ಅಪಘಾತ ಪ್ರಕರಣಗಳು:
ಕಾಳಗಿ ಪೊಲೀಸ್ ಠಾಣೆ : ದಿನಾಂಕ 07-02-2014 ರಂದು ಶ್ರೀ ರೀಯಾಜ ತಂದೆ ಮೋದಿನಸಾಬ ಚಾಂದನವಾಲ್ ಸಾ:ಕಾಳಗಿ ಇವರು
ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ 07-02-2014
1-45 ಪಿ,ಎಂ ಸುಮಾರಿಗೆ ನಾನು ಪ್ರತಿ ಶುಕ್ರವಾರದಂತೆ ನಮಾಜ್ ಮಾಡಲು ನನ್ನ
ಹಣ್ಣಿನ ಅಂಗಡಿಯ ಸಮೀಪ ಇವರು ಮಜೀದ ಕಡೆಗೆ ಹೋಗುವಾಗ ಊರೊಳಗಿನಿಂದ ಬರುತ್ತಿದ್ದ ಟ್ರಾಕ್ಟರನ ಡ್ರೈವರನು
ಅತಿವೇಗ ಹಾಗೂ ನೀಷ್ಕಾಳಜೀತನದಿಂದ ಚಲಾಯಿಸುತ್ತಾ ಹಿಂದುಗಡೆಯಿಂದ ಅಪಘಾತಪಡಿಸಿ ಟ್ಯಾಕ್ಟ್ರತನ್ನು
ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು. ಅಪಘಾತದಿಂದ ತನ್ನ ಟೋಂಕಕ್ಕೆ ಒಳಪೆಟ್ಟು ಮತ್ತು ಎಡಗೈಗೆ
ತರಚಿದ ಗಾಯಾವಾಗಿದ್ದು. ಟ್ರಾಕ್ಟರ ನಂಬರ ಕೆ.ಎ-32, ಟಿ.ಎ-6685/86 ಇರುತ್ತದೆ.
ಅಪಘಾತಪಡಿಸಿದ್ದನ್ನು ಗ್ರಾಮದ 1) ಬಾಬು ತಂದೆ ಅಬ್ಬಾಸಲಿ 2) ಸಂತೋಷ ತಂದೆ ಭಗವಾನ ನೋಡಿರುತ್ತಾರೆ. ಕಾರಣ
ಅಪಘಾತ ಮಾಡಿ ಓಡಿ ಹೋದ ಟ್ರಾಕ್ಟರ ಡ್ರೈವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 08/02/2014 ರಂದು ಶ್ರೀ ಮಲ್ಲಪ್ಪ ತಂದೆ ವಿಠ್ಠಲ ಕಾಂಬಳೆ ಸಾ|| ಮಾದನ ಹಿಪ್ಪರಗಾ ಇವರು ಠಾಣೆಗೆ ಹಾಜರಾಗಿ ದಿನಾಂಕ 30/01/2014 ರಂದು ತನ್ನ ತಂಗಿ ಹೀರಾಬಾಯಿ ಇವಳು ನೀಲೂರ ದರ್ಗಾಕ್ಕೆ ಟಮಟಮದಲ್ಲಿ ಹೋಗುತ್ತಿರುವಾಗ ಸ್ಟೇಶನ ಗಾಣಗಾಪೂರದ ಕಂಕರ ಮಶೀನ ಹತ್ತಿರ ಎದುರುಗಡೆಯಿಂದ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು ಅತೀ ವೇಗ ಮತ್ತು
ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಟಮ ಟಮ ನಲ್ಲಿ
ಕುಳಿತಂತಹ ಹೀರಾಬಾಯಿ ಇವಳ ಹೊಟ್ಟೆಗೆ ಗುದ್ದಿ ನಿಲ್ಲಿಸದೆ ಹೋಗಿದ್ದು ಉಪಚಾರ
ಕುರಿತು ಸರ್ಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರ್ಪಡೆ ಮಾಡಿದ್ದು ಅಪಘಾತದಲ್ಲಿ ಅವಳಿಗೆ
ಆದ ಗಂಭೀರ ಸ್ವರೂಪದ ಗಾಯದಿಂದಾಗಿ ಅವಳು ದಿನಾಂಕ 08/02/2014 ರಂದು ಸರ್ಕಾರಿ ಆಸ್ಪತ್ರೆ
ಗುಲಬರ್ಗಾದಲ್ಲಿ ಮೃತಪಟ್ಟಿದ್ದು ಸದರಿ ಮೋಟಾರ ಸೈಕಲ ಸವಾರನ ಮೇಲೆ ಕಾನೂನು
ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಕಳವು ಪ್ರಕರಣಗಳು:
ಅಶೋಕ ನಗರ ಪೊಲೀಸ್ ಠಾಣೆ : ದಿನಾಂಕ:08/02/2014
ರಂದು ಶ್ರೀ ಸೋಮಶೇಖರ ತಂದೆ ಗಂಗಪ್ಪ ನಡಕಟ್ಟಿ ಸಾ: ಮೃತ್ಯುಂಜಯ
ಟ್ರೇಡರ್ಸ ಎಲ್.8 ಉದ್ದಿಮೇ ವಸಹಾತು ಎಮ್.ಎಸ್.ಕೆ.ಮಿಲ್ ರಸ್ತೆ ಗುಲಬರ್ಗಾ ಇವರು ಠಾಣೆಗೆ
ಹಾಜರಾಗಿ ದಿನಾಂಕ :31/01/2014
ರಂದು ಶುಕ್ರವಾರ ಬೆಳಿಗ್ಗೆ 9:30 ಗಂಟೆ ಸುಮಾರಿಗೆ ತಾನು ಎಮ್.ಎಸ್.ಕೆ.ಮಿಲ್
ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ತರಲು ಹೋಗಿದ್ದಾಗ ಮಾರುಕಟ್ಟೆಯ ಮುಖ್ಯ ರಸ್ತೆ ಬಿದಿ ಬದಿಯಲ್ಲಿ ನಿಲ್ಲಿಸಿದ್ದ ತನ್ನ ಬಣ್ಣ:
ತಿಳಿನೀಲಿ ಬಣ್ಣದ ಬಜಾಜ
ಸ್ಕೂಟರ ಸಂಖ್ಯೆ CTP 4803 ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು
. ಕಾರಣ ತನ್ನ ಸ್ಕೂಟರ ಕಳ್ಳತನವಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸ್ಟೇಷನ
ಬಜಾರ ಪೊಲೀಸ ಠಾಣೆ: ದಿನಾಂಕ.
08.02.2014 ರಂದು ಶ್ರೀ ಲಿಂಗರಾಜ ತಂದೆ ಶರಣಪ್ಪಾ ಮಲಕಪ್ಪನವರ ಸಾ|| ಪ್ಲಾಟ
ನಂ.50 ವಕಿಲರ ಕಾಲೂನಿ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ದಿನಾಂಕ. 07.02.2014 ರಂದು ಬೆಳಿಗ್ಗೆ 11.30 ಗಂಟೆಗೆ ತಾವು ತಮ್ಮ ಮನೆಗೆ ಕೀಲಿ ಹಾಕಿಕೊಂಡು ಹೋಗಿ ಸಾಯಾಂಕಾಲ 5.30
ಗಂಟೆಗೆ ಮರಳಿ ಮನೆಗೆ ಬಂದು ನೋಡಿದಾಗ ಮನೆಯ ಕೀಲಿ ಮುರಿದು ಅಲ್ಮೆರಾದಲ್ಲಿಯ 1) 1) 25 ಗ್ರಾಂ
ತೂಕದ ಒಂದು ಬಂಗಾರದ ಸಿಂಗಾರ ಕರಿಮಣಿ ಅ.ಕಿ|| 75000/-, 2)
50 ಗ್ರಾಂ ಬಂಗಾರದ 4 ಎಳಿ ಸರ್ ಅ.ಕಿ|| 1,50,000/- ರೂ, 3)
5ಗ್ರಾಂ ತೂಕದ ಬಂಗಾರದ ಜುಮಕಿ ಹ್ಯೂ ಅ.ಕಿ|| 15,000/-
ರೂ,4) 15
ತೊಲೆ ಬೆಳ್ಳಿಯ ಮೂರು ಜೊತೆ ಚೈನ್ ಅ.ಕಿ|| 7,500 ರೂ, 5)
40 ಗ್ರಾಂ ಬೆಳ್ಳಿಯ ಹಾಲಗಡಗ ಅ.ಕಿ|| 2,000/-, 6)
2 ಗ್ರಾಂ ಬಂಗಾರದ ಒಂದು ಜೊತೆ ಮುರು ಅ.ಕಿ|| 6,000/-, 7)
5 ಗ್ರಾಂ ಬಂಗಾರದ ವಂಕಿ ಉಂಗುರ ಅ.ಕಿ|| 15,000/-ರೂ, 8)
ಒಂದು ಸ್ಯಾಮಸಂಗ್ ಮೊಬೈಲ ಅ.ಕಿ|| 6,200/-
ರೂ 9) ನಗದು ಹಣ 3,200/-
ರೂ ಹೀಗೆ ಒಟ್ಟು 2,79,900 ರೂ
ಬೆಲೆಬಾಳುವ ವಸ್ತುಗಳು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು
ಪತ್ತೆ ಮಾಡಿ ಕಾನೂನು ಕ್ರಮ ಜರೂಗಿಸುವಂತೆ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಸ್ಟೇಷನ್
ಬಜಾರ ಪೊಲೀಸ್ ಠಾಣೆ: ದಿನಾಂಕ. 07.02.2014
ರಂದು ಗೆ ಶ್ರೀ ವಿಲಾಸ ತಂದೆ ಮೋಹನ ಚಂದ್ರ ಬಸ್ತಾಳಕರ ಉ|| ಬ್ಲೂಡಾರ್ಟ ಎಕ್ಸಪ್ರೆಸ್ ಲಿಮಿಟೆಡನಲ್ಲಿ
ಎಕ್ಸಕಿಟಿವ್ ಸಾ|| ಹೊನ್ನಕಿರಣಗಿ
ಇವರು ತಮ್ಮ ಬ್ಲೂಡಾರ್ಟ ಎಕ್ಸಪ್ರೆಸ್ ಆಪೀಸನಲ್ಲಿ ಸಂಬಂದ ಪಟ್ಟ ಗ್ರಾಹಕರಿಗೆ ವಿತರಣೆಗಾಗಿ ಇಟ್ಟಿದ್ದ ಸುಮಾರು
8,13,717/-
ರೂ
ಬೆಲೆಬಾಳುವ ಆನ್
ಲೈನ ಶಾಪಿಂಗ ದಿಂದ ಬಂದ ಮೋಬೈಲ್.
ಲ್ಯಾಪಟಾಪ. ಬಟ್ಟೆಗಳು, ದಿನಾಂಕ; 16/01/2014
ರಂದು 5
ಪಿ ಎಮ್ ದಿಂದ ದಿನಾಂಕ;
17/01/2014 ರ 8;40 ಎಎಮ್ ಅವದಿಯಲ್ಲಿ ಕಳವು
ಆಗಿರುತ್ತವೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣಗಳು :
ಅಶೋಕ
ನಗರ ಪೊಲೀಸ್ ಠಾಣೆ: ದಿನಾಂಕ 08/02/2014 ರಂದು ಶ್ರೀ ಶರಣಯ್ಯಾ ತಂದೆ ಬಸಲಿಂಗಯ್ಯಾ ಕಲ್ಲಮಠ ಸಾ: ಪ್ಲಾಟ
ನಂ. 12 ಸಂತೊಷ ಕಾಲೋನಿ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ದಿನಾಂಕ 06/02/2014 ರಂದು ಮುಂಜಾನೆ
11-00ಗಂಟೆ ಸುಮಾರಿಗೆ ತಾನು
ಸಂತೋಷ ಕಾಲೋನಿಯ ಶಾಂಗ್ರಿಲಾ ಅರ್ಪಾಟಮೆಂಟ ಹತ್ತಿರ ಇದ್ದಾಗ ಎಸ್.ಎಸ್. ಹಿರೇಮಠ ಮತ್ತು
ಕರಣು ರವರಿಗೆ 1 ಲಕ್ಷ ರೂಪಾಯಿ ಚಕ್ಕಿನ ಬಗ್ಗೆ ಕೇಳಿದಕ್ಕೆ ‘’ ಯಾವ
ದುಂಡು ಕೊಡಬೇಕಲೇ ರಂಡೆ ಮಗನೇ ಬೋಸಡಿ ಮಗನೇ ‘’ ಅಂತಾ
ಅವಾಚ್ಯ ಶಬ್ದಗಳಿಂದ ಬೈದು ನನಗೆ ತಡೆದು ನಿಲ್ಲಿಸಿ ಕರಣನು
ಕೈಯಿಂದ ಕಪಾಳಕ್ಕೆ ಕಣ್ಣಿನ ಹತ್ತಿರ ಹೊಡೆದಿದ್ದು . ಎಸ್.ಎಸ್.
ಹಿರೇಮಠನು ಜಗಳ ಬಿಡಿಸದಂತೆ ಮಾಡಿ ಕೈಯಿಂದ ಹೊಡೆದು ತೆಕ್ಕೆ ಕುಸ್ತಿಗೆ
ಬಿದ್ದಿರುತ್ತಾನೆ. ಅಷ್ಠರಲ್ಲಿ ನನ್ನ ಪರಿಚಯದವರಾದ ಮಲ್ಲಯ್ಯಾ ಮಠ ಮತ್ತು ಕರಣಪ್ಪ ನಾಶಿ
ಎನ್ನುವವರು ಜಗಳ ಬಿಡಿಸಲು ಬರುತ್ತಿರುವುದನ್ನು ನೋಡಿ ಮಗನೇ ನಿನಗೆ ಬಿಡುವುದಿಲ್ಲಾ.ಖಲಾಸ
ಮಾಡುವುದಾಗಿ ಜೀವದ ಬೆದರಿಕೆ ಹಾಕಿದ್ದು. ಅಂದು ತನ್ನ
ಕಣ್ಣಿಗೆ ಗಾಯವಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದು ದೂರು ಕೊಡಲು
ತಡವಾಗಿರುತ್ತದೆ ಕಾರಣ ಸದರಿಯವರ
ಮೇಲೆ ಕಾನೂನಿನ ರೀತಿಯ ಕ್ರಮ ಕೈಕೊಳ್ಳುವಂತೆ
ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮಹ್ಮದ ಮುದ್ದಾಸೀರ್
ತಂದೆ ಮಹ್ಮದ ಮಕ್ಬೂಲಖಾನ ಕಡಗಂಚಿ ಸಾ:ಹುಸೇನಿ ಗಾರ್ಡನ ಎಂ.ಎಸ್.ಕೆ ಮೀಲ್ ಗುಲಬರ್ಗಾ ರವರು
ಠಾಣೆಗೆ ಹಾಜರಾಗಿ ದಿನಾಂಕ:07/07/2014 ರಂದು ರಾತ್ರಿ 8.30 ಗಂಟೆ ಸುಮಾರಿಗೆ ನಾನು ನಮಾಜ
ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ನಮ್ಮ ಬಡಾವಣೆಯಲ್ಲಿ 5ನೇ ಕ್ರಾಸ ಹತ್ತಿರ ನಿಂತಿದ್ದ ನಮ್ಮ
ಬಡಾವಣೆಯ ಅಲ್ತಾಪನು ತನ್ನ ಜೊತೆಯಲ್ಲಿ 3 ಜನರೊಂದಿಗೆ ಬಂದವನೆ ನನಗೆ ತಡೆದು ಏ ರಾಂಡ ಕೆ ಬೇಟೆ ಅಂತಾ
ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಎದೆಯ ಮೇಲಿನ ಅಂಗಿ ಹಿಡಿದು ಕೈ ಮುಷ್ಠಿಮಾಡಿ ನನ್ನ ಹೊಟ್ಟೆಗೆ
ಹೊಡೆದಿರುತ್ತಾನೆ. ಮತ್ತು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾನೆ ಆತನ ಜೊತೆಯಲ್ಲಿದ್ದ 3
ಜನರು ನನಗೆ ನೆಲಕ್ಕೆ ಕೆಡವಿ ಕೈಯಿಂದ ಬೆನ್ನಿನ ಮೇಲೆ ಹೊಡೆಯುತ್ತಾ ಕಾಲಿನಿಂದ ಒದಿಯುತ್ತಿದ್ದರು
ಇದನ್ನು ನೋಡಿ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸೋಹಿಲ ಮತ್ತು ಖಲೀಲ ಇವರು
ಬಿಡಿಸಿರುತ್ತಾರೆ ನನಗೆ ಗುಪ್ತಗಾಯವಾಗಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿ ಅವರ ಮೇಲೆ
ಕಾನೂನು ರೀತಿ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮಹ್ಮದ ಅಲ್ತಾಫ ಖಾನ ತಂದೆ
ಮಹ್ಮದ ಇಬ್ರಾಹಿಂ ಖಾನ ಸಾ|| ಹುಸೇನಿ ಗಾರ್ಡ ಎಂ.ಎಸ್.ಕೆ ಮಿಲ್ ಗುಲಬರ್ಗಾ ಈತನು ದಿನಾಂಕ|| 07/02/14 ರಂದು
ಸಾಯಂಕಾಲ 05-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಾಯಿ ಖುರ್ಷಿದ ಬೇಗಂ ಇಬ್ಬರು ಒಟ್ಟಿಗೆ
ಸೇರಿ ನಮಾಜ ಮುಗಿಸಿಕೊಂಡು ಮನೆಗೆ ಹೊಗುತ್ತಿರುವಾಗ ಓಣಿಯ ಮುದಾಸಿರ ತಂದೆ ಮಹ್ಮದ ಮಕ್ಬುಲ ಖಾನ
ಕಡಗಂಚಿ ತನ್ನ ಹೀರೊ ಹೊಂಡಾ ಮೋಟಾರ ಸೈಕಲ ನಂ ಕೆಎ-02-ಎಚ್ಎಂ-931 ನೇದ್ದನ್ನು ಅತೀವೇಗ ದಿಂದ
ಚಲಾಯಿಸುತ್ತ ಬಂದು ನನ್ನ ತಾಯಿ ಖುರ್ಷಿದ ಬೇಗಂ ಇವಳಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ
ನೆಲಕ್ಕೆ ಬಿದ್ದು ನನ್ನ ತಾಯಿಗೆ ತಲೆಯ ಹಿಂಭಾಗಕ್ಕೆ ಒಳಪೆಟ್ಟಾಗಿದ್ದು ಆಗ ನಾನು ನನ್ನ ತಾಯಿಗೆ ಎಬ್ಬಿಸಿ ಮುದಾಸಿರನಿಗೆ ಸ್ವಲ್ಪ
ನಿಧಾನವಾಗಿ ಮೋಟಾರ ಸೈಕಲ ನಡೆಸಬೇಕು ಅಂತಾ ಹೇಳಿ ತನ್ನ
ತಾಯಿಯ ಕೈಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುವಾಗ ಮುದಾಸಿರನು ತನಗೆ ತಡೆದು ಏ ರಾಂಡ ಕೇ ಬೇಟೆ ತೂಮ್
ರಸ್ತೆ ಛೋಡ ಕೇ ಚಲನಾ ಅಂತಾ ಅಂದು ಕೈಯಿಂದ ನನ್ನ ಎದೆಯ ಮೇಲೆ ಹೊಟ್ಟೆಯ ಮೇಲೆ ಹೊಡೆದಿರುತ್ತಾನೆ
ಮತ್ತು ಆತನ ಕಾಕಾ ಬಂದು ಏ ಬೋಸಡಿ ಕೇ ಹಮಾರೆ ಬೇಟೆ ಕೊ ಕ್ಯೂವು ಗಾಲೀ ದಿಯಾ ಅಂತಾ ಅಲ್ಲೆ ಬಿದ್ದ
ಒಂದು ಕಲ್ಲು ತೆಗೆದುಕೊಂಡು ಕಲ್ಲಿನಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ
ಪಡಿಸಿರುತ್ತಾನೆ ಆತನ ಜೊತೆಯಿದ್ದ ಸುಹೇಲ್ ಈತನು
ನನಗೆ ಕಾಲಿನಿಂದ ಹೊಟ್ಟೆಯ ಮೇಲೆ ಒದೆಯ ಹತ್ತಿದನು ಇದನ್ನು ನೋಡಿ ನಮ್ಮ ಬಡಾವಣೆಯ
ಜಾಗಿರದಾರ ಮತ್ತು ಜಾಗಿರದಾರನ ವಾಹನ ಚಾಲಕ ಖದೀರ ಇವರು ಬಂದು ನನಗೆ ಹೊಡೆಯುವದನ್ನು
ಬಿಡಿಸಿರುತ್ತಾರೆ ನಂತರ ನನ್ನ ತಾಯಿಗೆ ಗುಪ್ತಗಾಯವಾಗಿದ್ದರಿಂದ ಉಪಚಾರ ಕುರಿತು ನಾನು ಗುಲಬರ್ಗಾ
ನಗರದ ಚೀರಾಯಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೆನೆ ವಾಹನ ಅಪಘಾತದ ಬಗ್ಗೆ ಸಂಚಾರಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು.
ನನಗೆ ಗುಪ್ತಗಾಯ ಆಗಿ ಮೈ ನೋವು
ಆಗುತ್ತಿರುವದರಿಂದ ಉಪಚಾರ ಕುರಿತು ನಾನು ಇಂದು ದಿನಾಂಕ 08/02/14 ರಂದು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ
ಆಗಿರುತ್ತೆನೆ ಕಾರಣ ಅವರ ಮೇಲೆ ಕಾನೂನು ರೀತಿ
ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment