ಅಶೋಕ ನಗರ ಠಾಣೆ :
ಹಲ್ಲೆ ಪ್ರಕರಣ:
ದಿನಾಂಕ 24/01/2014
ರಂದು 11 ಎಎಂಕ್ಕೆ ಶ್ರೀ.
ಗುರುರಾಜ ತಂದೆ
ಹರಿಶ್ಚಂದ್ರ ರಾವ ಬಾದನಹಟ್ಟಿ ಜೆ.ಇ ಸಾ:
ಪ್ಲಾಟ ನಂ. 15/ಎ ಭಗವತಿ ನಗರ ಗುಲಬರ್ಗಾ ರವರು
ನೀಡಿದ ಫಿರ್ಯಾದಿ ಅರ್ಜಿಯ ಸಂಕ್ಷಿಪ್ತ ಸಾರಾಂಶವೆನೆಂದರೆ ನಾನು
ನನ್ನ ಮಗಳಿಗೆ ಕೊಡುವುದಿಲ್ಲಾ ಎಂದು ಹೇಳಿದಕ್ಕೆ ವಿನಯಕುಮಾರ
ಜಿ.ಗಿರಣಿ ಇತನು
ಅದೆ ಹಗೆತನದಿಂದ ಕಳೇದ
ಒಂದು ವರ್ಷದಿಂದ 4-5 ಸಲ ನಮ್ಮ
ಮನೆಯ ಹತ್ತಿರ ಬಂದು ಮನಬಂದಂತೆ ಬೈದು ಅವಹೆಳನ ಮಾಡಿ ಮನೆಯ ಕಿಡಕಿ ಗ್ಲಾಸ ಒಡೆದಿದ್ದು, ಮತ್ತು
ಮನೆಯ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನದ ಸೀಟ
ಕವರಿಗೆ ಬೆಂಕಿ ಹಚ್ಚಿ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾನೆ. ಆದರೂ
ಸಹ ನಾವು ಮರ್ಯಾದೆಗೆ ಅಂಜಿ ಅವನ ಕಿರುಕುಳ ಸಹಿಸಿಕೊಂಡು ಇದ್ದೇವೆ. ಹೀಗಿದ್ದು ಇಂದು
ದಿನಾಂಕ 24/01/2014 ರಂದು ಬೆಳಗಿನ ಜಾವ 3-30 ಎಎಂ ಸುಮಾರಿಗೆ ನಾನು
ಮತ್ತು ನನ್ನ ಧರ್ಮ ಪತ್ನಿ ಅನಿತಾ ಇಬ್ಬರು
ಮನೆಯಲ್ಲಿ ಮಲಗಿರುವಾಗ ವಿನಯಕುಮಾರ
ಜಿ. ಗಿರಣಿ ಎನ್ನುವನು ನಮ್ಮ ಮನೆಯ
ಕಂಪೌಂಡ ಒಳಗಡೆ ಅತಿಕ್ರಮ ಪ್ರವೇಶ ಮಾಡಿ ಕಲ್ಲು ತೂರಾಟ ಮಾಡಿ ಮನೆಯ ಕಿಟಕಿ ಗ್ಲಾಸ ಒಡೆದು “ ಹೊರಗೆ
ಬರಲೇ ಬೊಸಡಿ ಮಗನೆ , ನೊಡು
ಇನ್ನು ಏನೇನು ಮಾಡುತ್ತೆನೆ, ನಿಮ್ಮ
ಕುಟುಂಬದವರಿಗೆ ನೆಮ್ಮದಿಯಿಂದ
ಇರಲು ಬಿಡುವುದಿಲ್ಲಾ” ಅಂತಾ
ಬೈಯುತ್ತಾ ಬೇದರಿಕೆ ಹಾಕುತ್ತಿರುವಾಗ ನಾನು ಪೊಲೀಸ ಠಾಣೆಗೆ ಫೋನ ಮಾಡುವಾಗ ಮೊಟರ
ಸೈಕಲ ಮೇಲೆ ಹೊಗಿರುತ್ತಾನೆ. ಇವನಿಂದ ನಮ್ಮ ಕುಟುಂಬದವರ
ನೆಮ್ಮದಿ ಹಾಳು ಆಗಿರುತ್ತದೆ. ನಾವು ಭಯದ ವಾತಾವರಣದಲ್ಲಿ ಬದಕುತ್ತಿದ್ದೆವೆ. ಆವನಿಂದ
ನಮ್ಮ ಪ್ರಾಣಕ್ಕೆ ಅಪಾಯ ಇರುತ್ತದೆ. ಈ
ಬಗ್ಗೆ ಸೂಕ್ತ ಕಾನೂನು ರೀತಿ ಕ್ರಮ ಕೈಕೊಳ್ಳಬೇಕೆಂದು ವಗೈರೆ ಅರ್ಜಿಯ ಸಾರಾಂಶದ ಮೇಲಿಂದ ಅಶೋಕ
ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಶೋಕ ನಗರ ಠಾಣೆ
ಹಲ್ಲೆ ಪ್ರಕರಣ
:
ದಿನಾಂಕ 24/01/2014 ರಂದು 5 ಪಿ.ಎಂ.ಕ್ಕೆ
ಪಿರ್ಯಾಧಿ ಶ್ರೀ ಮಾಹಾಂತಪ್ಪ ತಂದೆ ಕಾಶಿನಾಥ ದವಡೇ ಸಾ: ಸಿಐಬಿ ಕಾಲೋನಿ ಗುಲಬರ್ಗಾ ರವರು ನೀಡಿದ
ಪಿರ್ಯಾದಿಯ ಅರ್ಜಿಯ ಸಂಕ್ಷಿಪ್ತ ಸಾರಾಂಶವೆನೆಂದರೆ ದಿನಾಂಕ24/01/2014 ರಂದು
ಸಂಜೆ 4 ಗಂಟೆ ಸುಮಾರಿಗೆ ತಿಮ್ಮಾಪುರಿ
ಚೌಕದಿಂದ ಅಟೋ ರಿಕ್ಷಾ ನಂ. ಕೆ.ಎ-32/6637 ನೇದ್ದರಲ್ಲಿ
ಕುಳಿತು ಕೊಳ್ಳುವಾಗ ಆಟೋ ಚಾಲಕನು ಬಸ್ ಸ್ಟ್ಯಾಂಡಕ್ಕೆ ಹೋಗಲು 5 ರೂ
ಅಂತಾ ಹೇಳಿದನು. ಆಟೋ
ರಿಕ್ಷಾದಲ್ಲಿ ಕುಳಿತು ಬಸ್
ನಿಲ್ದಾಣಕ್ಕೆ 4-15 ಪಿ.ಎಂದ
ಸುಮಾರಿಗೆ ಬಂದು ಇಳಿದು 100 ರೂ
ನೋಟು ಕೊಟ್ಟಿದ್ದು ಅದಕ್ಕೆ ಆಟೋ ಚಾಲಕನು 7 ರೂ
ತೆಗೆದುಕೊಳ್ಳುತ್ತೇನೆ. ಅಂದನು ಅದಕ್ಕೆ 5 ರೂ
ತೆಗೆದುಕೋ ಎಂದು ಹೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ
ಕಪಾಳ ಮೇಲೆ ಕೈಯಿಂದ ಹೊಡೆದನು. ಮತ್ತು ‘’’ ಸಾಲೇ
ಮೇರೆಕೂ ಪಾಚ್ ರೂಪಾಯಿ ಲೇ ಬೋಲತೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಟ್ಟೆಯ ಮೇಲೆ
ಜೋರಾಗಿ ಹೊಡೆದನು ಮತ್ತು ಕೆಳಗಡೆ ಬಿದ್ದ ಕಲ್ಲು ತೆಗೆದುಕೊಂಡು ನನ್ನ ಎಡ ಕಪಾಳದ ಮೇಲೆ ಹೊಡೆದು
ಗುಪ್ತ ಗಾಯಗೊಳಿಸಿದನು. ಆಟೋ ಚಾಲಕನು ನಾನು ಕೊಟ್ಟ 100 ರೂ
ಹಾಗೇ ತೆಗೆದುಕೊಂಡು ಹೋಗಿ ಸಾಲೇ ತೆರೆಕೂ ನಹಿ ಛೋಡತಾ ಅಂತಾ ಅನ್ನುತ್ತಾ ಆಟೋ ತೆಗೆದುಕೊಂಡು ಓಡಿ
ಹೋದನು. ಕಾರಣ ಆಟೋ ರಿಕ್ಷಾ ನಂ. ಕೆ.ಎ-32/6637 ನೇದ್ದರ
ಚಾಲಕನ ಮೇಲೆ ಕಾನೂನಿನ ರೀತಿ ಕ್ರಮ ಕೈಕೊಳ್ಳಬೇಕೆಂತಾ ವಗೈರೆ ಪಿರ್ಯಾದಿ ಅರ್ಜಿಯ ಸಾರಾಂಶದ
ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮುಧೋಳ ಪೊಲೀಸ್ ಠಾಣೆ.
ಹಲ್ಲೆ ಪ್ರಕರಣ: ದಿನಾಂಕ: 24.01.14ರಂದು 1 ಪಿ ಎಮ್
ಕ್ಕೆ ಸರ್ಕಾರಿ ಆಸ್ಪತ್ರೆ ಸೇಡಂದಲ್ಲಿ ಫಿರ್ಯಾಧಿ ಬದ್ದಿಬಾಯಿ ಗಂಡ ಕಾಶ್ಯಾನಾಯಕ ಸಾ|| ಕೋಲಕುಂದಾ
ದೊಡ್ಡ ತಾಂಡಾ ಇವರು ತಾಂಡಾದ ಸೀಮಾಂತರದಲ್ಲಿ ಹೊಲದಲ್ಲಿರುವಾಗ ತಾಂಡಾದ ಹಣಮಂತ ತಂದೆ ತುಳಜ್ಯಾನಾಯಕ ಚಿನ್ನಾ ರಾಠೋಡ ಈತನ
ಹೊಲ ಇರುತ್ತದೆ. ಈತನಿಗು ಮತ್ತು ನಮಗು ಹೊಲದ ಬಾಂದಾರಿ ಸಂಬಂಧ ತಕರಾರು ಇದ್ದು ದಿನಾಂಕ: 23.01.14 ರಂದು
ಸಾಯಂಕಾಲ5 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿರುವ ಸಾರ್ವಜನಿಕ
ರಸ್ತೆಯಿಂದ ನಮ್ಮ ಎತ್ತುಗಳನ್ನು ಹೊಡೆದುಕೊಂಡು ಹೋಗುತ್ತಿರುವಾಗ ನಮ್ಮ ತಾಂಡಾದ ಹಣಮಂತ ತಂದೆ
ತುಳಜ್ಯಾನಾಯಕ ಚಿನ್ನರಾಠೋಡ ಈತನು ಬಂದು ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಹಳೆ ದ್ವೇಷದಿಂದ
ನನಗೆ ಕಟ್ಟಿಗೆಯಿಂದ ಎದೆಗೆ, ಬೆನ್ನ
ಮೇಲೆ ಮೊಣ ಕಾಲಿಗೆ ಹೊಡೆದು ಗುಪ್ತಗಾಯ ಮಾಡಿ ಕೊಲೆ ಮಾಡಲು ಪ್ರಯತ್ನಿಸಿ ಕೊಲೆ ಮಾಡತ್ತೇನೆ ಅಂತಾ
ಜೀವದ ಹೆದರಿಕೆ ಹಾಕಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
PÀªÀįÁ¥ÀÆgÀ
¥ÉưøÀ oÁuÉ
ಹಲ್ಲೆ ಪ್ರಕರಣ : ದಿನಾಂಕ: 24/01/2014
ರಂದು ರಾತ್ರಿ 07-45 ಗಂಟೆಗೆ
ಶ್ರೀ. ವಿಜಯಕುಮಾರ ತಂದೆ ಪಾಂಡು ರಾಠೋಡ ಸಾ: ಹರ್ಜಿ ತಾಂಡಾ ಸೊಂತ ಇವರು ಠಾಣೆಗೆ ಹಾಜರಾಗಿ ನಿನ್ನೆ
ನಮ್ಮ ತಾಂಡಾದಲ್ಲಿ ಸಂಭಂದಿಕರಾರ ಶಿವಾಜಿ ತಂದೆ ಚಂದ್ರು ರಾಠೋಡ ಈತನ ಮದುವೆ ಕಾರ್ಯಕ್ರಮ ಇದ್ದ
ಪ್ರಯುಕ್ತ ನಮ್ಮ ತಾಂಡಾದ ಜನರು ಕೂಡಿಕೊಂಡು ರಾತ್ರಿ ವೇಳೆಯಲ್ಲಿ ಮದುವೆಯ ನೀತಿ-ನಿಯಮಗಳನ್ನು
ಮಾಡುತ್ತಾ ರಾತ್ರಿ 11-00 ಗಂಟೆ ಸುಮಾರಿಗೆ ಎಲ್ಲರೂ ಕೂಡಿಕೊಂಡು ನಮ್ಮ ಲಂಬಾಣಿ ನೃತ್ಯ
ಮಾಡುತ್ತಿದ್ದು,ಈ ಮದುವೆಯ ಕಾರ್ಯಕ್ರಮದಲ್ಲಿ
ಪಾಲ್ಗೋಳ್ಳಲು ಸೊಂತ ಕೇವಳು ತಾಂಡಾ (ಡೋಲಮುಖ ತಾಂಡಾ)ದಿಂದ ಮದುವೆ ಹುಡುಗಿಯ ಕಡೆಯವರೂ ಸಹ ಬಂದು
ನಮ್ಮೊಂದಿಗೆ ನೃತ್ಯ ಮಾಡುತ್ತಿದ್ದಾಗ ಒಬ್ಬರಿಗೊಬ್ಬರೂ ತಳ್ಳಾಡಿಕೊಂಡು ಬಾಯಿ ಮಾತಿನ ತಕರಾರು
ಮಾಡಿದ್ದು ಇರುತ್ತದೆ. ಮದುವೆ
ಕಾರ್ಯಕ್ರಮದ ಅಕ್ಷತೆ ಹಾಕಿ ಊಟ ಮಾಡಿ ನಮ್ಮ ತಾಂಡಾದ ಸಮುದಾಯ ಭವನದ ಹತ್ತಿರ ನಾನು ಮತ್ತು ನಮ್ಮ
ಸಂಭಂದಿಕರಾದ ಸುರೇಶ ತಂದೆ ಲಕ್ಷ್ಮಣ ರಾಠೋಡ ಮತ್ತು ಆತನ ಮಕ್ಕಳಾದ ಗಣೇಶ ಮತ್ತು ಮೋಹನ ಕೂಡಿಕೊಂಡು
ಮಾತನಾಡುತ್ತಾ ಕುಳಿತುಕೊಂಡಿದ್ದಾಗ ಸೊಂತ ಕೇವಳು
(ಡೋಲಮುಖ ) ತಾಂಡಾದ 1.ನವರಂಗ ಚವ್ಹಾಣ 2. ಅನೀಲ ತಂದೆ ಗಣಪತಿ ಚವ್ಹಾಣ 3. ಕಿಶನ ತಂದೆ ಪ್ರಭು
ಚವ್ಹಾಣ 4. ದಿನೇಶ ತಂದೆ ತಾರು ಚವ್ಹಾಣ 5. ಪುಂಡಲೀಕ ತಂದೆ ತಾರಾಸಿಂಗ ಚವ್ಹಾಣ 6. ಸಂದೀಪ ತಂದೆ
ಪಾಂಡು ಚವ್ಹಾಣ 7. ಅರುಣ ಹೀಗೆ ಎಲ್ಲರೂ ಕೂಡಿಕೊಂಡು ನಾವು ಕುಳಿತಲ್ಲಿಗೆ ಬಂದವರೇ ನಮ್ಮ ಲಂಬಾಣಿ
ಭಾಷೆಯಲ್ಲಿ ನಿನ್ನೆ ರಾತ್ರಿ ನಾವು ಡ್ಯಾನ್ಸ್ ಮಾಡುವಾಗ ನಮಗೆ ನೀವೇ ನೂಕಿಸಿಕೊಟ್ಟು ನಮಗೆ ಅಪಮಾನ
ಮಾಡಿರುತ್ತೀರಿ ಅಂತಾ ಅವಾಚ್ಯವಾಗಿ ಬೈಯ್ಯುತ್ತಿದ್ದಾಗ ನಾವು ನಿನ್ನೆ ನಾವು ನಿಮಗೆ ನೂಕಿಸಿಕೊಟ್ಟಿರುವುದಿಲ್ಲ, ಯಾರೋ
ನೂಕಿಸಿಕೊಟ್ಟಿದ್ದಕ್ಕೆ ನಮ್ಮನ್ನೇಕೆ ಬೈಯ್ಯುತ್ತಿದ್ದೀರಿ ಅಂತಾ ಕೇಳುತ್ತಿದ್ದಾಗ ಅವರೆಲ್ಲರೂ
ಕೂಡಿಕೊಂಡು ಸುರೇಶ ರಾಠೋಡ ಮತ್ತು ಆತನ ಮಗ ಮೋಹನ ರಾಠೋಡ ಇವರುಗಳಿಗೆ ಕೈಯಿಂದ ಕಲ್ಲಿನಿಂದ ಹೊಡೆದು
ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದು, ಜಗಳ
ಬಿಡಿಸಲು ಹೋದ ನನಗೆ ನೂಕಿಸಿಕೊಟ್ಟು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ವಗೈರೆ ಫಿರ್ಯಾದಿಯ
ಹೇಳಿಕೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.
ಅಫಜಲಪೂರ ಪೊಲೀಸ್ ಠಾಣೆ
ಹಲ್ಲೆ ಪ್ರಕರಣ : ದಿನಾಂಕ 24/01/2014 ರಂದು 10.30 ಎಎಮ್ ಕ್ಕೆ
ಫಿರ್ಯಾದಿದಾರ ಶ್ರೀ ಹುಚ್ಚಪ್ಪ ತಂದೆ ಸುಕ್ಕಣ್ಣ
ಸಿಂಧೆ ಸಾ|| ಉಡಚಣ ಹಟ್ಟಿ ಇವರು ಠಾಣೆಗೆ
ಹಾಜರಾಗಿ ದು ಬೆಳಿಗ್ಗೆ ಫಿರ್ಯಾದಿದಾರ ಹಾಗೂ ಅವರ ಅಣ್ಣನ ಮಗ ಇಬ್ಬರು ಉಡಚಣ ಹಟ್ಟಿ ನೀರಿನ
ಟ್ಯಾಂಕ್ ಹತ್ತಿರ ಇದ್ದಾಗ ಆರೋಪಿತ್ರಾದ
1) ಕಿರಣ 2)ಸುರೇಶ 3) ರಮೇಶ 4) ಗುಂಡಪ್ಪ ಇವರು ಫಿರ್ಯಾದಿಗೆ ತಡೆದು ನಿಲ್ಲಿಸಿ ಅವಾಚ್ಯ
ಬೈದು ಕೈಯಿಂದ ಬಡಿಗೆ ಯಿಂದ ಹೋಡೆದು ರಕ್ತಗಾಯ ಗುಪ್ತ ಗಾಯ ಪಡಿಸಿದ ಬಗ್ಗೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಗ್ರಾಮೀಣ ಪೊಲೀಸ್ ಠಾಣೆ
:
ಪಾಲಿಕೆ. ಕೆ.ಇ.ಬಿ
ರವರ ನಿರ್ಲಕ್ಷ ಬಾಲಕನ ಸಾವು. : ದಿನಾಂಕ.
24-01-2014 ರಂದು ಶ್ರೀ.ಇಜಾಜ ತಂದೆ ಅಬ್ದುಲ ಗನಿ ಮೊಮಿನ ಸಾ; ಜುಬೇರ
ಕಾಲೂನಿ ಹಾಗರಗಾ ಕ್ರಾಸ ಇವರ ಮಗ ವಸೀ ಜುಬೇರ ಮಸೀದ ಹತ್ತಿರ ಇರುವ ಡ್ರೈನೇಜನಲ್ಲಿ
ಬಿದ್ದಿದರಿಂದ ಆತನನ್ನು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಗಳು
ವಸೀ ಇತನನ್ನು ನೋಡಿ ಮೃತ ಪಟ್ಟಿರುತ್ತಾನೆ ಅಂತಾ
ಹೇಳಲು ವಸೀ ಯ ಶವವನ್ನು ಮನೆಗೆ
ತೆಗೆದುಕೊಂಡು ಹೋಗಿ ವಿಚಾರಿಸಿದಾಗ ವಸೀ ವಯ;12
ವರ್ಷ ಇತನು ಮನೆಯಿಂದ ಕಿರಾಣಾ ಅಂಗಡಿಗೆ ಹೋಗುವಾಗ
ಡ್ರೈನೇಜ ನಾಲಿಯಲ್ಲಿ ಬಿದಿದ್ದು ಡ್ರೈನೇಜ ಸುತ್ತಾ ನಿಂತಿದ್ದ ನೀರಿನಲ್ಲಿ ಅಲ್ಲಿದ್ದ
ವಿದ್ಯುತ ಕಂಬದಿಂದ ವಿದ್ಯುತ ಇಳಿದಿದ್ದರಿಂದ, ನನ್ನ
ಮಗ ವಸೀ ಇತನಿಗೆ ವಿದ್ಯುತ್ ಶಾಖ ಬಡಿದು ಮೃತ ಪಟ್ಟಿರುತ್ತಾನೆ. ಮಹಾನಗರ ಪಾಲಿಕೆಯವರು ಡ್ರೈನೇಜ
ಕೆಲಸ ಮಾಡುವಾಗ ನಾಲಿ ನೀರು ನಿಲ್ಲದಂತೆ ಮಾಡಿದಲ್ಲಿ ಮತ್ತು ಕೆ.ಪಿ.ಟಿ.ಸಿಯಲ್. ಇಲಾಖೆಯವರು ವಿದ್ಯುತ ಕಂಬದ ಸುತ್ತಾ ನೀರು ನಿಲ್ಲದಂತೆ
ವ್ಯವಸ್ಥೆ ಮಾಡಿದಲ್ಲಿ ಈ ಘಟನೆ ಸಂಭವಿಸುತ್ತಿರಲಿಲ್ಲಾ. ಈ ಘಟನೆಯು ಮಾನ್ಯ ಆಯುಕ್ತರು ಮಹಾನಗರ ಪಾಲಿಕೆ ಗುಲಬರ್ಗಾ ಮತ್ತು ಸಹಾಯಕ ಕಾರ್ಯಾ ನಿರ್ವಾಹಕ ಅಭಿಯಂತರರು
ಕೆ.ಪಿ.ಟಿ.ಸಿಯಲ್. ಏರಿಯಾ ಇಂಚಾರ್ಜ
ಇವರುಗಳ ನಿರ್ಲಕ್ಷತನದಿಂದ ಈ ಘಟನೆ ಸಂಭವಿಸಿದ್ದು ಸದರಿಯವರ ವಿರುದ್ದ ಕಾನೂನು
ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಂತಾ ವಗೈರೆ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುಲಬರ್ಗಾ
ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮುಧೋಳ ಪೊಲೀಸ್ ಠಾಣೆ:
ಕೊಲೆ ಪ್ರಕರಣ:ಶ್ರೀ ವೀರಯ್ಯಸ್ವಾಮಿ
ತಂದೆ ಶಂಕ್ರಯ್ಯಸ್ವಾಮಿ ಸಾ|| ಬಡಗೇರಾ
(ಬಿ) ಇವರು ಠಾಣೆಗೆ ಹಾಜರಾಗಿ ತಮ್ಮ ಅಜ್ಜಿಯಾದ
ಪಾರ್ವತಮ್ಮ ಗಂಡ ಸದಾನಂದಯ್ಯ ವ|| 80 ವರ್ಷ ಇವಳು ಈಗ ಸುಮಾರು 40 ವರ್ಷಗಳ
ಹಿಂದೆ ಗಂಡ ಮಕ್ಕಳು ಹಾಗೂ ಮನೆ ಮಾರು ಬಿಟ್ಟು ಸನ್ಯಾಸತ್ವವನ್ನು ಸ್ವಿಕರಿಸಿದ್ದು ಅವಳಿಗೆ ನನ್ನ ತಂದೆಯಾದ ಶಂಕ್ರಯ್ಯ ಇವರು ಒಬ್ಬನೆ
ಮಗನಿರುತ್ತಾನೆ ಅಜ್ಜಿ ಪಾರ್ವತಮ್ಮಳು ಕೊಂತನಪಲ್ಲಿ ಸೀಮೆಯಲ್ಲಿರುವ ಗುಡ್ಡದಲ್ಲಿರುವ ಕಾರ್ಯಗಡ್ಡ
ಸಿದ್ದೇಶ್ವರ ಗುಡಿಯ ಹತ್ತಿರ ವಾಸವಾಗಿದ್ದಳು, ನಾನು ಗುಡ್ಡದಲ್ಲಿ
ವಾಸಿಸುವ ಮನೆಗೆ ವಾರದಲ್ಲಿ ಎರಡು ಮೂರು ಸಲ ಹೋಗಿ ಹಾಲು ಹಣ್ಣು ಹಂಪಲು ಇನ್ನಿತರ ವಸ್ತುಗಳನ್ನು
ಕೊಟ್ಟು ಮಾತಾಡಿ ಬರುತ್ತಿದ್ದೆನು. ಹೀಗಿರುವಾಗ ದಿನಾಂಕ: 24.01.14 ರಂದು
ನಾನು ಹಾಲು ಹಣ್ಣು ಮತ್ತು ಇನ್ನಿತರ ಸಾಮಾನುಗಳು ತೆಗೆದುಕೊಂಡು ಕಾರ್ಯಗಡ್ಡ ಗುಡ್ಡದಲ್ಲಿರುವ
ನನ್ನ ಅಜ್ಜಿಯಾದ ಪಾರ್ವತಮ್ಮ ಇವಳು ವಾಸಿಸುವ ಮನೆಗೆ ಇಂದು ಮುಂಜಾನೆ 11:30 ಗಂಟೆ
ಸುಮಾರಿಗೆ ಬಂದು ನೋಡಿದಾಗ ಮನೆಯಲ್ಲಿ ನನ್ನ ಅಜ್ಜಿ ಪಾರ್ವತಮ್ಮಳ ಕುತ್ತಿಗೆ ಭಾಗವು ಪೂರ್ತಿ
ಕತ್ತರಿಸಿ ದಂಡದಿಂದ ರುಂಡವು ಕತ್ತರಿಸಿ ಬೇರ್ಪಡಿಸಿದ್ದು, ಕುತ್ತಿಗೆ
ಬಾಗದಿಂದ ಕಾಲಿನವರೆಗೆ ಇರುವ ಬಾಗವು ಮಾತ್ರ ಮೃತದೇಹವಿತ್ತು ಇವಳ ತಲೆಯಿಂದ ಕುತ್ತಿಗೆವರೆಗೆ ಇರುವ
ಭಾಗವು ಇರುವದಿಲ್ಲ . ನನ್ನ ಅಜ್ಜಿಯಾದ ಪಾರ್ವತಮ್ಮ ಗಂಡ ಸದಾನಂದಯ್ಯ ವ||
80ವರ್ಷ ಇವಳಿಗೆ ದಿನಾಂಕ: 23.01.14 ರಂದು 5 ಪಿ ಎಮ್ ರಿಂದ
ದಿನಾಂಕ: 24.01.14 11:30 ಎ ಎಮ್
ಅವಧಿಯಲ್ಲಿ ಯಾರೊ ಆರೋಪಿತರು ಮನೆಯೊಳಗೆ ಬಂದು ಹರಿತವಾದ ಆಯುಧಗಳಿಂದ ಕುತ್ತಿಗೆಗೆ ಹೊಡೆದು
ಕತ್ತರಿಸಿ ಕೊಲೆ ಮಾಡಿ ದಂಡದಿಂದ ರುಂಡವನ್ನು ಬೇರ್ಪಡಿಸಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ
ಉದ್ದೇಶದಿಂದ ಯಾವುದೊ ಸ್ಥಳದಲ್ಲಿ ಒಯ್ದು ಹಾಕಿದ್ದು. ಅಜ್ಜಿಯಾದ ಪಾರ್ವತಮ್ಮಳಿಗೆ ಕೊಲೆ ಮಾಡಿದ
ಆರೋಪಿತರನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆ :
ಕಳವು ಪ್ರಕರಣ :ದಿನಾಂಕ: 24-01-14 ರಂದು ಶ್ರೀಮತಿ.ಮಧುಮತಿ
ಎಸ್.ಇಕ್ಕಳಕಿ ಉ:ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಹಿರೋಳಿ ತಾ:ಆಳಂದ. ಇವರು
ಠಾಣೆಗೆ ಬಂದು ದಿನಾಂಕ:23-01-14 ರ
ರಾತ್ರಿ 08:00 ಗಂಟೆಯಿಂದ ದಿ:24/01/14 ರ ಬೆಳಗಿನ 6 ಗಂಟೆಯ ಮಧ್ಯದ ಅವಧಿಯಲ್ಲಿ. ನಾವು
ಶಾಲೆಯಲ್ಲಿ ಯಾರು ಇರಲಾರದ ಸಮಯದಲ್ಲಿಯಾರೋ ಅಪರಿಚಿತ ಕಳ್ಳರು ಸರಕಾರಿ ಪ್ರೌಢಶಾಲೆ ಹಿರೋಳಿ ಶಾಲೆಯ
ಕಂಪ್ಯೂಟರ್ ಕೋಣೆಯಲ್ಲಿನ 1) H.C.L. ಕಂಪನಿಯ
2 ಎಲ್.ಸಿ.ಡಿ ಮಾನಿಟರ್ 2)H.C.L. ಕಂಪನಿಯ ಒಂದು
ಸಿ.ಪಿ.ಯು. 3) 02 ಕಂಪ್ಯೂಟರ್ ಕೀ ಬೋರ್ಡ 4) 03 ಕಂಪ್ಯೂಟರ್ Mouse.ಹೀಗೆ
ಒಟ್ಟು : 24,000=00
ರೂಪಾಯಿಗಳ ಕಂಪ್ಯೂಟರ್ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು. ಕಳುವಾದ ಕಂಪ್ಯೂಟರ್ ಸಾಮಗ್ರಿಗಳು ಪತ್ತೆ ಹಚ್ಚಿ
ಕೊಡಬೇಕು ಅಂತಾ ಕೊಟ್ಟ ಅರ್ಜಿ ಸಾರಾಂಶದ
ಮೇಲಿಂದ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಳಂದ ಪೊಲೀಸ್ ಠಾಣೆ :
ವರದಕ್ಷಿಣೆ
ಕಿರುಕುಳ ಪ್ರಕರಣ : ದಿನಾಂಕ 24/01/2014 ರಂದು 6 ಪಿಎಮ್‌ಕ್ಕೆ ಪಿರ್ಯಾದಿ ಭಾರತಾಬಾಯಿ ಗಂಡ ವಿಜಯಕುಮಾರ ಚವ್ಹಾಣ ಠಾಣೆಗೆ
ಹಾಜರಾಗಿ ತನಗೆ ದಿನಾಂಕ 26/02/2012 ರಂದು ಅಫಜಲಪೂರ ತಾಲೂಕಿನ ಚವಡಾಪೂರ ತಾಂಡಾದ ವಿಜಯಕುಮಾರ
ತಂದೆ ಪಾಂಡು ಚವ್ಹಾಣ ರವರೊಂದಿಗೆ ಗುಲ್ಬರ್ಗಾದ ನಾಜ ಫಂಕ್ಷನ ಹಾಲ ದಲ್ಲಿ ಮದುವೆ ಮಾಡಿ ಕೊಟ್ಟಿದ್ದು. ಮದುವೆ ಕಾಲದಲ್ಲಿ ನನ್ನ ಗಂಡನಿಗೆ 1 ಲಕ್ಷ
ರೂಪಾಯಿ ಹಾಗೂ 6 ತೋಲೆ ಬಂಗಾರ ವರೋಪಚಾರವಾಗಿ
ಹಾಗೂ ಇತರೆ ಗೃಹ ಉಪಯೋಗಿ ಸಾಮಾನುಗಳು ಕೊಟ್ಟಿರುತ್ತಾರೆ, ಲಗ್ನವಾದ 6 ತಿಂಗಳವರೆಗೆ ನನಗೆ ನನ್ನ
ಗಂಡ ಹಾಗೂ ನಾದನಿ ಕಾಂತುಬಾಯಿ ಇವರು ನನಗೆ ತವರು ಮನೆಯಿಂದ ಇನ್ನು ಹೆಚ್ಚಿಗೆ ಹಣ ತರಬೇಕು ಅಂತಾ
ಮಾನಸಿಕ ಹಾಗೂ ದೈಹಿಕವಾಗಿ ಪ್ರತಿ ದಿನ ಕಿರುಕುಳ ನೀಡುತ್ತಾ ನನ್ನ ಗಂಡ ಹಾಗೂ ನಾದನಿ ಬೈಯುವದು
ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿ ನನಗೆ ನನ್ನ ತವರು ಮನೆಗೆ ನನ್ನ ಗಂಡನು ಹಣ
ತರುವ ವರೆಗೂ ನನ್ನ ಹತ್ತಿರ ಬರಬೇಡ ಅಂತಾ ನನ್ನ ತವರು ಮನೆಗೆ ನನಗೆ ಬಿಟ್ಟು ನೀನು ಎಲ್ಲಿ
ಬೇಕಾದರೂ ಹೋಗು ಅಂತಾ ಹೇಳಿತ್ತಿದ್ದು. ದಿ: 02/12/2013 ರಂದು ನನ್ನ ಗಂಡ ಹಾಗೂ ನಾದನಿ
ಕಾಂತುಬಾಯಿ ಕೂಡಿ ನಾನಿದ್ದ ನಮ್ಮ ತವರು ಮನೆಗೆ ಬಂದು ವಿಚ್ಚೇದನೆ ಕೊಡು ಇಲ್ಲದಿದ್ದರೆ ಹಣ
ತೆಗೆದುಕೊಂಡು ಬಾ ಎಂದು ಜಗಳ ತೆಗೆದು ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂಧ ಬಯ್ದ ಬಗ್ಗೆ
ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment