ವರದಕ್ಷಣೆ
ಕಿರುಕಳ ಪ್ರಕರಣ :
ಮಹಿಳಾ
ಠಾಣೆ : ಶ್ರೀಮತಿ
ರೇಣುಕಾ ಗಂಡ ಪ್ರವೀಣಕುಮಾರ ಕೋಲಾರ ಸಾ; ಮನೆ ನಂ 1-867/3/1 ವೇಂಕಟೇಶ ನಗರ ಗುಲಬರ್ಗಾ ಇವರ ತಂದೆ
ತಾಯಿಯವರು ದಿನಾಂಕ 27.12.2012 ರಂದು ಪ್ರವೀಣಕುಮಾರ ಇತನೊಂದಿಗೆ ಸಂಪ್ರದಾಯದಂತೆ ಮದುವೆ
ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ಮಾತನಾಡಿದ ಪ್ರಕಾರ ವರನಿಗೆ 25 ತೊಲೆ ಬಂಗಾರ 1 ಕೆಜಿ ಬೆಳ್ಳಿ
ನಮ್ಮ ತಂದೆಯವರು ಕೊಟ್ಟಿರುತ್ತಾರೆ. ನನ್ನ ಗಂಡ ಎಲ್.ಐ.ಸಿ ಆಫೀಸದಲ್ಲಿ ಡೆವಲಪರ ಆಫೀಸರ ಅಂತಾ
ಕೆಲಸ ಮಾಡುತ್ತಾರೆ. ಮದುವೆಯಾದ ಒಂದು ವರ್ಷದವರೆಗೆ ನನ್ನ ಗಂಡ ನನ್ನೊಂದಿಗೆ ಚೆನ್ನಾಗಿದ್ದು ನಂತರ
ಕುಡಿದು ಬಂದು ನನ್ನ ಜೊತೆ ಜಗಳ ತೆಗೆಯಲು ಪ್ರಾರಂಭಿಸಿ ಮಾನಸಿಕ ದೈಹಿಕ ಕಿರುಕುಳ
ಕೊಡುತ್ತಿದ್ದನು. ಪ್ರವೀಣಕುಮಾರ ಇತನಿಗೆ ಸಾಲವಾಗಿದೆ ನಿಮ್ಮ ತಂದೆಯಿಂದ 5 ಲಕ್ಷ ರೂಪಾಯಿ
ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ದಿನಾಲು ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡಲು
ಪ್ರಾರಂಬಿಸಿದರು. ನನ್ನ ವೇತನವೆಲ್ಲಾ ಅವರೆ ತೆಗೆದುಕೊಳ್ಳುತ್ತಿದ್ದರು. ಒಂದು ಸಲ ನನ್ನ ಗಂಡ
ನಮ್ಮ ಅಣ್ಣನಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿದ್ದು ಇರುತ್ತದೆ. ದಿನಾಂಕ 06.11.2013 ರಂದು
ಬೆಳಗ್ಗೆ 9 ಗಂಟೆಯ ಸುಮಾರಿಗೆ ನಮ್ಮ ತಂದೆಯವರು ನನಗೆ ನನ್ನ ಗಂಡನ ಮನೆಗೆ ಕರೆದುಕೊಂಡು ಬಂದಾಗ ನಮ್ಮ ಅತ್ತೆ ಮಾವ ನೀವು
ತಂದೆ ಮಗಳು ನಮ್ಮ ಮನೆಯಲ್ಲಿ ಕಾಲು ಇಡಬೇಡಿರಿ ಎಂದು ಬೈಯಹತ್ತಿದರು. ಆಗ ನನ್ನ ಗಂಡ ಪ್ರವೀಣಕುಮಾರ
ಇತನು ಬಂದು “ಎ ರಂಡಿ ಖಾಲಿ ಕೈಯಿಂದ ಬಂದಿದ್ದಿಯಾ ದುಡ್ಡು ತಂದಿದ್ದಿಯಾ
ದುಡ್ಡು ತೆಗೆದುಕೊಂಡು ಬಂದರೆ ಮಾತ್ರ ನನ್ನ ಮನೆಯಲ್ಲಿ ಪ್ರವೇಶ ಇಲ್ಲದಿದ್ದರೆ ನಿನಗೆ ಈ
ಮನೆಯಲ್ಲಿ ಜಾಗ ಇಲ್ಲವೆಂದು ನನ್ನ ತಂದೆಯನ್ನು ನೂಕಿಸಿ ನನಗೆ ಮನೆಯಿಂದ ಹೊರಗೆ ಹಾಕಿದರು. ಕಾರಣ
ನನಗೆ ತವರು ಮನೆಯಿಂದ 5 ಲಕ್ಷ ರೂಪಾಯಿ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಕೈಯಿಂದ ಹೊಡೆಬಡೆ
ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟ
ನನ್ನ ಗಂಡ ಪ್ರವೀಣಕುಮಾರ ಅತ್ತೆ ಶಕುಂತಲಾ, ಮಾವ ಶರಣಪ್ಪಾ ಮೈದುನರಾದ ಪ್ರಸನ್ನ ಮತ್ತು ಪ್ರಶಾಂತ
ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀಮತಿ ರಾಧಾ ಗಂಡ ಸುರೇಶ ಪಂಚಾಳ ಸಾ: ವಡ್ಡರಗಲ್ಲಿ ಕೃಷ್ಣಾ ನಗರ
ಬ್ರಹ್ಮಪೂರ ಗುಲಬರ್ಗಾ ರವರು ದಿನಾಂಕ 06-11-2013 ರಂದು ತವರುಮೆಯಿಂದ ಗುಲಬರ್ಗಾಕ್ಕೆ ಬಂದು
ಕೇಂದ್ರ ಬಸ್ಸ ನಿಲ್ದಣದಲ್ಲಿ ಇಳಿದು ಗಂಡೆನಿಗೆ ಪೋನ ಮಾಡಿ ತಿಳಿಸಿದ್ದು ನನಗೆ ಮನೆಗೆ ಕರೆದುಕೊಂಡು ಹೋಗಲು ಆಳಂದ ಚೆಕ್ಕ ಪೋಸ್ಟ ರೋಡ
ಕಡೆಯಿಂದ ತನ್ನ ಮೋಟಾರ ಸೈಕಲ ಕೆಎ 32 ಜೆ 9326 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ
ನಡೆಸುತ್ತಾ ಹುಸೇನಿ ಗಾರ್ಡನ ಎದುರಿನ ರೋಡಿನ ಜಂಪ
ಗಮನಿಸದೇ ವೇಗದಲ್ಲಿ ಜಂಪ ಆಗಿದ್ದರಿಂದ ವೇಗದ ಆಯ ತಪ್ಪಿ ರೋಡಿನ ಮೇಲೆ ಬಿದ್ದು ಅವನ ತಲೆ ಹಿಂದೆ ಭಾರಿ ರಕ್ತಗಾಯವಾಗಿದ್ದು ಸ್ವಲ್ಪ
ಸಮಯದ ನಂತರ ನಾನು ನನ್ನ ಗಂಡನ ಮೋಬಾಯಿಲ ಪೋನ ಮಾಡಿದಾಗ ಯಾರೋ ಒಬ್ಬರು ಮಾತಾಡಿ ನಿನ್ನ ಗಂಡ ಅಪಘಾತ
ಹೊಂದಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ವಿಷಯ ತಿಳಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment