ಅಪಘಾತ ಪ್ರಕರಣ :
ಗ್ರಾಮೀಣ
ಠಾಣೆ : ದಿನಾಂಕ 04-12-13
ರಂದು ಸುನೀಲಕುಮಾರ ಇತನು ಮೋ.ಸೈಕಲ ಕೆಎ 32 ಇಬಿ 5663 ನೇದ್ದರ ಹಿಂದೆ ಗಾಯಾಳು ಶರಣಬಸಪ್ಪನಿಗೆ
ಕೂಡಿಸಿಕೊಂಡು ತನ್ನ ಎಡ ಬದಿ ರೋಡ ಸೈಡ
ಹಿಡಿದುಕೊಂಡು ಗುಲಬರ್ಗಾದಿಂದ ಅವರಾದಕ್ಕೆ ಹೊರಟಿದ್ದು, ರಾತ್ರಿ 10-00 ಗಂಟೆ ಸುಮಾರಿಗೆ
ಗುಲಬರ್ಗಾ- ಹುಮನಾಬಾದ ಮುಖ್ಯ ರಸ್ತೆಗೆ ಇರುವ ತಾವರಗೇರಾ ಕ್ರಾಸ ಹತ್ತಿರ ಬಂದಾಗ ಎದುರುನಿಂದ ಹುಮನಾಬಾದ
ರೋಡ ಕಡೆಯಿಂದ ಬುಲೋರೋ ಪಿಕ್ಕಪ್ಪ ಕೆಎ 32 ಬಿ 8455 ಚಾಲಕ ವಾಹನವನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ
ಹಾಗೂ ಅಡ್ಡಾ ತಿಡ್ಡಿಯಾಗಿ ನಡೆಸುತ್ತಾ ಬಂದವನೇ ಎಡ ರೋಡ ಬದಿ ಸೈಡ ಹಿಡಿದುಕೊಂಡು ಹೊರಟ
ಸುನೀಲಕುಮಾರನ ಮೋಟಾರ ಸೈಕಲಿಗೆ ಡಿಕ್ಕಿ
ಹೊಡೆಯಲು, ಬುಲೋರೋ ಪಿಕ್ಕಪ್ಪ ವಾಹನ ಟೈಯರ ಸುನೀಲಕುಮಾರ ಇತನ ಮುಖ ಮತ್ತು ತಲೆಯ ಮೇಲಿಂದ ಹಾಯ್ದು
ಹೋಗಿದ್ದರಿಂದ ಅವನ ಮುಖ ಮತ್ತು ತಲೆ ಒಡೆದು ಭಾರಿ ರಕ್ತಗಾಯವಾಗಿ ಮೆದಳು ಹೊರ ಬಂದು ಸ್ಥಳದಲ್ಲಿ
ಮೃತಪಟ್ಟಿರುತ್ತಾನೆ.ಶರಣಬಸಪ್ಪನಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಎಡಕಿವಿಯಿಂದ ರಕ್ತ ಸೋರಿ
ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಅಂತಾ ಶ್ರೀ ಚಂದ್ರಕಾಂತ ತಂದೆ ವೀರಶೆಟ್ಟಿ ಕಾಮಶೆಟ್ಟಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಚೌಕ
ಠಾಣೆ : ದಿನಾಂಕ
04-12-2013 ರಂದು 10 ಗಂಟೆಗೆ ಚೌಕ ಠಾಣಾ ವ್ಯಾಪ್ತಿಯ ಬಿ.ಎಸ್.ಎನ್.ಎಲ್. ಆಫೀಸ ಪಕ್ಕದಲ್ಲಿ
ಇರುವ ಖುಲ್ಲಾ ಜಾಗೆಯಲ್ಲಿ ಕೆಲು ಜನರು ಇಸ್ಪೀಟ ಜೂಜಾಟದಲ್ಲಿ ತೋಡಗಿದ ಬಗ್ಗೆ ಖಚಿತ ಬಾತ್ಮಿ
ಮೇರೆಗೆ ಸಿಬ್ಬಂದಿ ಪಂಚರೊಂದಿಗೆ ಸ್ಥಳಕ್ಕೆ ಹೋಗಿ
ನೋಡಿ ದಾಳಿ ಮಾಡಿ ಎರಡು ಜನ ಆರೋಪಿತರನ್ನು ಹಿಡಿದಿದ್ದು ಮೂರು ಜನರು ಓಡಿ ಹೋಗಿರುತ್ತಾರೆ ಸಿಕ್ಕಿ
ಬಿದ್ದ ಆಪಾದಿತರು 1.ಮಹ್ಮದ ಮುಸ್ತಫಾ ತಂದೆ ಬಾಬುಮಿಯಾ ಹರಸೂರ ಸಾಃ ಆದರ್ಶ ನಗರ
ಗುಲಬರ್ಗಾ 2. ಅಮರನಾಥ ತಂದೆ ಮಲ್ಲಿಕಾರ್ಜುನ ವಾಲಿಕರ ಸಾಃ ಇಂದ್ರಾನಗರ ಗುಲಬರ್ಗಾ ಇವರಿಂದ 52 ಇಸ್ಪೀಟ ಎಲೆ ಮತ್ತು 5800/- ರೂ ನಗದು ಹಣ ಜಪ್ತಿ
ಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಗುರುಪಾದಪ್ಪಾ ತಂದೆ
ಮಾಣಿಕಪ್ಪಾ ಪಂಚಾಳ ಸಾಃ ಸುಂಬಡ ತಾ:ಜೇವರ್ಗಿ ಹಾಃವಃ ಮರಗುತ್ತಿ ತಾಃಜಿಃಗುಲಬರ್ಗಾ ರವರು ದಿನಾಂಕ
03-12-2013 ರಂದು ಬೆಳಿಗ್ಗೆ 9-30
ಗಂಟೆಗೆ ತನ್ನ ಮನೆಯಿಂದ ಮರಗುತ್ತಿ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದಾಗ ಸಂತೋಷ ತಂದೆಸುಭಾಶ
ರಾಯಚೂರಕರ ಸಂಗಡ 5-6 ಜನರು ಎಲ್ಲರೂ ಸಾಃ ಸೊಂತ ರವರು ಮೋಟಾರ ಸೈಕಲ ಮೇಲೆ ಬಂದು ನನಗೆಮುಂದೆ ಹೋಗದಂತೆ
ಆಕ್ರಮವಾಗಿ ತಡೆದು ನಿಲ್ಲಿಸಿ, ಅವರಲ್ಲಿ ಶರಣ ಮುತ್ಯಾನ
ಶಿಷ್ಯನಾದ ಸಂತೋಷ ತಂದೆಸುಭಾಶ ರಾಯಚೂರಕರ ಸಾಃ ಸೊಂತ ಈತನು ಬಂದವನೇ ನನ್ನ ಎದೆಯ ಮೇಲಿನ ಅಂಗಿ
ಹಿಡಿದು ಎಲ್ಲರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಗುಪ್ತಗಾಯಪಡಿಸಿ ಜೀವದ
ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment