ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 09-12-2013 ರಂದು 1930 ಗಂಟೆ ಸುಮಾರಿಗೆ ಸಿದ್ದಿಪಾಷಾ
ದರ್ಗಾ ಹತ್ತಿರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾರೆ ಅಂತಾ
ಖಚಿತ ಬಾತ್ಮೀ ಮೇರೆಗೆ ಪಂಚರು ಹಾಗು ಸಿಬ್ಬಂದಿಯೊಂದಿಗೆ ಮಾನ್ಯ ಡಿ.ಎಸ್.ಪಿ ‘ಎ’ ಉಪವಿಭಾಗ ಸಹೇಬರ
ಮಾರ್ಗದರ್ಶನದಲ್ಲಿ ಹೊರಟು ಸದರಿ ಸಿದ್ದಿಪಾಷಾ ದರ್ಗಾ ಹತ್ತಿರ ಸಮಿಪ ಹೋಗಿ ದೂರದಿಂದ ನೋಡಲು
ಇಬ್ಬರು ಸಾರ್ವಜನಿಕರ ರಸ್ತೆಯಲ್ಲಿ ಕುಳಿತು ಲೈಟ ಬೆಳಕಿನಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು
ಒಂದು ರುಪಾಯಿಗೆ ಎಂಬತ್ತು ರೂಪಾಯಿ ಕೊಡುವುದಾಗಿ ಅಂತಾ ದೈವ ಲಿಲೆ ಮಟಕಾ ಜೂಜಾಟ ಅಂತಾ ಹೇಳಿ ಮಟಕಾ
ನಂಬರ್ ಚೀಟಿ ಬರೆದುಕೊಳ್ಳುತ್ತಿದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತಮ್ಮ
ಹೆಸರು 1. ಶ್ರೀಮಂತ ತಂದೆ ರಾಮಸಾಳೆ ಸಾಃ ಬಾಪು ನಗರ ಗುಲಬರ್ಗಾ ಅಂತಾ ಹೇಳಿದನು ಅವನಿಂದ ನಗದು ಹಣ 3,950/- ರೂ,
2 ಮಟಕಾ ಚೀಟಿಗಳು, ಒಂದು ಬಾಲ ಪೇನ ಮತ್ತು ಒಂದು
ನೋಕಿಯಾ ಕಂಪನಿ ಮೊಬೈಲ ಅ.ಕಿಃ 1000/- ರೂ ನೆದ್ದವುಗಳು ದೊರೆತವು.
ಇನ್ನೊಬನ ಹೆಸರು 2. ಮಹಮ್ಮದ ಯುಸುಫ ತಂದೆ ಮಹಮ್ಮದ ಖಾಜಾಸಾಬ ಚುಲಬುಲ ಸಾಃ ಮೆಹೆಬೂಬ ನಗರ
ರಿಂಗರೋಡ ಗುಲಬರ್ಗಾ ಅಂತಾ ಹೇಳಿದನು ಅವನಿಂದ 2,070/- ರೂಪಾಯಿ ಮತ್ತು ನೋಕಿಯಾ ಕಂಪನಿ
ಮೊಬೈಲ ಅ.ಕಿ 1,000/- ರೂ ದೊರೆತವು ಹೀಗೆ ಒಟ್ಟು 6,020/- ರೂಪಾಯಿ 2 ಮಟಕಾ ನಂಬರ ಬರೆದ
ಚೀಟಿಗಳು, ಒಂದು ಬಾಲ ಪೇನ್ನ ಹಾಗೂ 2 ನೋಕಿಯಾ ಮೊಬೈಲ ನೆದ್ದನ್ನು
ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಸ್ಟೇಷನ
ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೋಸ ಮಾಡಿದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಮೈಜುದ್ದಿನ ತಂಧೆ ಅಲ್ಲಾಹುದ್ದಿನ ಜಾಗೀರದಾರ ಸಾ|| ರೋಜಾ ಗುಲಬರ್ಗಾ ಹಾ.ವ|| ಅಬುಹಸನತ್ ಕಾಲೂನಿ ಚಂದುಲಾಲ
ಬಾರದಾರಿ ಹಿಂದೆ ಹೈದ್ರಾಬಾದ ಇವರು ಸರ್ವೆ ನಂ. 12 ಬಡೆಪೂರ ನೂರ ಬಾಗ ಏರಿಯಾದ
ಪ್ಲಾಟ ನಂ. 30 40 X 70 ನೆದ್ದನ್ನು ದಿನಾಂಕ. 06-07-2006
ರಂದು ಫೀರ್ಯಾದಿ ತಮ್ಮ
ಮಸಿಯುದ್ದಿನ ತಂದೆ ಅಲ್ಲಾಹುದ್ದಿನ ಇವನು ತಾನೆ ಮೈಜುದ್ದಿನ ಅಂತಾ ಸುಳ್ಳು ದಾಖಲೆ ಸೃಷ್ಠಿಸಿ
ಉಪನೊಂದಣಾಧಿಕಾರಿಗಳ ಕಾರ್ಯಲಯಕ್ಕೆ ಹೋಗಿ ಶಾನಾ ನಫೀಸ್ ಗಂಡ ಅನ್ವರ ಹುಲ್ ಹಕ್ ಇವರ ಜಿ.ಪಿ.ಎ
ಹೊಲ್ಡರಾದ ಅನ್ವರ ಉಲ ಹಕ್ ಇವರ ಕಡೆಯಿಂದ ಕರೆಕ್ಷನ ಡಿಡ್ ಮಾಡಿಕೊಂಡು
ನಂತರ ದಿನಾಂಕ. 26-06-2006 ರಂದು ಸದರಿ ಮೈಸುದ್ದಿನ ಇವರು ಸದರಿ ಪ್ಲಾಟನ್ನು ಮೈಜೊದ್ದಿನ ಅಂತಾ
ಸುಳ್ಳು ದಾಖಲೆ ಸೃಷ್ಠಿಸಿ ತಮ್ಮ ಹೆಂಡತಿಯಾದ ಮಹ್ಮದಿ ಬೇಗಂ ಇವಳ ಹೆಸರಿನಲ್ಲಿ ಉಪನೊಂದಣಿ ಅಧಿಕಾರಿಗಳ
ಕಾರ್ಯಲಯದಲ್ಲಿ ಗಿಪ್ಟ ಡಿಡ್ ಮಾಡಿಕೊಂಡು ಮೊಸ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಚಾಂದ ತಂದೆ ಮಿರಜಾ ಸಾಬ ಮಕಂದಾರ ಸಾ : ದೇಸಾಯಿ
ಕಲ್ಲೂರ ರವರ ತಮ್ಮನಾದ ಪೈಗಂಬರ ತಂದೆ ಮಿರಜಾ ಸಾಬ ಮಕಂದಾರ ಇವರು ಫಿರ್ಯಾದಿಯ ಟಂಟಂ ಅಪ್ಪೆ ಗುಡ್ಸ್ ನೇದ್ದರ
ಬ್ಯಾಟರಿಯನ್ನು ಆರೋಪಿತನು ತೆಗೆದುಕೊಂಡಿದ್ದು ಸದರಿ ಬ್ಯಾಟರಿಯನ್ನು ಇಂದು ದಿನಾಂಕ 09-12-2013 ರಂದು ಸಾಯಂಕಾಲ 7:00
ಗಂಟೆಗೆ ತಮ್ಮ ತಮ್ಮನ ಮನೆಗೆ
ಹೋಗಿ ಹೊರಗೆ ಕರೆದು ನನಗೆ ನನ್ನ ವಾಹನದ ಬ್ಯಾಟರಿ ಕೊಡು ಎಂದು ಕೆಳಿದಾಗ ಆರೋಪಿತನು ಫಿರ್ಯಾದಿಗೆ
ನಿನಗೆ ಯಾವುದು ಬ್ಯಾಟರಿ ಕೊಡುವುದಿಲ್ಲ ಏನ ಮಾಡ್ಕೊತಿ ಮಾಡ್ಕೊ ಎಂದು ಅವಾಚ್ಯವಾಗಿ ಬೈದು
ರಾಡಿನಿಂದ ತಲೆಗೆ ಮತ್ತು ಎಡಗೈ ರಟ್ಟೆಯ ಮೇಲೆ ಹೊಡೆದು ರಕ್ತ ಗಾಯ ಮತ್ತು ಗುಪ್ತಗಾಯ ಪಡಿಸಿ ಜೀವ
ಬೆದರಿಕೆ ಹಾಕಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ
:
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮತಿ ರುಕ್ಮಿಣಿ ಗಂಡ ವೆಂಕಣ್ಣಾ ಚಾರ್ಯಾ ಪುರಾಣಿಕ ಸಾ: ಭವಾನಿ ಶಂಕರ ಗುಡಿ ಹತ್ತಿರ ಲಾಲಗೇರಿ ಕ್ರಾಸ್
ಹತ್ತಿರ ಗುಲಬರ್ಗಾ ರವರು ದಿನಾಂಕ 09-12-2013 ರಂದು 12-45 ಗಂಟೆಗೆ ತನ್ನ ಮೆನೆಯಿಂದ ಜಗತ ಸರ್ಕಲ್ ದಿಂದ ಸುಪರ ಮಾರ್ಕೇಟ
ರೋಡಿನಲ್ಲಿರುವ ಪೊಸ್ಟ ಆಫೀಸ್ ಗೆ ಅಟೆಂಡರ ಕೆಲಸ ಮಾಡಲು ಹೋಗುತ್ತಿದ್ದಾಗ ಜಗತ ಸರ್ಕಲ್ ಕಡೆಯಿಂದ ಮೋ/ಸೈಕಲ್
ನಂ: ಕೆಎ 32 ಇಡಿ 4040 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ
ಪಡಿಸಿ ಗಾಯಗೊಳಿಸಿ ಮೋ/ಸೈಕಲ್ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ
ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment