ಕಮಲಾಪೂರ ಪೊಲೀಸ್ ಠಾಣೆ:
ಅಪಘಾತ ಪ್ರಕರಣ:
ದಿನಾಂಕ: 19/12/2013 ರಂದು ಮೃತ ರೋಹನ ತಂದೆ ಲೇಸು ಕುಮಾರ ಚವ್ಹಾಣ ವಯ: 3 ವರ್ಷ ಸಾಃ ಸಾವಳಗಿ (ಕೆ) ತಾಂಡಾ ಹಾಃವಃ ಗೋಗಿ(ಕೆ) ತಾಂಡಾ ಈತನ ಡೆತ್ತ ಎಂ.ಎಲ್.ಸಿ ಯು ಜಿ.ಜಿ.ಹೆಚ್ ಗುಲಬರ್ಗಾ ಆಸ್ಪತ್ರೆ ವಸೂಲಾದ ಮೇರೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಭೇಟಿ ಡೆತ್ ಎಂ.ಎಲ್.ಸಿ ಪಡೆದುಕೊಂಡು ಶವವನ್ನು ನೋಡಲಾಗಿ, ಜೋತೆಯಲ್ಲಿದ್ದ ಫಿರ್ಯಾದುದಾರರಾದ ಶ್ರೀ ಕಾಶಿರಾಮ ತಂದೆ ರೂಪ್ಲಾ ರಾಠೋಡ ವಯ: 45 ವರ್ಷ ಜಾ: ಲಂಬಾಣಿ ಉ: ಒಕ್ಕಲುತನ ಸಾಃ ಗೋಗಿ(ಕೆ) ತಾಂಡಾ ಇವರಿಗೆ ವಿಚಾರಿಸಲಾಗಿ, ಅವರು ಲಿಖಿತ ದೂರುನ್ನು ಹಾಜರುಪಡಿಸಿದ ಸಾರಾಂಶವೇನೆಂದರೆ, ನನಗೆ ಎರಡು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು ಅವರಲ್ಲಿ 5 ವರ್ಷಗಳ ಹಿಂದೆ ಸವೀತಾ ವಯ: 25 ವರ್ಷ ಇವಳಿಗೆ ಸಾವಳಗಿ(ಕೆ) ತಾಂಡಾದ ಲೇಸುಕುಮಾರ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು. ಅವರಿಗೆ ಇಬ್ಬರು ಮಕ್ಕಳಿದ್ದು ಅವರಲ್ಲಿ ಸಧ್ಯ 3 ವರ್ಷದ ರೋಹನ ಅಂತಾ ಮಗನಿದ್ದು. ಈಗ ನಾಲ್ಕು ದಿವಸಗಳ ಹಿಂದೆ ನನ್ನ ಮಗಳು ಸವೀತಾ ಇವರು ತಮ್ಮ ಮಕ್ಕಳೊಂದಿಗೆ ನಮ್ಮ ತಾಂಡಾಕ್ಕೆ ಜಾತ್ರೆಗೆ ಬಂದಿದ್ದು ಇರುತ್ತದೆ. ಹೀಗಿದ್ದು. ಇಂದು ದಿನಾಂಕ: 19/12/2013 ರಂದು ನಾನ್ನ ಕೆಲಸದ ಕುರಿತು ಗುಲಬರ್ಗಾಕ್ಕೆ ಬಂದಿದ್ದು. ನನ್ನ ಅಣ್ಣನ ಮಗ ಪ್ರಕಾಶ ರಾಠೋಡ ಈತನು ನನಗೆ ಫೊನ ಮಾಡಿ, ಮಾಹಿತಿ ತಿಳಿಸಿದ್ದೇನೆಂದರೆ, ನಮ್ಮ ಮನೆಯ ಹತ್ತಿರ ಇರುವ ಕನಿರಾಮ ಇವರ ಮನೆಯ ಪಕ್ಕದ ರೋಡಿಗೆ ಅಕ್ಕ ಸವಿತಾಬಾಯಿ ಇವಳ ಮಗ ರೋಹನ ಈತನು ಇದ್ದಾಗ ನಮ್ಮ ತಾಂಡಾದ ದೀಲಿಪ ತಂದೆ ಶಟ್ಟಿ ರಾಠೋಡ ವಯ: 25 ವರ್ಷ ಈತನು ತನ್ನ ಕ್ರೋಜರ ಜೀಪ ಕಮಲಾಪೂರ ಕಡೆಯಿಂದ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಹನ ಈತನಿಗೆ ಡಿಕ್ಕಿ ಹೊಡಿದ್ದರಿಂದ ಆತನ ಎಡಗೈ ಮೊಳಕೈ ಹಾಗು ಎಡಭಾಗದ ಹೊಟ್ಟೆಗೆ ಭಾರಿ ಪ್ರಮಾಣದ ಗಾಯವಾಗಿ ಭೇಹುಷಾಗಿದ್ದು ಇದೇ ಜೀಪಿನಲ್ಲಿ ಗುಲಬರ್ಗಾ ಆಸ್ಪತ್ರೆಗೆ ತೆಗೆದುಕೊಂಡು ಬರುತ್ತಿದ್ದೇವೆ ಅಂತಾ ತಿಳಿಸಿದಾಗ ನಾನು, ಗಾಬರಿಗೊಂಡು ಗುಲಬರ್ಗಾ ದಿಂದ ಕಮಲಾಪೂರಕ್ಕೆ ಹೋದಾಗ ಕ್ರೋಜರ ಜೀಪಿನಲ್ಲಿ ರೋಹನನಿಗೆ ನನ್ನ ಮಗಳು ಸವಿತಾಬಾಯಿ, ಮಗ ಸಂತೋಷ, ಪ್ರಕಾಶ, ಶಂಕರ ರಾಠೋಡ ಇವರು ತೆಗೆದುಕೊಂಡು ಬಂದಿದ್ದು. ಮೊಮ್ಮಗನಿಗೆ ನೋಡಿ, ವಿಚಾರಿಸಲಾಗಿ, ಈ ಮೇಲಿ ವಿಷಯದಂತೆ ತಿಳಿಸಿದರು. ನಂತರ ಅಪಘಾತ ಪಡಿಸಿದ ದೀಲಿಪ ಈತನ ಕ್ರೋಜರ ಜೀಪಿನಲ್ಲಿಯೇ ಗುಲಬರ್ಗಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಕಾಲಕ್ಕ ನನ್ನ ಮೊಮ್ಮಗ ಮೃತಪಟ್ಟಿರುವದಾಗಿ ವೈದ್ಯರು ತಿಳಿಸಿರುತ್ತಾರೆ. ಕಾರಣ ಕ್ರೋಜರ ಜೀಪ ಚಾಲಕ ದೀಲಿಪ ತಂದೆ ಶಟ್ಟಿ ರಾಠೋಡ ಈತನು ತನ್ನ ಕ್ರೋಜರ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಹನ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಲಿಖಿತ ಅರ್ಜಿಯನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಅರ್ಜಿ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಮಲಾಪೂರ ಪೊಲೀಸ್ ಠಾಣೆ:
ದಿನಾಂಕ: 19/12/2013 ರಂದು ಗಾಯಾಳು ಸಂಜುಕುಮಾರ ತಂದೆ ದೇವಿರಾಮ ರಾಠೋಡ ಸಾಃ ಕಾಳಮಂದರಗಿ ಗುತ್ತಿ ತಾಂಡಾ ತಾಃಜಿಃ ಗುಲಬರ್ಗಾ ಇವರಿಗೆ ಕಾಳಮಂದರಗಿ ತಾಂಡಾದಲ್ಲಿ ಹೊಡೆಬಡೆ ಮಾಡಿರುತ್ತಾರೆ. ಉಪಚಾರ ಕುರಿತು ಗುಲಬರ್ಗಾ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾರೆ ಈ ಬಗ್ಗೆ ಎಂ.ಎಲ್.ಸಿ ವಸೂಲಾಗಿರುತ್ತದೆ. ಅಂತಾ ಮಾಹಿತಿ ಬಂದ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಉಪಚಾರ ಪಡೆಯುತ್ತಿದ್ದ ಗಾಯಾಳು/ಫಿರ್ಯಾದಿ ಶ್ರೀ ಸಂಜುಕುಮಾರ ತಂದೆ ದೇವಿರಾಮ ರಾಠೋಡ ವಯ: 28 ವರ್ಷ ಉ: ಕೂಲಿಕೆಲಸ ಜಾ: ಲಂಬಾಣಿ ಸಾಃ ಕಾಳಮಂದರಗಿ ಗುತ್ತಿ ತಾಂಡಾ ತಾಃಜಿಃ ಗುಲಬರ್ಗಾ ಇವರಿಗೆ ವಿಚಾರಿಸಲಾಗಿ, ಹೇಳಿಕೆ ನೀಡಿದ ಫಿರ್ಯಾದು ಸಾರಾಂಶವೆನೇಂದರೆ, ಸಾಯಂಕಾಲ ಸುಮಾರಿಗೆ, ನಾನು, ನಮ್ಮ ತಾಂಡಾದಲ್ಲಿ ಮರೆಮ್ಮ ದೇವಿಯ ಜಾತ್ರೆ ಮುಗಿಸಿಕೊಂಡು ನಮ್ಮ ತಾಂಡಾದ ರವಿ ತಂದೆ ತೇಜು ಚವ್ಹಾಣ ಇವರ ಮನೆ ಮುಂದಿನ ರಸ್ತೆಯ ಮೇಲಿಂದ ನಮ್ಮ ಮನೆ ಕಡೆಗೆ ಹೋಗುತ್ತಿರುವಾಗ ನಮ್ಮ ಚಿಕ್ಕಪ್ಪಾನಾದ (ಮಾಸ್ಟರ) 1) ಗೋವಿಂದ ರಾಠೋಡ, ಆತನ ಹೆಂಡತಿ 2) ನಾಗಮ್ಮಾ, 3) ಶಂಕರ ಪಾಂಡು ರಾಠೋಡ ವಯ: 35 ವರ್ಷ 4), ರಾಮು ತಂದೆ ಥಾವರು ರಾಠೋಡ ವಯ: 45 ವರ್ಷ, 5) ಶಿವು ತಂದೆ ರಾಮು ರಾಠೋಡ ವಯ: 22 ವರ್ಷ 6) ಮೋಹನ ತಂದೆ ಶಂಕರ ರಾಠೋಡ, 7). ದಾನಾಬಾಯಿ ಗಂಡ ಶಂಕರ ರಾಠೋಡ ಮತ್ತು 8) ಭೋಜು ತಂದೆ ಶಂಕರ ರಾಠೋಡ ಎಲ್ಲರೂ ಕೂಡಿಕೊಂಡು ಬಂದವರೇ ನನಗೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ನಿಮ್ಮ ಹೊಲದಲ್ಲಿ ಹಾಕಿರುವ ಪ್ಲಾಟನ್ನು ಮಾಹಾದೇವಿ ಚಿನ್ನಿ ರಾಠೋಡ ಇವಳಿಗೆ ಯಾಕೆ ಮಾರಿದ್ದಿ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನಾನು ನಾವು ಹಾಕಿರುವ ಪ್ಲಾಟಗಳನ್ನು ನಾನು ಯಾರಿಗೆ ಬೇಕಾದರೂ ಮಾರುತ್ತೇನೆ. ನೀವು ಕೇಳುವವರು ಯಾರು ಅಂತಾ ಅಂದಿದ್ದಕ್ಕೆ ಗೋವಿಂದ ಈತನು ಬಂದವನೇ ನನಗೆ ಎದುರು ಮಾತನಾಡುತ್ತಿ ಅಂತಾ ಅಂದವನೇ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ, ಕೈ ಮುಷ್ಠಿ ಮಾಡಿ, ಹೊಡೆದು ಗುಪ್ತಗಾಯ ಪಡಿಸಿ, ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದಾಗ ಶಂಕರ ಈತನು ಅಲ್ಲೇ ಬಿದ್ದಿರುವ ಹಿಡಿಗಲ್ಲನ್ನು ತೆಗೆದುಕೊಂಡು ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿದನು. ನಂತರ ರಾಮು ಈತನು ಬಡಿಗೆಯಿಂದ ನನ್ನ ಎಡ ತೊಡೆಗೆ ಹೊಡೆದು ಗುಪ್ತಗಾಯ ಪಡಿಸಿದನು. ಶಿವಾ ಈತನು ನನಗೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಕುತ್ತಿಗೆ ಒತ್ತಿ ಹಿಡಿದಾಗ ನಾನು ಚಿರಾಡುವ ಸಪ್ಪಳ ಕೇಳಿ ನನ್ನ ತಾಯಿ ಶಾಂತಾಬಾಯಿ ಮತ್ತು ಹೆಂಡತಿ ಸಕ್ಕುಬಾಯಿ ಇವರು ಬಂದು ಜಗಳ ನೋಡಿ, ಬಿಡಿಸುತ್ತಿರುವಾಗ ನಾಗಮ್ಮಾ ಇವಳು ನನ್ನ ತಾಯಿಗೆ ಕೂದಲು ಹಿಡಿದು ಕೈ ಮುಷ್ಟಿ ಮಾಡಿ, ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿ, ನೆಲಕ್ಕೆ ಕೆಡುವಿ ಒತ್ತಿಯಾಗಿ ಹಿಡಿದಾಗ ಮೋಹನ ಈತನು ನನ್ನ ತಾಯಿಗೆ ಇವತ್ತು ಮಾನ ಕಳೆಯುತ್ತೇನೆ ಅಂತಾ ಅವಾಚ್ಯವಾಗಿ ಬೈಯುತ್ತಾ ನನ್ನ ತಾಯಿ ಉಟ್ಟ ಸೀರೆ ಮತ್ತು ಕೈ ಹಿಡಿದು ಎಳೆದಾಡುತ್ತಾ ಅವಮಾನಗೋಳಿಸಿದನು. ದಾನಾಬಾಯಿ ನನ್ನ ಹೆಂಡತಿ ಸಕ್ಕುಬಾಯಿ ಇವಳಿಗೆ ಈ ಜಗಳದಲ್ಲಿ ನೀನು ಏಕೆ ಅಡ್ಡ ಬರುತ್ತಿ ಅಂತಾ ಅವಾಚ್ಯವಾಗಿ ಬೈದು ಕೂದಲು ಹಿಡಿದು ಎಳೆದು ಕೈಯಿಂದ ತಲೆಗೆ ಮತ್ತು ಬೆನ್ನೆಗೆ ಹೊಡೆದು ಗುಪ್ತಗಾಯ ಪಡಿಸಿ, ನೆಲಕ್ಕೆ ಕೆಡುವಿದಾಗ ಭೋಜು ಈತನು ಒಂದು ಕೈ ನೋಡಿಯೇ ಬಿಡುತ್ತೇನೆ. ಅಂತಾ ಕಾಲಿನಿಂದ ನನ್ನ ಹೆಂಡತಿ ಟೊಂಕ್ಕೆ ಒದ್ದು ಗುಪ್ತಗಾಯ ಪಡಿಸಿದನು. ಆಗ ನಾವೇಲ್ಲರೂ ಚಿರಾಡುತ್ತಿರುವಾಗ ಅಲ್ಲೇ ನಿಂತು ಜಗಳ ನೋಡುತ್ತಿದ್ದ ನಮ್ಮ ತಾಂಡಾದ ತಾರಾಸಿಂಗ್ ತಂದೆ ಅಮೃತ ರಾಠೋಡ, ಗೇಮು ತಂದೆ ಲಕ್ಷ್ಮಣ ಜಾಧವ ಇವರು ಜಗಳ ಬಿಡಿಸಿ ಕಳುಹಿಸುತ್ತಿದ್ದಾಗ ಗೋವಿಂದ ಮತ್ತು ಆತನ ಹೆಂಡತಿ ನಾಗಮ್ಮಾ ಇವರು ನಮಗೆ ಮಕ್ಕಳೇ ಇವತ್ತು ಉಳಿದಿದ್ದಿರಿ, ಇಲ್ಲದಿದ್ದರೆ ನಿಮ್ಮ ಜೀವ ಸಹಿತ ಮನೆ ಹೋಗುತ್ತಿರಲಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಜಗಳದಲ್ಲಿ ನನಗೆ ಮೈ ಕೈ ಮತ್ತು ತಲೆ ಆದ ಭಾರಿ ಗಾಯಗಳಾಗಿದ್ದರಿಂದ ಉಪಚಾರ ಕುರಿತು ಗುಲಬರ್ಗಾ ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇನೆ. ಮತ್ತು ನನ್ನ ತಾಯಿ ಶಾಂತಾಬಾಯಿ ಮತ್ತು ನನ್ನ ಹೆಂಡತಿ ಸಕ್ಕುಬಾಯಿ ಇವರಿಗೆ ಆಸ್ಪತ್ರೆಗೆ ತೋರಿಸುವಂತಹ ಗಾಯಗಳಾಗದೇ ಇರುವದರಿಂದ ಆಸ್ಪತ್ರೆಗೆ ತೋರಿಸಿರುವುದಿಲ್ಲಾ ಕಾರಣ ಈ ಮೇಲೆ ಹೇಳಿದ ಜನರು ವಿನಾಃಕಾರಣ ಜಗಳ ತೆಗೆದು ಕಲ್ಲು, ಬಿಡಿಗೆಯಿಂದ ಹೊಡೆಬಡೆ ಮಾಡಿದ್ದು ಅಲ್ಲದೇ ನನ್ನ ತಾಯಿಗೆ ಮತ್ತು ಹೆಂಡತಿಗೆ ಸೀರೆ, ಕೈ ಹಿಡಿದು ಎಳೆದಾಡಿ ಅವಮಾನ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಸ್ಟೇಷನ ಬಜಾರ ಪೊಲೀಸ ಠಾಣೆ:
ದಿನಾಂಕ 19/12/2013 ರಂದು ಮಾನ್ಯ ಡಿ.ಎಸ್.ಪಿ ಸಾಹೇಬರು ‘ಎ’ ಉಪ ವಿಭಾಗ ಗುಲಬರ್ಗಾ ರವರಿಂದಜ್ಞಾಪನ ಪತ್ರ ಮತ್ತು ಮಾನ್ಯ ನ್ಯಾಯಾಲಯದಿಂದ ವೆಂಕಟೇಶ ತಂದೆ ಭೀಮರಾಯ ಗುತ್ತೆದಾರ ಸಾಃ ಕಲಹಂಗರಗಾತಾಃಜೇವರ್ಗಿ ಇವರ ಖಾಸಗಫೀರ್ಯಾದಿನಂ.6/2013 ನೇದ್ದನ್ನು ವಸೂಲಾಗಿದ್ದು ಸಾರಂಶವೆನೆಂದರೆ, ಫಿರ್ಯಾದಿ ವೆಂಕಟೇಶ ಮತ್ತು ಕಲ್ಯಾಣಿ ಇವರು ತಿಮ್ಮಾಪೂರಸರ್ಕಲದಲ್ಲಿ ನಿಂತಾಗ ಸಿದ್ದಪ್ಪಾ ಪೂಜಾರಿ ಜುನಿಯರ ಇಂಜಿನಿಯರ ಪಂಚಾಯತ ರಾಜ್ಯ ಸಬ್ಡಿವಿಜನ್ ಜೇವರ್ಗಿ ಇವನು ಬಂದು ಏರುದ್ವನಿಯಲ್ಲಿ ಏ ವೆಂಕಟೇಶ ಇಲ್ಲಿ ಬಾ ಅಂತಾ ಕರೆದು ನೀವುಒಡ್ಡರ ಜಾತಿಯವರು ನಿಮ್ಮ ಜಾತಿಯವರು ನಿಮ್ಮ ಹಳ್ಳಿಯಲ್ಲಿ ಬಹಳ ಜನರು ಇರುವುದಿಲ್ಲಾ ನಿಮಗೆ ಬರಬೇಕಾದ ಸರಕಾರದ ಹಣ ಎಲ್ಲಾ ಮೇಲ್ಜಾತಿಯವರಿಗೆ ಖರ್ಚು ಮಾಡುತ್ತದೆ ಅದರ ಬಗ್ಗೆನೀನು ಮಾಹಿತಿಯನ್ನು ಕೆಳುತ್ತಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನಿನಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾಸಾರಂಶದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment