ಸೇಡಂ ಪೊಲೀಸ್ ಠಾಣೆ:
ದಿನಾಂಕ:02-12-2013 ರಂದು ಮದ್ಯಾಹ್ನ 1 ಗಂಟೆಗೆ ಫಿರ್ಯಾದಿ, ವೆಂಕಟಸ್ವಾಮಿ ಸಾ: ಬಟಗೇರಾ [ಕೆ] ಗ್ರಾಮ, ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದ್ದರ ಸಾರಂಶವೇನೆಂದರೆ, ದಿನಾಂಕ 01-12-2013 ರಂದು ಮದ್ಯಾಹ್ನ 01-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮಲಗಿಕೊಂಡಾಗ ನನ್ನ ಹೆಂಡತಿ ಬಿಚ್ಚಮ್ಮ ಇವಳು ಹೊಲಕ್ಕೆ ಕೆಲಸಕ್ಕೆಂದು ಹೋಗಿದ್ದಾಗ ನನ್ನ ಮಗಳು ಮನೆಯಲ್ಲೆ ಇದ್ದಳು ಉಳಿದ ನನ್ನ ಮಕ್ಕಳು ಆಟವಾಡಲು ಹೊರಗೆ ಹೋದಾಗ ನನ್ನ ಮಗಳು ಹೇಳದೆ ಕೇಳದೆ ಮನೆಯಿಂದ ಹೊರಗಡೆ ಹೋಗಿದ್ದು ತಿರುಪತಮ್ಮ ಹಾಗು ನನ್ನ ಮಗಳು ಹಾಗು ನಮ್ಮೂರಿನ ಈಶ್ವರಪ್ಪ ವಾಲಿಕಾರ ಇವರಿಂದ ತಿಳಿದುಬಂದಿದ್ದೆನಂದರೆ ನನ್ನ ಮಗಳು ಇಂದು ಮದ್ಯಾನ 01-30 ಗಂಟೆಯ ಸುಮರಿಗೆ ಶಾಲೆಯ ಹತ್ತಿರ ಹೋಗಿ ಸಿಟಿ ಬಸ್ ನಲ್ಲಿ ರಾಜು ಫಸಲರ್ ನೊಂದೆಗೆ ಸೇಡಂ ಕಡೆಗೆ ಹೋಗಿರುತ್ತಾರೆ ಅಂತಾ ತಿಳಿಸಿದರು ನನ್ನ ಮಗಳಿಗೆ ರಾಜು ಫಸಲರ್ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಕಾರಣ ಮಾನ್ಯರವರು ಅಪ್ರಾಪ್ತ ವಯಸ್ಸಿನ ನನ್ನ ಮಗಳ ಪತ್ತೆ ಮಾಡಿ ಅಪಹರಣ ಮಾಡಿಕೊಂಡು ಹೋದ ರಾಜು ಫಸಲರ್ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಅರ್ಜಿ ಕೊಟ್ಟಿದ್ದರ ಸಾರಾಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ-240/2013 ಕಲಂ-363 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಎಂ.ಬಿ.ನಗರ ಪೊಲೀಸ್ ಠಾಣೆ:
ಕಳ್ಳತನ ಪ್ರಕರಣ:
ಇಂದು ದಿನಾಂಕ 16/12/2013 ರಂದು 01:00 ಪಿ.ಎಂ. ಕ್ಕೆ ಫಿರ್ಯಾದಿ ಶ್ರೀ ಎ. ವೆಂಕಟರಾಮನ ತಂದೆ ಎ.ಎಸ್.ಆರ್ ಮೂರ್ತಿ ವಯಃ 54 ವರ್ಷ ಜಾತಿಃ ಬ್ರಾಹ್ಮಣ ಉಃ ಪ್ರೋಫೆಸರ್ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಇಂಗ್ಲೀಷನಲ್ಲಿ ಲಿಖಿತ ದೂರು ನೀಡಿದ್ದು ಅದರ ಸಂಕ್ಷೀಪ್ತ ಸಾರಾಂಶವೆನೆಂದರೇ, ಫಿರ್ಯಾದಿದಾರರು ಮತ್ತು ಫಿರ್ಯಾದಿಯ ಹೆಂಡತಿ ಇಬ್ಬರೂ ಕೂಡಿಕೊಂಡು ದಿನಾಂಕಃ 12/12/2013 ರಂದು ಖಾಸಗಿ ಕೆಲಸ ನಿಮಿತ್ಯ ಔರಂಗಬಾದ ಮತ್ತು ಪುನಾಃ ಕಡೆಗೆ ಹೋಗುವಾಗ ಫಿರ್ಯಾದಿದಾರನು ತನ್ನ ಪಿ.ಹೆಚ್.ಡಿ ವಿದ್ಯಾರ್ಥಿಯಾದ ತಯ್ಯಬ ಅಲಿ ಇತನಿಗೆ ಮನೆ ಕಡೆ ನಿಗಾ ಇಡಲು ಹೇಳಿ ಹೋಗಿದ್ದು ನಂತರ ಮರಳಿ ಗುಲಬರ್ಗಾಕ್ಕೆ ಬರುತ್ತಿರುವಾಗ ಇಂದು ದಿನಾಂಕಃ 16/12/2013 ರಂದು ಬೆಳಗ್ಗೆ 09:00 ಗಂಟೆಗೆ ತಯ್ಯಬ ಅಲಿ ಇತನು ನಮಗೆ ಫೋನ್ ಮಾಡಿ ತಿಳಿಸಿದ್ದೇನೆಂದರೇ, ಮನೆಯ ಬಾಗಿಲಿನ ಕೀಲಿ ಮುರಿದಿದ್ದು ಮನೆ ಕಳ್ಳತನ ಆಗಿರಬಹುದು ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿಕೊಂಡು ಬಂದು ನೋಡಲು ಮನೆಯ ಬಾಗಿಲಿನ ಕೀಲಿ ಮುರಿದಿದ್ದು ಮನೆಯೊಳಗೆ ಹೋಗಿ ಚೆಕ್ ಮಾಡಿ ನೋಡಲು ಬೆಡ್ ರೂಮಿನಲ್ಲಿರುವ ಎಲ್ಲಾ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು ಮತ್ತು ಅಲೆಮಾರಿಯನ್ನು ನೋಡಲು ಅಲೆಮಾರಿಯಲ್ಲಿರುವ 1) 32 ಗ್ರಾಂ ಬಂಗಾರದ ವಿವಿಧ ಆಭರಣಗಳು ಒಟ್ಟು ಅಃಕಿಃ 80,000/- ಹಾಗು ಹಾಗು 2) 02 ಕೆ.ಜಿ 910 ಗ್ರಾಂ ಬೆಳ್ಳಿಯ ವಿವಿಧ ಸಾಮಾನುಗಳು ಅಃಕಿಃ 1,20,000/- ರೂ. ಹೀಗೆ ಒಟ್ಟು 2,00,000/- ರೂ. ಬೆಲೆ ಬಾಳುವ ಬಂಗಾರದ ಮತ್ತು ಬೆಳ್ಳಿಯ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾದ ಮಾಲನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಕಾನೂನಿನ ಪ್ರಕಾರಕ್ರಮ ಕೈಗೊಳ್ಳಬೇಕೆಂದು ಅಂತಾ ವಗೈರೆ ನೀಡಿರುವ ಅರ್ಜಿಯ ಸಾರಾಂಶದ ಮೇಲಿಂದ ಎಂ.ಬಿ. ನಗರ ಠಾಣೆ ಗುನ್ನೆ ನಂ 176/2013 ಕಲಂ 454, 457, 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
§æºÀä¥ÀÆgÀ ¥Éưøï oÁuÉ:
¸ÀÄ°UÉ ¥ÀæPÀgÀt:
ಇಂದು ದಿನಾಂಕ: 15/12/2013 ರಂದು 2100 ಗಂಟೆಗೆ ಫಿರ್ಯಾದಿ ಡಾ|| ಶರಣಪ್ಪ ತಂದೆ ಸಂಗಾರೆಡ್ಡಿ ಪಾಟೀಲ್ ವಯಸ್ಸು 25 ವರ್ಷ ಸಾ|| ಮನೆ ನಂ.1-61, 1-61 ಎ ಖುಬಾ ಪ್ಲಾಟ್ ಗುಲಬರ್ಗಾ. ರವರು ಠಾಣೆಗೆ ಹಾಜರಾಗಿ ಲಿಖೀತ ಫಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ ಇಂದು ದಿನಾಂಕ15/12/13 ರಂದು 7 ಪಿ.ಎಮ್.ಸುಮಾರಿಗೆ ನಾನು ಬಹಮನಿ ಹೋಟೆಲ್ದ ಹಿಂದಿನ ರೋಡಿನಲ್ಲಿ ನನ್ನ ಮೋಟಾರ ಸೈಕಲ್ ಮೇಲೆ ಹೋಗುತ್ತಿದ್ದಾಗ ನಮ್ಮ ತಾಯಿಯವರ ಪೋನ್ ಬಂದಿದ್ದರಿಂದ ಮೋಟಾರ ಪಕ್ಕದಲ್ಲಿ ನಿಲ್ಲಿಸಿ ಮೋಬಾಯಿನಲ್ಲಿ ಮಾತಾಡುತ್ತಿರುವಾಗ ಯಾರೋ 3 ಜನ ಅಪರಿಚಿತ ಹುಡುಗರು ಅಂದಾಜು 18 ರಿಂದ 22 ವಯಸ್ಸಿನವರು ಬಂದವರೆ ನನ್ನ ಮೋಟಾರ ಸೈಕಲ್ ಕೆಳಗಡೆ ಬಿಳಿಸಿದಾಗ ಅವರಿಗೆ ನಾನು ಯಾಕೇ ನನ್ನ ಮೋಟಾರ ಸೈಕಲ್ ಬಿಳಿಸಿದಿರಿ ಅಂತಾ ಕೇಳಲು ಅವರಲ್ಲಿ ಒಬ್ಬನು ನನ್ನ ಕಪಾಳ ಮೇಲೆ ಹೊಡೆದು ನನ್ನ ಪ್ಯಾಂಟಿನ ಜೇಬಿನಲ್ಲಿ ಇದ್ದ ನನ್ನ ಸಮ್ಸ್ಯಾಂಗ್ ಗ್ಯಾಲಕ್ಸಿ ಮೋಬಾಯಿಲ್ ಅದರ ಸಿಮ್ ನಂ.8884306586 ನೇದ್ದು ಮತ್ತು ಪರ್ಸನಲ್ಲಿ ಇದ್ದ 1500/- ನಗದು ಹಣ ಹೀಗೆ ಒಟ್ಟು 11500/- ಬೆಲೆಯುಳ್ಳದ್ದು ಕಸಿದುಕೊಂಡು ಓಡಿ ಹೋಗಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 193/2013 ಕಲಂ: 394 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
No comments:
Post a Comment