ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 02-01-2014 ರಂದು 08-30 ಪಿ.ಎಮ್ ಕ್ಕೆ ದತ್ತಾತ್ರಾಯ ತಂದೆ ಶರಣಪ್ಪಾ ಹೊನಗುಂಟಿ, ಸಾಃ ಗಂಗಾ ನಗರ ಗುಲಬರ್ಗಾ ರವರು ಮತ್ತು ತನ್ನ ಗೆಳೆಯ ಮಹಾದೇವ ಇಬ್ಬರು ಕೂಡಿ ಮೋಟಾರು ಸೈಕಲ ನಂ.
ಕೆ.ಎ 32 ಕೆ 4636 ನೇದ್ದರ ಮೇಲೆ ಶಹಾಬಜಾರ ನಾಕಾ ರೋಡಿಗೆ ಇರುವ ಖರ್ಗೆ ಕಾಲೇಜ ಹತ್ತಿರ
ಹೋಗುತ್ತಿದ್ದಾಗ ಅಟೋರಿಕ್ಷಾ ನಂ. ಕೆ.ಎ 32 ಎ 2805 ನೇದ್ದರ ಚಾಲಕನು ತನ್ನ ಅಟೋರಿಕ್ಷಾ ಪ್ರಕಾಶ
ಟಾಕೀಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ
ಚಲಾಯಿಸುತ್ತಿದ್ದ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ
ಅಟೋರಿಕ್ಷಾ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ಪಾದಕ್ಕೆ ಮತ್ತು ಕಪಗಂಡಿ ಕೆಳಗಡೆ
ಬಲಗೈ ಮೊಳಕೈ ಮತ್ತು ಬೆರಳುಗಳಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಆಸೀಫ ರಹೆಮಾನ ತಂದೆ ರುಕ್ನೊದ್ದಿನ ಇವರು ಹುಟ್ಟಿನಿಂದಲೆ
ಮೂಕನಾಗಿರುತ್ತಾನೆ ಮಾತನಾಡಲಿಕೆ ಬರುವದಿಲ್ಲಾ ಅಂತಾ ಗೊತ್ತಾಗಿ ಅವರ ಹತ್ತಿರವಿದ ಅವರ ತಾಯಿ
ಖುರ್ಷಿದ ಬಾನು ಗಂಡ ರುಕ್ನೊದಿನ ಇವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದರ ಸಾರಾಂಶವೆನೆಂದರೆ.
ದಿನಾಂಕ 03-01-2014 ರಂದು ಬೆಳಿಗ್ಗೆ 9-30 ಗಂಟೆಗೆ ಫಿರ್ಯಾದಿ ಮಗನಾದ ಆಸೀಫ ರಹೆಮಾನ ಇತನು
ತನ್ನ ಮೋಟಾರ ಸೈಕಲ ನಂಬರ ಕೆಎ-33 ಹೆಚ್-4738 ನೇದ್ದನ್ನು ರೇಲ್ವೆ ಸ್ಟೇಶನ ಕಡೆಯಿಂದ ಐವಾನ ಈ
ಷಾಯಿ ರೋಡ ಕಡೆಗೆ ತಮ್ಮ ಕಾಲೇಜಕ್ಕೆ ಹೋಗುತ್ತಿದ್ದಾಗ ಹೊಸ ಐವಾನ ಈ ಷಾಯಿ ಎದುರು ರೋಡಿನ ಮೇಲೆ
ಸ್ಟೇಶನ ರೋಡ ಕಡೆಯಿಂದ ಲಾರಿ ನಂಬರ ಎಮ್.ಹೆಚ್.-15 ಬಿಜೆ-3645 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ನನ್ನ ಮಗ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ
ಅಪಘಾತ ಮಾಡಿ ಗಾಯಗೊಳಿಸಿ ಲಾರಿ ಅಲ್ಲೆ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ತಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಬಸಮ್ಮ ಗಂಡ ಬಸವರಾಜ
ಸಾಃ ಎಂ.ಬಿ ನಗರ ಗುಲಬರ್ಗಾ ರವರು ದಿನಾಂಕ 03-01-2014 ರಂದು ಮುಂಜಾನೆ 09:00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ
ಶ್ರೀದೇವಿ, ನಾಗಮ್ಮ ಇವರು ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಎಲ್ಲಾ ಮಂದಿ ಮುಂದ ಬಿ.ಸಿ ಹಣ ಕೇಳಿ ನನ್ನ ಮರ್ಯಾದೆ
ತೆಗೆದಿದಿ ಅಂತಾ ಚಿರುಡುತ್ತಿದ್ದಾಗ ಮನೆಯ ಹೊರಗೆ ಬಂದು ಏಕೆ ಅಂತಾ ಕೇಳುತ್ತಿರುವಾಗ ಶ್ರೀದೇವಿ
ಇವಳು ನನ್ನನ್ನು ತಡೆದು ನಿಲ್ಲಿ ನನ್ನ ತಲೆಯ ಕೂದಲನ್ನು ಹಿಡಿದು ಜಗ್ಗಿ ನನ್ನ ಮುಖದ ಮೇಲೆ
ಕೈಯಿಂದ ಹೊಡೆದು ದು:ಖಾಪತಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ತಾ
ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment