ಅಪಘಾತ
ಪ್ರಕರಣಗಳು :
ಹೆಚ್ಚುವರಿ
ಸಂಚಾರಿ ಠಾಣೆ : ಶ್ರೀ ಗುರುಶಾಂತಪ್ಪ ತಂದೆ ಬಸವಣಪ್ಪ
ಇವರು ದಿನಾಂಕ 31-10-2013 ರಂದು ರಾತ್ರಿ 11-40 ಗಂಟೆಯ ಸುಮಾರಿಗೆ ಪಟೇಲ ಸರ್ಕಲದಿಂದ ಜಗತ
ಸರ್ಕಲ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸಿದ್ದಿಪಾಷ ದರ್ಗಾ ಎದುರು ರೋಡಿನ ಮೇಲೆ ಮೋಟಾರ
ಸೈಕಲ ನಂಬರ ಕೆಎ-32 ಇಡಿ-1846 ನೇದ್ದರ ಸವಾರನು ರಾಂಗ ಸೈಡಿನಿಂದ ಅತೀವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಭಾರಿಗಾಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಹೊರಟು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ ಠಾಣೆ : ಶ್ರೀ
ತೋಟಪ್ಪ ತಂದೆ ಬಸ್ಸಪ್ಪ ಯಾಕಾಪೂರ ಸಾ|| ಸುಲೇಪೇಟ
ತಾ|| ಚಿಂಚೋಳಿ ಇವರು ದಿನಾಂಕ 31.10.2013
ರಂದು ಸಾಯಾಂಕಾಲ ಚಿಂಚೋಳಿಯ ತಹಸಿಲ ಆಫಿಸ್ ಹತ್ತಿರ ಪರಿಚಯಸ್ತರಾದ ಸಂಬಣ್ಣಾ ತಂಧೆ ರಾಯಪ್ಪ ಶಿರಿಸಿ
ಮತ್ತು ಶ್ರೀ ಮಾರುತಿ ತಂಧೆ ಪೀರಪ್ಪ ಬೋಮ್ಮನಳ್ಳಿ
ಸಾ|| ಇಬ್ಬರೂ ಚಿಂಚೋಲಿ ಇವರ ಜೋತೆಯಲ್ಲಿಯೇ ಮಾತಾಡುತ್ತಾ ನಿಂತು ಕೊಂಡಿದ್ದಾಗ ಚಿಂಚೋಳಿ
ಕಡೆಯಿಂದ ತಾಂಡೂರು ಕಡೆಗೆ ಹೋರಟಿರುವ ಯಾವನೋ ಒಬ್ಬ ತನ್ನ ಮೊಟಾರ ಸೈಕಲ್ನ್ನು ಅತೀ ವೇಗ,
ನಿಷ್ಕಾಳಿಜಿತನದಿಂದ ಹಾಗೂ ಮಾನವ ಜೀವಕ್ಕೆ
ಅಪಾಯವಾಗುವಂತೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು
ತನ್ನ ಮೋಟಾರ ಸೈಕಲ್ನಿಂದ ನನ್ನ ಬಲಗಾಲಿಗೆ ಡಿಕ್ಕಿ ಪಡಿಸಿರುತ್ತಾನೆ ಈ ಘಟನೆಯಿಂದಾಗಿ
ನನ್ನ ಬಲಗಾಲಿಗೆ ಮೋಳಕಾಲಿನ
ಕೆಳಗೆ ಭಾರಿ ಪೆಟ್ಟಗಿ ಎಲಬು ಮುರಿದಂತಾಗಿ ಬಾವು ಸಮೇತ ಭಾರಿ
ಗುಪ್ತಗಾಯವಾಗಿರುತ್ತದೆ.. ಸದರಿ ಮೋಟಾರ ಸೈಕಲ್ ಸವಾರನು ನನಗೆ ತನ್ನ ಮಾಟಾರ ಸೈಕಲ್ನಿಂದ ಡಿಕ್ಕಿ
ಪಡಿಸಿದ ಕೂಡಲೇ ತನ್ನ ಮೋಟಾರ ಸೈಕಲ್ ನ್ನು ರ್ಸತಳಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸವಾರನ ಹೆಸರು ಮತ್ತು ವಿಳಾಸ
ತಿಳಿದುಬಂದಿರುವದಿಲ್ಲಾ ಸದರ ಮೋಟಾರ ಸೈಕಲ್
ನ್ನು ನೋಡಾಲಾಗಿ ದ್ದು ಹೀರೋಹೊಂಡಾ ಪ್ಯಾಶನ್
ಪ್ಲಸ್ ಆಗಿದ್ದು ನಂ ಕೆ ಎ 32 ವಿ 0410 ಇರುತ್ತದೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಸೈಯದ ಮೋಶಿನ ತಂದೆ ಸೈಯದ ಲಾಲ ಅಹ್ಮದ ಸಾಃ ಮಿಲತ್ ನಗರ ಗುಲಬರ್ಗಾ ರವರು ದಿನಾಂಕ 31-10-2013 ರಂದು ರಾತ್ರಿ 10-15 ಗಂಟೆಗೆ ಫಿರ್ಯಾದಿಯು ಬಟ್ಟೆ ವ್ಯಾಪಾರ
ಮುಗಿಸಿಕೊಂಡು ತನ್ನ ಮನೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಎಕ್ಸ 4296 ನೇದ್ದರ ಮೇಲೆ ಆದರ್ಶ ನಗರ ರೋಡಿಗೆ ಇರುವ ಸಾನಿಯಾ ಟೇಲರ್ ಅಂಗಡಿಯ
ಮುಂದೆ ಹೋಗುತ್ತಿದ್ದಾಗ ಎದರುಗಡೆಯಿಂದ ಅಟೋರಿಕ್ಷಾ ನಂ. ಕೆ.ಎ 32 ಎ 8517 ನೇದ್ದರ ಚಾಲಕನು ತನ್ನ ಅಟೋರಿಕ್ಷಾವನ್ನು ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಎದುರಿನಿಂದ ಡಿಕ್ಕಿ ಹೊಡೆದು
ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀ.ಅಮೃತ ತಂದೆ ಬಾಪಣ್ಣಾ ಸಿಂಧೆ ವಯ:43 ವರ್ಷ ಉ:ಖಾಸಗಿ ಕೆಲಸ ಜಾತಿ:ಢೋರ ಸಾ:ಸರಸಂಬಾ ತಾ:ಆಳಂದ. ಇವರು ದಿನಾಂಕ: 31-10-2013 ರಂದು ಬೇಳಗ್ಗೆ
10:00 ಗಂಟೆಯ ಸುಮಾರಿಗೆ ನಾನು ನನ್ನ ಹೆಸರಿನಲ್ಲಿದ್ದ ಜಾಗೆಯಲ್ಲಿ ನನ್ನ ಅಣ್ಣನಾದ ಶಂಕರ ತಂದೆ
ಬಾಳಪ್ಪಾ ಸಿಂಧೆ ಮತ್ತು ಇವನ ಮಕ್ಕಳು ಮಡಿ ಮತ್ತು ಕೇರ ಕಟ್ಟಿದ್ದರಿಂದ ಅವರಿಗೆ ನಾನು ಈ ಜಾಗ ನನ್ನದು ಇದೆ
ಇಲ್ಲಿ ಏಕೆ ಮಡಿಗಳು ಕೇರ ಕಟ್ಟಿದ್ದಿರಿ ಅಂತಾ ಕೇಳಿದಕ್ಕೆ ನನ್ನ ಅಣ್ಣನಾದ 1) ಶಂಕರ ತಂದೆ ಬಾಪಣ್ಣಾ ಸಿಂಧೆ 2] ಗೌರಾಬಾಯಿ ಗಂಡ ಶಂಕರ ಸಿಂಧೆ 3]
ಮಲ್ಲಿಕಾರ್ಜುನ ತಂದೆ ಶಂಕರ ಸಿಂಧೆ 4] ಹಿರಲಾಲ ತಂದೆ ಶಂಕರ ಸಿಂಧೆ 5] ಸಿದ್ದಪ್ಪಾ ತಂದೆ ಈಶ್ವರ
ಸಿಂಧೆ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ತಡೆದು ಅವಾಚ್ಯ ಶಬ್ಬಗಳಿಂದ ಬೈದು ನನ್ನ ಜಾಗೆಯಲ್ಲಿ
ಅತಿಕ್ರಮಣ ಪ್ರವೇಶ ಮಾಡಿ ಈ ಜಾಗ ನಮ್ಮದು ಇದೆ.ಬಿಟ್ಟು ಬಿಡು ಅಂತಾ ಅನ್ನುತ್ತಿದ್ದರು ನಾನು
ಅವರಿಗೆ ಈ ಜಾಗೆ ನನ್ನ ಹೆಸರಿನಲ್ಲಿದೆ. ನಾನು ಬಿಡುವುದಿಲ್ಲಾ ಅಂದಿರುತ್ತೇನೆ. ಸದರಿಯವರು
ಇನ್ನೊಮೆ ನಮಗೆ ಸಿಕ್ಕರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯದ ಬೇದರಿಕೆ ಹಾಕಿ
ಹೋಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀಮತಿ ಜ್ಯೋತಿ ಗಂಡ ಶರಣಪ್ಪಾ ಉಪ್ಪಿನ ಸಾಃ ನದಿಸಿನ್ನೂರ ಗ್ರಾಮ
ತಾ.ಜಿಃ ಗುಲಬರ್ಗಾ ಇವರು ನಾನು ಮತ್ತು ನನ್ನ ಗಂಡ ಶರಣಪ್ಪಾ ಇಬ್ಬರು ಕೂಡಿ ಫರಹತಾಬಾದದಿಂದ
ನದಿಸಿನ್ನೂರ ಊರಿಗೆ ದಿನಾಂಕ: 31-10-2013 ರಂದು ರಾತ್ರಿ 8-00 ಗಂಟೆಗೆ ಹೊರಟಿದೇವು. ಆಗ ನಮ್ಮ
ಮಾವನಾದ ಅಮೃತ ಉಪ್ಪಿನ ಈತನು ನನ್ನ ಗಂಡನಿಗೆ ಗಾಡಿಯಲ್ಲಿ ಕರೆದುಕೊಂಡು ಬರುತ್ತೇನೆ ನೀನು ಮುಂದೆ
ಹೋಗು ಅಂತಾ ಅವನಿಗೆ ಮುಂದೆ ಕಳುಹಿಸಿ, ನಾನು ಮತ್ತು ಮಾವ ಇಬ್ಬರು ನದಿಸಿನ್ನೂರ
ಕ್ರಾಸದಲ್ಲಿ ಸ್ವಲ್ಪ ಹೊತ್ತು ನಿಂತು ನಂತರ ಯಾವುದು ಗಾಡಿ ಬಾರದೆ ಇದ್ದಾಗ ನಾವಿಬ್ಬರು
ಕ್ರಾಸದಿಂದ ನಮ್ಮೂರಿಗೆ ನಡೆದುಕೊಂಡು ಹೊರಟೇವು ರಾತ್ರಿ 8-30 ಗಂಟೆಯ ಸುಮಾರಿಗೆ ನಮ್ಮೂರ ಊರ
ಸಮೀಪ ಹೋಗುತ್ತಿದಂತೆ ಕತ್ತಲಲ್ಲಿ ಒಮ್ಮಲೇ ಏಕಾಏಕಿ ನಮ್ಮ ಮಾವ ನನ್ನ ಕೈ ಹಿಡಿದು ಎಳೆದಾಡಿ
ಮಲಗೋಣಾ ಬಾ ಅಂತಾ ಅನ್ನುತ್ತಾ ನನ್ನ ಸೀರೆ ಸೆರಗು ಹಿಡಿದು ಜಗ್ಗಾಡಿದನು. ನಾನು ಬಿಡು ಅಂತಾ
ಅನ್ನುತ್ತಿದ್ದಾಗ ನನಗೆ ಬೆನ್ನಿನ ಮೇಲೆ ಕೈಯಿಂದ ಹೊಡೆದನು. ನಾನು ಅವನಿಂದ ಬಿಡಿಸಿಕೊಂಡು ನಮ್ಮ
ಮನೆಗೆ ಓಡಿಕೊಂಡು ಹೋಗಿ ನನ್ನ ಗಂಡನಿಗೆ ಈ ವಿಷಯ ತಿಳಿಸಿದಾಗ ನನ್ನ ಗಂಡ ಶರಣಪ್ಪ ಈತನು ನನಗೆ
ನೀನು ಸುಳ್ಳು ಹೇಳುತ್ತಿ ರಂಡಿ ಭೊಸಡಿ ಅಂತಾ ಬೈದು ಕಟ್ಟಿಗೆಯಿಂದ ಹೊಡೆದಿದ್ದು ನಂತರ
ನಮ್ಮ ಮಾವ ಬಂದು ನನಗೆ ಈ ವಿಷಯ ಯಾರ ಮುಂದೆ ಹೇಳಿದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಭಯ
ಹಾಕಿದದ್ದು ನೀನು ನನ್ನ ಜೊತೆಯಲ್ಲಿ ಮಲಗಲ್ಲ ಅಂದರೆ ನನ್ನ ದೊಡ್ಡ ಮಗ ಶಿವಾನಂದನ ಜೊತೆ ಮಲಗಿಕೋ
ಒತ್ತಾಯ ಮಾಡಿದನು. ನೀರು ಅನ್ನ ಕೊಡದೆ ಉಪವಾಸ ಹಾಕಿದರು. ನಂತರ ಮರು ದಿವಸ ಬೆಳಗ್ಗೆ ನನ್ನ
ಭಾವನಾದ ಶಿವಾನಂದ ಕೂಡಾ ನನಗೆ ಹೊಡೆಬಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ
:
ಗ್ರಾಮೀಣ ಠಾಣೆ : ದಿನಾಂಕ 31-10-2013 ರಂದು ಸಾಯಂಕಲ 5-30 ರಂದು ಶ್ರೀಮತಿ ಅರ್ಚನಾ ಗಂಡ ಸಂತೋಷ ಕಾಸರ ಸಾ: ರೇವಣಸಿದ್ದೇಶ್ವರ ಕಾಲನಿ ಗುಲಬರ್ಗಾ
ರವರು ಮತ್ತು ಆಕೆಯ ಅತ್ತೆ ಗೋದಾವರಿ ನಾದಿನಿ ರಾಜೇಶ್ವರಿ ಕುಡಿಕೊಂಡು ಮನೆಗೆ ಕೀಲಿ ಹಾಕಿಕೊಂಡು ಈಣಿಯಲ್ಲಿರುವ
ಸ್ವಾಮಿ ಬಟ್ಟೆ ಅಂಗಡಿಗೆ ದಿಪಾವಳಿ ಹಬ್ಬದ ಬಟ್ಟೆ ಖರೀದಿ ಕುರಿತು ಹೋಗಿದ್ದು ಸಂಜೆ 6-30 ಗಂಟೆಯ
ಸುಮಾರಿಗೆ ಮನೆಗೆ ಬಂದು ನೋಡಲು ಯಾರೋ ಕಳ್ಳರು ಮನೆಯ ಬಾಗಿಲ ಕೊಂಡು ಮುರಿದು ಮನೆಯೋಳಗೆ ಪ್ರವೇಶ
ಮಾಡಿ ಅಲಮಾರಿಯಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ
ಆಭರಣಗಳು ಹೀಗೆ ಒಟ್ಟು ಸುಮಾರು 17,13,000/- ರೂ ಕಿಮ್ಮತ್ತಿನವುಗಳನ್ನು ಕಳವುಮಾಡಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ
ಸುಭಾಶಚಂದ್ರ ಎ ಎಸ್ ಐ ಚಿಂಚೋಳಿ ಪೊಲೀಸ್ ಠಾಣೆ
ತಾ: ಚಿಂಚೊಳಿ ರವರು ಪಟಡ್ರೋಲಿಂಗ ಕರ್ತವ್ಯ
ಕುರಿತು ಬಡಿದರ್ಗಾದ ಕಡೆಗೆ ಹೋದಾಗ ಬಡಿದರ್ಗಾದ
ಹತ್ತೀರ ಇರುವ ಮುಲ್ಲಾಮಾರಿ ಹಳ್ಳದಲ್ಲಿ ಒಬ್ಬ
ಗಂಡು ಮನುಷ್ಯನ ಶವವು ನೀರಿನಲ್ಲಿ ಹರಿದುಕೊಂಡು ಬಂದು ನಿಂತಿರುತ್ತದೆ ಅಂತಾ ಬಾತ್ಮಿ ಬಂದ ಮೇರೆಗೆ
ದಿನಾಂಕ 01-11-2013 ರಂದು ಮಧ್ಯಾಹ್ನ 01.00 ಗಂಟೆಗೆ ಮುಲ್ಲಾ ಮಾರಿ ಹಳ್ಳಕ್ಕೆ ಹೋಗಿ ನೋಡಲಾಗಿ ಸದರಿ ಹಳ್ಳದಲ್ಲಿ ಅಂದಾಜು 45 ರಿಂದ 50 ವರ್ಷ ವಯಸ್ಸಿನ ಗಂಡು ಮನುಷ್ಯನ
ಶವವು ಬೋರಲಾಗಿ ಬಿದ್ದಿದ್ದು ಕಾಲುಗಳು ನೇರವಾಗಿ ಚಾಚಿರುತ್ತವೆ.(ಹಿಂದಕ್ಕೆ) ಸದರಿ ಮೃತ ದೇಹದ
ಮೇಲೆ ಯಾವುದೇ ಬಟ್ಟೆಗಳಿರುವುದಿಲ್ಲಾ ನಗ್ನ ವಾಸ್ಥೆಯಲ್ಲಿರುತ್ತದೆ. ಹಳ್ಳದಲ್ಲಿರುವ ಗಿಡ-ಬಳ್ಳಿಗಳು
ಸೋಂಟಕ್ಕೆ ಸುತ್ತಿಕೊಂಡಿದ್ದು ಇರುತ್ತದೆ. ಸದರಿ ಮೃತ ವ್ಯಕ್ತಿಯು ಹೆಸರು /ವಿಳಾಸ
ಗೋತ್ತಾಗಿರುವುದಿಲ್ಲಾ ಅಪರಿಚಿತ ವ್ಯಕ್ತಿಯಾಗಿರುತ್ತಾನೆ. ಸದರಿಯವನು ಸುಮಾರು ಎರಡು ದಿವಸಗಳ
ಹಿಂದೆ ನೀರಿನಲ್ಲಿ ಬಿದ್ದು ಹರಿದುಕೊಂಡು ಬಂದು
ಆಸ್ಥಳದಲ್ಲಿ ನೀರಿನ ಹರಿವು ಕಡಿಮೇವಿರುವುದರಿಂದ
ನಿಂತಂತೆ ಕಂಡುಬರುತ್ತಿದ್ದು ಮಾನ್ಯರವರು ಮುಂದಿನ ಕಾನೂನು ಕ್ರಮ ಕೈಗೋಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಹರಣ ಪ್ರಕರಣ
:
ಅಶೋಕ ನಗರ ಠಾಣೆ : ಶ್ರೀಮತಿ ದೇವಕಿ ಗಂಡ ಲಕ್ಷ್ಮಣ ಕಡಬಾಣಿ ಸಾ: ಜೋಗುರ ಗ್ರಾಮ ತಾ:ಜಿ:ಳ ಗುಲಬರ್ಗಾ ಇವರ ಮಗಳಾದ ಐಶ್ವರ್ಯಗೆ ಇವಳಿಗೆ ಒಂದು ವರ್ಷದಿಂದ ನಮ್ಮ ಜೋಗುರ
ಗ್ರಾಮದ ಚಾಂದ ತಂದೆ ಬಾಬು ಡೆಂಗೆ ಎನ್ನುವವನು ನಮ್ಮ ಹುಡುಗಿಯ ಹಿಂದೆ ಬಿದ್ದು ಲವ್ವ ಮಾಡು ಅಂತಾ
ಕಿರಿಕಿರಿ ಕೊಡುತ್ತಿದ್ದು. ಈಗ 8-10 ದಿವಸದ
ಹಿಂದೆ ಚಾಂದ ತಂದೆ ಬಾಬು ಡೆಂಗೆ ಇತನು ನನ್ನ ಮಗಳಾದ ಐಶ್ವರ್ಯಗೆ ಲವ್ವ ಮಾಡು ಅಂತಾ
ಚುಡಾಯಿಸಿದಕ್ಕೆ ಅವಳು ಚಪ್ಪಲಿಯಿಂದ ಹೊಡೆದಿದ್ದು ಈ ವಿಷಯ ಮನೆಗೆ ಬಂದು ನನಗೂ ಹೇಳಿದ್ದರಿಂದ
ನಾನು ಅವನಿಗೆ ಎರಡೇಟು ಹೊಡೆದು ಅವರ ಮನೆಗೆ ಹೋಗಿ
ಅವರ ತಂದೆ-ತಾಯಿಗೆ ಈ ರೀತಿಯ ಚುಡಾಯಿಸುತ್ತಿದ್ದಾನೆ ಅಂತಾ ಹೇಳಿ ಬಂದಿರುತ್ತೇನೆ.
ಹೀಗಿದ್ದು ದಿನಾಂಕ 30-10-2013 ರಂದು ನನ್ನ ಹಿರಿಯ ಮಗಳ ಮಗನಿಗೆ ಆರಾಮ ಇರಲಾರದಕ್ಕೆ ಗುಲಬರ್ಗಾ ಮೋಹನ ಲಾಡ್ಜ ಹತ್ತಿರದ
ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿದ್ದೆ
ಆ ದಿನ ನನ್ನ ಮಗಳಾದ ಐಶ್ವರ್ಯ ಇವಳು ಕಾಲೇಜಿಗೆ ಹೋಗಿದ್ದಳು ರಾತ್ರಿ
ಮುಕ್ಕಾಂ ಬಸ್ಸಿಗೆ ಜೋಗುರಕ್ಕೆ ಹೋಗುತ್ತಿದ್ದೇನೆ ಅಂತಾ ಪೋನ ಮಾಡಿ ಹೇಳಿದಳು. 2 ದಿವಸ ಆದರೂ ಸಹ ನನ್ನ ಮಗಳು ಮನೆಗೆ
ಬಂದಿರುವುದಿಲ್ಲಾ. ನಾವು ಹುಡುಕಾಡುತ್ತಿರುವಾಗ,
ನಿನ್ನೆ ದಿವಸ ನನ್ನ ಮಗಳು ಐಶ್ವರ್ಯ ಇವಳು ಪೋನ ಮಾಡಿ
“ ಗುಲಬರ್ಗಾ ಬಸ್ಸ ಸ್ಟಾಂಡ ಹತ್ತಿರ ಬರುತ್ತಿರುವಾಗ
ರಾತ್ರಿ 9 ಗಂಟೆ ಸುಮಾರಿಗೆ ಚಾಂದ ಮತ್ತು ಅವನ ಸಂಗಡ 5-6 ಜನರು ಕೂಡಿ ನನಗೆ ಕಿಡ್ನಾಪ ಮಾಡಿಕೊಂಡು
ಒಯ್ದಿದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಳು ದಾಖಲೆ ಸೃಷ್ಠಿ ಮಾಡಿ ಮೋಸ ಮಾಡಿದ ಪ್ರಕರಣ :
ಚಿಂಚೋಳಿ ಠಾಣೆ : 1)
ಬಕ್ಕಪ್ಪ ತಂದೆ ನರಸಪ್ಪ ಬಜಾರ 2) ರಮೇಶ ತಂದೆ ಬಕ್ಕಪ್ಪ ಬಜಾರ 3) ಬಸ್ಸಪ್ಪ ತಂದೆ ಶಿವಪ್ಪಾ
ಸುಂಕಾ 4) ನರಸಪ್ಪ ತಂದೆ ತುಕ್ಕಪ್ಪ ಹುಡ್ಗಿ 5)
ಹಣಮಂತರಾಯ ತಂದೆ ರೇವಣಸಿದ್ದಪ್ಪಾ ಚೇಂಗ್ಟಿಕರ ಸಾ ಎಲ್ಲರು ಮು; ಐನೋಳ್ಳು ತಾ; ಚಿಂಚೋಳಿ
ರವರು ಸದಸ್ಯರಿದ್ದು ಸದರಿಯವರು ಫಿರ್ಯಾದಿದಾರರ
ಮತ್ತು ಇತರೆ ಸದಸ್ಯರ ರುಜುಗಳನ್ನು ಖೋಟ್ಟಿ ರುಜು ತಯ್ಯಾರಿಸಿರುತ್ತಾರೆ ಸದರಿ ವಿಷಯವು
ಫಿರ್ಯಾದಿದಾರನ ಗಮನಕ್ಕೆ ಬಂದ ನಂತರ ಮೇಲೆ ತೋರಿಸಿದ ಆರೋಪಿತರು ಸಭೆ ಕರೆದಿದ್ದೆವೆ ಎಂದು ಸುಳ್ಳು
ದಾಖಲೆಯನ್ನು ಸೃಷ್ಟಿಸಿ ಖೊಟ್ಟಿ ರುಜುಗಳನ್ನು ಹಾಕಿ ಸಂಸ್ಥೆಯ ಹಣವನ್ನು ದುರುಪಯೋಗ ಮಾಡಿದ ಬಗ್ಗೆ
ಶ್ರೀ ಶಾಮರಾವ ತಂದೆ ಚಂದ್ರಪ್ಪ ಬೆಸ್ತ ಅಧ್ಯಕ್ಷರು ಶಾರಧಾಂಭಾ ಶೀಕ್ಷಣ ಸಂಸ್ಥೆ ಮತ್ತು ಸಮಾಜ
ಕಲ್ಯಾಣ ಸಂಸ್ಥೆ ಐನೋಳ್ಳಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment