಕೀಲಿಹಾಕಿಕೊಂಡು ನನ್ನ ಹೆಂಡತಿ ಮಕ್ಕಳು ಚಿಟಗುಪ್ಪಾಕ್ಕೆ ಹೋಗುವವರು ಇರುವದರಿಂದ ನಾನು ನನ್ನ
ತಂದೆ ತಾಯಿಯವರು ವಾಸವಾಗಿರುವ ಖುನಿ ಅಲವಾ ಮೋಮಿನಪೂರಕ್ಕೆ ಬಂದಿದ್ದು ನನ್ನ ಹೆಂಡತಿಯವರಿಗೆ
ಕಳುಹಿಸಿಕೊಟ್ಟು ನಾನು ಕೂಡಾ ಹೋಗಬೇಕಾಗಿದ್ದು ಆದರೆ ಇಲ್ಲಿಯೇ ಹೆಚ್ಚಿಗೆ ಸಮಯ ಕಳೆದಿದ್ದರಿಂದ
ಮರಳಿ ಬರಲು ನನಗೆ ಸಮಯ ಆಗುತ್ತದೆ ಅಂತಾ ನಾನು ಹೋಗದೇ ನನ್ನ ಅಂಗಡಿಯಲ್ಲಿಯೇ ವ್ಯಾಪಾರ ಮಾಡುತ್ತಾ
ಕುಳಿತುಕೊಂಡೆನು ವ್ಯಾಪಾರ ಮುಗಿಸಿಕೊಂಡು ಮರಳಿ ರಾತ್ರಿ 11:00 ಗಂಟೆಗೆ ನನ್ನ ಇಸ್ಲಾಮಾಬಾದ
ಕಾಲೋನಿ ಮನೆಗೆ ಬಂದು ಚಾವಿ ತೆರೆದು ಒಳಗೆ ಹೋಗಿ ನೋಡಿದಾಗ ಒಳಗಡೆ ಬೆಡರೂಮ ಮತ್ತು ಹಾಲ ನೋಡಿದಾಗ
ಬೆಡರೂಮದಲ್ಲಿ ಅಲಮಾರಿ ತೆರೆದು ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಅಲ್ಲದೇ ಪಕ್ಕದ
ಬೆಂಡರೂಮ ನಲ್ಲಿಯೂ ಸಹ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನೋಡಿ ನನಗೆ ಒಮ್ಮಲೆ
ಗಾಬರಿಯಾಗಿ ಪಕ್ಕದ ಬಾಗಿಲಿಗೆ ನೀಡಿದಾಗ ಪಕ್ಕದ ರೂಮಿಗೆ ಹಾಕಿದ ಕೀಲಿ ಮುರಿದಿದ್ದು
ಕಂಡುಬಂದಿರುತ್ತದ್ದೆ. ನಾವು ಮನೆಯಲ್ಲಿ ಯಾರೂ ಇಲ್ಲದ ವೇಳೆಯನ್ನು ಗಮನಿಸಿದ ಕಳ್ಳರು ಮನೆಯಲ್ಲಿ
ಪ್ರವೇಶ ಮಾಡಿ ಮನೆಯ ಕೀಲಿಮುರಿದು ಮನೆಯ ಅಲಮಾರಿಯ ಚಾವಿ ಮುರಿದು 1] ಅಲಮಾರಿಯಲ್ಲಿ ಇಟ್ಟಂತಹ
ನಗದು ಹಣ ಹಾಗು ಬಂಗಾರದ ಆಭರಣಗಳು ಒಟ್ಟು ಅಂದಾಜು 8,60,500/-ರೂಪಾಯಿ ಬೆಲೆಯುಳ್ಳ ಸಾಮಾನುಗಳು ಯಾರೋ ಕಳ್ಳರು ದಿನಾಂಕ:
25/10/2013 ರಂದು ಸಾಯಂಕಾಲ 6:00 ಪಿಎಮ್ ದಿಂದ 11:00 ಪಿಎಮ್ ಅವಧಿಯಲ್ಲಿ ನಮ್ಮ ಮನೆಯಲ್ಲಿ
ಪ್ರವೇಶ ಮಾಡಿ ಅಲಮಾರದಲ್ಲಿ ಇಟ್ಟಿದ್ದ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ
ಕಳುಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ನಜೀರ ಅಹ್ಮದ ಖಾನ ರವರು
ದಿನಾಂಕ 26-10-2013 ರಂದು
ಬೆಳಿಗ್ಗೆ 10-30 ಗಂಟೆಗೆ ಕೇಂದ್ರ
ಬಸ್ ನಿಲ್ದಾಣ ಹತ್ತಿರ ನ್ಯೂಸ ಪೇಪರ ತೆಗೆದುಕೊಂಡು ವಿದ್ಯಾನಗರ ಕಡೆಗೆ ನಡೆದುಕೊಂಡು
ಹೋಗುತ್ತಿದ್ದಾಗ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ರೋಡಿನ ಮೇಲೆ ಎಮ್.ಎಸ್.ಕೆ.ಮೀಲ ಕಡೆಯಿಂದ
ಮೋಟಾರ ಸೈಕಲ ನಂಬರ ಕೆಎ-32 -8638 ರ ಸವಾರನು ಅತೀವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ
ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment