ಇಸ್ಪೀಟ
ಜುಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಕಮಲಾಪೂರ ಠಾಣೆ : ದಿನಾಂಕ: 18-11-2013 ರಂದು 15-00 ಗಂಟೆ ಸುಮಾರಿಗೆ ಪಟವಾದ ಗ್ರಾಮದ ಸಿದ್ದಪ್ಪಾ ರಮಾ ಇವರ
ಮನೆ ಮುಂದೆ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹಾರ ಇಸ್ಪೀಟ ಜೂಜಾಟ ಆಡುತ್ತಿರುವ
ಬಗ್ಗೆ ಖಚಿತ ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ
ನಿಂತು ನೋಡಿ ದಾಳಿ ಮಾಡಿ 1. ಸಿದ್ದಪ್ಪಾ ತಂದೆ ಕಾಶಪ್ಪಾ ರಮಾ 2. ರಾಜಶೇಖರ ತಂದೆ ಶಿವರಾಜ ತಡೋಳಿ 3. ರವಿ ತಂದೆ ಸಂಗಪ್ಪಾ ಬೆಂಕಿ 4. ಸಂಜೀವಕುಮಾರ ತಂದೆ ಸುಭಾಶ ತಡೋಳಿ 5.. ತುಕಾರಾಮ ತಂದೆ
ಪುಂಡಲೀಕ ಉಪ್ಪಾರ 6.ಮಾಣಿಕ ತಂದೆ ಕಾಸು ಚವ್ಹಾಣ 7. ರವಿ ತಂದೆ ಹಣಮಂತ ಜಮಾದಾರ 8. ಬಸವರಾಜ ತಂದೆ
ರಾಜಪ್ಪಾ ರಮಾ 9. ಶಿವಪುತ್ರ ತಂದೆ ಮಡಿವಾಳಪ್ಪಾ ಹುಡಗಿ 10.. ತುಕರಾಮ ತಂದೆ ಚಂದ್ರು ಚವ್ಹಾಣ 11.
ರವಿ ತಂದೆ ಶಿವರಾಜ ರಮಾ 12. ಅನೀಲ ತಂದೆ ಮಾನಶೆಟ್ಟಿ ಸಾಃ ಎಲ್ಲರು ಪಟವಾದ ತಾ:ಜಿ: ಗುಲಬರ್ಗಾ ರವರನ್ನು
ದಸ್ತಗೀರ ಂಆಡಿ ಸದರಿಯವರಿಂದ 24,450-00 ರೂ.
ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ
ಜಪ್ತಿ ಪಡಿಸಿಕೊಂಡು. ನಂತರ ಜಪ್ತ ಪಂಚನಾಮೆಯೊಂದಿಗೆ, ಎಲ್ಲಾ 12 ಜನ ಆರೋಪಿತರೊಂದಿಗೆ ಟಾಣೆಎ ಬಂದು ಸದರಿಯವರ
ವಿರುದ್ಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಅಪಘಾತ ಪ್ರಕರಣ
:
ಮಾದನಹಿಪ್ಪರಗಾ
ಠಾಣೆ : ಶ್ರೀ.ರಾಮಣ್ಣಾಗೌಡ ತಂದೆ ಶಿವಣ್ಣಾಗೌಡ
ಪಾಟೀಲ ಸಾಃ ಧಂಗಾಪೂರ ತಾ:ಆಳಂದ.ಇವರು ನಾನು ಮತ್ತು ನಮ್ಮೂರ ಬಾಬು ತಂದೆ ಲಕ್ಕು ಮಾಂಗ ಇಬ್ಬರೂ
ನನ್ನ ಮೋಟರ್ ಸೈಕಲ್ ನಂ: KA:32 EA:2988 ನೇದ್ದರ ಮೇಲೆ ಕುಳಿತುಕೊಂಡು
ಧಂಗಾಪೂರದಿಂದ-ಮಾದನ ಹಿಪ್ಪರಗಾಕ್ಕೆ ಬರುತ್ತಿರುವಾಗ ದಿನಾಂಕ 18-11-2013 ರಂದು 12:30 ಗಂಟೆಗೆ
ಮಾದನ ಹಿಪ್ಪರಗಾ KEB ಕ್ರಾಸ್ ಹತ್ತಿರ ರಸ್ತೆಯಲ್ಲಿ ಬರುತ್ತಿರುವಾಗ ಎದುರಿನಿಂದ ಸೀಲ್ವರ್
ಕಲರ್ ಗಾಮಾ ವಾಹನ ನಂ:MH:45 F-428 ನೇದ್ದರ ಚಾಲಕನು ಅತೀವೇಗದಿಂದ ಮತ್ತು
ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ್ ಸೈಕಲ್ ನಂ:KA:32 EA:2988 ನೇದ್ದಕ್ಕೆ ಡಿಕ್ಕಿಪಡಿಸಿ ವಾಹನ ನಿಲ್ಲಿಸದೆ ವಾಹನ ತಗೆದುಕೊಂಡು
ಹೋಗಿರುತ್ತಾನೆ.ನನ್ನ ಮೋಟರ್ ಸೈಕಲ್ ಹಿಂದಿನ ಸೀಟಿನಲ್ಲಿ ಕುಳಿತ ಬಾಬು ಮಾಂಗ ರವರಿಗೆ ಬಲಕಾಲಿನ
ಮೊಳಕಾಲ ಕೇಳಗೆ ಬಾರಿ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಾದನಹಿಪ್ಪರಗಾ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment