ಕೊಲೆ ಪ್ರಯತ್ನ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ :
ದಿ:- 01-01-2014 ರಂದು ರಾತ್ರಿ ಶ್ರೀ ಗುಂಡಪ್ಪಾ ತಂ. ಕರಬಸಪ್ಪ ತಳವಾರ
ತನ್ನ ಮಗನಾದ ಅಶೋಕನೊಂದಿಗೆ ತಾನು
ಪಾಲಿನಂತೆ ಮಾಡಿದ ಹೊಲಕ್ಕೆ ಹೋಗಿ ದಿನಾಂಕ 02-01-2014 ರಂದು ಬೆಳಿಗ್ಗೆ 06-00 ಗಂಟೆಗೆ ಮರಳಿ ಮನೆಗೆ ಬಂದಾಗ ಆತನ
ಹೆಂಡತಿ ಮಹಾದೇವಿ ಅಳುತ್ತಾ 1) ಶರಣಪ್ಪ ತಂ. ತುಕ್ಕಪ್ಪ ನಿಂಬರ್ಗಿ, 2)ಗುಂಡಪ್ಪ ತಂ. ಶರಣಪ್ಪ
ನಿಂಬರ್ಗಿ, 3) ಬಸಪ್ಪಾ ತಂ. ತುಕ್ಕಪ್ಪಾ ನಿಂಬರ್ಗಿ, 4) ರಾಜಾ ತಂ. ಶಂಕಪ್ಪಾ ನಿಂಬರ್ಗಿ ಸಾ: ಎಲ್ಲರೂ ಬಮ್ಮನಳ್ಳಿ ಇವರು ಹಳೆಯ ದ್ವೇಶದ
ವೈಷಮ್ಯದಿಂದ ತಮ್ಮ ಮಗಳಾದ ಸವಿತಾ ಹಾಗೂ ಕವಿತಾ ರವರು ಮಲಗಿಕೊಂಡ ಕೋಣೆಯಲ್ಲಿ ಅಕ್ರಮ ಪ್ರವೇಶ ಮಾಡಿ ತಾವೇ
ಮಲಗಿಕೊಂಡಿರಬಹುದು ಅಂತ ತಿಳಿದು ನಿಮ್ಮನ್ನು ಕೊಲೆಮಾಡುವ ಉದ್ದೇಶದಿಂದ ಮುಖದ ತುಂಬಾ ಕೌದಿ ಹೊಚ್ಚಿಕೊಂಡು
ಮಲಗಿಕೊಂಡಂತಹ ಸವಿತಾಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲು ಯತ್ನಿಸಿರುತ್ತಾರೆ. ಆಗ ಅವಳು
ಚೀರಾಡುವ ಸಪ್ಪಳ ಕೇಳಿ ಇನ್ನೊಂದು ಕೊಣೆಯಲ್ಲಿ ಮಲಗಿರುವ ನಾನು ಎದ್ದು ಹೋಗಿ ನೋಡಲಾಗಿ ಓಡಿ ಹೋಗಿರುತ್ತಾರೆ
ಮಗಳಿಗೆ ನೋಡಲಾಗಿ ಎಡಗಡೆ ಕಣ್ಣಿಗೆ, ಎಡ ಕಿವಿಗೆ ಮತ್ತು ಕಿವಿಯ ಮೇಲ್ಭಾಗದ ತಲೆಗೆ ಭಾರಿ-ರಕ್ತಗಾಯವಾಗಿರುತ್ತದೆ. ಎಂದು
ತಿಳಿಸಿದ್ದು. ಕಾರಣ ತನ್ನ ಕೊಲೆ ಮಾಡುವ ಉದ್ದೇಶದಿಂದ ಸವಿತಾಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭಾರಿ
ರಕ್ತಗಾಯಪಡಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಫಿರ್ಯಾದಿ ಸಾರಾಂಶದ
ಮೇಲಿಂದ ನಿಂಬರ್ಗಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment