ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಯಶ್ವಂತರಾಯ ತಂದೆ ಶಿವಶರಣಪ್ಪಾ ಪರಪ್ಪಗೋಳ ಸಾ:
ಜೋಗೂರ ರವರು
ದಿನಾಂಕ 13-11-2013 ರಂದು ಬೆಳಗ್ಗೆ ನಮ್ಮೂರಿನ ಮಲ್ಲು ಬಡದಾಳ ಇವರ ಹೊಟೆಲ ಮುಂದೆ
ಕುಳಿತ್ತಿದ್ದಾಗ ನಮ್ಮೂರಿನ ನಮ್ಮ ಅಣ್ಣ ತಮ್ಮಕೀಯವರಾದ 1. ನಿಂಗಣ್ಣ ಪರಪ್ಪಗೋಳ 2. ರಮೇಶ ಪರಪ್ಪಗೊಳ 3. ಮಲ್ಲು
ಪರಪ್ಪಗೋಳ 4. ಬಲವಂತ
ಪರಪ್ಪಗೊಳ 5. ಗುರಲಿಂಗಪ್ಪ
ಪರಪ್ಪಗೋಳ 6. ಈರಣ್ಣಾ
ಪರಪ್ಪಗೋಳ 7. ಶರಣಮ್ಮಾ
ಪರಪ್ಪಗೋಳ 8. ಪಾರ್ವತಿ
ಪರಪ್ಪಗೋಳ 9. ಶರಣಮ್ಮ
ಗಂಡ ನಿಂಗಪ್ಪ 10. ಸುರೇಶ
ಪರಪ್ಪಗೋಳ ಇವರೆಲ್ಲರೂ ಕೂಡಿಕೊಂಡು ಅಕ್ರಮ ಕೂಟ ಕಟ್ಟಿಕೊಂಡು ಬಂದು ನಿನ್ನೆ ಅವರ ಹೊಲದಲ್ಲಿ
ತೋಗಿರಿ ಬೆಳೆಯನ್ನು ಎಮ್ಮೆ ಮೆಯಿಸಿದ ವಿಚಾರದಲ್ಲಿ ಜಗಳ ತೆಗೆದು ಹೋಡೆ ಬಡೆ ಮಾಡಿ ಅವಾಚ್ಯ
ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ
ಠಾಣೆ : ದಿನಾಂಕ
13-11-2013 ರಂದು ಬೆಳಗ್ಗೆ 8 ಗಂಟೆಗೆ
ನಮ್ಮ ಅಣ್ಣತಮ್ಮಕೀಯ ಗುರುಲಿಂಗಪ್ಪಾನ ಮನೆ ಎದರು ರಸ್ತೆಯ ಮೇಲೆ ಜಗಳವಾಡುವ ಗೌಳಿ ಕೇಳಿ
ಮನೆಯಲ್ಲಿದ್ದ ನಾನು ,ನನ್ನ
ಹೆಂಡತಿ ಶಕುಂತಲಾ ,ಮಕ್ಕಳಾದ
ನಿಂಗಣ್ಣಾ, ಮಲ್ಲಿಕಾರ್ಜುನ
,ರಮೇಶ
ಎಲ್ಲರೂ ಕೂಡಿ ಓಡಿ ಹೋಗಿ ನೋಡಲಾಗಿ ಅಲ್ಲಿ ನಮ್ಮ ಅಣ್ಣತಮ್ಮಕೀಯ ಯಶವಂತ್ರಾಯ , ಭೀಮರಾಯ, ಸಿದ್ದಣ್ಣ, ಸಿದ್ದಪ್ಪಾ ತಂದೆ ಬೀಮರಾಯ ,ಮಂಜುನಾಥ, ಸಂತೋಷ, ಮಲ್ಲಣ್ಣಾ ತಂದೆ ಸಿದ್ದಪ್ಪಾ, ಮಲ್ಲಿಕಾರ್ಜುನ ತಂದೆ ಶಂಕ್ರೇಪ್ಪಾ, ಉಮೇಶ, ಚೆನ್ನಪ್ಪಾ, ಕಮಲಾಬಾಯಿ ಗಂಡ ಬೀಮರಾಯ, ಬಸಮ್ಮಾ ಗಂಡ ಯಶ್ವಂತ್ರಯ, ಭಾಗಮ್ಮಾ ಗಂಡ ಸಿದ್ದಪ್ಪಾ, ಭಾಗಮ್ಮಾ ಗಂಡ ಮಲ್ಲಿಕಾರ್ಜುನ, ರೇಣುಕಾ ಮತ್ತು ಉಮಾಬಾಯಿ ಇವರೆಲ್ಲರೂ ಸೇರಿ ನಮ್ಮ
ಅಣ್ಣತಮ್ಮಕೀಯ ಗುರುಲಿಂಗಪ್ಪಾನ ಮಗನಾದ ಈರಣ್ಣನಿಗೆ ನಮ್ಮ ತೊಗರಿ ಬೆಳೆಯಲ್ಲಿ ಎತ್ತುಗಳು ಉದ್ದೇಶ
ಪೂರ್ವಕವಾಗಿ ಬಿಟ್ಟಿದ್ದಿರಿ ಸೂಳೆ ಮಕ್ಕಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾವು
ಅವರಿಗೆ ಸುಮ್ಮನೆ ಯಾಕೇ ವಿನಕಾರಣ ಬೈಯುತ್ತಿದ್ದಿರಿ ದನಗಳು ಮೂಕ ಜಾನವಾರ ಅವು ತಾನಾಗಿಯೆ ಹೋಗಿವೆ
ಇಷ್ಟಕ್ಕೆ ಸುಮ್ಮನೆ ಜಗಳ ಬಿಡ್ರೀ ಅಂತಾ ನಾನು ಮತ್ತು ನನ್ನ ಮಗನಾದ ನಿಂಗಣ್ಣಾ ಹೇಳುತ್ತಿರುವಾಗ ಎಲ್ಲರು
ಸೇರಿ ನನಗೆ ಮತ್ತು ನನ್ನ ಮಗ ನಿಂಗಣ್ಣ ಇವನಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ
ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಬಲವಂತರಾಯ ತಂದೆ ನಾಗಲಿಂಗಪ್ಪಾ
ಪರಪ್ಪಗೋಳ ಸಾ: ಜೋಗೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ
ಮಾಹಾಗಾಂವ
ಠಾಣೆ : ಶ್ರೀಮತಿ ಗೀತಾ ಗಂ, ಆನಂದಕುಮಾರ ಹರಸೂರಕರ್, ರವರಿಗೆ 2 ವರ್ಷದ ಹಿಂದೆ ತನ್ನ ಗಂಡನಾದ ಆನಂದ ಕುಮಾರ ಇತನೊಂದಿಗೆ
ಮದುವೆಯಾಗಿದ್ದು ಈಗ 8 ತಿಂಗಳ ಹಿಂದೆ ಬಸವ ಕಲ್ಯಾಣ ತಾಲೂಕಿನ ಖೇಲ್ಡಾ(ಕೆ) ಗ್ರಾಮದ ಪೂಜಾ ತಂ, ನಾಂಗೇಂದ್ರಪ್ಪ ಕಾಂಬಳೆ ಜಾ||ಹರಿಜನ, ಇವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಈಗ 5-6 ದಿವಸಗಳ ಹಿಂದೆ ತನ್ನ ಗಂಡನು ಮನೆ ಬಿಟ್ಟು ಹೋಗಿದ್ದು 2 ದಿವಸಗಳ ಹಿಂದೆ ತಾನು ತನ್ನ ಅತ್ತೆಯಾದ ಜಗದೇವಿ ಕೂಡಿ ಅಲ್ಲಿಗೆ ಹೋಗಿ
ವಿಚಾರ ಮಾಡಿದರೆ ತಮ್ಮೊಂದಿಗೆ ಜಗಳ ಮಾಡಿದ್ದು ದಿನಾಂಕ: 12-11-2013 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಪೂಜಾ ತಂ, ನಾಗೇಂದ್ರ ಕಾಂಬಳೆ ಅವಳ ತಮ್ಮ ಅಂಬ್ರೇಶ ತಂ, ನಾಗೇಂದ್ರ ಕಾಂಬಳೆ ಅವಳ ತಾಯಿ ಪಾರ್ವತಿ ಗಂ, ನಾಗೇಂದ್ರ ಕಾಂಬಳೆ ಇವರೆಲ್ಲರೂ ಮನೆಗೆ ಬಂದು ಜಗಳ ತೆಗೆದು ಅವಾಚ್ಯ
ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ತಡೆದು
ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment