ಕೊಲೆ ಪ್ರಕರಣ :
ಅಫಜಲಪೂರ
ಠಾಣೆ : ದಿನಾಂಕ 01-11-2013
ರಂದು ಮದ್ಯಾಹ್ನ 12 ಗಂಟೆಯ ಸುಮಾರಿಗೆ ಶ್ರೀ ಮಲ್ಲಿಕಾರ್ಜುನ ತಂದೆ ಬಾಬುರಾಯ ಪಾಟೀಲ ರವರ ಅಕ್ಕಳಾದ ಐರಾವತಿ ಮತ್ತು ಆಕೆಯ ಗಂಡ ಸಿದ್ದಣ್ಣ
ಇವರು ಇಬ್ಬರು ಕೂಡಿಕೊಂಡು ಉರಲ್ಲಿರುವ ಮನೆಯಿಂದ ಹೊಲಕ್ಕೆ ಹೋಗಿದ್ದು ನಮ್ಮ ಅಕ್ಕ ಐರಾವತಿ ಮತ್ತು ಆಕೆಯ ಗಂಡ ಸಿದ್ದಣ್ಣ ಇವರು ಮರಳಿ
ಮನೆಗೆ ಬಂದಿರುವುದಿಲ್ಲ, ಅಂದಿನಿಂದ ನಾನು ಮತ್ತು ಸಿದ್ದಣ್ಣದ ಕಾಕಾನ ಮಗ ಬಾಬುರಾಯ ತಂದೆ ಗುರುಬಸಪ್ಪ
ದೇಸಾಯಿ ಇಬ್ಬರು ಕೂಡಿಕೊಂಡು ನಮ್ಮ ನೆರೆ ಹೊರೆ ಬೀಗರಿಗೆ ವಿಚಾರಿಸಿದೆವು ಆದರು ನಮ್ಮ ಅಕ್ಕ
ಮತ್ತು ಭಾವನ ಬಗ್ಗೆ ಯಾವುದೆ ವಿಷಯ ತಿಳಿದು ಬಂದಿಲ್ಲ, ಇಂದು ದಿನಾಂಕ 04-11-2013 ರಂದು 1;00
ಪಿ.ಎಂ ಕ್ಕೆ ನಾನು ಮತ್ತು ಬಾಬುರಾಯ ಹಾಗು ನಮ್ಮ
ಅಣ್ಣನ ಮಗನಾದ ಹಣಮಂತರಾಯ ಕೂಡಿಕೊಂಡು ಸಿದ್ದಣ್ಣನ ಹೊಲಕ್ಕೆ ಹೋಗಿ ಅಲ್ಲಿ ಎಲ್ಲಾ ಕಡೆ
ಹುಡಕಾಡಿದೆವು, ಅಲ್ಲೆ ಬಾಜು ಹೊಲದವನಾದ ಸಿದ್ದಾರಾಮ ತಂದೆ ಬೀಮರಾಯ ದೇಸಾಯಿ ಇವನನ್ನು
ವಿಚಾರಿಸಲಾಗಿ ದಿನಾಂಕ 01-11-2013 ರಂದು ರಾತ್ರಿ 8;00 ಗಾಂಟೆಗೆ ಸಿದ್ದಣ್ಣ ಇವನು ತನ್ನ
ಹೊಲದಲ್ಲಿನ ತಿಪ್ಪಿಯನ್ನು ಸುಡುತ್ತಿದ್ದಾಗ ನೋಡಿರುತ್ತಾನೆ ಅಂತಾ ತಿಳಿಸಿದನು. ಕೊನೆಯದಾಗಿ
ಹೊಲದಲ್ಲಿರುವ ತಿಪ್ಪಿಯನ್ನು ನೋಡಲಾಗಿ ತಿಪ್ಪಿ ಪೂರ್ತಿಯಾಗಿ ಸುಟ್ಟಿತ್ತು ಅಲ್ಲಿ ಕೆಲವೊಂದು ಎಲಬುಗಳು
ಕಾಣುತ್ತಿದ್ದವು, ಸಂಶಯ ಬಂದು ನೊಡಲಾಗಿ ಎಲಬುಗಳು ಪೂರ್ತಿಪ್ರಮಾಣ ಸುಟ್ಟಿದ್ದು, ಅಲ್ಲಿ ಹಸಿರು
ಬಳೆ ಮತ್ತು ಸುಟ್ಟ ಕಾಲುಂಗರ ಹಾಗೂ ಲಿಂಗದಕಾಯಿ, ತಾಯಿತ ಸಿಕ್ಕವು, ಸದರಿಯವುಗಳನ್ನು ನಮ್ಮ ಅಕ್ಕ
ಐರಾವತಿ ಇವಳು ಜೀವಂತ ಇದ್ದಾಗ ಅವಳ ಮೈಮೇಲೆ ಕಂಡಿದ್ದು ಇರುತ್ತದೆ. ಸದರಿ ನಮ್ಮ ಅಕ್ಕ ಐರಾವತಿ ಇವಳನ್ನು ಆಕೆಯ ಗಂಡ
ಸಿದ್ದಣ್ಣ ಇವನು ಆಕೆಯ ಮೇಲೆ ಸಂಶಯ ಪಡುತ್ತಾ ಬಂದು ದಿನಾಂಕ 01-11-2013 ರಂದು 3;00 ಪಿ.ಎಂ ದಿಂದ 8;00 ಪಿ.ಎಂ ದ ಮದ್ಯದ ಅವಧಿಯಲ್ಲಿ ನಮ್ಮ ಅಕ್ಕ ಐರಾವತಿ
ಇವಳನ್ನು ಕೊಲೆ ಮಾಡಿ ಶವವು
ಸಿಗದಂತೆ ತಿಪ್ಪಿಯಲ್ಲಿ ಹಾಕಿ ತಿಪ್ಪಿಯೊಂದಿಗೆ
ನಮ್ಮ ಅಕ್ಕನ ಶವವನ್ನು ಸುಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಿ ಆತ್ಮಹತ್ಯೆ ಮಾಡಿಕೊಳ್ಳು ಪ್ರಚೋದನೆ ಮಾಡಿದ ಪ್ರಕರಣ :
ಚಿಂಚೋಳಿ
ಠಾಣೆ : ಕುಮಾರಿ ಸಾ|| ಚಿಮ್ಮನಚೋಡ ತಾ|| ಚಿಂಚೋಳಿ ರವರು, ದಿನಾಂಕ
11.08.2013 ರಂದು ಸಾಯಾಂಕಾಲ ತನ್ನ ಇಲಾಖಾ ಪರಿಕ್ಷೆ ಮುಗಿಸಿಕೊಂಡು ಮರಳಿ ನಮ್ಮೂರಾದ ಚಿಮ್ಮನಚೋಡ
ಗ್ರಾಮಕ್ಕೆ ಹೋಗಬೇಕೆಂದು ಗುಲ್ಬರ್ಗಾದ ಕೇಂದ್ರ
ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಾಗ ತಾಜ್ಲಾಪೂರದ
ನಿವಾಸಿಯಾದ ಮೋಹನರೆಡ್ಡಿ ತಂದೆ ನಂದಾರೆಡ್ಡಿ ಮೊಲೀಸ್ ಕಾನ್ಸಟೇಬಲ್ ಎಂಬುವವನು ಬಂದು
ಇವತ್ತು ಯಾಕೇ ಊರಿಗೆ ಹೋಗುತ್ತಿ ನೀನು ಊರಿಗೆ
ಮುಟ್ಟುವತನಕ ರಾತ್ರಿಯಾಗುತ್ತದೆ. ನನ್ನ ಪೊಲೀಸ್ ವಸತಿ ಗೃಹದಲ್ಲಿ ಇವತ್ತು ರಾತ್ರಿ
ಇದ್ದುಕೊಂಡು ಮುಂಜಾನೆ ಎದ್ದು ಹೋಗು
ಅಂತ ಹೇಳಿ ಕರೆದುಕೊಂಡು ಹೋಗಿ ರಾತ್ರಿ
ನಾನು ಗಾಡ ನಿದ್ರೆಯಲ್ಲಿದ್ದಾಗ ಮೋಹನರೆಡ್ಡಯು ಬಲಾತ್ಕಾರದಿಂದ ನಾನು ಒಲ್ಲೆ ಅಂತಾ ಅಂದರೂ ನಾನು
ಧರಿಸಿದ ಬಟ್ಟೆ ಬಿಚ್ಚಿ ತಾನು ಧರಿಸಿದ ಬಟ್ಟೆ ಬಿಚ್ಚಿ ನನಗೆ ಒಂದು ಸಲ ಜಭರಿ ಸಂಭೋಗ ಮಾಡಿದನು ನಂತರ
ನಾನು ನನಗೆ ಹಿಗೇಕೆ ಮಾಡಿದಿ ಅಂತಾ ಕೇಳಿದ್ದಕ್ಕೆ ನಾನು ಮುಂದೆ ನಿನಗೇನೆ ಮದುವೆಯಾಗುತ್ತೆನೆ
ಅಂತಾ ಹೇಳಿ ಮತ್ತೆ ಎರಡೂ ಸಲ ನಾನು ಒಲ್ಲೆಂದರೂ ಜಭರಿ ಸಂಭೋಗ ಮಾಡಿದನು. ದಿನಾಂಕ 12-08-2013 ರಂದು
ಬೆಳೆಗ್ಗೆ 08.00 ಗಂಟೆ ಸುಮಾರಿಗೆ ಎದ್ದು ಬಸ್ ಹಿಡಿದುಕೊಂಡು ನಮ್ಮೂರಿಗೆ ಬಂದೆನು. ಇಂದಿನವರೆಗೆ
ಮೋಹನರೆಡ್ಡಿಯು ನನಗೆ ಬಲ್ವಂತ ಸಂಭೋಗ ಮಾಡಿದ ಬಗ್ಗೆ ಹೆದರಿಕೊಂಡು ನನ್ನ ತಾಯಿ , ಕಾಕ- ಕಾಕಿಯರಿಗೆ
ತಿಳಿಸಿರಲಿಲ್ಲಾ ನಾನು ಅವನಿಗೆ ಯಾವಾಗ ಮದುವೆಯಾಗುತ್ತಿ ಅಂತಾ ಕೇಳಲು ಮುಂದೆ ಆಗುತ್ತೆನೆ ಅಂತಾ
ಹೇಳುತ್ತಾ ಬಂದಿರುತ್ತಾನೆ. ಹಿಗಿದ್ದು ಕಳೆದ 4
ದಿವಸಗಳ ಹಿಂದೆ ನಾನು ಅವನಿಗೆ ನೀನು ನನಗೆ ಯಾವಾಗ ಮದುವೆಯಾಗುತ್ತಿ ಅಂತಾ ಕೇಳಿದ್ದಕ್ಕೆ
ನಾನು ನಿನಗೆ ಮದುವೆಯಾಗುವುದಿಲ್ಲಾ. ನಿನ್ನಂತಹವರಿಗೆ ಎಷ್ಟು ಜನರಿಗೆ ನೋಡಿಲ್ಲಾ ಅಂತಾ ಅಂದನು.
ಅದಕ್ಕೆ ನಾನು ಅವನಿಗೆ ನೀನು ಮದುವೆಯಾಗದಿದ್ದರೆ ಸಾಯುತ್ತೇನೆ ಅಂತಾ ಅಂದರೆ ಸಾಯು ನಾನೇನು ಹೆದರುವವನಲ್ಲಾ
ಅಂತ ಅಂದನು ಹೀಗೆ ಅವನು ನನಗೆ ಜಬರಿ ಸಂಬೋಗ ಮಾಡಿ ಮತ್ತು ಮದುವೆಯಾಗುತ್ತೇನೆ ಅಂತಾ ಮೋಸಮಾಡಿ
ನನಗೆ ಸಾಯಲು ಪ್ರಚೋದನೆಯ ಮಾತುಗಳನ್ನಾಡುತ್ತಿದ್ದರಿಂದ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿ ಆರಾಮ
ತಪ್ಪಿದ್ದಂತಾಗಿತ್ತು. ಆದ್ದರಿಂದ ನನ್ನ ತಾಯಿಯಾದ ಪೆಂಟಮ್ಮಾ ಮತ್ತು ನನ್ನ ಅಜ್ಜಿಯವರಾದ ಗಂಗಮ್ಮಾ
ಇಬ್ಬರೂ ಕೂಡಿಕೊಂಡು ಉಪಚಾರ ಕುರಿತು ನನಗೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು.
ನಾವು ಸರಕಾರಿ ಆಸ್ಪತ್ರೆ ಚಿಂಚೋಳಿಗೆ ಹೋಗುತ್ತಿದ್ದರಿಂದ ನಾವು ಕುಳಿತುಕೊಂಡು ಬಂದ ಬಸ್ಸಿನಿಂದ
ಚಿಂಚೋಳಿಯ ಶ್ರೀ ಬಸವೇಶ್ವರ ವೃತ್ತದ ಹತ್ತೀರ
ಇಳಿದುಕೊಂಡೇವು ನಾನು ಬಸ್ಸಿನಿಂದ ಇಳಿಯುತ್ತಲೇ ಮೋಹನರೆಡ್ಡಿಯು ನನಗೆ ಸಾಯು ನಾನೇನು
ಹೇದರುವವಲ್ಲಾ ಅಂತಾ ಸಾಯಲು ಪ್ರಚೋದನೆಯ ಮಾತುಗಳನ್ನಾಡಿದ್ದು ನನಗೆ ಒಮ್ಮೇಲೆ ತಲೆಯಲ್ಲಿ
ಹೋಳೆದರಿಂದ ನಾನು ಏನೂ ತಿಳಿಯದೇ ಇಂದು ದಿನಾಂಕ 04-11-2013 ರಂದು ಬೆಳೆಗ್ಗೆ 11.20 ಗಂಟೆಗೆ ಚಿಂಚೋಳಿಯ ದೊಡ್ಡ ಫುಲ್
ಮೇಲಿನಿಂದ ಕೆಳಗಡೆ ಜಿಗಿದ್ದಿದ್ದು ಅಲ್ಲಿದ್ದ ಕಲ್ಲುಗಳು ನನಗೆ ಜೋರಾಗಿ ಬಡಿದು ತಲೆಯ ಹಿಂಬದಿಗೆ
ಭಾರಿ ರಕ್ತಗಾಯ ಎರಡೂ ಕೈಗಳು ಮೋಳಕೈ ಹತ್ತಿರ ಮತ್ತು ಬಲ ಭುಜ ಮುರಿದ್ದಿದ್ದು ಎರಡೂ ತೋಡೆ
ಮೂಳೆಗಳು ಮುರಿದಿರುತ್ತವೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕಮಲಾಪೂರ
ಠಾಣೆ : ಶ್ರೀ ಮಲ್ಲಿಕಾರ್ಜುನ ತಂದ ಶಿವಶರಣಪ್ಪಾ ಕಲಬುರ್ಗಿ ಸಾ:ಕಾವೇರಿ ನಗರ ಗುಲಬರ್ಗಾ ಇವರಿಗೆ
ತಮ್ಮ ಟೆಕ್ನಿಶಿಯನ್ ಉಮೇಶ ಈತನು ದಿನಾಂಕ:04-11-2013 ರಂದು ಬೆಳಿಗ್ಗೆ 8-00 ಗಂಟೆಗೆ ಫೋನ ಮಾಡಿ, ವಿಷಯ ತಿಳಿಸಿದ್ದೇನೆಂದರೆ, ಮರಗುತ್ತಿ
ಕ್ರಾಸಿನಲ್ಲಿ ಇರುವ ಟಾವರಿನ ಸ್ಥಳದಲ್ಲಿ ಚಾರ್ಜ ಮಾಡಲು ಇಟ್ಟಿದ 2449 ಬ್ಯಾಟರಿಗಳಲ್ಲಿ 54 ಬ್ಯಾಟರಿಗಳು ಕಾಣಿಸುತ್ತಿಲ್ಲಾ
ನೀವು ಬಂದು ನೋಡುರಿ ಅಂತಾ ತಿಳಿಸಿದಾಗ, ನಾನು, ಮರಗುತ್ತಿ ಕ್ರಾಸಿಗೆ ಬಂದು ನೋಡಿ, ಪುನಃ
ಎಣಿಕೆ ಮಾಡಲಾಗಿ,
ಒಟ್ಟು 54
ಬ್ಯಾಟರಿಗಳು ಕಾಣಿಸಲಿಲ್ಲಾ. ನಂತರ ಕರ್ತವ್ಯದ ಮೇಲಿದ್ದ ಪಂಡಿತ ಲಿಂಬೂರ ಈತನಿಗೆ ವಿಚಾರಿಸಲಾಗಿ, ರಾತ್ರಿ ಚಳಿಯಾಗುತ್ತಿರುವದರಿಂದ ರೂಮಿನಲ್ಲಿ ಮಲಗಿದ್ದೇನೆ. ನನಗೆ ಏನು
ಗೊತ್ತಿಲ್ಲಾ ಅಂತಾ ತಿಳಿಸಿದನು. ಮತ್ತು ಟೇಕ್ನಿಶಿಯನ್ ಉಮೇಶ ಇತನಿಗೆ ವಿಚಾರಿಸಲಾಗಿ, ನಾನು,
ಇಂದು ಬೆಳಿಗ್ಗೆ ನೋಡಲಾಗಿ, ಬ್ಯಾಟರಿಗಳು ಕಾಣಿಸದೇ ಇರುವದಕ್ಕೆ ಫೋನ ಮಾಡಿ, ವಿಷಯ
ತಿಳಿಸಿದ್ದೇನೆ ಇದರ ಬಗ್ಗೆ ಗೊತ್ತಿಲ್ಲಾ ಅಂತಾ ತಿಳಿಸಿದನು. ಕಳ್ಳತನವಾದ 54 ಬ್ಯಾಟರಿಗಳು ಅಂದಾಜು 54000-00 ರೂ.
ಆಗಬಹುದು. ಈ ಘಟನೆಯು ದಿನಾಂಕ: 03-11-2013 ರಂದು ರಾತ್ರಿ 11-00 ಗಂಟೆಯಿಂದ ದಿಃ 04-11-2013 ರಂದು ಬೆಳಿಗ್ಗೆ 5-00 ಗಂಟೆಯ ಮಧ್ಯದ
ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ.
ಶಿವಕುಮಾರ ತಂದೆ ಪರಮೇಶ್ವರಪ್ಪ ನಾಟೀಕಾರ ಸಾ|| ಶರಣಬಸವೇಶ್ವರ
ಗುಡಿ ಹತ್ತಿರ ಲಕ್ಷ್ಮಿ ಗಂಜ ಶಾಹಾಬಾದ ತಾ|| ಚಿತಾಪೂರ
ರವರು ದಿನಾಂಕ: 27-08-2013 ರಂದು ರಾತ್ರಿ 2130 ಗಂಟೆಯ ಸುಮಾರಿಗೆ ಮಾರ್ಕೆಟಿಂಗ ಮುಗಿಸಿಕೊಂಡು ಮರಳಿ
ಶಾಹಾಬಾದಕ್ಕೆ ಹೊಗುವದರ ಸಲುವಾಗಿ ಸುಪರ ಮಾರ್ಕೆಟನಲ್ಲಿ ಸ್ಷೇಷನಕ್ಕೆ ಹೊಗುವ ಒಂದು ಅಟೋ
ರಿಕ್ಷಾದಲ್ಲಿ ಕುಳಿತಾಗ ಅಟೋ ರಿಕ್ಷಾ ಡ್ರೈವರನು ಅಟೋದಲ್ಲಿ ಮೊದಲೆ ಒಬ್ಬನನ್ನು ಕೂಡಿಸಿ ಕೊಂಡಿದ್ದು
ಅಟೋ ಡ್ರೈವರನು ರೇಲ್ವೆ ಸ್ಟೇಷನಕ್ಕೆ ಕರೆದುಕೊಂಡು ಹೊಗುವ ಬದಲು ಬೇರೆ ಎಲ್ಲಿಯೋ ನಿರ್ಜನ
ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಟೋದಿಂದ ಕೆಳಗೆ ಇಳಿಸಿ ಚಾಕು ತೋರಿಸಿ ಕೈಯಿಂದ ಹೊಡೆ ಬಡೆ ಮಾಡಿ
ತಮ್ಮ ಹತ್ತಿರ ಇದ್ದ 1. ಕಂಪೂರ್ಟರ ಹಾರ್ಡ ಡಿಸ್ಕ 500 ಜಿಬಿ 2. ಶ್ಯಾಮಸಂಗ ಮೋಬಾಯಿಲ ನಂ: 57562 3. ನಗದ ಹಣ 3000/- ಒಟ್ಟು 20,000/-ರೂಪಾಯಿ
ಬೆಲೆ ಬಾಳುವ ಮಾಲನ್ನು ಕಸಿದುಕೊಂಡು ತನ್ನನ್ನು ಅಲ್ಲಿಯೇ ಬಿಟ್ಟು ಅಟೋ ರಿಕ್ಷಾದಲ್ಲಿ ಹೊಗಿ
ಬಿಟ್ಟರು ನಾನು ನಂತರ ನಡೆದುಕೊಂಡು ರೇಲ್ವೆ ಸ್ಟೇಷನಕ್ಕೆ ಬಂದು ರೇಲ್ವೆ ಮುಖಾಂತರ ಮರಳಿ
ಶಾಬಾದಕ್ಕೆ ಬಂದಿರುತ್ತೇನೆ ನನ್ನ ಮನೆಯ ಕೆಲಸದ ಒತ್ತಡದಲ್ಲಿ ಮತ್ತು ನಾನು ಕೆಲಸ ಮಾಡುವ ಕಛೇರಿ
ಕೆಲಸದ ಒತ್ತಡದಲ್ಲಿ ಇಂದು ಬಂದು ದೂರು ಸಲ್ಲಿಸಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment