ಕಳವು ಪ್ರಕರಣಗಳು :
ಆಳಂದ
ಠಾಣೆ : ಶ್ರೀಮತಿ ಲಕ್ಷ್ಮೀಬಾಯಿ
ಗಂಡ ನಿವೃತ್ತಿ ಸಿಂಧೆ ಸಾ : ಆಳಂಗಾ
ತಾ : ಆಳಂದ ರವರು ದಿನಾಂಕ 29-01-2014 ರಂದು ಬೆಳಗಿನ ಜಾವ
ಎಂದಿನಂತೆ 6 ಗಂಟೆಗೆ ಎದ್ದು ಮನೆಯ ಅಂಗಳದ ಕಸಗುಡಿಸಿ ಮಗನಾದ ದಯಾನಂದನಿಗೆ ಅಡುಗೆ ಮಾಡಿ ಕಟ್ಟಿ
ಕಳುಹಿಸಿ ನಂತರ ನಾನು ನನ್ನ 1. ಬೋರಮಾಳ ಸರ ಬಂಗಾರದ 7 ಗ್ರಾಂ ಅಂ ಕಿ 3000 ರೂಪಾಯಿ ಹಾಗೂ 2.
ಅಷ್ಟಪಲ್ ಮಣಿ 6 ಗ್ರಾಂ ಬಂಗಾರದು ಅಂ ಕಿ 2500 ರೂಪಾಯಿ 3. ತಾಳೀಯಲ್ಲಿನ 2 ಗುಂಡು 2 ಗ್ರಾಂ ಅಂ
ಕಿ 1000 ರೂಪಾಯಿ ಹಾಗೂ ನಗದು 4. ಹಣ 18000 ಸಾವಿರ ರೂಪಾಯಿ ಹೀಗೆ ಒಟ್ಟು 24500 ರೂಪಾಯಿ ಎಣಿಸಿ
ಮನೆಯ ಅಲಮಾರಿಯಲ್ಲಿಟ್ಟು ಅಲಮಾರಿಗೆ ಕೀಲಿ ಇರದ ಕಾರಣ ಮನೆಯ ಬಾಗಿಲಿನ ಕೊಂಡಿ ಹಾಕಿ ಅದಕ್ಕೆ ಕೀಲಿ
ಹಾಕಿ ಮನೆಯ ಮುಖ್ಯ ದ್ವಾರಕ್ಕೆ ಕೀಲಿ ಹಾಕಿ ನನ್ನ ಸೊಸೆಯು ಬರುವ ದಾರಿ ನೋಡುತ್ತಾ ಹೊರಗಡೆ
ಕುಳಿತಿದ್ದೆ ಬರದೆ ಇದ್ದಾಗ ಬೆಳಿಗ್ಗೆ ಸುಮಾರು 11 ಗಂಟೆಗೆ ನನಗೆ ಸೇರಿದ ನಮ್ಮ ಸ್ವಂತ ಹೊಲಕ್ಕೆ
ಹೋಗಿದೆ, ನಂತರ ಮಧ್ಯಾಹ್ನ 3 ಗಂಟೆಗೆ ನಮ್ಮ ಸೊಸೆಯಾದ ಶಿವಾಂಗ್ನಿ
ಮನೆಗೆ ಬಂದು ಬಾಗಿಲು ಬಡಿದಾಗ ಬಾಗಿಲು ತೆರೆಯದೆ ಇದ್ದಾಗ ನಮ್ಮೂರಿನ ಒಬ್ಬ ಹುಡುಗನಿಗೆ ಕರೆಯಿಸಿ
ಮನೆಯ ಕಂಪೌಂಡಿನ ಒಳಗೆ ಹೋಗಿ ಒಳಗಿನ ಕೊಂಡಿ ತೆಗೆದು ನೋಡಲಾಗಿ ಮನೆಗೆ ಹಾಕಿದ ಮತ್ತೊಂದು ಮನೆಯ
ಬಾಗಿಲು ಒಂದು ತೆರೆದಿದ್ದು, ಇನ್ನೊಂದು ಬಾಗಿಲು ಕೊಂಡಿ ಹಾಗೂ ಕೀಲಿ ಹಾಗೆ
ಇದ್ದುದನ್ನು ನೋಡಿ ಗಾಬರಿಯಾಗಿ ನನ್ನ ಸೊಸೆಯು ಮೋಬಾಯಿಲನಿಂದ ಕರೆ ಮಾಡಿದ ಮೇರೆಗೆ ಬಂದು
ನಾವೆಲ್ಲರೂ ಒಳಗಡೆ ಹೋಗಿ ನೋಡಲಾಗಿ ಸದರಿ ಅಲಮಾರಿಯು ತೆರೆದಿದ್ದು ಅಲಮಾರಿಯಲ್ಲಿದ್ದ ಬಂಗಾರದ
ಆಭರಣಗಳನ್ನು ಮತ್ತು ನಗದು ಹಣ ಹೀಗೆ ಒಟ್ಟು 24500 ರೂಪಾಯಿ ದಿನಾಂಕ 29-01-2014 ರ ಬೆಳಗಿನ 11
ಎಎಮ್‌ದಿಂದ ಮಧ್ಯಾಹ್ನ 3 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಪೂರ
ಠಾಣೆ : ಶ್ರೀ.ಶಂಕರ
ತಂದೆ ಜಟ್ಟೆಪ್ಪ ಸಂಕಾ ಗುಲಬರ್ಗಾ
ರವರು ದಿನಾಂಕ: 30/01/2014 ರಂದು 1230 ಗಂಟೆಯಿಂದ 1420 ಗಂಟೆಯ
ನಡುವಿನ ವೇಳೆಯಲ್ಲಿ ಯಾರೋ ಕಳ್ಳರು ಜಿಲ್ಲಾ ಸರಕಾರಿ ಆಸ್ಪತ್ರೆಯ ಹತ್ತಿರ ಇರುವ ನರ್ಸ ಕ್ವಾಟರ್ಸ್
ಈ-ಬ್ಲಾಕ ನಂ:1 ಗುಲಬರ್ಗಾ ನೇದ್ದರ ಬಾಗಿಲ ಕೀಲಿ ತೆರೆದು ಹಾಗೂ
ಒಳಗಡೆ ಅಲಮಾರಿ ಕೀಲಿಗಳನ್ನು ಸಹ ತೆರೆದು ಒಳಗಿನಿಂದ
1. 2 ತೋಲಿ ಬಂಗಾರದ ಲಾಕೇಟ 2. ನಗದು
ಹಣ 10,000/-
ಹೀಗೆ ಒಟ್ಟು 70,000/-
ಬೆಲೆಬಾಳುವ ಮಾಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ
ಠಾಣೆ : ಶ್ರೀಮತಿ ವಿದ್ಯಾಶ್ರೀ
ಗಂಡ ರಾಹುಲ ದೊಡ್ಡಮನಿ ಸಾ;ಕಾಂತಾ ಕಾಲನಿ ಗುಲಬರ್ಗಾ
ಇವರನ್ನು ದಿನಾಂಕ;06.09.2013 ರಂದು (ನಾವು ಪ್ರೀತಿಸಿ) ಹಿರಿಯರ
ಅನುಮತಿ ಪಡೆದು ಸಂಪ್ರದಾಯದಂತೆ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು, ಮದುವೆಯಲ್ಲಿ ವರದಕ್ಷಿಣೆಯಾಗಿ 1.50.000/- ರೂಪಾಯಿ 3 ವರೆ ತೊಲೆ ಬಂಗಾರ ಕೊಡುವಂತೆ ಮಾತನಾಡಿದ್ದು ಅದರ
ಪ್ರಕಾರ ಮದುವೆಯಲ್ಲಿ 51.000/-ರೂ 3 ವರೆ ತೊಲೆ
ಬಂಗಾರ ಮತ್ತು ಸುಮಾರು 1 ಲಕ್ಷ ರೂಪಾಯಿ ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು ಇರುತ್ತದೆ.
ಮದುವೆಯಾದ ನಂತರ ನನ್ನ ಗಂಡ ರಾಹುಲ ಅತ್ತೆ ಶಾಂತಾಬಾಯಿ ಮಾವ ಹಸನಪ್ಪ ಮತ್ತು ಮಾವನ ತಮ್ಮನಾದ
ಸೂರ್ಯಕಾಂತ ಇವರು ನನಗೆ. ಉಳಿದ ಇನ್ನು 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಮನೆಯಿಂದ
ಹೊರಗೆ ಬರದಂತೆ ಹೊಡೆಯುವುದು ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಮಾಡುತ್ತಿದ್ದರು. ನೀನು ಇನ್ನು 1
ಲಕ್ಷ ರೂಪಾಯಿ ಹಣ ತವರು ಮನೆಯಿಂದ ತರದೆ ಇದ್ದರೆ ನಿನ್ನ ವಿದ್ಯಾಭ್ಯಾಸಕ್ಕೆ ಸಂಬಂದಪಟ್ಟ
ದಾಖಲಾತಿಗಳು ಸುಟ್ಟು ಹಾಕುತ್ತೇವೆ ಅಂತಾ ಹೆದರುಸುತ್ತಿದ್ದರು. ದಿನಾಂಕ 17.12.2013 ರಂದು 11
ಗಂಟೆಗೆ ಮನೆಯಲ್ಲಿ ನನ್ನ ಗಂಡ ಅತ್ತೆ ಮಾವ ಮತ್ತು ಮಾವನ ತಮ್ಮ ಎಲ್ಲರೂ ಕೂಡಿ ಇವರ್ಯಾರು ನನ್ನ
ಸಾವಿಗೆ ಕಾರಣ ಇಲ್ಲವೆಂದು ಬರೆದುಕೊಡು ಎಂದು ಹೊಡೆಬಡೆ ಮಾಡಿ 3.4 ದಿವಸ ನನಗೆ ಊಟ ಕೊಡದಂತೆ
ಮನೆಯಲ್ಲಿಯೇ ಇಟ್ಟು ಕೈಮೇಲೆ ಕಡಚಿಯಿಂದ ನನ್ನ ಅತ್ತೆ ಬರೆ
ಹಾಕಿರುತ್ತಾಳೆ. ಇವಳು ಸತ್ತರೆ ನಮಗೆ ಇನ್ನು ಹೆಚ್ಚಿನ ವರದಕ್ಷಿಣೆ ಕೊಟ್ಟು ಮದುವೆ
ಮಾಡುವವರಿದ್ದಾರೆ ಎಂದು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು.
ಮದುವೆಯಾದಾಗಿನಿಂದಲೂ ತವರು ಮನೆಯಿಂದ 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಯಾಲಯ ನಿರ್ದೇಶಿತ ಪ್ರಕರಣ :
ಫರತಾಬಾದ
ಠಾಣೆ : ದಿನಾಂಕ:
30-01-2014 ರಂದು ಬೆಳಗ್ಗೆ 8-30 ಗಂಟೆಗೆ ಫರಹತಾಬಾದ ಪೊಲೀಸ್ ಠಾಣೆಯ ಕೊರ್ಟ
ನಿರ್ವಹಿಸುತ್ತಿರುವ ಶ್ರೀ ಗಿರಿಮಲ್ಲಪ್ಪಾ ಸಿಪಿಸಿ 1254 ರವರು ಮಾನ್ಯ 2 ನೇ ಹೆಚ್ಚುವರಿ ಜಿವಿಲ್
ಜಡ್ಜ & ಜೆ.ಎಮ್.ಎಫ್.ಸಿ
ನ್ಯಾಯಾಲಯ ಗುಲಬರ್ಗಾ ರವರ ಪತ್ರ ನಂ: 513/13 ದಿನಾಂಕ: 18/1/2014 ನೇದ್ದರ ಖಾಸಗಿ ದೂರನ್ನು ಠಾಣೆಗೆ
ತಂದು ಹಾಜರ ಪಡಿಸಿದ್ದು, ಸದರಿ
ಪತ್ರವನ್ನು ಪರೀಶಿಲಿಸಲಾಗಿ ಅರ್ಜಿದಾರರಾದ ಶಿವಾನಂದ ತಂದೆ ರೇವಣಸಿದ್ದಪ್ಪಾ ಹಾಗರಗಿ ವಯ: 45
ವರ್ಷ ಸಾ: ಮೇಳಕುಂದಾ(ಕೆ) ತಾ:ಗುಲಬರ್ಗಾ ಹಾ:ವ: ಜಯನಗರ ಸೇಡಂ ರೋಡ ಗುಲಬರ್ಗಾ ಇವರು ಮಾನ್ಯ
ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ಅರ್ಜಿಯ ಸಾರಾಂಶವೆನೆಂದರೆ, ಮೇಳಕುಂದಾ(ಕೆ) ಗ್ರಾಮದಲ್ಲಿ ತನ್ನ ಹೆಸರಿನಲ್ಲಿ ಇರುವ ಹೊಲ ಸರ್ವೆ
ನಂ: 1 ಎಕರೆ 5 ಗುಂಟೆ ಮತ್ತು 1 ಎಕರೆ 35 ಗುಂಟೆ ಜಮೀನಿನಲ್ಲಿ 9 ಗುಂಟೆಯಲ್ಲಿ ಬಾವಿ ಇದ್ದು
ಸದರಿ ಬಾವಿ ಸಮಪಾಲನಲ್ಲಿ ಇರುತ್ತದೆ ಅಂತಾ ಮಾನ್ಯ ಸಹಾಯಕ ಆಯುಕ್ತರು ಗುಲಬರ್ಗಾ ರವರು ದಿನಾಂಕ: 8/10/2013ರಂದು ಆದೇಶ ಮಾಡಿದ್ದು ಇರುತ್ತದೆ.
ಅದರಂತೆ ಸಮಪಾಲಿನಲ್ಲಿ ಇದ್ದ ಬಾವಿ ಕೂಡಿಸಿದ ವಿದ್ಯುತ್ ಮೊಟಾರ, ಕೇಬಲ್ ವಾಯರ್,ಪೈಪಗಳು
ಮತ್ತು ಸ್ಟಾಟರ ಗಳನ್ನು ದಿನಾಂಕ: 6/12/2013 ರಂದು 4-00 ಪಿಎಮ್ ಸುಮಾರಿಗೆ ಅರ್ಜಿಯಲ್ಲಿ ನಮೂದಿಸಿ ಆರೋಪಿತರು
ಹಾಳು ಮಾಡಿರುತ್ತಾರೆ. ಅದರ ಅ.ಕಿ. 75,000=00 ರೂ. ಗಳು ಆಗುತ್ತದೆ ಇದರಿಂದ ನನ್ನ ಹೊಲದ
ವ್ಯವಸಾಯದ ಬೆಳೆ ಹಾಳು ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ದೇವಾನಂದ ತಂದೆ ಅರ್ಜುನ ರುಕ್ಕನೂರ ಸಾ: ದುತ್ತರಗಾಂವ ರವರು ತಮ್ಮ ಹೊಲದಲ್ಲಿನ ಜೋಳದ
ತೆನೆ ಕಿತ್ತಿದ್ದರಿಂದ ಗಲಾಟೆಗಳಾಗಿ ಅದೆ ಒಂದು ವೈಷ್ಯಮ್ಯ ದಿಂದ ಮಾಹಾಂತಪ್ಪ ತಂದೆ ರಾಮಚಂದ್ರ
ರುಕ್ಕನೂರ ಸಂಗಡ 3 ಜನರು ಸಾ: ಎಲ್ಲರೂ ದುತ್ತರಗಾಂವ
ತಾ: ಆಳಂದ ರವರು ಕುಡಿಕೊಂಡು ದಿನಾಂಕ 30-01-2014 ರಂದು
ಬೆಳಿಗ್ಗೆ 9-30 ಗಂಟೆಗೆ
ಗ್ರಾಮದ ಭೀಮಶಾ ರಾಜೋಳ ಇವರ ಹೋಟೆಲ ಮುಂದೆ ನಾನು
ಹಾಗೂ ನನ್ನ ತಂದೆ ನಿಂತಾಗ ಸದರಿ ಆರೋಪಿತರೆಲ್ಲರೂ ಕೈಯಿಂದ ತಡೆದು ಅವಾಚ್ಯ ಶಬ್ದಗಲಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment