ದರೋಡೆ ಪ್ರಕರಣ :
ಚೌಕ ಠಾಣೆ : ದಿನಾಂಕ 10-11-2013
ರಂದು ಶ್ರೀ ರಾಜಶೇಖರ ತಂದೆ ಯಶ್ವಂತರಾವ ಬಿರಾದಾರ ಸಾ: ಮುತ್ತುಟ ಫೈನಾನ್ಸ ಮ್ಯಾನೇಜರ ಹುಮನಾಬಾದ
ಬೇಸ ಗುಲಬರ್ಗಾ ರವರು ದಿನಾಂಕ 116-11-2013 ರಂದು ಬೆಳಗ್ಗೆ 0900 ಗಂಟೆಗೆ ತನ್ನ ಜೋತೆ
ಕ್ಯಾಶೀಯರ ಶ್ರೀಮತಿ ನೀತುಸಿಂಗ, ಶ್ರೀಮಂತ ಅಪರೈಜರ ಫರ್ಜಾನ ಜೂಯಿಂಟ ಕಸ್ಟಡಿ ಹಾಗು ರುದ್ರಗೌಡ
ಗಾರ್ಡ ಎಲ್ಲರು ಕೂಡಿಕೊಂಡು ನಮ್ಮ ಮುತ್ತುಟ ಪಿನ್ ಕಾರ್ಪ ಬಾಗಿಲು ತರೆದು ಮೇಲುಗಡೆ ಬಂದು ಕುಳಿತುಕೊಂಡಿದ್ದು
ಸುಮಾರು 09-20 ರ ಸಮಯಕ್ಕೆ ಇಬ್ಬರು ವ್ಯಕ್ತಿಗಳು ಬಂದು ನಮಗೆ ಗೋಲ್ಡ ಲೋನ ಬೇಕಾಗಿದೆ ಇವತ್ತಿನ
ರೇಟ ಎನಿದೆ ಅಂತಾ ಹಿಂದಿ ಭಾಷೆಯಲ್ಲಿ ಕೇಳಿದರು ಅದಕ್ಕೆ ನಾನು ಒಂದು ಗ್ರಾಂಗೆ 1900/- ರೂ
ಕೊಡುತ್ತೆವೆ ಅಂತಾ ಹೆಳಿದ್ದು ಅವರು ನಮ್ಮ ಹತ್ತಿರ 2 ತೋಲೆ ಲಾಕೀಟ ಇದೆ ಅದಕ್ಕೆ ಎಷ್ಟು
ಲೋನ ಮಾಡುತ್ತಿರಿ ಅಂತಾ ಹಿಂದಿ ಬಾಷೆಯಲ್ಲಿ ಕೇಳಿದ್ದು ಅದಕ್ಕೆ ನಾನು 48,000/- ರೂ ಬರುತ್ತದೆ
ಅಂತಾ ಹೇಳಿದೆ ಆಗ ಅವರು ನಮಗೆ ಎಂಟ್ರಿ ಮಾಡಿಕೊಳ್ಳಿ ಅಂತಾ ಹೇಳಿದರು ನಾನು ಐಡಿ ಪ್ರುಫ ಕೇಳಿದೆ ಅಸ್ಟರಲ್ಲಿ
ಅವರು ಹೋರಗಡೆ ಹೋಗಿ 3-4 ನಿಮೀಷದಲ್ಲಿ ಮರಳಿ ಬಂದು ನಮ್ಮ ಗಾರ್ಡ ರುದ್ರಗೌಡ ಇವರಿಗೆ ಕುಡಿಯಲು
ನೀರು ಕೇಳಿದ್ದು ಅಷ್ಟರಲ್ಲಿ 4 ಜನ ವ್ಯಕ್ತಿಗಳು ಮುಖಕ್ಕೆ ಮಂಕಿ ಕ್ಯಾಪ ಮತ್ತು ಮೈಮೇಲೆ ಸ್ವಟರ
ಹಾಕಿಕೊಂಡು ಬಂದರು ಸದರಿ ನಾಲ್ಕು ಜನರು ಕೈಯಲ್ಲಿ ಸಣ್ಣ ತಲವಾರಗಳನ್ನು ಹಿಡಿದು ನಮ್ಮ
ಕುತ್ತಿಗೆಗೆ ಹಚ್ಚಿ ನನ್ನ ಮೊಬೈಲ ಕಿತ್ತುಕೊಂಡಿದ್ದು ಅದರಲ್ಲಿ ಇಬ್ಬರು ಸ್ಟ್ರಾಂಗ ರೂಮ ಕಡೆಗೆ ಹೋಗಿ ಚಾವಿ
ಕೇಳಿದ್ದು ಇಲ್ಲಾ ಅಂತಾ ಹೆಳಿದ್ದಕ್ಕೆ ಜಬರದಸ್ತಿಯಿಂದ ಚಾವಿ ಎಲ್ಲಿದೆ ಹೇಳಿದರೆ ಸರಿ ಇಲ್ಲಾ
ಅಂದರೆ ನಿಗೆ ಪಿಸ್ತೂಲನಿಂದ ಹೋಡೆದು ತಲವಾರದಿಂದ ಹೊಡೆದು ಚಾವಿ ಕಿತ್ತುಕೊಂಡು ಬೆರೆ ಬೆರೆ ಚಾವಿ
ಹಾಕಿ ಸ್ಟ್ರಾಂಗ ರೂಮ ಚಾವಿ ತೆರೆದು ಒಳಗೆ ಪ್ರವೇಶ ಮಾಡಿ ಸ್ಟ್ರಾಂಗ ರೂಮನಲ್ಲಿ ಇಟ್ಟಿದ್ದ 325
ಗ್ರಾಹಕರು ವಿವಿಧ ತರಹದ ಬಂಗಾರದ ಒಡವೆಗಳನ್ನು ಅಡವಿಟ್ಟಿದ್ದು ಒಟ್ಟು 7030 ಗ್ರಾಂ ಬಂಗಾರದ
ಒಡವೆಗಳು ಅವುಗಳ ಇಂದಿನ ಕಿಮ್ಮತ್ತು 2,10,90,000/- ರೂ ಆಗುತ್ತದೆ ಣಾವು ಗ್ರಾಹಕರಿಗೆ
1,29,84,656/- ಸಾಲ ಕೊಟ್ಟಿದ್ದು ನಗದು ಹಣ 2 ಲಕ್ಷ ಎಲ್ಲವನ್ನು ತಾವು ತಂದಿದ್ದ ಕಪ್ಪು
ಬ್ಯಾಗಿನಲ್ಲಿ ಹಾಕಿಕೊಂಡು ನಮ್ಮನ್ನು ಸ್ಟ್ರಾಂಗ ರೂಮನಲ್ಲಿ ಕೂಡಿ ಹಾಕಿ ಹೋಗಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 16-11-2013 ರಂದು ಬೆಳಗ್ಗೆ 8-30 ಎ.ಎಮ್ ಕ್ಕೆ ಶ್ರೀ
ದಶರಥ ತಂದೆ ಜೋತಿರಾವ ಮಾನೆ, ಸಾಃ ಜಿ.ಆರ್ ನಗರ ಖಾದ್ರಿ ಚೌಕ, ಗುಲಬರ್ಗಾ ರವರು ತನ್ನ ಮೋಟಾರ ಸೈಕಲ ನಂ.
ಕೆ.ಎ 32 ವಿ 7448 ನೇದ್ದನ್ನು ಚಲಾಯಿಸಿಕೊಂಡು
ಶಹಾಬಜಾರ ನಾಕಾ ಕಡೆಯಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ಮೋಟಾರ ಸೈಕಲ ನಂ. ಕೆ.ಎ 32 ವಿ 4033 ನೇದ್ದರ ಚಾಲಕನು ಹಿಂದಿನಿಂದ
ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ
ಹೊಡೆದು ಅಪಘಾಥ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರವಿ ತಂದೆ
ಸುರೇಶ ಇವರು ದಿನಾಂಕ 16-11-2013 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಮತ್ತು ಕಾಂತು
ಹಾಗು ಸುರೇಶ 3 ಜನರು
ಕೂಡಿಕೊಂಡು ನೆಹರು ಗಂಜ ಹತ್ತಿರ ಗೌಂಡಿ ಕೆಲಸಕ್ಕೆ ಹೋಗುವ ಸಲುವಾಗಿ ನೊಬಲ ಸ್ಕೂಲ ಹತ್ತಿರ
ಅಟೋರಿಕ್ಷಾ ನಂಬರ ಕೆಎ-32 -8165 ನೇದ್ದರಲ್ಲಿ
ಕುಳಿತು ಎಸ್.ವಿ.ಪಿ ಸರ್ಕಲ ಮುಖಾಂತರ ಜಗತ ಸರ್ಕಲ ಕಡೆಗೆ ಹೋಗುತ್ತಿದ್ದಾಗ ಅಟೋರಿಕ್ಷಾ ಚಾಲಕನು
ಅತೀವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೆಲೆ ಕಟ್ಟ ಹೊಡೆದು ಬ್ರೇಕ ಹಾಕಿ
ಸೆಂಟರ ಕಾಮತ ಎದುರಿನ ರೋಡಿನ ಮೇಲೆ ಅಟೋರಿಕ್ಷಾ ಪಲ್ಟಿ ಮಾಡಿ ಭಾರಿಗಾಯಗೊಳಿಸಿ ಅಟೋರಿಕ್ಷಾ
ಚಾಲಕನು ಹೇಳದೆ ಕೇಳದೆ ಹೊರಟು ಹೋಗಿದ್ದು ಇರುತ್ತದೆ ಅಂತಾ ಸಲ್ಲಿದಿ ದೂರು ಸಾರಾಂಶದ ಮೇಲಿಂದ
ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗು ಕಸಿದುಕೊಂಡು ಹೋದ
ಪ್ರಕರಣ:
ಮಳಖೇಡ ಠಾಣೆ: ಶ್ರೀಮತಿ ರಾಧೀಕಾ
ಗಂಡ ರಾಮಚಂದ್ರ ಗೊಂದಲಿಗೇರ ಇವರು ದಿನಾಂಕ 15/10/2013 ರಂದು ಮಧ್ಯಾಹ್ನ ಶ್ರೀಮತಿ ಕಲಾವತಿ ಯೊಂದಿಗೆ ಮಳಖೇಡ ಸ್ಟೇಷನ್ ತಾಂಡಾ ಹತ್ತಿರ ಇರುವ ಹಣಮಂತದೇವರ
ದೇವಸ್ಥಾನದ ಹತ್ತಿರ ಕುಳಿತಿದ್ದಾಗ ಸುಭಾಶ ತಂದೆ ಶಿವಪ್ಪ ಗೊಂದಲಿಗೇರ ಸಾ|| ಹಂಚನಾಳ ಆರೋಪಿತನು ಶ್ರೀಮತಿ ರಾಧೀಕಾಳ ಹತ್ತಿರ
ಇದ್ದ ೦3 ತಿಂಗಳ ಮಗು ನಾಗಮಣಿಯನ್ನು ಕಸಿದುಕೊಂಡು ಓಡಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೇ ಜಾರಿಯಲ್ಲಿರುತ್ತದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರಿ
ನರಸಪ್ಪ ತಂದೆ ಹುಸೇನಪ್ಪ ಮೇತ್ರೀ ಸಾ: ನಾಚವಾರ ತಾ; ಸೇಡಂ ಇವರು ದಿನಾಂಕ: 15-11-2013ರಂದು ರಾತ್ರಿ 8-30 ಗಂಟೆಗೆ ಗ್ರಾಮದ
ಮಸಿದಿಯಲ್ಲಿ ಮೋಹರಂ ಹಬ್ಬದ ದೇವರುಗಳು ಸವಾರಿ ನೋಡಲು ನಾನು ಮಸಿದಿಗೆ ಹೋದಾಗ ಮೈಹೀಪಾಲರೆಡ್ಡಿಯು ತನ್ನ
ತಂದೆಯಾದ ಭಿಮರೆಡ್ಡಿ ,ಅಣ್ಣನಾದ ವಿಶ್ವನಾಥರೆಡ್ಡಿ ,ತಮ್ಮ ಗೋಪಾಲರೆಡ್ಡಿ ಹಾಗೂ ಅವನ ದೊಡ್ಡಪ್ಪನ
ಮಗ ಗೋವಿಂದರೆಡ್ಡಿ ,ಶರಣಪ್ಪ ಇವರು ತಮ್ಮ ಕೈಗಳಲ್ಲಿ ಎಲ್ಲರು ಬಡಿಗೆ ಹಿಡಿದುಕೊಂಡು ನನ್ನ ಹತ್ತಿರ ಬಂದು ಮೈಹಿಪಾಲರೆಡ್ಡಿಯು ನನಗೆ ಅವಾಚ್ಯ
ಶಬ್ದಗಳಿಂದ ಬಯ್ಯುತ್ತಾ ಜಾತಿ ಎತ್ತಿ ಬೈದು
ಕೈಯಿಂದ ಹೋಡೆದಿದ್ದು ಅವನ ಜೋತೆಗೆ ಇದ್ದ
ಇನ್ನೂಳಿದವರು ಸಹ ಕೈಯಿಂದ ಹೋಡೆದಿದ್ದು ತಲೆಗೆ
ಒಳಪೆಟ್ಟು ಆಗಿರುತ್ತದೆ ಮತ್ತು ಇನ್ನುಳಿದವರು ಕೈಯಿಂದ ಹೊಡೆದಿದ್ದರಿಂದ ಗುಪ್ತ ಪೆಟ್ಟು ಆಗಿರುತ್ತವೆ.ನನ್ನ ಹೆಂಡತಿಗೆ ಎದೆಗೆ
ಬೆರಳಿನ ಉಗುರುಗಳು ತಾಗಿ ತರಚಿದಂತೆ ಗಾಯಾಗಳಾಗಿರುತ್ತವೆ . ನಾನು ನಮ್ಮ ಸಮಾಜದವರಲ್ಲಿ
ವಿಚಾರಿಸಿಕೊಂಡು ತಿಳಿಸಿ ಬರಲು ಪಿರ್ಯಾದಿ ಕೊಡಲು
ತಡವಾಗಿರುತ್ತದೆ, ಕಾರಣ ನಮಗೆ ಸದರಿಯವರು ಜಾತಿ ಎತ್ತಿ ಬೈದು ಕೈಯಿಂದ ಮತ್ತು ಬಡಿಗೆಯಿಂದ
ಹೋಡೆದು ಗುಪ್ತ ಪೆಟ್ಟು ಮಾಡಿ ನನ್ನ ಹೆಂಡತಿಗೆ ಮಾನಭಂಗ ಮಾಡಲು ಪ್ರಯತ್ನಿಸಿದವರ ವಿರುದ್ದ
ಕಾನೂನು ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment