ಅಪಹರಣ ಪ್ರಕರಣ :
ಮಳಖೇಡ ಠಾಣೆ : ಶ್ರೀಮತಿ ಮಹಾದೇವಿ ಗಂಡ ಜಗನ್ನಾಥ
ಕಂಬಾರ ಸಾ|| ಶಾಪೂರ ದರ್ಗಾ ಹತ್ತಿರ ಮಳಖೇಡ ತಾ|| ಸೇಡಂ ರವರ ಮಗಳಾದ
ಕಾವೇರಿ ಇವಳಿಗೆ ಈಗಾಗಲೇ ಈ ಹಿಂದೆ ದಿನಂಕ 3-12-2013 ರಂದು ನಮ್ಮೂರ ಮಹ್ಮದಖಲೀಲ ತಂದೆ ಮಹ್ಮದ
ಗೌಸ ಕಪಾಟೇ ಈತನು ಅಪಹ್ರಿಸಿಕೊಂಡು ಹೋಗಿದ್ದು ನಂತ್ರ ಅವನಿಗೆ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು
ಈಗ ಅವನು ಸದ್ಯ ಜೇಲಿನಲ್ಲಿ ಇರುತ್ತಾನೆ. ನಂತರ ನನ್ನ ಮಗಳು ಕಾವೇರಿ ಇವಳು ಬೇರೆ ಯಾರದೋ ಸಂಗಡ
ಸಂಬಂಧ ಬೆಳೆಸಿದ್ದು, ಯಾರೋ ನನ್ನ ಮಗಳಾದ ಕಾವೇರಿ ಇವಳಿಗೆ ದಿನಾಂಕ 28-1-2014 ರಂದು
ಮಧ್ಯಾನ 1-00 ಗಂಟೆಗೆ ತಾನು ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಹೋದವಳು ಮರಳಿ ಬಂದಿಲ್ಲ ನನ್ನ
ಮಗಳಿಗೆ ಯಾರೋ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಖಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಬಸವರಾಜ ತಂದೆ
ಶಿವಶರಣಪ್ಪಾ ಪಾಟಿಲ್ ಸಾಃ 3 ನೇ ಹಂತ ಆದರ್ಶ ನಗರ ಗುಲಬರ್ಗಾ ರವರ ತಂಗಿಯಾದ ಶ್ರೀಮತಿ ಗಂಗಾ @
ಗಂಗಮ್ಮ ಗಂಡ ರವಿಕುಮಾರ್ ಪಾಟೀಲ್, ವಯಃ 28 ವರ್ಷ ಇವಳು ದಿನಾಂಕ 29/01/2014 ರಂದು ಬೆಳಿಗ್ಗೆ
5:30 ಎ.ಎಂ ದಿಂದ 6.00 ಎ.ಎಂ. ರ ಅವಧಿಯಲ್ಲಿ ತನ್ನ ಮನೆಯಿಂದ ತಮ್ಮ ಮಗುವನ್ನು ಮನೆಯಲ್ಲಿಯೆ
ಬಿಟ್ಟು, ಮನೆಯಿಂದ ಹೋದವಳು ಇಲ್ಲಿಯವರೆಗೆ ಮನೆಗೆ ಮರಳಿ ಬಂದಿರುವುದಿಲ್ಲಾ. ನನ್ನ ತಂಗಿ ಕಾಣೆಯಾದ
ಬಗ್ಗೆ ನಾನು ಮತ್ತು ನಮ್ಮ ಸಂಭಂದಿಕರು ಕೂಡಿಕೊಂಡು ಗುಲಬರ್ಗಾ ನಗರದಲ್ಲಿ ಎಲ್ಲಾ ಕಡೆಗೂ
ಹುಡುಕಾಡಿದರು ಸಹ ಪತ್ತೆಯಾಗಿರುವುದಿಲ್ಲ ಮತ್ತು ಅವಳ ಗಂಡನಾದ ರವಿಕುಮಾರ್ ಪಾಟೀಲ್ ಗವನಳ್ಳಿ
ಸಾ/ಹೈದ್ರಾಬಾದ್ ಇವರಿಗೂ ಸಹ ಫೋನ್ ಮುಖಾಂತರ ವಿಷಯ ತಿಳಿಸಿ ಕೇಳಿದಾಗ ಬಂದಿರುವುದಿಲ್ಲ ಅಂತಾ
ತಿಳಿಸಿದ್ದು ಇರುತ್ತದೆ ಹಾಗೂ ದೂರದ ಸಂಭಂದಿಕರಿಗೆ ಫೋನ್ ಮೂಖಾಂತರ ವಿಚಾರಣೆ ಮಾಡಿದರು ಕೂಡ ನನ್ನ
ತಂಗಿ ಇರುವಿಕೆಯ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲಾ. ಕಾರಣ ತಾವುಗಳ ದಯಮಾಡಿ ಕಾಣೆಯಾದ ನನ್ನ ತಂಗಿ
ಶ್ರೀಮತಿ ಗಂಗಾ @ ಗಂಗಮ್ಮ ಇವಳು ಮಾನಸಿಕ ಮಾಡಿಕೊಂಡು ಹೋಗಿರುತ್ತಾಳೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 30-01-2014 ರಂದು ರಾತ್ರಿ ವೇಳೆಯಲ್ಲಿ ಯಾರೊ ಕಿಡಿಗೇಡಿಗಳು ಎಚ್.ಎಂ. ಸನಾ ಇಂಗ್ಲೀಷ ಮಧ್ಯಾಮ
ಪ್ರೌಢ ಶಾಲೆ, ಮದಿನಾ ಕಾಲೋನಿ, ಎಮ್.ಎಸ್.ಕೆ ಗುಲಬರ್ಗಾದ ಶಾಲೆಯ ಪ್ರೋಜೆಕ್ಟರ್ ಇವರು ರೂಮಿನ
ಬಾಗಿಲು ಬೀಗ ಮೂರಿದು ಒಳಗಡೆ ಹೋಗಿ
ಒಳಗಡೆ ಇರುವ ಗಣಕಯಂತ್ರದ ಸಾಮಾಗ್ರಿಗಳು ಅ.ಕಿ 79,500/- ರೂ. ನೇದ್ದವುಗಳನ್ನು ಕಳ್ಳತನ
ಮಾಡಿಕೊಂಡು ಹೊಗಿರುತ್ತಾರೆ ಅಂತಾ ಶ್ರೀಮತಿ ವೀಕರುನ್ನಿಸಾ ಬೇಗಂ ಗಂಡ ಸೈಯದ ವಹೀದುದ್ದಿನ ಎಚ್.ಎಂ. ಸನಾ
ಇಂಗ್ಲೀಷ ಮಧ್ಯಾಮ ಪ್ರೌಢ ಶಾಲೆ, ಮದಿನಾ ಕಾಲೋನಿ, ಎಮ್.ಎಸ್.ಕೆ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ:
31-01-2014 ರಂದು ಬೆಳಗಿನ ಜಾವ 4-00 ಗಂಟೆಯ ಸುಮಾರಿಗೆ ನನಗೆ ಯಾರೋ ನನ್ನ ತಮ್ಮನ ಮೊಬೈಲದಿಂದ
ಫೊನ ಮಾಡಿ ಜೇವರಗಿ ಶಹಾಪೂರ ರೋಡ ಮುದಬಾಳ (ಬಿ) ಸಮಿಪ ಇರುವ ಜೆ.ಬಿ.ಸಿ ಕೆನಾಲ ಹತ್ತಿರ ನಿಮ್ಮ
ತಮ್ಮ ಎಕ್ಸಿಡೆಂಟ ಆಗಿ ಮೃತ ಪಟ್ಟಿರುತ್ತಾನೆ. ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನಮ್ಮ ಸಂಬಂಧಿಕರು ಕೂಡಿಕೊಂಡು
ಅಲ್ಲಿಗೆ ಹೋಗಿ ನೋಡಲಾಗಿ ಅಲ್ಲಿ ಪಲ್ಟಿಯಾಗಿ ಬಿದ್ದ ಒಂದು ಕಾರ ನಂ 33-ಎಮ್ 2189 ನೇದ್ದು ಇತ್ತು
ಸದರಿ ಕಾರಿನಲ್ಲಿ ನನ್ನ ತಮ್ಮ ಮರೆಪ್ಪ ಹಾಗೂ ಅವನ ಗೆಳಯ ಶಶೀಧರ ಇವರು ಶಹಾಪುರದಿಂದ ಜೇವರ್ಗಿ
ಕಡೆಗೆ ಬರುತ್ತಿದ್ದಾಗ ಯಾವೆದೋ ಒಂದು ವಾಹನದ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ನನ್ನ ತಮ್ಮ ಕುಳಿತ ಕಾರಿಗೆ
ಡಿಕ್ಕಿ ಪಡಿಸಿದ ಪರಿಣಾಮ ಕಾರ ಪಲ್ಟಿಯಾಗಿ ರೋಡಿನ ಬಲಗಡೆ ಬಿದ್ದದರಿಂದ ನನ್ನ ತಮ್ಮನು
ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಶಶೀದರ ಈತನು
ಭಾರಿಗಾಯಗೊಂಡಿರುತ್ತಾನೆ, ಈ ಘಟನೆಯು ದಿನಾಂಕ:
30/01/2014 ರಂದು ರಾತ್ರಿ 11-30 ಗಂಟೆಯಿಂದ ದಿ: 31/01/2014 ರಂದು ಬೆಳಗಿನಜಾವ 1-30 ಗಂಟೆಯವ
ಅವದಿಯಲ್ಲಿ ಸಂಭವಿಸಿರುತ್ತದೆ. ಅಂತಾ ಶ್ರೀ
ಸಾಬಣ್ಣ ತಂದೆ ಯಂಕಪ್ಪ ಬಾವೂರ ಸಾ: ಕಿಲ್ಲನ ಕೇರ ತಾ: ಯಾದಗೀರ ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment