ದರೋಡೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಮಹೇಶ ತಂದೆ ಲಕ್ಷ್ಮಣ ನಾರಾಯಣಪೂರ ಸಾ|| ಮುಸ್ತಾಪೂರ ಗ್ರಾಮ ತಾ|| ಹುಮನಾಬಾದ ಜಿ||
ಬೀದರ ರವರು ದಿನಾಂಕ 19-11-2013 ರಂದು ತಾನು ಲಾರಿ ನಂ ಎ.ಪಿ.13, ಎಕ್ಸ3349 ನೇದ್ದರಲ್ಲಿ
ವಾಡಿ ಸಿಮೇಂಟ ಕಂಪನಿಯಿಂದ 17 ಟನ್ ಸಿಮೇಂಟ ತುಂಬಿಕೊಂಡು ಬೀದರ ಜಿಲ್ಲೆ ಹೋಗುವ ಕುರಿತು ಶಹಾಬಾದ
ಮುಖಾಂತರವಾಗಿ ಗುಲಬರ್ಗಾದ ಐ.ಓ.ಸಿ ದಾಟಿ ಸ್ವಲ್ಪ ಮುಂದೆ ಕ್ಯಾಂಬ್ರಿಡ್ಜ ಶಾಲೆ ಹತ್ತಿರ ಬಂದಾಗ
ರಾತ್ರಿ ಸುಮಾರು 12.00 ಗಂಟೆಗೆ ಹಿಂದಿನಿಂದ
ಬೊಲೇರೋ ಜೀಪದಲ್ಲಿ 6 ಜನರು ಬಂದು ಲಾರಿಗೆ ಓವ್ಹರಟೇಕ್ ಮಾಡಿ ಲಾರಿ ತಡೆದು ನಿಲ್ಲಸಿ ಫಿರ್ಯಾದಿಗೆ
ಕೆಳಗೆ ಇಳಿಸಿ ಕೈಯಿಂದ ಹೊಡೆ-ಬಡೆ ಮಾಡಿ ಫಿರ್ಯಾದಿಯ ಶರ್ಟ ಬಿಚ್ಚಿಸಿ ಮುಖಕ್ಕೆ ಕಟ್ಟಿ ಅತನಿಗೆ ಬೋಲೇರೋ
ಜಿಪದಲ್ಲಿ ಹಾಕಿಕೊಂಡು ಲಾರಿ ಸಮೇತ ಆಳಂದ ತಾಲ್ಲೂಕಿನ ಸಾವಳಿ [ಬಿ] ಗ್ರಾಮದ ಹತ್ತಿರ ರಾತ್ರಿ 2.00
ಗಂಟೆಗೆ ಫಿರ್ಯಾದಿಗೆ ಇಳಿಸಿ ಲಾರಿ, 17 ಟನ್ ಸಿಮೆಂಟ, ನಗದು ಹಣ ಮೊಬೈಲ್ ಪೋನ ಹೀಗೆ ಒಟ್ಟು 7,94,000/- ರೂ ಬೆಳೆ ಬಾಳುವದನ್ನು
ದೋಚಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಸಂಚಾರಿ
ಠಾಣೆ :
ದಿನಾಂಕ
20-11-2013 ರಂದು 04-45 ಪಿ.ಎಮ್ ಕ್ಕೆ ಶ್ರೀ ನೇಹರು ತಂದೆ ಗೋಪಾಲ ಪವಾರ, ಸಾಃ ತರಿ ತಾಂಡಾ, ತಾಃ ಚಿತ್ತಾಪೂರ ರವರು ತನ್ನ ಮೋಟಾರ ಸೈಕಲ ನಂ.ಕೆ.ಎ 32 ವೈ
5657 ನೇದ್ದರ ಮೇಲೆ ತನ್ನ ಹೆಂಡತಿ ಶಕುಂತಲಾ ಮತ್ತು ತಮ್ಮನ ಮಗನಾದ ರೋಹನ, ವಃ 5 ವರ್ಷ, ಇವರನ್ನು ಕೂಡಿಸಿಕೊಂಡು ಮೋಟಾರ
ಸೈಕಲ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಒಬ್ಬ ಟಾಟಾ ಸುಮೊ ಜೀಪ ನಂ. ಕೆ.ಎ 32 ಎಮ್. 7925 ನೇದ್ದರ
ಚಾಲಕನು ತನ್ನ ಜೀಪನ್ನು ಬಸವೇಶ್ವರ ಆಸ್ಪತ್ರೆಯ ಕಡೆಯಿಂದ ಅತಿವೇಗ ಮತ್ತು ಅಲಕ್ಷನತನದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಜೀಪ
ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ವರದಕ್ಷಣೆ
ಕಿರುಕಳ ಪ್ರಕರಣ :
ಚಿಂಚೋಳಿ
ಠಾಣೆ :
ಶ್ರೀಮತಿ ಶ್ವೇತಾ ಗಂಡ ಅನೀಲ ಪವಾರ ಸಾ; ದೇವಗಿರಿ ತಾಂಡಾ (ಎ) ತಾ; ಹುಮನಾಬಾದ ಹಾ;ವ ಗಣೇಶ ನಗರ
ಚಂದಾಪೂರ ತಾ; ಚಿಂಚೋಳಿ ರವರನ್ನು ದಿನಾಂಕ
26.06.2012 ರಂದು ನನ್ನ ತಂದೆ ತಾಯಿ ಯವರು 20 ತೋಲೆ ಬೆಳ್ಳಿ, 2 ಲಕ್ಷ ರೂ, ಹಾಗೂ ಬಜಾಜ
ಡಿಸ್ಕವರ ದ್ವೀಚಕ್ರ ವಾಹನ ಹಾಗೂ ಇತರೆ ಗೃಹ ಬಳಕೆ ಸಾಮಾನುಗಳನ್ನು ಕೊಟ್ಟು ಅನೀಲ ಪವಾರ ತಂದೆ ವಿಠಲ ಪವಾರ ರವರೊಂದಿಗೆ ಮದುವೆ ಮಾಡಿರುತ್ತಾರೆ
ಮದುವೆ ಆದ ನಂತರ ಸುಮಾರು 5 ತಿಂಗಳವರೆಗೆ ನನ್ನ ಗಂಡನ ಮನೆಯಲ್ಲಿದ್ದು ಸರಿಯಾಗಿ
ನೋಡಿಕೊಂಡಿರುತ್ತಾರೆ ತದನಂತರ ನಾನು ಬಿಎಡ್ ಕೋರ್ಸಗಾಗಿ ವಿಧ್ಯಾಭ್ಯಾಸ ಮಾಡುತ್ತಿರುವುದರಿಂದ
ನಾನು ಮತ್ತು ನನ್ನ ಗಂಡನಾದ ಅನೀಲ ಪವಾರ ಇಬ್ಬರು ನನ್ನ ತಂದೆ ತಾಯಿಯವರ ಮನೆಯಲ್ಲಿ
ವಾಸವಾಗಿದ್ದೇವು ಹೀಗಿದ್ದು ಕಳೆದ ಒಂದು ವರ್ಷದಿಂದ ನನ್ನ ಗಂಡನು ದಿನಾಲು ನನಗೆ ನನ್ನ ತಂದೆ
ತಾಯಿಯವರಿಂದ ಇನ್ನು ಹೆಚ್ಚಿನ ವರದಕ್ಷಿಣೆಗಾಗಿ 50 ಸಾವಿರ ರೂಪಾಯಿ ತೆಗೆದುಕೊಂಡು ಬಾ
ಇಲ್ಲದಿದ್ದರೆ ನಿನ್ನನ್ನು ಸೀಮೆ ಎಣ್ಣೆ ಸುರಿದು
ಬೆಂಕಿ ಹಚ್ಚಿ ಸುಟ್ಟು ಬಿಡುತ್ತೇನೆ, ನಿನ್ನನ್ನು ಬಿಟ್ಟು ಬೆರೋಬ್ಬಳನ್ನು ಮದುವೆ ಆಗುತ್ತೇನೆ
ಅನ್ನುತ್ತಾ ಕೈಯಿಂದ ಹೋಡೆ ಬಡೆ ಮಾಡುತ್ತಾ ಬಂದಿರುತ್ತಾನೆ. ದಿನಾಂಕ 19.11.2013 ರಂದು ರಾತ್ರಿ
10.00 ಗಂಟೆಗೆ ಚಂದಾಪೂರದಲ್ಲಿರುವ ನನ್ನ ತಂದೆ ತಾಯಿಯವರ ಮನೆಗೆ ಬಂದು ಮನೆ ಅಂಗಳದಲ್ಲಿ ನಿಂತು ಅವಾಚ್ಯ
ಶಬ್ದಗಳಿಂದ ಬೈದು ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆದಿದ್ದು ಅಲ್ಲದೆ ಕಾಲಿನಿಂದ ಎಡರೊಂಡಿಗೆ,
ಎಡಬುಜಕ್ಕೆ ಒದ್ದು ಗುಪ್ತಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ
ಸ್ವಾಭಾವಿಕ ಸಾವು ಪ್ರಕರಣಗಳು :
ಮಾದನಹಿಪ್ಪರಗಾ
ಠಾಣೆ :
ಶ್ರೀಮತಿ.ಶರಣಮ್ಮ
ಗಂಡ ಶಿವಯೊಗೇಪ್ಪ ಕುಂಬಾರ ಸಾ: ಖೇಡ ಉಮರ್ಗಾ ತಾ: ಆಳಂದ ಇವರು ದಿನಾಂಕ 19-11-2013 ರಂದು ಮದ್ಯಾಹ್ನ 12 ಗಂಟೆಯ ಸುಮಾರಿಗೆ ನನ್ನ ಗಂಡನು
ನಮ್ಮ ಹೊಲದಲ್ಲಿ ಕರಕಿ ಹುಲ್ಲಿಗೆ ಕ್ರಿಮಿನಾಶಕ ಔಷಧ ಹೊಡೆಯುತ್ತಿದ್ದಾಗ ಗಾಳಿಯಿಂದ ಆಕಸ್ಮೀಕವಾಗಿ
ಕ್ರಿಮಿನಾಶಕ ಎಣ್ಣೆ ನನ್ನ ಗಂಡನ ಮೈಮೇಲೆ ಮತ್ತು ಬಾಯಿಯಲ್ಲಿ ಹೊಗಿದ್ದು ಕ್ರಿಮಿನಾಶಕ ಔಷಧ ನನ್ನ
ಗಂಡನ ದೇಹದಲ್ಲಿ ಹೋಗಿದ್ದರಿಂದ ಸುಸ್ತಾಗಿ ಬಿದ್ದಾಗ ಉಪಚಾರಕ್ಕಾಗಿ ಸತ್ಯಂ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿದ್ದು ನನ್ನ ಗಂಡನು ಉಪಚಾರ
ಪಡೆಯುತ್ತಾ ಗುಣಮುಖವಾಗದೇ ದಿನಾಂಕ: 20-11-2013 ರಂದು ಬೇಳಗ್ಗೆ 06:05 ಗಂಟೆಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಅಶೋಕ ತಂದೆ ಶೇವು ರಾಠೋಡ ಸಾ; ದಿನಸಿ(ಕೆ) ತಾಂಡ ತಾ; ಜಿ; ಗುಲಬರ್ಗಾ ನಮ್ಮ
ತಂದೆ ಶೇವು ತಂದೆ ರಾಮಚಂದ್ರ ರಾಠೊಡ ಹಾಗೂ ನನ್ನ ತಾಯಿ ರಮಾಬಾಯಿ ಗಂಡ ಶೇವು ನಾಯಕ ಇವರು ನನ್ನ
ಸಂಗಡ ವಾಸವಾಗಿದ್ದು, ನನ್ನ ತಂದೆಯಾದ
ಶೇವು ರಾಠೊಡ ಇವ ರು ವಿಪರಿತ ಕುಡಿದತ ಚಟದವರಾಗಿದ್ದು ದಿನಾಲು ತಾವು ಕುಡಿಯುವ ಸರಾಯಿ
ಬಾಟಲಿಯನ್ನು ಅಡುಗೆ ಮನೆಯ ಮಾಡದಲ್ಲಿ ಇಡುತ್ತಿದ್ದು, ಅಲ್ಲದೆ ಅಂದು ನಮ್ಮ
ಹೊಲದಲ್ಲಿ ನಮ್ಮ ತಂದೆಯವರು ನಮ್ಮ ಹೊಲದಲ್ಲಿ ಬೆಳೆದ ತೊಗರಿಬೆಳೆಗೆ ಕ್ರೀಮಿನಾಷಕ ಔಷದಿ ಹೊಡೆದು
ಉಳಿದ ಔಷದಿಯನ್ನು ರಾತ್ರಿ ಅವಸರದಲ್ಲಿ ಅಡುಗೆ ಮನೆಯ ಪನಮ್ಮ ಹೊಲದಲ್ಲಿ ಬೆಳೆದ ತೊಗರಿ ಬೆಳೆಗೆ
ಕ್ರಿಮಿನಾಷಕ ಔಷದಿಯನ್ನು ಸಿಂಪಡಿಸಿದ್ದು ಅದರ ಉಳಿದ ಕ್ರಿಮಿನಾಷಕ ಔಷದಿಯನ್ನು ಸರಾಯಿ ಬಾಟಲಿಯ
ಪಕ್ಕದಲ್ಲಿಟ್ಟಿದ್ದು, ದಿನಾಂಕ 19-11-2013 ರಂದು ಮುಂಜಾನೆ 09-30 ಎ,ಎಮ್ ದ ಸುಮಾರಿಗೆ ನಮ್ಮ
ತಂದೆ ಶೇವು ರಾಠೋಡ ಇವರು ತಲೆಗೆ ಚಕ್ಕರ ಬಂದಂತಾಗಿ ವಾಂತಿ ಮಾಡುತ್ತಿದ್ದನ್ನು ಕಂಡು ನಾನು
ಗಾಬರಿಯಿಂದ ನನ್ನ ತಾಯಿ ರಮಾಬಾಯಿಯನ್ನು ಕರೆಯಿಸಿ ವಿಚಾರಿಸಿದಾಗ ನನ್ನ ತಂದೆ ತಿಳಿಸಿದ್ದೇನಂದರೆ
ನಿನ್ನೆಯ ದಿವಸ ತೊಗರಿ ಬೆಳೆಗೆ ಕ್ರೀಮಿನಾಷಕ ಔಷದಿಯನ್ನು ಹೊಡೆದು ಉಳಿದ ಔಷದಿಯನ್ನು ಅವಸರದಲ್ಲಿ
ಅಡುಗೆ ಮನೆಯ ಮಾಡದಲ್ಲಿ ಸರಾಯಿ ಬಾಟಲಿಯ ಹತ್ತೀರಯಿಟ್ಟಿದ್ದು ಅದನ್ನು ನಾನು ಅವಸರದಲ್ಲಿ ಸರಾಯಿ
ಬಾಟಲಿಯ ಬದಲು ಕ್ರೀಮಿನಾಷಕ ಔಷದಿಯನ್ನು ಕುಡಿದಿರುತ್ತೇನೆ ಅಂತಾ ತಿಳಿಸಿದ್ದು, ಅದನ್ನು ಕೇಳಿ ನಾವು ಗಾಬರಿಗೊಂಡು ನನ್ನ ಅಣ್ಣನಾದ
ಎಮನಾಥ ರಾಠೋಡ ಇವರನ್ನು ಕರೆಯಿಸಿ ವಿಷಯ ತಿಳಿಸಿ ದ್ವಿಚಕ್ರ ವಾಹನದಲ್ಲಿ ನಮ್ಮತಂದೆಯನ್ನು ಉಪಚಾರ
ಕುರಿತು ಕಮಲಾಪೂರ ಆಸ್ಪತ್ರೆಗೆ ತಂದು ನಂತರ ಅಲ್ಲಿಂದ ಹೆಚ್ಚಿನ ಖಾಸಗಿ ಜೀಪಿನಲ್ಲಿ ಉಪಚಾರ
ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ತಂದು ಸೇರಿಕೆ ಮಾಡಿದ್ದು ನಂತರ ನನ್ನ ತಂದೆ ಉಪಚಾರ
ಹೊಂದುತ್ತ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ: 20-11-2013 ರಂದು ಮುಂಜಾನೆ 12-42 ಗಂಟೆ
ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment