ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಗೌಸ್ ಪಟೇಲ್ ತಂದೆ ಹುಸೇನ್ ಪಟೇಲ್ ಸಾ: ಮುಸ್ಲಿಂ ಸಂಘ ತಾಜನಗರ ಗುಲಬರ್ಗಾ ರವರ ತಮ್ಮ ಮೋಬಿನ್ ಪಟೇಲ್ ಇತನು ಕೆಲಸಕ್ಕೆ ಹೋಗುತ್ತೆನೆ.
ಅಂತಾ ಹೇಳಿ ಮನೆಯಿಂದ ಹೋದನು, ನಂತರ ಮಧ್ಯಾಹ್ನ 12:30 ಗಂಟೆಗೆ ನನ್ನ ಮೊಬೈಲಿಗೆ ನನ್ನ ತಾಯಿ
ಹುಸೇನ್ ಬೀ ಇವಳು ಫೋನ ಮಾಡಿ ತಿಳಿಸಿದ್ದೇನೆಂದರೆ, ಮೋಬೀನ್ ಪಟೇಲ್ ಗ್ಯಾರೇಜದಲ್ಲಿ ಕೆಲಸ ಮಾಡುವಾಗ
ಹೈಡ್ರೋಲಿಕ ಜಾಕ್ ಸ್ಟ್ರೀ ಜಾರಿ ಆತನ ಮೈಮೇಲೆ ಬಿದ್ದು ಗಾಯವಾಗಿರುತ್ತದೆ. ಅದಕ್ಕೆ ಆಸ್ಪತ್ರೆಗೆ
ಉಪಚಾರ ಕುರಿತು ಗ್ಯಾರೇಜ್ ಮಾಲೀಕ ನಬೀ ಇತನು ತೆಗೆದುಕೊಂಡು ಬರುತ್ತಿರುವುದಾಗಿ
ತಿಳಿಸಿರುತ್ತಾನೆ. ನಂತರ ನಾನು ನೇರವಾಗಿ ಹುಮ್ನಾಬಾದ ರೋಡ ಕಡೆಗೆ ಹೋಗುವಾಗ ಎದರುಗಡೆಯಿಂದ
ಆಟೋದಲ್ಲಿ ನನ್ನ ತಮ್ಮನಿಗೆ ತೆಗೆದುಕೊಂಡು ಬರುತ್ತಿದ್ದುದ್ದನ್ನು ನೋಡಿ ಅದರ ಹಿಂದೆಯೆ ಬಸವೇಶ್ವರ
ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಉಪಚಾರ ನೀಡದ ಕಾರಣ ಗುಲ್ಬರ್ಗಾ ಜಿಲ್ಲಾ
ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ನನ್ನ
ತಮ್ಮನಿಗೆ ನೋಡಿ ಈಗಾಗಲೆ ಮೃತ ಪಟ್ಟಿರುವುದಾಗಿ
ತಿಳಿಸಿದರು. ಅಲ್ಲಿಯೇ ಹಾಜರಿದ್ದ ನಬೀಸಾಬ ಇವರಿಗೆ ವಿಚಾರಿಸಲಾಗಿ ಅವನು ತಿಳಿಸಿದ್ದೆನೆಂದೆರೆ
ಮಧ್ಯಾಹ್ನ 12-15 ಗಂಟೆ ಸುಮಾರಿಗೆ ಗುಲ್ಬರ್ಗಾ ಹುಮನಾಬಾದ ಹತ್ತಿರ ಇರುವ ನಭೀ ಗ್ಯಾರೇಜ್ ನಲ್ಲಿ
ಟಿಪ್ಪರ ನಂ ಕೆಎ 38-4891ನೇದ್ದರ ಹೈಡ್ರೋಲಿಕ್ ಚಾಕಾವನ್ನು ರಿಪೇರಿ ಮಾಡುವ ಕಾಲಕ್ಕೆ ಸದರಿ
ಟಿಪ್ಪರ ಚೆಸ್ಸಿಯ ಮೇಲೆ ನಿಂತು ನಿಮ್ಮ ತಮ್ಮ ಮೋಬಿನ ಪಟೇಲ್ ಇತನು ಟಿಪ್ಪರ ಹೈಡ್ರೋಲಿಕ್ ಜಾಕ್
ರಿಪೇರಿ ಮಾಡುವಾಗ ಸದರಿ ಟಿಪ್ಪರ ಚಾಲಕನು ಟಿಪ್ಪರ ಚಾಲು ಮಾಡಿ ಟಿಪ್ಪರನ್ನು ಹಿಂದಕ್ಕೆ ಮುಂದಕ್ಕೆ
ತೆಗೆದುಕೊಳ್ಳುವಾಗ ಅಲಕ್ಷತನದಿಂದ ಒಮ್ಮೇಲೇ ಟಿಪ್ಪರ ಹೈಡ್ರೋಲಿಕ್ ಜಾಕ್ ಕೆಳಗೆ ಇಳಿಸಿದಾಗ ಕೆಳಗೆ
ಕೆಲಸ ಮಾಡುತ್ತಿದ್ದ ನಿಮ್ಮ ತಮ್ಮನ ಮೇಲೆ ಟಿಪ್ಪರನ ಬಾಡಿ ಆತನ ಮೇಲೆ ಬಿದ್ದಿದ್ದರಿಂದ ಅವನ ತಲೆಗೆ
ಗುಪ್ತ ಗಾಯವಾಗಿ ಎಡಕಿವಿಯಿಂದ ರಕ್ತ ಸೋರಿದ್ದು ಮೂಗಿನಿಂದ ರಕ್ತಸ್ರಾವವಾಗಿದ್ದು ಎರಡು ಎದೆಗೆ
ಹೊಟ್ಟೆಗೆ ಭಾರಿ ಗುಪ್ತಗಾಯವಾಗಿ ಕಂದುಗಟ್ಟಿದಂತಾಗಿ ಬೇಹೋಶ ಆಗಿದ್ದನ್ನು ಸದರಿ ಟಿಪ್ಪರನ ಚಾಲಕನು
ಘಟನೆ ಸಂಭವಿಸಿದ ನಂತರ ಅಲ್ಲಿಂದ ಓಡಿ ಹೋಗಿರುತ್ತಾನೆ ತಿಳಿಸಿದ್ದು ಸದರಿ ಟ್ಟಿಪ್ಪರ ಚಾಲಕನ ವಿರುದ್ಧ ಕ್ರಮ
ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ವಿಜಯಕುಮಾರ ತಂ ಶರಣಪ್ಪ ಪಾಟೀಲ ಸಾ|| ಕಿಣ್ಣಿ ಸಡಕ ಹಾ||ವ|| ರೇವಣಸಿದ್ದೇಶ್ವರ ಕಾಲೋನಿ ಗುಲಬರ್ಗಾ ದಿನಾಂಕ 26-01-2014 ರಂದು ವೀರಭದ್ರೇಶ್ವರ ಜಾತ್ರಿ ಕುರಿತು ಹುಮನಾಬಾದಕ್ಕೆ
ಹೋಗಿದ್ದು ವಾಪಸ ತನ್ನೂರಾದ ಕಿಣ್ಣಿ ಸಡಕಿಗೆ ಬಂದು ಅಲ್ಲಿಂದ ತನ್ನ ಮೋಟಾರ ಸೈಕಲ ನಂ ಬಜಾಜ
ಪ್ಲಾಟೀನ ಕೆ,ಎ, 32 ಎಸ್, 3101 ನೇದ್ದು ತೆಗೆದುಕೊಂಡು 4.30 ಪಿ,ಎಮ್,ಕ್ಕೆ ಊರಿಂದ ಹೊರಟು ಗುಲಬರ್ಗಾಕ್ಕೆ ಬರುವಾಗ
ಸಿದ್ದಭಾರತಿ ಶಾಲೆಯ ಹತ್ತಿರ 5.30 ಪಿ,ಎಮ್,ಕ್ಕೆ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಗುಲಬರ್ಗಾ
ಕಡೆಯಿಂದ ಒಬ್ಬ ಟಂಟಂ ಗೂಡ್ಸ ವಾಹನ ನಂ ಕೆ,ಎ, 32 ಬಿ,5578 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಬಂದವನೆ ಪಿರ್ಯಾದಿ ಮೋಟಾರ
ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಮೋಟಾರ ಸೈಕಲ ಸಮೇತಾ ಕೆಳಗೆ ಬಿದ್ದಾಗ ತನ್ನ ಎರಡು ಕಾಲುಗಳಿಗೆ ಮತ್ತು ಕೈಗಳಿಗೆ ಭಾರಿ
ರಕ್ತಗಾಯಗಳಾಗಿ ಕಾಲು ಹಾಗೂ ಕೈಗಳು ಮುರಿದಂತೆ ಆಗಿರುತ್ತವೆ ಅಪಘಾತದ ನಂತರ ಚಾಲಕ ಓಡಿ ಹೋಗಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ವಿಜಯಕುಮಾರ ತಂದೆ ಯಲ್ಲಪ್ಪಾ ದಿವೇಕರ, ಸಾಃ
ಮಾಲಗತ್ತಿ ಕ್ರಾಸ್ ಹಾಗರಗಾ, ಗುಲಬರ್ಗಾ ರವರು ದಿನಾಂಕ 26-01-2014 ರಂದು 07-30 ಪಿ.ಎಮ್ ಕ್ಕೆ ಗಣೇಶ ಮಂದರ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ
ಯಾವುದೊ ಒಂದು ಅಟೋ ರಿಕ್ಷಾ ಚಾಲಕನು ತನ್ನ ಅಟೋರಿಕ್ಷಾವನ್ನು ಸರಾಫ ಬಜಾರ ಕಡೆಯಿಂದ ಅತಿವೇಗ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ
ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಲಕ್ಷ್ಮಿಕಾಂತ ತಂದೆ ಹಣಮಂತ್ರಾಯ ಬಿರಾದಾರ ಸಾಃ ಶಹಾಬಜಾರ
ಗುಲಬರ್ಗಾ ರವರು ದಿನಾಂಕ 01.09.2013 ರಂದು 8.30 ಪಿ.ಎಂಕ್ಕೆ ಸೈಯ್ಯದ ಚಿಂಚೋಳಿ
ಕ್ರಾಸದ ಹತ್ತಿರು ಇರುವ ಬಾಲಾಜಿ ಹೊಟೇಲ ಹತ್ತಿರ ತನ್ನ ಮೊಟಾರ ಸೈಕಲ ನಿಲ್ಲಿಸಿ ಹೊಟೇಲದಲ್ಲಿ ಚಹಾ ಕುಡಿದು ಮರಳಿ 9 ಪಿ.ಎಂಕ್ಕೆ ಬಂದು ನೋಡಲಾಗಿ
ತನ್ನ ಮೊಟಾರ ಸೈಕಲ ನಂ. ಕೆಎ-32-ಇಇ-0740 ಅಃಕಿಃ 30000=00 ರೂ. ನೇದ್ದು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೆ
ಎಲ್ಲಾ ಕಡೆಗೆ ಹುಡುಕಾಡಿದರು ಪತ್ತೆ ಆಗಿರುವದಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಾಹಂತಪ್ಪ ತಂದೆ ಗಾಮಣ್ಣ ಕುಂಬಾರ ಸಾ|| ಕೆರಕನಹಳ್ಳಿ ಇವರಿಗೆ ಮಾರುತಿ
ತಂದೆ ಮಲ್ಲಪ್ಪ ಜಮಾದಾರ ಇತನು ವಿನಾ ಕಾರಣ ಲಕ್ಷ್ಮಿ ಗುಡಿ ಹತ್ತಿರ ತಡೆದು ನಿಲ್ಲಿಸಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ
ಬೈದು ರಾಡಿನಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment