ವರದಕ್ಷಣಿ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಹೀನಾ ಕೌಸರ್ ಗಂಡ ಚಾಂದಪಾಶಾ ಸಾ:ಸೋಂವಿ ಗುಮ್ಮಜ್
ಹತ್ತಿರ ಮದೀನಾ ಕಾಲೋನಿ ಗುಲಬರ್ಗಾ ರವರನ್ನು ದಿನಾಂಕ 09-04-2010 ರಂದು ತಂದೆ
ತಾಯಿಯವರು ಮದೀನಾ ಕಾಲೋನಿಯ ಚಾಂದಪಾಶಾ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿದ್ದು, ಮದುವೆಯ ಕಾಲಕ್ಕೆ ವರನಿಗೆ ವರದಕ್ಷಣೆ, ವರೋಪಚಾರ ಅಂತಾ 3 ತೊಲೆ ಬಂಗಾರ,
40 ಸಾವಿರ ರೂ. ಹಣ ಕೊಟ್ಟಿದ್ದು, ಅಲ್ಲದೇ ಗೃಹ ಬಳಕೆಯ ಸಾಮಾನುಗಳು ಕೊಟ್ಟಿರುತ್ತಾರೆ. ಮದುವೆಯಾದ ಸುಮಾರು ಒಂದು
ತಿಂಗಳವರೆಗೆ ನನ್ನ ಗಂಡ ನನ್ನೊಂದಿಗೆ ಚೆನ್ನಾಗಿದ್ದು, ತದ ನಂತರ ನಿಮ್ಮ
ತಂದೆಯಿಂದ 1 ಲಕ್ಷ ರೂಪಾಯಿ ತೆಗೆದುಕೊಂಡು ಬಾ ನಾನು ವೆಲ್ಡೀಂಗ್ ಕೆಲಸ
ಮಾಡುತ್ತೇನೆ ಅಂತಾ ನನಗೆ ದಿನಾಲೂ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದನು. ಈ
ವಿಷಯವನ್ನು ನಮ್ಮ ತಂದೆ ತಾಯಿ ನಮ್ಮ ಮನೆಗೆ ಬಂದು ನಾವು ಬಡವರಿದ್ದೇವೆ ನಮಗೆ 1 ಲಕ್ಷ ರೂಪಾಯಿ ಕೊಡಲು ಆಗುವುದಿಲ್ಲ ಅಂತಾ 20 ಸಾವಿರ
ರೂಪಾಯಿ ಕೊಟ್ಟಿರುತ್ತಾರೆ. ಸ್ವಲ್ಪ ದಿನಗಳ ನಂತರ ಮತ್ತೆ ನನ್ನ ಗಂಡ ನನ್ನೊಂದಿಗೆ ಜಗಳ ತೆಗೆದು
ನಿಮ್ಮ ತಂದೆಯಿಂದ 1 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಕೈಯಿಂದ ಹೊಡೆ
ಬಡೆ ಮಾಡುತ್ತಿದ್ದನು. ಆಗ ನನ್ನ ಮಾವ ಬಾಶುಮಿಯ್ಯಾ, ಮೈದುನರಾದ ಮಲಂಗ್, ಸೈಯ್ಯದ,
ಕುತುಬ್ ಇವರು ಕೂಡ ನನಗೆ ನಿಮ್ಮ ತಂದೆಯಿಂದ 1 ಲಕ್ಷ ರೂಪಾಯಿ ತಂದು ಚಾಂದಪಾಶಾನಿಗೆ ಕೊಡು ಅವನು ವ್ಯಾಪಾರ ಮಾಡುತ್ತಾನೆ. ಅಂತಾ
ಅವರು ಕೂಡ ಹಿಂಸೆ ಕೊಡುತ್ತಿದ್ದರು. ದಿನಾಂಕ 11-07-2013 ರಂದು 9-00 ಎ.ಎಮ್ ಕ್ಕೆ ನನ್ನ ಗಂಡ ಚಾಂದಪಾಶಾ ನನ್ನ ತವರು ಮನೆಯಿಂದ 1 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ನನಗೆ ಕೈಯಿಂದ ಹೊಡೆ ಬಡೆ ಮಾಡಿ ಮಾನಸಿಕ
ಮತ್ತು ದೈಹಿಕ ಕಿರುಕುಳ ಕೊಟ್ಟ ಮನೆಯಿಂದ ಹೊರಗೆ ಹಾಕಿರುತ್ತಾನೆ. ನನ್ನ ಮಾವ ಬಾಶುಮಿಯ್ಯಾ , ಮೈದುನರಾದ ಮಲಂಗ್, ಸೈಯ್ಯದ, ಕುತುಬ್ ಇವರು ಕೂಡ ಈ ರಂಡಿಗೆ
ಎಷ್ಟು ಸಲ ಹೇಳಿದರೂ ತವರು ಮನೆಯಿಂದ 1 ಲಕ್ಷ ರೂಪಾಯಿ ತೆಗೆದುಕೊಂಡ ಬರುತ್ತಿಲ್ಲ ತವರು
ಮನೆಯಿಂದ ಹಣ ತರುವವರೆಗೂ ನಮ್ಮ ಮನೆಗೆ ಬರಬೇಡ ಅಂತಾ ಹೊರಹಕಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ವಿನೋದ ತಂದೆ ಜಟ್ಟೆಪ್ಪಾ ಬಾಗವಾಲೆ ಸಾ|| ಜಿ.ಕೆ.ಕಾಂಪ್ಲೆಸ್ಸ್
ಮೊಹನ ಲಾಡ್ಜ ಎದುರುಗಡೆ ಗುಲಬರ್ಗಾ ಇವರಿಗೆ ರಾಘವೇಂದ್ರ ತಂದೆ ಭಿಮಶೇನರಾವ ಮಲ್ಲಾಬಾದಿ ಹಾಗೂ ಅವರ
ಅಣ್ಣತಮ್ಮಂದಿರಾದ ಶ್ಯಾಮಸುಂದರ, ಪ್ರದೀಪ, ಸುಧಾಕರ, ಯಶವಂತ ಹಾಗೂ ಸಂಬಂದಿಕರಾದ ಶಕುಂತಲಾ ಗಂಡ ಪ್ರಕಾಶ ಮಲ್ಲಾಬಾದಿ, ಉಷಾ ಗಂಡ ವಾಸುದೇವರಾವ, ಆಶಾ ಗಂಡ ಶಂಕರರಾವ, ಗಿರಿಧರ ತಂದೆ ನರಸಿಂರಾವ ಇವರುಗಳ ಆಸ್ತಿ
ವಿವಾದ ನಡೆದಿದ್ದು ಅದರಲ್ಲಿ ರಾಘವೆಂದ್ರ ಮಲ್ಲಾಬಾದಿ ಇವನು ಶ್ಯಾಮಸುಂದರ ಮಲ್ಲಾಬಾದಿ ಇವನು ಮನೆಯ
ಅಂಗಡಿ ನಂ. 1-859/1ಸಿ 12*15 ನೆದ್ದರ ನಕಲಿ ದಾಖಲಾತಿಗಳನ್ನು ಸ್ರಷ್ಠಿಸಿ ಫಿರ್ಯಾದಿ ಇವನಿಗೆ ಮಾರಾಟ
ಮಾಡಿ ಮೊಸ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಝಾರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment