ಕೊಲೆ ಪ್ರಕರಣ
:
ಮಾದನ ಹಿಪ್ಪರಗಾ ಠಾಣೆ : ಶ್ರೀ.ಸಿದ್ದಾರಾಮ ತಂದೆ ಶಿವಲಿಂಗಪ್ಪಾ ಕಲಶಟ್ಟಿ ಸಾ: ನಾಗಲೇಗಾಂವ ಇವರ ಅಣ್ಣ-ತಮ್ಮಕೀಯ ಹಾಗೂ
ನಮ್ಮೂರಿನ ನಾಮದೇವ ತಂದೆ ಸಿದ್ರಾಮ ಗೋಡಕೆ ಇವರ ಮದ್ಯ ಹಿರೋಳ್ಳಿ ಸೀಮಾಂತರ ಹೊಲ ಸರವೆ ನಂ:
133,144 ರ ಸಂಬಂಧವಾಗಿ ತಕರಾರು ಇದ್ದು ಇಬ್ಬರಲ್ಲಿ ವೈಮನಸ್ಸು ಇರುತ್ತದೆ. ಹೀಗಿದ್ದು ಇಂದು
ದಿನಾಂಕ 26-11-2013 ರಂದು ಮದ್ಯಾಹ್ನ 12 ಗಂಟೆಗೆ ನಾನು ಮತ್ತು ನನ್ನ ಅಣ್ಣ-ತಮ್ಮಕೀಯವರು ಕೂಡಿ
ನಾಮದೇವ ಗೋಡಕೆ ರವರ ಕೊಂಪೀ ಮನೆ ಹತ್ತಿರ ಹೊಲದ ಸಮಸ್ಯೆ ಬಗೆಹರಿಸಿಕೊಳ್ಳಲು ಹೋಗಿದ್ದಾಗ
ನಮ್ಮಿಬ್ಬರಲ್ಲಿ ವಿವಾದವಾಗಿದ್ದು 1) ಸಿದ್ದಾರಾಮ
ತಂದೆ ನಾಮದೇವ ಗೋಡಕೆ 2) ನಾಮದೇವ ತಂದೆ ಸಿದ್ದಾರಾಮ ಗೋಡಕೆ 3) ದತ್ತಾತ್ರೇಯ ತಂದೆ ಸಿದ್ದಾರಾಮ
ಗೋಡಕೆ 4) ಸುವರ್ಣ ತಂದೆ ನಾಮದೇವ ಗೋಡಕೆ 5) ಶಾರದಾಬಾಯಿ ಗಂಡ ನಾಮದೇವ ಗೋಡಕೆ 6) ರಮಾಬಾಯಿ ಗಂಡ
ದತ್ತಾತ್ತೇಯ ಗೋಡಕೆ ಮತ್ತು ಸರುಬಾಯಿ ಗಂಡ ದತ್ತಾತ್ತೇಯ ಗೋಡಕೆ ಎಲ್ಲರೂ ಸಾ: ನಾಗಲೇಗಾಂವ ಇವರು
ಕೂಡಿಕೊಂಡು ನಾಮದೇವ ಇತನು ಕೊಡಲಿಯಿಂದ ಶರಣಪ್ಪನ ತಲೆಗೆ ಜೋರಾಗಿ ಹೊಡೆದು ರಕ್ತಗಾಯ
ಮಾಡಿರುತ್ತಾನೆ ಮತ್ತು ಸಿದ್ದಾರಾಮ ಗೋಡಕೆ ಇತನು ಸಿದ್ರಾಮಪ್ಪಾ ತಂದೆ ಮಾರುತಿ ಕಲಶಟ್ಟಿ ಇವನ
ತಲೆಗೆ ಜೋರಾಗಿ ಹೊಡೆದಿದ್ದರಿಂದ ಹೆಚ್ಚಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ.
ದತ್ತಾತ್ರೇಯ ಇತನು ಚಂದ್ರಕಾಂತನ ತಲೆಗೆ ಮೂಗಿಗೆ ತೊಡೆಗೆ ಕೊಡಲಿಯಿಂದ ಹೊಡೆದು ಗಾಯ
ಮಾಡಿರುತ್ತಾನೆ. ಸಿದ್ದಾರಾಮ ಗೋಡಕೆ ತನ್ನ ಕೈಯಲ್ಲಿದ ಕೊಡಲಿಯಿಂದ ಚಂದ್ರಮನ ತಲೆಗೆ
ಹೊಡೆದಿರುತ್ತಾನೆ. ಆಗ ನಾನು ಬಿಡಿಸಲು ಹೋದಾಗ ನನಗೂ ಸಹ ದತ್ತಾತ್ರೇಯನು ಕೊಡಲಿಯಿಂದ ನನ್ನ ಬಲಗೈ
ಅಂಗೈಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಶಾರದಾಬಾಯಿ ಕೊಯಿತಾದಿಂದ ಶರಣಪ್ಪನಿಗೆ
ಹೊಡೆದಿರುತ್ತಾಳೆ.ರಮಾಬಾಯಿ ಮತ್ತು ಸರುಬಾಯಿ ಖರದಪುಡಿ ನಮ್ಮ ಕಣ್ಣಿಗೆ ಎರೆಚ್ಚಿರುತ್ತಾಳೆ.
ನಾಮದೇವ ಮತ್ತು ಅವನ ಸಂಗಡ ಇದ್ದವರು ಕೂಡಿ ಸಿದ್ರಾಮಪ್ಪಾ ಇವರಿಗೆ ಕೊಲೆ ಮಾಡಿ ನಮ್ಮ ಮೇಲೆ
ಮಾರಣಾಂತೀಕ ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ
ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ
ಶಿವರಾಯ ತಂದೆ ಸಿದ್ರಾಮಪ್ಪ ಕೆಳಗಿನಮನಿ. ಸಾ:ಹಣಮನಳ್ಳಿ. ತಾ: ಸೇಡಂ ದಿನಾಂಕ: 26-11-2013 ರಂದು
ಸಾಯಂಕಾಲ 6 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ತಮ್ಮನಾದ ರಾಜು ತಂದೆ ಸಿದ್ರಾಮಪ್ಪ ಈತನು
ಬಂದು ತಿಳಿಸಿದ್ದೆನೆಂದರೆ ನನಗೂ ಹಾಗೂ ಮಲ್ಲಿಕಾರ್ಜುನ ತಂದೆ ತಿಪ್ಪಣ್ಣ ಹೂಗಾರ ಈತನಿಗೂ ಇಂದು
ಸೇಡಂ ಪಟ್ಟಣದಲ್ಲಿ ಟಂಟಂ ಪಾಳೆ ನಿಲ್ಲಿಸುವ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದರಿಂದ ನಾನು ಊರಿಗೆ
ಬಂದ ಬಳಿಕ ಊರಲ್ಲಿಯೂ ಸಹ ನನಗೆ ಮಲ್ಲಿಕಾರ್ಜುನ ಹೂಗಾರ ಹಾಗೂ ಅವರ ಮನೆಯವರು ಕೂಡಿಕೊಂಡು ಹೊಡಿಬಡಿ
ಮಾಡಿರುತ್ತಾರೆ ಅಂತಾ ತಿಳಿಸಿದನು. ಆಗ ನಾನು ಈ ವಿಷಯದ ಬಗ್ಗೆ ಮಲ್ಲಿಕಾರ್ಜುನ ಇವರ ಮನೆಯವರಿಗೆ
ವಿಚಾರಿಸೋಣ ಅಂತಾ ಮನೆಯಿಂದ ಹೊರಟಾಗ ನಮ್ಮೂರ ಅಗಸಿ ಹತ್ತಿರ ಕುಳಿತಿದ್ದ 1)ನಾಗೇಂದ್ರಪ್ಪ ತಂದೆ
ಮಹಾದೇವಪ್ಪ ಹೂಗಾರ, 2)ಶಿವಕುಮಾರ ತಂದೆ ಮಹಾದೇವಪ್ಪ ಹೂಗಾರ, 3)ತಿಪ್ಪಣ್ಣ ತಂದೆ ಮಹಾದೇವಪ್ಪ
ಹೂಗಾರ ಮತ್ತು 4) ಮಹಾದೇವಪ್ಪ ತಂದೆ ಮಲ್ಲಪ್ಪ ಕೊಟ್ರಕಿ 5) ಮಲ್ಲಿಕಾರ್ಜುನ ತಂದೆ ತಿಪ್ಪಣ್ಣ
ಹೂಗಾರ ಇವರುಗಳ ಪೈಕಿ ನಾಗೇಂದ್ರಪ್ಪ ಹೂಗಾರ ಈತನಿಗೆ ನಮ್ಮ ತಮ್ಮನಿಗೆ ಏಕೆ ಹೊಡೆದಿರುವಿರಿ ಏನು ತಪ್ಪು
ಮಾಡಿದ್ದಾನೆ ಅಂತಾ ಕೇಳಿದ್ದಕ್ಕೆ ಆಗ ಅವರೆಲ್ಲರೂ ಕೂಡಿಕೊಂಡು ಅವಾಚ್ಯ ಶ್ದಗಳಿಂದ ಬೈದು ಜಾತಿ
ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿ ಹೊಡೆಬಡೆ ಮಾಡಿ ಛಾಜುವಿನಿಂದ ಹೊಡೆದು
ರಕ್ತಗಾಪಡಿಸಿರುತ್ತಾರೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 22-11-2013 ರಂದು 02-00 ಪಿ.ಎಮ್ ಕ್ಕೆ ಶ್ರೀ ಕಪಿಲದೇವ ತಂದೆ ಚಂದ್ರಕಾಂತ ಚಕ್ರವರ್ತಿ, ಸಾಃ ನಿಂಬರ್ಗಾ, ತಾಃ ಆಳಂದ ರವರು ಸೇಡಂ ರೋಡಿಗೆ ಇರುವ ವಾತ್ಸಲ್ಯ
ಆಸ್ಪತ್ರೆಯ ಎದರುಗಡೆ ರೋಡಿನ ಮೇಲೆ ತನ್ನ ಹೊಂಡಾ ಎಕ್ಟೀವಾ ನಂ. ಕೆ.ಎ 32 ಇ.ಡಿ 3922 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜಿಲ್ಲಾ ಸರ್ಕಾರಿ
ಆಸ್ಪತ್ರೆಯ ಕಡೆಯಿಂದ ಆರೋಪಿತನು ತನ್ನ ಅಟೋರಿಕ್ಷಾ ನಂ. ಕೆ.ಎ 32 ಎ 3434 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಫಿರ್ಯಾಧಿಯ ಮೋಟಾರ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಭಾರಿ ಗಾಯಗೊಳಿಸಿ
ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment