ಇಸ್ಪೀಟ
ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಕಾಳಗಿ ಠಾಣೆ : ದಿನಾಂಕ 23-01-2014
ರಂದು 00-15 ಗಂಟೆಗೆ ಕಾಳಗಿ ಗ್ರಾಮದ ಕೃಷ್ಣ ಧಾಬಾದ ಹತ್ತಿರ ಇಸ್ಪೀಟ್ ಜೂಜಾಟ ನಡೆದಿದೆ ಅಂತ ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿ
ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು
ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ,ಬಾಹರ ಎಂಬ ಜೂಜಾಟವನ್ನು ಆಡುತ್ತಿರುವದನ್ನು ನೋಡಿ ದಾಳಿ ಮಾಡಿ
ಜೂಜಾಡುತ್ತಿದ್ದ ಮಹ್ಮದ ರಫೀಕ ತಂದೆ ಮಹ್ಮದ ಗಪೂರ ಸಂಗಡ 7 ಜನರು ಸಾ: ಎಲ್ಲರೂ ತಾ:ಚಿಂಚೋಳ್ಳಿ ಜನರನ್ನು ಹಿಡಿದು ಅವರಿಂದ ಜೂಜಾಟಕ್ಕೆ ಬಳುಸುತ್ತಿದ್ದ
ಒಟ್ಟು 9101/-ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು
ಸದರಿಯವರ ವಿರುದ್ಧ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ. 02-25 ಗಂಟೆಗೆ ಮರಳಿ ಠಾಣೆಗೆ
ಬಂದು ಎಸ್,ಹೆಚ್,ಓ ರವರ ಮುಂದೆ ಹಾಜರ ಪಡಿಸಿದ್ದು ಸದರ ಜಪ್ತಿ ಪಂಚನಾಮೆಯ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ
05/2014 ಕಲಂ 87 ಕೆ,ಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ
ಠಾಣೆ : ಶ್ರೀ ಕಾಶಿನಾಥ ತಂದೆ ಶಿವಾನಂದ ಮೂಲಗೆ ಸಾ: ಗೌಡಗಾಂವ ತಾ: ಅಫಜಲಪೂರ ಹಾ:ವ: ದೇವಿ ನಗರ ಗುಲಬರ್ಗಾ ರವರ ಅಣ್ಣನಾದ ಅಶೋಕ ರವರು ದಿನಾಂಕ 23-01-2014 ರಂದು ಮದ್ಯಾಹ್ನ 2-00 ಗಂಟೆ ತನ್ನ
ಮೋಟಾರ ಸೈಕಲ ನಂಬರ ಕೆಎ-15 ಹೆಚ್-6672 ನೇದ್ದರ ಮೇಲೆ ರೆಡ್ಡಿ ಪೆಟ್ರೊಲ ಪಂಪ ಕಡೆಗೆ ಹೋಗಿ ಬರುವ ವಾಹನಗಳನ್ನು
ನೋಡಿಕೊಂಡು ಪಂಪ ಕಡೆಗೆ ತಿರುಗಿಸುವಾಗ ಸನ್ ಇಂಟರ ನ್ಯಾಷನಲ ಹೋಟೆಲ ರೋಡ ಕಡೆಯಿಂದ ಒಬ್ಬ ಮೋಟಾರ
ಸೈಕಲ ನಂಬರ ಕೆಎ-02 ಇಡಬ್ಲೂ-4584 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಫಿರ್ಯಾದಿ ಅಣ್ಣನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತಾನು
ಗಾಯಹೊಂದಿ ತನ್ನ ಮೋಟಾರ ಸೈಕಲ ಅಲ್ಲೆ ಬಿಟ್ಟು ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರಕ್ಷಣೆ
ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ
ಪ್ರಿಯಂಕಾ ಗಂಡ ಮಂಜುನಾಥ ಕುಂಬಾರ ಸಾ;ಸುಂಟನೂರ
ತಾ;ಆಳಂದ ಜಿ;ಗುಲಬರ್ಗಾ ರವರು ದಿನಾಂಕ 01-02-2013 ರಂದು
ನಮ್ಮ ತಂದೆ ತಾಯಿಯವರು ನರೋಣಾ ಗ್ರಾಮದ ಮಂಜುನಾಥ ಇತನೊಂದಿಗೆ ಸಂಪ್ರದಾಯದಂತೆ ಮದುವೆ
ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ವರನಿಗೆ 1 ಲಕ್ಷ ರೂಪಾಯಿ 3 ತೊಲೆ ಬಂಗಾರ ಕೊಡುವಂತೆ
ಮಾತನಾಡಿದ್ದು ಮದುವೆಯಲ್ಲಿ 50.000/- ರೂಪಾಯಿ 3 ತೊಲೆ ಬಂಗಾರ ಕೊಟ್ಟಿದ್ದು ಇರುತ್ತದೆ.
ಮುದವೆಯಾದ ನಂತರ 1 ತಿಂಗಳವರೆಗೆ ನನ್ನ ಗಂಡ ಹಾಗೂ ಗಂಡನ ಮನೆಯವರು ನನ್ನೊಂದಿಗೆ ಸರಿಯಾಗಿ ಇದ್ದು
ತದ ನಂತರ ಇನ್ನುಳಿದ 50.000/- ರೂ ಹಣ ತವರು ಮನೆಯಿಂದ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ
ಹಿಂಸೆ ಕೊಡಲು ಪ್ರಾರಂಬಿಸಿದರು. ದಿನಾಂಕ 23-01-2014 ರಂದು 9 ಗಂಟೆಯ ಸುಮಾರಿಗೆ ನಾನು ಸುಂಟನೂರ
ಗ್ರಾಮದಿಂದ ಕಂಪ್ಯೂಟರ ಕ್ಲಾಸಿಗೆಂದು ಗುಲಬರ್ಗಾದ ಶಹಾಬಜಾರ ನಾಕಾದ ಹತ್ತಿರ ಬಂದು ಬಸ್ಸಿನಿಂದ
ಕೆಳಗೆ ಇಳಿದಾಗ ಅಲ್ಲಿ ನನ್ನ ಗಂಡ ಮಂಜುನಾಥ ಮೈದುನ ನಾಗರಾಜ ಮತ್ತು ಮಾವ ಗುಂಡಪ್ಪಾ ಇವರು
ಕೂಡಿಕೊಂಡು ಬಂದವರೆ ರಂಡಿ ನಿನಗೆ ತವರು ಮನೆಯಿಂದ 50.000/- ರೂ ಹಣ ತೆಗೆದುಕೊಂಡು ಬಾ ಅಂದರೆ
ಗುಲಬರ್ಗಾಕ್ಕೆ ಕಂಪ್ಯೂಟರ ಕ್ಲಾಸಿಗೆ ಬರುತ್ತಿದ್ದಿಯಾ ಅಂತಾ ಅಂದವನೆ ನನ್ನ ಗಂಡ ಮಂಜುನಾಥ
ಕೈಮುಷ್ಟಿ ಮಾಡಿ ಎಡಗಣ್ಣಿನ ಹುಬ್ಬಿನ ಹತ್ತಿರ ಜೋರಾಗಿ ಹೊಡೆದು ರಕ್ತಗಾಯ ಪಡಿಸಿದನು. ನಾಗರಾಜ
ಇತನು ಕೈಯಿಂದ ಹೊಟ್ಟೆಗೆ ಹೊಡೆದನು. ಮಾವ ಗುಂಡಪ್ಪ ಇತನು ತಲೆಯ ಕೂದಲು ಹಿಡಿದು ಜಗ್ಗಾಡಿ ಗಾಯಗೊಳಿಸಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನಗಳ ಕಳವು ಪ್ರಕರಣಗಳು :
ದೇವಲ ಗಾಣಗಾಪೂರ ಠಾಣೆ : ಶ್ರೀ ಸಾಯಬಣ್ಣ ತಂದೆ ಸಂಗಪ್ಪ ಮೂರನೆತ್ತಿ ಸಾ|| ದೇವಲಗಾಣಗಾಪೂರ
ರವರ ಹೊಂಡಾ ಸೈನ್ ಕಂಪನಿಯ ಸೈಕಲ ಮೋಟಾರ ಇದ್ದು ಅದು ನನ್ನ ಹೆಸರಿನಿಂದ ಇರುತ್ತದೆ. ಅದರ ನಂ. KA-32 ED-0830 ಅಂತಾ ಇದ್ದು ಅದರ ಚಸ್ಸಿ ನಂ. ME4JC36JBD7337170 ಇಂಜೀನ ನಂ, JC36E77517931 ಅಂತಾ ಇರುತ್ತದೆ.
ಸದರ ಮೋಟಾರ ಸೈಕಲನ್ನು ನಾನೆ ಉಪಯೋಗ ಮಾಡುತ್ತಿದ್ದುದ್ದು ಇರುತ್ತದೆ. ನಮ್ಮ ಮೋಟಾರ ಸೈಕಲ ದಿನಾಲು
ನಮ್ಮ ಮನೆಯ ಮುಂದೆ ನಿಲ್ಲಿಸುತಿದ್ದೆನು. ದಿನಾಂಕ: 25-12-2013 ರಂದು ರಾತ್ರಿ 11-00 ಗಂಟೆ
ಸುಮಾರಿಗೆ ನಾನು ಊಟ ಮಾಡಿ ನಮ್ಮ ಮನೆಯಲ್ಲಿ ಮಲಗಿದ್ದೆನು. ದಿನಾಂಕ: 26-12-2013 ರಂದು
ಬೆಳಿಗ್ಗೆ ಎದ್ದು ನೋಡುವದರಲ್ಲಿ ನನ್ನ ಸೈಕಲ ಮೋಟಾರ ಕಾಣಲಿಲ್ಲಾ ಆಗ ನಾನು ಗಾಬರಿಯಾಗಿ ಊರಲ್ಲಿ ಎಲ್ಲಾ ಕಡೆ ಹುಡುಕಾಡಿದರು ಸಿಗಲಿಲ್ಲಾ.
ಅಲ್ಲದೆ ನನ್ನ ಮಗ ರಾಜು ಮೂರನೆತ್ತಿ ಮತ್ತು ಅಳಿಯ ವಿಶಾಲ ಕರ್ಚಿ ಕೂಡಿ ಅಂಕಲಗಿ, ಹೂಲ್ಲೂರ, ಅಫಜಲಪೂರ, ಗೊಬ್ಬೂರ[ಬಿ] ಚಿಣಮಗೇರಾ ಗ್ರಾಮಗಳಲ್ಲಿ ಹುಡುಕಾಡಿದರು
ಸಿಕ್ಕಿರುವುದಿಲ್ಲಾ. ಯಾರೊ ಕಳ್ಳರು ನಮ್ಮ ಮನೆಯ ಮುಂದೆ ನಿಲ್ಲಿಸಿದ ನನ್ನ ಕಪ್ಪು ಬಣ್ಣದ ಹೊಂಡಾ
ಸೈನ್ ಸೈಕಲ ಮೋಟಾರ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ
ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ : ಶ್ರೀ ಲಕ್ಷ್ಮಿಕಾಂತ ತಂದೆ ಲಿಂಗಣ್ಣ ಪೂಜಾರಿ ಸಾ:ಪ್ಲಾಟ ನಂ:61 ದತ್ತ ನಗರ ಎನ್.ಜಿ.ಓ ಕಾಲೋನಿ ಗುಲಬರ್ಗಾ
ರವರು ದಿನಾಂಕ 18-01-2014 ರಂದು ರಾತ್ರಿ 9:00 ಗಂಟೆ ಸುಮಾರಿಗೆ ತನ್ನ ಹಿರೊಹೊಂಡಾ CBZ
Extreme ದ್ವೀಚಕ್ರ ವಾಹನ ನಂ: KA-32
V-8708 ಚೆಸ್ಸಿ ನಂ: MBLKC12EC9GH08292 ಇಂಜಿನ ನಂ: KC12EB9GH07833 ನೇದ್ದನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿ
ಮಲಗಿದ್ದು ದಿನಾಂಕ 19-01-2014 ರಂದು ಮುಂಜಾನೆ 8:00 ಗಂಟೆಗೆ ಎದ್ದು ನೋಡಲಾಗಿ ನನ್ನ ದ್ವೀಚಕ್ರ
ವಾಹನ ಕಾಣಲಿಲ್ಲ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ
ಹಲ್ಲೆ ಪ್ರಕರಣಗಳು :
ರಟಕಲ್ ಠಾಣೆ : ಶ್ರೀಮತಿ ಕವಿತಾ ಗಂಡ ಮೋಹನ ರಾಠೋಡ ಸಾ||ಕೊರವಿದೊಡ್ಡ ತಾಂಡಾ ರವರು ದಿನಾಂಕ
23-01-2014 ರಂದು 09.00 ಎ.ಎಂ ಸುಮಾರಿಗೆ ನಾನು ನನ್ನ ಗಂಡ ಕೂಡಿ ಹಣಮಂತ ಇತನ ಮನೆ ಹತ್ತಿರ
ಹೋದಾಗ ನನ್ನ ಗಂಡನು ಹಣಮಂತನಿಗೆ ನಿನ್ನೆ ನನ್ನ ಹೆಂಡತಿಗೆ ಏನು ಅಂದಿದ್ದಿ ಅಂತ ಕೇಳಿದ್ದಕ್ಕೆ
ಹಣಮಂತ ಇತನು ನನ್ನ ಗಂಡನಿಗೆ ನೂಕಿಕೊಟ್ಟು ತನ್ನ ತಮ್ಮನಾದ ಬಲವಂತ ಹಾಗು ಹೆಂಡತಿ ಸುನೀತಾ
ಇವಳೊಂದಿಗೆ ಕೂಡಿ ಅವಾಚ್ಯಬೈದು ನನಗೆ ಹೊಡೆಬಡೆ ಮಾಡಿ ಅವಮಾನ ಮಾಡಿ ಜೀವದಬೆದರಿಕೆ
ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಗುಂಡೇನಾಯಕ ತಂದೆ
ದಿಪ್ಲಾನಾಯಕ ರಾಠೋಡ ಸಾ: ಮೇದಕ ತಾಂಡಾ ತಾ : ಸೇಡಂ
ರವರ ಮನೆ
ಮತ್ತು ಶಂಕರ ತಂದೆ ತುಳಜ್ಯಾನಾಯಕ ರಾಠೋಡ ಇವರ ಮನೆಯು ಅಕ್ಕ ಪಕ್ಕದಲ್ಲಿ ಇರುತ್ತದೆ ಮತ್ತು ಇಗ
ಕೆಲವು ದಿವಸಗಳ ಹಿಂದೆ ನಮ್ಮ ಹುಡುಗರು ಶಂಕರ ತಂದೆ ತುಳಜ್ಯಾನಾಯಕ ರಾಠೋಡ ಇವರ ಮನೆಯ ಹಿಂದೆ ಇರುವ
ಖುಲ್ಲಾ ಜಾಗದಲ್ಲಿ ಆಟ ಆಡುತ್ತಾ ಸಂಡಾಸ ಮತ್ತು ಏಕಿ ಮಾಡಿದ್ದಕ್ಕೆ ಇದರ ಬಗ್ಗೆ ಶಂಕರ ಇವನು ನನ್ನ
ಸಂಗಡ ತಕರಾರು ಮಾಡುತ್ತಾ ನೀಮ್ಮ ಹುಡುಗರು ನಮ್ಮ ಜಾಗದಲ್ಲಿ ಬಂದು ಹೊಲಸು ಮಾಡುತ್ತಿದ್ದಾರೆ ಅಂತಾ
ಜಗಳ ಮಾಡಿದ್ದನು. ಆಗಿನಿಂದ ನನ್ನ ಸಂಗಡ ವೈಮನಸ್ಸು ಹೊಂದಿದ್ದು ದಿನಾಂಕ: 22.01.14 ರಂದು 10 ಪಿ ಎಮ್ ಸುಮಾರಿಗೆ ನಾನು
ಮತ್ತು ನಮ್ಮ ತಾಂಡದವರಾದ ರುಖ್ಯಾನಾಯಕ ತಂದೆ ದೇವಜ್ಯಾನಾಯಕ ರಾಠೋಡ, ರಾಜು
ತಂದೆ ರುಖ್ಯಾನಾಯಕ ರಾಠೋಡ, ಗುಂಡ್ಯಾನಾಯಕ ತಂದೆ ಪಾಂಡ್ಯಾನಾಯಕ ಚವ್ಹಾಣ ಇವರು ಕೂಡಿ
ನಮ್ಮ ಮನೆಯ ಮುಂದೆ ಇರುವ ಕಟ್ಟೆಯ ಮೇಲೆ ಕುಳಿತು ಮಾತಾಡುತ್ತಿದ್ದೇವು ಇದನ್ನು ನೋಡಿ ನಮ್ಮ ಪಕ್ಕದ
ಮನೆಯವರಾದ ಶಂಕರ ತಂದೆ ತುಳಜ್ಯಾನಾಯಕ ರಾಠೋಡ, ಗೋಪಾಲ ತಂದೆ ತುಳಜ್ಯಾನಾಯಕ, ಜೈರಾಮ
ತಂದೆ ತುಳಜ್ಯಾನಾಯಕ ಹಾಗೂ ಸೇವಾಲಾಲ ತಂದೆ ತುಳಜ್ಯಾನಾಯಕ
ರಾಠೋಡ ಈ ನಾಲ್ಕು ಜನರು ಕೂಡಿ ನನ್ನ ಬಳಿ ಬಂದು ನನ್ನ ಸಂಗಡ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ
ಬೈದು ಹೀಡಿದು ಜಗ್ಗಿ ಕಟ್ಟೆಯ ಮೇಲಿಂದ ಕೆಳಗೆ ಇಳಿಸಿ ಕೈಯಿಂದ ಮತ್ತು ಕಲ್ಲಿನಿಂದ
ಹೊಡೆದು ರಕ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ
ಶಂಕರ ತಂದೆ ತುಳಜಾ ನಾಯಕ ರಾಠೋಡ ಸಾ || ಮೇದಕ ತಾಂಡಾ ತಾ|| ಸೇಡಂ ಇವರು ನಿನ್ನೆ ದಿನಾಂಕ
22-01-2014 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಾನು ನಮ್ಮ ತಾಂಡಾದ ಗುಂಡ್ಯಾ ತಂದೆ ದೀಪಲಾನಾಯಕ
ರಾಠೋಡ ಇವರ ಮನೆಯ ಮುಂದೆ ಇರುವ ಸಾರ್ವಜನಿಕ ದಾರಿಯಿಂದ ನಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ನಮ್ಮ
ತಾಂಡಾದ ಗುಂಡ್ಯಾ ತಂದೆ ದೀಪಲಾ ನಾಯಕ ರಾಠೋಡ ಮತ್ತು ರಾಜು ತಂದೆ ರುಕ್ಯಾನಾಯಕ ರಾಠೋಡ ಇವರು
ಗುಂಡ್ಯಾ ತಂದೆ ದೀಪಲಾ ನಾಯಕ ರಾಠೋಡ ಇವರ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತ್ತಿದ್ದರು ನಾನು
ಬರುವುದನು ನೋಡಿ ಅವರು ಏದ್ದು ನನ್ನ ಹತ್ತಿರ ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯ
ಶಬ್ದಗಳಿಂದ ಬೈದು ನಮ್ಮ ಮನೆಯ ಮುಂದಿನ ದಾರಿಯಿಂದ ಯಾಕೆ ಹೋಗುವುದು ಬರುವುದು ಮಾಡುತ್ತಿ ಅಂದು
ಕೈಯಿಂದ ಕಟ್ಟಿಗೆಯಿಂದ ಹೋಡೆ ಬಡೆ ಮಾಡಿ ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಸ್ವತ್ತಿಗೆ ಹಾನಿ ಮಾಡಿ ಗಾಯಗೊಳಿಸಿದ
ಪ್ರಕರಣ :
ಆಳಂದ ಠಾಣೆ : ದಿನಾಂಕ
22/01/2014 ರಂದು ಬೆಳಿಗ್ಗೆ 08 ಗಂಟೆಗೆ ಬಿದರ ಜಿಲ್ಲೆಯ ನ್ಯೂಟೌನ ಠಾಣೆಯ ಗುನ್ನೆ ನಂ 15/2014 ಕಲಂ 143 147
148 324 ಐಪಿಸಿ ಸಂ 3 ಪ್ರಿವೇನಸೆನ ಆಪ್ ಡ್ಯಾಮೇಜ ಟು ಪಬ್ಲೀಕ ಪ್ರಾಪರ್ಟಿ ಆಕ್ಟ್ 1984 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಠಾಣಾ
ಸರಹದ್ದಿನ್ ಆದಾರದ ಮೇಲಿಂದ ಕಡತವನ್ನು ಹೆಚ್‌ಸಿ 736 ಸುಜ್ಞಾನಿ ನೌಟಾನ ಠಾಣೆ ಬಿದರ ರವರು ತಂದು
ಹಾಜರು ಪಡಿಸಿದ ಸಾರಾಂಶವೆನೆಂದರೆ ನಾನು
ಈ ಮೇಲ್ಕಾಣಿಸಿದ ವಿಳಾಸದವನಿದ್ದು ಬೀದರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಮುಖ್ಯ ಪೇದೆ ಅಂತಾ
ಸೇವೆ ಸಲ್ಲಿಸುತ್ತಿದ್ದು ದಿನಾಂಕ 15/01/2014 ರಂದು ಬೆಳಿಗ್ಗೆ 10.30 ಗಂಟೆಗೆ ಮಾನ್ಯ ಪೊಲೀಸ್
ಅಧೀಕ್ಷಕರು ಬೀದರ ರವರ ಆದೇಶದ ಮೇರೆಗೆ ಮಾನ್ಯ ಗೃಹ ಮಂತ್ರಿಗಳು ಕರ್ನಾಟಕ ರಾಜ್ಯ ಬೆಂಗಳೂರು ರವರು
ಗುಲ್ಬರ್ಗಾ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮಕ್ಕೆ ಭೇಟಿಗಾಗಿ ಬರುವವರಿದ್ದ ಕಾರಣ
ಬೆಂಗಾವಲು ಕರ್ತವ್ಯ ಕುರಿತು ಪ್ರಭು ಪಾಟೀಲ್ ಆರ್‌ಪಿಐ ರವರೊಂದೊಗೆ ನಾನು & ನನ್ನ ಜೋತೆ
ಸುನೀಲ್ ಎಪಿಸಿ 300 ಗಿರಿಧರ ಎಪಿಸಿ 348 ಹಾಗೂ ವಾಹನ ಚಾಲಕನಾದ ಶೇಖ್ ಫಾರೂಖ್ ಎಪಿಸಿ 344
ರವರಿಗೆ ನೇಮಿಸಲಾಗಿತ್ತು ಅದರಂತೆ ದಿನಾಂಕ 16/01/2014 ರಂದು ಬೆಳಿಗ್ಗೆ 5 ಗಂಟೆಗೆ ಬೀದರ
ಹಬ್ಸಿಕೋಟ ಪ್ರವಾಸಿ ಮಂದಿರದಿಂದ ಮಾನ್ಯ ಗೃಹ ಮಂತ್ರಿಗಳು ಕರ್ನಾಟಕ ರಾಜ್ಯ ಇವರ ಬೆಂಗಾವಲು
ಕರ್ತವ್ಯ ಮಾಡುತ್ತಾ ಖಜೂರಿ ಗ್ರಾಮದ ಶಿವಾರದಲ್ಲಿಯ ದಿ|| ಮಲ್ಲಿಕಾರ್ಜುನ ಬಂಡೆ ಪಿಎಸ್‌ಐ ರವರ
ಹೊಲದಲ್ಲಿ ಅವರ ಅಂತ್ಯಕ್ರಿಯೆ ಕುರಿತು ಇಂದು 1330 ಗಂಟೆಗೆ ಹೊದೇವು, ಅಲ್ಲಿ ಅಂತ್ಯಕ್ರಿಯೆಗೆ
ಸುಮಾರು 20000/- ಜನರು ನೆರೆದಿದ್ದರು ಅದರಲ್ಲಿಯ ಸುಮಾರು 500 ಜನರು ಅಕ್ರಮ ಕೂಟ ರಚಿಸಿಕೊಂಡು
ತಮ್ಮ ಕೈಗಳಲ್ಲಿ ಕಲ್ಲುಗಳನ್ನು ಹಾಗೂ ಮಣ್ಣಿನ ಹೆಂಟೆಗಳನ್ನು ಹಿಡಿದುಕೊಂಡು ನಮ್ಮ ಪೊಲೀಸ್
ಅಧಿಕಾರಿಗಳ ಮೇಲೆ ನಮ್ಮ ಮೇಲೆ ಹಾಗೂ ನಮ್ಮ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲು ಪ್ರಾರಂಭಿಸಿದರು,
ಅದರಲ್ಲಿಯ ಒಂದು ಕಲ್ಲು ನನ್ನ ಮುಖದ ಎಡಕೆನ್ನೆಗೆ ಹತ್ತಿ ರಕ್ತಗಾಯ ಆಗಿರುತ್ತದೆ, ಸದರಿ
ಉದ್ರಿಕ್ತ ಜನರು ಕಲ್ಲು ತೂರಾಟ ಮಾಡಿದ್ದರಿಂದ ನಮ್ಮ ವಾಹನ ಸಂಖ್ಯೆ ಕೆಎ 38 ಜಿ 352 ಟವೇರಾ
ವಾಹನದ ಮಧ್ಯದ & ಹಿಂಭಾಗದ ಗಾಜುಗಳು ಒಡೆದಿರುತ್ತವೆ, & ವಾಹನದ ಬೇರೆ ಬೇರೆ ಭಾಗಗಳಲ್ಲಿ
ಕಲ್ಲುಗಳು ಬಿದ್ದಿದರಿಂದ ಅಲ್ಲಲ್ಲಿ ಡ್ಯಾಮೇಜ ಆಗಿರುತ್ತದೆ, ಸುಮಾರು 20000 ದಿಂದ 25000 ಸಾವಿರ ರೂ ಮೌಲ್ಯದ ವಾಹನದ ಸ್ವತ್ತು ಲುಕಸಾನ
ಆಗಿರುತ್ತದೆ, ಅಲ್ಲೆ ಇದ್ದ ನಮ್ಮ ಇಲಾಖೆಯ ಇನ್ನೊಂದು ವಾಹನ ನಂ ಕೆಎ 38 ಜಿ 727 ಇನೋವಾ ಕಾರಿನ
ಮೇಲೆ ಉದ್ರಿಕ್ತ ಜನರು ಕಲ್ಲು ತೂರಾಟ ಮಾಡಿದ್ದರಿಂದ ಸದರಿ ವಾಹನದ ಬಾಡಿ ಡ್ಯಾಮೇಜ ಆಗಿದ್ದು
ಸುಮಾರು 25000 ಸಾವಿರ ರೂ ಮೌಲ್ಯದ ಲುಕಸಾನ ಆಗಿರುತ್ತದೆ, ಮತ್ತು ಕಾರ ನಂ ಕೆಎ 01 ಜಿ 5513
ನೇದ್ದು ಸಹ ಜಖಂ ಆಗಿದ್ದು ಇದರ ಅಂದಾಜು 20000 ಸಾವಿರ ರೂ ಮೌಲ್ಯದ ಲುಕಸಾನ ಆಗಿರುತ್ತದೆ, &
ಕಾರ ನಂ ಕೆಎ 01 ಜಿ 5110 ನೇದು ಸಹ ಜಖಂ ಆಗಿದ್ದು ಇದರ ಅಂದಾಜು 15000 ಸಾವಿರ ರೂ ಮೌಲ್ಯದ
ಲುಕಸಾನ ಆಗಿರುತ್ತದೆ, ನನಗೆ ಗಾಯಪಡಿಸಿ ಸರ್ಕಾರಿ ವಾಹನಗಳಿಗೆ ಜಖಂ ಮಾಡಿದ ಸದರಿಯವರ ಮೇಲೆ
ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment