ವರದಕ್ಷಣೆ ಕಿರುಕಳ ಪ್ರಕರಣಗಳು :
ಮಹಿಳಾ
ಠಾಣೆ : ಶ್ರೀಮತಿ ಸುವರ್ಣಾ ಗಂಡ
ಚಂದ್ರಕಾಂತ ಸುತಾರ ಸಾ: ಬಸವೇಶ್ವರ ಕಾಲನಿ ಗುಲಬರ್ಗಾ ರವರನ್ನು ದಿನಾಂಕ: 18.06.1999 ರಂದು
ನಮ್ಮ ತಂದೆ ತಾಯಿಯವರು ಮಾಡ್ಯಾಳ ಗ್ರಾಮದ ಚಂದ್ರಕಾಂತ ಇತನೊಂದಿಗೆ ಸಂಪ್ರದಾಯದಂತೆ ಮದುವೆ
ಮಾಡಿದ್ದು ಮದುವೆ ಕಾಲಕ್ಕೆ 1 ಲಕ್ಷ ರೂಪಾಯಿ ವರದಕ್ಷಿಣೆ
ಮತ್ತು 3 ತೊಲೆ ಬಂಗಾರ ಕೊಡಬೇಕೆಂದು ಮಾತನಾಡಿದ ಪ್ರಕಾರ ಮದುವೆಯಲ್ಲಿ 51 ಸಾವಿರ 3 ತೊಲೆ
ಬಂಗಾರ ಕೊಟ್ಟಿದ್ದು ಇನ್ನು 50 ಸಾವಿರ ರೂ
ಮದುವೆಯಾದ ನಂತರ ಕೊಡಬೇಕೆಂದು ಮಾತನಾಡಿದ್ದು ಇರುತ್ತದೆ. ಮದುವೆಯಾದ ನಂತರ 1
ವರ್ಷದವರೆಗೆ ನನ್ನ ಗಂಡ ನನ್ನನೊಂದಿಗೆ ಚೆನ್ನಾಗಿದ್ದು ತದನಂತರ ನನ್ನ ಗಂಡ ನನ್ನ ಶೀಲದ ಮೇಲೆ
ಸಂಶಯಗೊಂಡು ರಂಡಿ ಭೋಸಡಿ ಅಂತಾ ನನ್ನನೊಂದಿಗೆ ಜಗಳ ತೆಗೆದು ಕೈ ಯಿಂದ ಹೊಡೆ ಬಡೆ
ಮಾಡುತ್ತಿದ್ದನು. ಮತ್ತು ಇನ್ನುಳಿದ 50 ಸಾವಿರ ರೂಪಾಯಿ ವರದಕ್ಷಿಣೆ ಹಣ ತವರು ಮನೆಯಿಂದ ತರುವಂತೆ
ಪೀಡಿಸುತ್ತಿದ್ದನು. ಈ ವಿಷಯ ನಾನು ನನ್ನ ತಂದೆ ತಾಯಿಯವರಿಗೆ ತಿಳಿಸಿದಾಗ ಹಲವಾರು ಸಲ ಪ್ರಮುಖ
ಜನರಿಗೆ ಕರೆದುಕೊಂಡು ಬಂದು ನನ್ನ ಗಂಡನಿಗೆ ಬುದ್ದಿವಾದ ಹೇಳಿ ನ್ಯಾಯಾಪಂಚಯತಿ ಮಾಡಿ ನಮ್ಮ
ಹತ್ತಿರ ಹಣ ಇರುವದಿಲ್ಲಾ ಸ್ವಲ್ಪ ದಿವಸ ಕಳೆದ ನಂತರ ಉಳಿದ 50 ಸಾವಿರ ರೂಪಾಯಿ ತಂದು ಕೊಡುತ್ತೇವೆ
ಅಂತಾ ನನ್ನ ಗಂಡನಿಗೆ ಬುದ್ದಿವಾದ ಹೇಳೀದ್ದು ಇರುತ್ತದೆ. ನನ್ನ ಗಂಡ ಯಾರ ಮಾತು ಕೇಳದೆ ತನ್ನ
ಚಟವನ್ನೆ ಮುಂದು ವರೆಯಿಸಿಕೊಂಡು ಬಂದಿರುತ್ತಾನೆ ನನಗೆ ಎರಡು ಹೆಣ್ಣು ಎರಡು ಗಂಡು ಮಕ್ಕಳಿರುತ್ತಾರೆ
ಈ ಮಕ್ಕಳು ನನಗೆ ಹುಟ್ಟಿರುವುದಿಲ್ಲಾ ಯಾರದು ಇರುತ್ತವೆ
ಎಂದು ಮನೆಗೆ ರೇಶನ ಕೂಡ ತರದೇ ನನಗೆ ಉಪವಾಸ ಹಾಕಿ ಮಾನಸಿಕ ಹಾಗು ದೈಹಿಕ ಕಿರುಕುಳ
ಕೊಡುತ್ತಿದ್ದನು.ಇದಕ್ಕ ನನ್ನ ನಾದಿನಿಯರಾದ ನಾಗಮ್ಮ ಮತ್ತು ಶಾಂತಾ ಇವರು ಕೂಡ ನನ್ನ ಗಂಡನಿಗೆ
ಪ್ರೋತ್ಸಾಹ ಕೊಡುತ್ತಿದ್ದರು. ನನ್ನ ಗಂಡ ಅವನು ಕೊಡುವ ಹಿಂಸೆಯನ್ನು ತಾಳಲಾರದೇ ನನ್ನ
ಮಕ್ಕಳೊಂದಿಗೆ ತವರು ಮನೆಗೆ ಹೋಗಿ
ಉಳಿದುಕೊಂಡಿರುತ್ತೇನೆ ದಿನಾಂಕ: 24.11.2013 ರಂದು 11 ಎ.ಎಮ್ ಕ್ಕೆ ನನ್ನ ಗಂಡ ಚಂದ್ರಕಾಂತ ಇತನು ರಂಡಿ ನಿನಗೆ ತವರು
ಮನೆಯಿಂದ 50.000 ರೂಪಾಯಿ ತೆಗೆದುಕೊಂಡು ಬಾ
ಅಂದರೆ ಬರಿ ಗೈಯಿಂದ ನಮ್ಮ ಮನಗೆ ಬಂದಿರುವಿಯಾ ಕೈಯಿಂದ ಹೊಡೆ ಬಡೆ ಮಾಡಿ ಕುತ್ತಿಗೆ ಒತ್ತಿಹಿಡಿದು
ಕುದಲು ಹಿಡಿದು ಜಗ್ಗಡಿ ಮೈ ಮೇಲೆ ಕೈಯಿಂದ ಹೊಡೆದು ಮನೆಯಿಂದ ಹೊರಗೆ ನೂಕಿ ನಿನಗೆ ಇವತ್ತು ಖಲಾಸ
ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ
ಠಾಣೆ : ಶ್ರೀಮತಿ, ಫಾತೀಮಾ ಗಂಡ
ಕಲ್ಲಪ್ಪ ಶಿಂದೆ ಸಾ:ಸಂತೋಷ ಕಾಲೋನಿ ಉದನೂರ ರೋಡ
ಗುಲಬರ್ಗಾ ಇವರು ಕಲ್ಲಪ್ಪ ಶಿಂಧೆ ಇತನ್ನೊಂದಿಗೆ ಪ್ರೀತಿಸಿ ಗುಲಬರ್ಗಾದ ನೊಂದಣಿ ಕಛೇರಿಯಲ್ಲಿ
ದಿನಾಂಕ 4-7-2012 ರಂದು ವಿವಾಹವಾಗಿದ್ದು ಇರುತ್ತದೆ.ನಂತರ ನಾನು ಮತ್ತು ನನ್ನ ಗಂಡ ಗುಲಬರ್ಗಾದ
ಲ್ಲಿ ವಾಸವಾಗಿರುತ್ತೇವೆ. ನಂತರ 13-9-2013 ರಂದು ನನ್ನ ಗಂಡನಾದ ಕಲ್ಲಪ್ಪ ತನ್ನ ಸ್ವಗ್ರಾಮವಾದ
ಬಿಜಾಪೂರ ಜಿಲ್ಲೆ ಮಡಸನಾಳ ಗ್ರಾಮಕ್ಕೆ ಕರೆದುಕೊಂಡು ಹೋದನು. ಅಲ್ಲಿ ನನ್ನ ಮಾವನಾದ ನಾಮದೇವ
ಶಿಂದೆ ಅತ್ತೆ ಶಿವುಬಾಯಿ ಮೈದುನ ಪಿಂಟು,
ನೆಗಣಿ ರೇಖಾ ಈ ಎಲ್ಲರೂ ಕೂಡಿ “ಏ ಬೋಳಿ ರಂಡಿ ನನ್ನ ಮನಗೆ ಯಾಕೆ ಬಂದೆ ಬೋಸಡಿ ನನ್ನ
ಮನೆಗೆ ಕನಿಷ್ಠ ಪಕ್ಷ 4 ಲಕ್ಷ ರೂಪಾಯಿ ಹಣ ತಂದು ಕೋಡಬೇಕು. ನಿನ್ನ ಗಂಡನ ಧರ್ಮಪತ್ನಿ
ಇದ್ದಾಳೆ ಅವಳು ಹೇಳಿದ ಹಾಗೆ ಕೇಳಬೇಕು. ನೀನು
ವರದಕ್ಷಿಣೆ ತಂದು ಕೊಡಲಿಲ್ಲಾ ಅಂದರೆ ನಿನಗೆ ಕೊಲೆ ಮಾಡುತ್ತೇವೆ. ಅಂತಾ ಬೆದರಿಸಿ ಹೊಡೆಬಡೆ
ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಬ್ರಹ್ಮಪೂರ
ಠಾಣೆ : ಶ್ರೀ.ಪ್ರಕಾಶ
ತಂದೆ ಲಕ್ಷ್ಮಣರಾವ ಬೆನಕನಳ್ಳಿ ಸಾ|| ಚೌಡೇಶ್ವರಿ ಕಾಲೋನಿ ಬ್ರಹ್ಮಪೂರ
ಗುಲಬರ್ಗಾ, ಇವರು ಶರಣಬಸವೇಶ್ವರ
ಗುಡಿಯ ಎದರುಗಡೆ ಇರುವ ಕಣಕಿ ಬಜಾರದಲ್ಲಿ 2 ಕಬ್ಬಿನ
ಹಾಲಿನ ಅಂಗಡಿ ಇಟ್ಟುಕೊಂಡು ವಾಸವಾಗಿರುತ್ತೇನೆ. ಇಂದು ದಿನಾಂಕ 25-11-2013 ರಂದು ಮದ್ಯಾಹ್ನ 3:45 ಗಂಟೆ ಸುಮಾರಿಗೆ ಲಾಲಗೇರಿ
ಕ್ರಾಸ್ ಹತ್ತಿರ ಇರುವ (ಪ್ರಕಾಶ
ಕಬ್ಬಿನ ಹಾಲಿನ ಅಂಗಡಿ) ಕಬ್ಬಿನ ಹಾಲಿನ ಅಂಗಡಿಯಲ್ಲಿರುವಾಗ ಶರಣಬಸವೇಶ್ವರ ಗುಡಿಯ ಮುಖ್ಯ ದ್ವಾರದ
ಎದರುಗಡೆ ಕಣಕಿ ಬಜಾರದಲ್ಲಿರುವ ನಮ್ಮ ಇನ್ನೊಂದು ಸಂಗಮ ಕಬ್ಬಿನ ಹಾಲಿನ ಅಂಗಡಿಯ ಹಿಂದುಗಡೆ ಬೇವಿನ
ಗಿಡದ ಕೆಳಗಡೆ ಜನರು ನೆರದಿದ್ದನ್ನು ನೋಡಿ ಅಲ್ಲಿ ಹೋಗಿ ನೋಡಲು ಅಂದಾಜ 45 ವರ್ಷದ
ಅಪರಚಿತ ಗಂಡು ವ್ಯೆಕ್ತಿಗೆ ಇನ್ನೊಬ್ಬ ವ್ಯೆಕ್ತಿಯು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ತಲೆಯ
ಮೇಲೆ ಮತ್ತು ಹಣೆಯ ಮೇಲೆ ಹೊಡೆಯುತ್ತಿದ್ದು ಆಗ ಸದರಿ ವ್ಯೆಕ್ತಿಯು ಬೆಹುಷ ಆಗಿ ಸ್ಥಳದಲ್ಲಿ
ಬಿದ್ದು ಮೃತಪಟ್ಟಿದ್ದು ನಂತರ ಹೊಡೆಯುತ್ತಿದ್ದ ವ್ಯೆಕ್ತಿ ಓಡುತ್ತಿರುವಾಗ ಕಣಕಿ ಬಜಾರದಲ್ಲಿರುವ
ಭಜಿ ಬಂಡಿ ವ್ಯಾಪಾರಿಗಳು ಐಸ್ ಸ್ಕ್ರಿಂ ಬಂಡಿಯ ವ್ಯಾಪಾರಿಗಳು ಹಿಡಿದು ಗಿಡದ ಕೆಳಗೆ ಕೂಡಿಸಿದರು. ನಂತರ ನಾನು ತಕ್ಷಣ ಈ ವಿಷಯದ ಬಗ್ಗೆ ತಮ್ಮ ಪೊಲೀಸ್ ಠಾಣೆಗೆ ಫೋನ
ಮುಖಾಂತರ ತಿಳಿಸಿರುತ್ತೇನೆ. ಕೊಲೆ ಮಾಡಿದ ವ್ಯೆಕ್ತಿಯ ಹೆಸರು ನಂತರ ನನಗೆ ಗೋತ್ತಾಗಿದ್ದೇನಂದರೆ, ಆನಂದ
ತಂದೆ ಹಣಮಂತ ಸಾ||ಒಡ್ಡರಗಲ್ಲಿ
ಬ್ರಹ್ಮಪೂರ ಗುಲಬರ್ಗಾ ಅಂತಾ ಗೋತ್ತಾಗಿದ್ದು ಇರುತ್ತದೆ. ಕೊಲೆ ಮಾಡಿದ ವ್ಯೆಕ್ತಿಯು ಅಪರಿಚಿತ
ವ್ಯೆಕ್ತಿಯನ್ನು ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿರುತ್ತಾನೆ ಅಂತಾ ನನಗೆ ಗೊತ್ತಿಲ್ಲಾ.ಕೊಲೆಯಾದ
ವ್ಯೆಕ್ತಿಯ ಹೆಸರು ವಿಳಾಸ ಸಹ ನನಗೆ ಗೋತ್ತಿಲ್ಲಾ.ಅವನ ತಲೆಯ ಮೇಲೆ ಹಣೆಯ ಮೇಲೆ ಭಾರಿ
ರಕ್ತಗಾಯವಾಗಿರುತ್ತದೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಮಾಡಲು ಹೊಂಚು ಹಾಕಿ
ಕುಳಿತವನ ಬಂಧನ :
ಸ್ಟೇಷನ ಬಜಾರ ಠಾಣೆ : ಶ್ರೀ ಬಿ ಬಿ ಭಜಂತ್ರಿ ಪಿ ಐ ಸ್ಟೇಷನ್
ಬಜಾರ ಪೊಲೀಸ ಠಾಣೆ ಗುಲಬರ್ಗಾ ರವರು ಹಾಗು ಸಿಬ್ಬಂದಿಯವರಾದ ಜಹಾಂಗೀರ ಸಿಪಿಸಿ 474 ಚನ್ನಮಲ್ಲ ಸಿಪಿಸಿ 241 ನೇದ್ದವರ
ಸಂಗಡ ಜೀಪ ನಂ; ಕೆಎ 32
ಜಿ 532 ಚಾಲಕ ಸೈಯದ ಅನ್ವರ ಹಗಲು ಗಸ್ತಿನಲ್ಲಿರುವಾಗ ದಿನಾಂಕ; 25/11/2013 ರಂದು ಮದ್ಯಾಹ್ನ 12;30 ಗಂಟೆಯ ಸುಮಾರಿಗೆ ಠಾಣಾ ವ್ಯಾಪ್ತಿಯ ಮಹಿಳಾ ಐಟಿಐ ಕಾಲೇಜನ
ಆವರಣದ ಹಿಂದಿನ ಸರಕಾರಿ ಜಾಲಿ ಕಂಟಿಯಲ್ಲಿ ಯಾರೋ ಕೆಲವು ಜನರು ದರೋಡೆ ಮತ್ತು ಸುಲಿಗೆ ಮಾಡುವ
ಉದ್ದೇಶದಿಂದ ಅಡಗಿ ಕುಳಿತ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ನಾನು ಹಾಗು ನನ್ನ ಜೊತೆಗಿದ್ದ ಸಿಬ್ಬಂದಿಯವರೊಂದಿಗೆ 12;45 ಪಿ.ಎಮ್ ಕ್ಕೆ ಸ್ಥಳಕ್ಕೆ ಹೋಗಿ ಜೀಪಿನ ನಿಲ್ಲಿಸಿ ದಾಳಿ
ನಡೆಸಲಾಗಿ, ದಾಳಿ
ಮಾಡುವ ಕಾಲಕ್ಕೆ ಎರಡು ಜನ ಓಡಿ ಹೋಗಿದ್ದು ಒಬ್ಬ ಸಿಕ್ಕಿಬಿದ್ದು ಆತನ ಹೆಸರು ವಿಚಾರಿಸಲಾಗಿ
ಸಿದ್ದು ತಂದೆ ಬೈಲಪ್ಪ ತಳವಾರ ಸಾ|| ಪಂಚಶೀಲ
ನಗರ ಗುಲಬರ್ಗಾ ಅಂತಾ ತೀಳಿಸಿದನು ಓಡಿ ಹೊದವರ ಹೆಸರು ವಿಳಾಸ ವಿಚಾರಿಸಲಾಗಿ 1) ಖಾಜಾ ಪಟೇಲ್, 2) ಖಾಸಿಮ
ಅಲಿ @ ಖಾಸಿಂ ಅಂತ ಗೊತ್ತಾಯಿತು. ಸದರಿಯವನಿಂದ
ಒಂದು ಸಣ್ಣ ಚಾಕು. ಖಾರಪುಡಿ, ನೂಲಿನ
ಹಗ್ಗ. ಕಬ್ಬಿಣದ ರಾಡು ಪಂಚರ
ಸಮಕ್ಷಮ ಜಪ್ತಿಮಾಡಿಕೊಂಡಿದ್ದು
ಆರೋಪಿ ಹಾಗೂ ಮಾಲು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಸ್ಟೇXನ ಬಜಾರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣು
@ ಶರಣಬಸಪ್ಪ
ತಂದೆ ಅಮೃತರಾವ ಪಾಟೀಲ ಸಾ:
ಸೌಭಾಗ್ಯ ಕಲ್ಯಾಣ ಮಂಟಪ ಹತ್ತಿರ ಜೈನಗರ ಗುಲಬರ್ಗಾ
ರವರು ದಿನಾಂಕ 24-11-2013 ರಂದು ರಾತ್ರಿ 9-00
ಗಂಟೆ ಸುಮಾರಿಗೆ ಕೆಇಬಿ ಆಫೀಸ ಎದುರಿನ ರೋಡ ಮೇಲೆ ನಡೆದುಕೊಂಡು ಲಿಬರ್ಟಿ ಶೋ ರೂಮ ಕಡೆಗೆ
ಹೋಗುವಾಗ ಎಸ್.ವಿ.ಪಿ ಸರ್ಕಲ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಎಕ್ಸ-7268 ರ ಸವಾರ ಅತೀವೇಗ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ
ಭಾರಿಗಾಯಗೊಳಿಸಿದ್ದು ಮತ್ತು ನನ್ನ ಮಗ ಅಕಲೇಶ ಇತನಿಗು ಗಾಯಗೊಳಿಸಿ ಮೋಟಾರ ಸೈಕಲ ಅಲ್ಲಿ ಬಿಟ್ಟು ಓಡಿ
ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಚಿಂಚೋಳಿ ಠಾಣೆ : ಶ್ರೀ ಮಹ್ಮದ್ ಜಾವೇದ್ ತಂದೆ ಮಹ್ಮದ್ ಮಸ್ತಾನಸಾಬ
ಸೌದಾಗರ್ ಸಾ|| ಕಲ್ಯಣಗಡ್ಡಿ ಚಿಂಚೋಳಿ ತಾ|| ಚಿಂಚೋಳಿ ಇವರು ದಿನಾಂಕ 22-11-2013 ರಂದು
ಸಾಯಾಂಕಾಲ ಅಣ್ಣನಾದ ಮಹ್ಮದ್ ಮಂಜೂರ್ ಸೌದಾಗರ್ ಇವರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಚಿಂಚೋಳಿಯ ಎಸ್ ಬಿ ಐ ಬ್ಯಾಂಕವರೆಗೂ ಹೊಗಿ ತಾನು ಎಲೆ ಅಡಕಿ ತಿನ್ನುವ ಚಟವುಳ್ಳವನಾಗಿದ್ದರಿಂದ ತಲಾಶ ಪಾನ್ ಶಾಪವೋಂದರಿಂದ ಎಲೆ ಕಟ್ಟೊಕೊಂಡು ವಾಪಸ್ಸು ಸ್ವಂತ ಮನೆ ಕಡೆಗೆ ಚಿಂಚೊಳಿ- ಚಂದಾಪೂರ ಮುಖ್ತ ರಸ್ಗತೆಯ
ಎಡ ಬದಿಯಲ್ಲಿಯೇ ನಡೆದುಕೊಂಡು ಹೋಗುತ್ತೀರಬೇಕಾದರೆ ದಿನಾಂಕ 22-11-2013 ರಂದು 06.30
ಪಿ ಎಮ್ ಸುಮಾರಿಗೆ ಚಂದಾಪೂರ ಕಡೆಯಿಂದ ಬರುತ್ತಿದ್ದ ಯಾವನೋ ಒಬ್ಬ ಆಟೋ ಚಾಲಕನು ತನ್ನ ಆಟೋವನ್ನ
ಅತೀ ವೇಗ ನಿಷ್ಕಾಳೀಜಿತನದಿಂದ ಹಾಗೂ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ಚಿಂಚೊಳಿಯ ಬಸ್ ಡಿಪೋ ಕ್ರಾಸ್ ಎದುರಲ್ಲಿ ಸದರ ಮುಖ್ಯ ರಸ್ತೆ
ಮೇಲೆ ನನ್ನ ಅಣ್ಣನಾದ ಮಹ್ಮದ್ ಮಂಜೂರ್ ಸೌದಾಗರ್ ಇವರಿಗೆ ಡಿಕ್ಕಿ
ಪಡಿಸರುತ್ತಾನೆ ಸದರ ರಸ್ತೆ ಅಪಘಾತ ಘಟನೆಯಿಂದಾಗಿ ರಸ್ತೆಯ ಮೇಲೆ ಬಿದ್ದು ತಲೆಗೆ ಭಾರಿ ಪೆಟ್ಟಾಗಿರುತ್ತದೆ ಆಟೋ ಚಾಲಕನ
ಹೆಸರು ತಿಯಲು ಅವನು ತನ್ನ ಹೆಸರು ಮಹ್ಮದ್ ಸಾಭಿರ ತಂದೆ ಮಹ್ಮದ್ ಮಹಿಮೂದ್ ಸಾ|| ಚಿಂಚೊಳಿ
ಅಂತಾ ತಿಳಿಸಿದ್ದು ಇರುತ್ತದೆ. ಮತ್ತು ಅಪಘಾತ ಪಡಿಸಿದ ಆಟೋದ ನಂಬರ ನೋಡಲಾಗಿ ಅದರ ನಂ ಕೆ -32,
ಬಿ-5771 ಆಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment