ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ
ಮೈನೊದ್ದೀನ ತಂದೆ ಇಬ್ರಾಹಿಂಸಾಬ ಮಸಲದಾರ ಸಾ:
ನದಿಸಿನ್ನೂರ ರವರ ತಂದೆಗೆ ತಾಯಿಗೆ ಇಬ್ಬರು ಗಂಡಸು ಮಕ್ಕಳಿರುತ್ತೇವೆ. ಅವರಲ್ಲಿ ನಾನು ದೊಡ್ಡವನು
ನನ್ನ ತಮ್ಮನಾದ ಸದ್ದಾಂ ಹುಸೇನ ಇತನು ಚಿಕ್ಕವನಿರುತ್ತಾನೆ. ನಮ್ಮ ತಂದೆ ತಾಯಿ ಇಬ್ಬರು
ತೀರಿಕೊಂಡಿರುತ್ತಾರೆ. ನಮಗೆ ನಮ್ಮ ತಂದೆ -ತಾಯಿಗೆ 3 ಎಕರೆ ಹೊಲ ಬಂದಿರುತ್ತದೆ. ಅದರಲ್ಲಿ 2
ಎಕರೆ ಜಮೀನು ಕಂಪನಿಯಲ್ಲಿ ಹೋಗಿದ್ದರಿಂದ 22 ಲಕ್ಷ ರೂಗಳು ಬಂದಿರುತ್ತವೆ. ಅದರಲ್ಲಿ 16 ಲಕ್ಷ
ರೂಗಳು ಕೊಟ್ಟು ಗುಲಬರ್ಗಾ ಮಿಜ್ಬಾ ನಗರದಲ್ಲಿ ಒಂದು ಮನೆಯನ್ನು ಖರಿದಿ ಮಾಡಿರುತ್ತೆವೆ. ಉಳಿದ
ದುಡ್ಡನ್ನು ನಾನು ಮತ್ತು ನನ್ನ ತಮ್ಮ ಸದ್ದಾಂ ಹುಸೇನ ಇಬ್ಬರೂ ಕುಡಿಕೊಂಡು ಸಮನಾಗಿ
ಹಂಚಿಕೊಂಡಿರುತ್ತೆವೆ. ಈಗ ಸುಮಾರು 1 ವರ್ಷಗಳಿಂದ ನನ್ನ ತಮ್ಮನು ಗುಲಬರ್ಗಾದಲ್ಲಿ ಖರಿದಿ
ಮಾಡಿದ ಮನೆಯನ್ನು ಮಾರಿ ನನಗೆ ನನ್ನ ಪಾಲನ್ನು ನನಗೆ ಕೊಡು ಅಂತಾ ಕೇಳುತ್ತಾ ನನ್ನ ಸಂಗಡ ಆಗಾಗ
ಕಿರಿಕಿರಿ ಮಾಡುತ್ತಾ ಬಂದಿರುತ್ತಾನೆ. ದಿನಾಂಕ
02-12-2013 ರಂದು 2 7:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಹಾಗೂ ನಮ್ಮ
ಮಾವನಾದ ಖಾಜಾ ಹುಸೇನ ಅತ್ತೆಯಾದ ರಹೆಮತ ಬೀ ಎಲ್ಲರೂ ಮನೆಯಲ್ಲಿ ಇದ್ದಾಗ ನನ್ನ ತಮ್ಮ ಸದ್ದಾಂ
ಹುಸೇನ್ ಮತ್ತು ಅವನ ಹೆಂಡತಿ ಫರ್ವಿನಾ ಬೇಗಂ ಇಬ್ಬರೂ ಕೂಡಿಕೊಂಡು ಬಂದು ನನಗೆ ಅವಾಚ್ಯಶಬ್ದಗಳಿಂದ
ಬೈದು ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಗಂಗಮ್ಮ ಗಂಡ ಜಲಲಾಪ್ಪ ಇವರು ದಿನಾಂಕ 03-12-2013 ರಂದು
ಬೆಳಿಗ್ಗೆ 5-00 ಗಂಟೆ ಸುಮಾರಿಗೆ ಕಣ್ಣಿ ಮಾರ್ಕೆಟದಿಂದ ಅಟೋರಿಕ್ಷಾ ನಂಬರ ಕೆಎ-32 ಎ-5741 ನೇದ್ದರಲ್ಲಿ ತರಕಾರಿ ತೆಗೆದುಕೊಂಡು ರೇಲ್ವೆ ಸ್ಟೇಶನಕ್ಕೆ ಬಸ
ನಿಲ್ದಾಣದ ಮುಖಾಂತರ ಅಟೋರಿಕ್ಷಾದಲ್ಲಿ ಕುಳಿತು ಬರುತ್ತಿರುವಾಗ ಅಟೋರಿಕ್ಷಾ ಚಾಲಕನು ಅತೀವೇಗ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಕಟ ಹೊಡೆದು ಬಸ ಡಿಪೊ ಎದುರಿನ ರೋಡಿನ ಮೇಲೆ
ಅಟೋರಿಕ್ಷಾ ಪಲ್ಟಿ ಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಚಾಲಕ ಹೊರಟು ಹೋಗಿದ್ದು ಇರುತ್ತದೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment