ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಫಿರೋಜ ತಂ ಮಸ್ತಾನಸಾಬ ಲದಾಫ ಸಾ|| ಕುರಿಕೋಟ ರವರು ದಿನಾಂಕ 05-01-2014 ರಂದು ತಮ್ಮ ಪಂಚರ ಅಂಗಡಿಯಲ್ಲಿ
ಕೆಲಸ ಮಾಡುತ್ತಿದ್ದು ಬಾಲಪ್ಪ ಕೂಡಾ ಆತನ ಹೋಟಲದಲ್ಲಿ ಇದ್ದ ಮದ್ಯಾನ 3.45 ಪಿ,ಎಮ್,ಕ್ಕೆ ನಾವು ನಮ್ಮ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದಾಗ
ಅದೆ ವೇಳೆಗೆ ಕಮಲಾಪೂರ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ವಶದಲ್ಲಿದ್ದ ಕಾರನ್ನು ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನೇರವಾಗಿ ನಮ್ಮ ಪಂಚರ ಅಂಗಡಿ ಮತ್ತು ಹೋಟಲದಲ್ಲಿ ನುಗ್ಗಿಸಿ
ಅಪಘಾತ ಪಡಿಸಿದ್ದರಿಂದ ಹೋಟಲ ಮತ್ತು ಪಂಚರ ಅಂಗಡಿ ಬಿದ್ದು ಹೋಗಿದ್ದು ತನಗೆ ಎದೆಗೆ ಮತ್ತು
ಎಡಬುಜಕ್ಕೆ ಬಲಗಾಲಿಗೆ ಭಾರಿ ಒಳಪೆಟ್ಟು ಆಗಿರುತ್ತದೆ ಬಾಲಪ್ಪನಿಗೆ ನೋಡಲಾಗಿ ಹಣೆಯ ಮೇಲೆ ,ಎಡಗೈ,
ಎಡಗಾಲಿಗೆ ಪಾದದ ಹತ್ತಿರ
ರಕ್ತಗಾಯ ಗಳಾಗಿದ್ದು ಎದೆ ಮತ್ತು ಹೊಟ್ಟೆಗೆ ಭಾರಿ ಒಳಪೆಟ್ಟಾ ಗಿದ್ದು ನಂತರ
ಕಾರಿನಲ್ಲಿದ್ದವರಿಗೆ ನೋಡಲಾಗಿ ಒಬ್ಬ ಹೆಣ್ಣುಮಗಳಿಗೆ ಹಣೆಯ ಮೇಲೆ ಬಾರಿ ರಕ್ತಗಾಯವಾಗಿ ರಕ್ತ
ಸೊರುತ್ತಿತ್ತು ಕಾರ ಚಾಲಕ ಹಾಗೂ ಉಳಿದ ಇನ್ನೂ ಇಬ್ಬರಿಗೆ ಯಾವುದೆ ಗಾಯಗಳಾಗಿರುವುದಿಲ್ಲಾ ಕಾರ ನಂ
ನೋಡಲಾಗಿ ಕೆ,ಎ, 39 ಎಮ್, 1610 ಪೋರ್ಡಪೀಗೋ ಕಂಪನಿಯ ಕಾರು ಇದ್ದು ಚಾಲಕನ ಹೆಸರು
ತಿಳಿದುಕೊಳ್ಳಲಾಗಿ ಆತ ತನ್ನ ಹೆಸರು ಶಿವಸಾಗರ ತಂ ಶಂಕ್ರೆಪ್ಪ ಮಳಶೇಟ್ಟಿ ಸಾ|| ಹುಮನಾಬಾದ ಅಂತಾ ತಿಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಾಹಾಂಘಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ
02-01-14 ರಂದು ಸಂಜೆ 6-00 ಗಂಟೆಗೆ ಆರೋಪಿತರಾದ
1. ಹುಸೇನ ತಂದೆ ಮಹೆಬೂಬಸಾಬ ಶೇಕ 2. ಆಶ್ಮತ ಬೀ ಗಂಡ ಸಿದ್ಧಿಕಿಮಿಯ್ಯಾ 3. ಚಾಂದತಾರಾ 4. ಉಸ್ಮಾನ ತಂದೆ ಮಹಿಬೂಬ ಶೇಕ 5. ಮಾಲಾನ ಬೀ
ಇವರೆಲ್ಲರೂ ಕೂಡಿಕೊಂಡು ಆಟೋ ಕೆಎ 39 3773 ತೆಗೆದುಕೊಂಡು ಅದರಲ್ಲಿ ಶ್ರೀಮತಿ ಮಸ್ತಾನ ಬೀ ಗಂಡ
ಹುಸೇನ ಸಾ: ಮಿಸಬಾ ನಗರ ರಿಂಗ
ರೋಡ ಗುಲಬರ್ಗಾ ಇವರನ್ನು ಒತ್ತಾಯಪೂರ್ವಕವಾಗಿ ಆಟೋದಲ್ಲಿ ಹಾಕಿಕೊಂಡು ಬಸವ ಕಲ್ಯಾಣ ತಾಲೂಕಿನ ಧನ್ನೂರ ವಾಡಿ ಗ್ರಾಮಕ್ಕೆ ತೆಗೆದುಕೊಂಡು
ಹೋಗಿ ನೀರು, ಕೊಡದೇ ಕೋಣೆಯಲ್ಲಿ ಕೂಡಿ ಹಾಕಿರುತ್ತಾರೆ.
ತಾವು ಕೇಳಿದರೆ ಮಾತ್ರ ಬಿಡುತ್ತೇವೆ ಇಲ್ಲದಿದ್ದರೆ ಖಲಾಷ ಮಾಡುತ್ತೇವೆ ಎಂದು ಜೀವ ಭಯ ಹಾಕಿ ಕೈಯಿಂದ ಕಾಲಿನಿಂದ ಹೊಡೆ ಬಡಿ ಮಾಡಿ ಮನೆಯ ಹೊರಗಡೆಯಿಂದ
ಒಳಗೆ ದಬ್ಬಿರುತ್ತಾರೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಪಂಡರಿನಾಥ ತಂದೆ ಕಾಶಿನಾಥ ಬೂಟೆ ಸಾ|| ಪಾಪನಾಶ ಗೇಟ್ ಒಳಗಡೆ ಶಿವನಗರ
ಬೀದರ ಹಾ.ವ|| ಮನೆ ನಂ.10-2-105 ಗುಡ್ ಲಕ್ ಹಿಂದುಗಡೆ ಆನಂದ ನಗರ ಗುಲಬರ್ಗಾ ರವರು.
ದಿನಾಂಕ. 04.01.2014 ರಂದು ಸಾಯಾಂಕಾಲ 7.00 ಗಂಟೆ ಸುಮಾರಿಗೆ ತಮ್ಮ ರೂಮ ಕೀಲಿ ಹಾಕಿಕೊಂಡು
ವಿಜಯ ಕರ್ನಾಟಕ ಆಫಿಸಗೆ ಹೋಗಿ ರಾತ್ರಿ 11.00 ಗಂಟೆಗೆ ವಾಪಸ್ಸುರೂಮಿಗೆ ಬಂದು ನೋಡಲಾಗಿ ಬಾಗಿಲ
ಕೀಲಿ ಮುರದಿದ್ದು, ಮತ್ತು ರೂಮಿನಲ್ಲಿ ಬ್ಯಾಗನಲ್ಲಿಟ್ಟಿದ್ದ ನಮ್ಮ ವಿಜಯ ಕರ್ನಾಟಕ
ಸಂಪಾದಕರ ಹೆಸರಿನಲ್ಲಿ ಹೊಸದಾಗಿ ಖರಿದಿಸಿ ಛಾಯಾಚಿತ್ರ ತಗೆಯಲು ನನಗೆ ಒದಗಿಸಿದ 1) ಒಂದು ನಿಕಾನ್
ಕಂಪನಿಯ D300S ಕ್ಯಾಮರ್ ಅ.ಕಿ|| 85,000/- 2) ಕ್ಯಾಮರಾದ ಫ್ಲ್ಯಾಶ
ಅ.ಕಿ|| 18,000/- 3) ಕ್ಯಾಮರಾದ ಒಂದು ಲೆನ್ಸ್ 300 MM ಅ.ಕಿ|| 15,000/- 4) ಕ್ಯಾಮರಾದ ಲೆನ್ಸ್
18*105 MM ಅ.ಕಿ|| 18,000/- 5) 15 ಡಿ.ವಿ.ಡಿ
ಕ್ಯಾಸೆಟಗಳು ಹೀಗೆ ಒಟ್ಟು ಅ.ಕಿ|| 1,36,000/- ರೂ ಬೆಲೆಬಾಳುವ
ವಸ್ತುಗಳು ಮತ್ತು ನನ್ನ ಎಸ್.ಎಸ್.ಎಲ.ಸಿ ಅಂಕಪಟ್ಟಿ ಮತ್ತು ವರ್ಗಾವಣೆ ಪ್ರಮಾಣ ಪತ್ರ ಹೀಗೆ
ಬ್ಯಾಗ ಸಮೇತ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment