ಸಂಶಯಸ್ಪದ ಸಾವು ಪ್ರಕರಣ :
ನಿಂಬರ್ಗಾ
ಠಾಣೆ : ಶ್ರೀ ಕಾಶಿನಾಥ ತಂದೆ ಸೋಮಲು
ಜಾಧವ ಸಾ|| ನಾವದಗಿ ತಾಂಡಾ, ತಾ||ಭಾಲ್ಕಿ ರವರ ತಮ್ಮ ಶ್ರೀಮಂತ
ತಂದೆ ಸೋಮಲು ಜಾಧವ ಇತನು ನನ್ನ ಹೆಸರಿನಿಂದ ಇದ್ದ ಲಾರಿ ನಂ. ಕೆ,ಎ 32, 8281 ನೇದ್ದನ್ನು ಚಲಾಯಿಸುತ್ತಾನೆ. ಹೀಗಿದ್ದು ದಿನಾಂಕ 10-02-2014
ರಂದು ಅಂದಾಜ ಮಧ್ಯಾಹ್ನ 1200 ಗಂಟೆಯ ಸುಮಾರಿಗೆ ನನಗೆ ಧನ್ನೂರ
ತಾಂಡಾದ ಹೆಸರು ಗೊತ್ತಿಲ್ಲ ಆತನು ನನಗೆ ಫೋನ ಮಾಡಿ ನಿನ್ನ ತಮ್ಮ ಶ್ರೀಮಂತ ಇತನು ಕಬ್ಬನ್ನು ಅನಲೋಡ ಮಾಡಿ ಲಾರಿಯನ್ನು
ಭೂಸನೂರ ಕ್ರಾಸ ದಾಟಿ ಜೀ ಧಾಬಾದ ಹತ್ತಿರ ಇರುವ ಡಾಂಬರ ರೋಡಿಗೆ ಆಳಂದ ಕಡೆ ಮುಖ ಮಾಡಿ ರೋಡಿನ ಬಲಗಡೆ ನಿಲ್ಲಿಸಿದ್ದು ನೋಡಲು
ಆತನು ಸೀಟಿನ ಮೇಲೆ ಅಂಗಾತವಾಗಿ ಬಿದ್ದಿರುತ್ತಾನೆ.
ಬಂದು ನೋಡಲು ನನಗೆ ತಿಳಿಸಿದನು. ನಾನು ಮತ್ತು ನನ್ನ ತಮ್ಮ ಬಾಬು ತಂದೆ ಸೋಮಲು, ಸಂತೋಷ ತಂದೆ ಸೋಮಲು ಮೂವರು
ಕೂಡಿ ಭೂಸನೂರ ಕ್ರಾಸ ಹತ್ತಿರ 02.00ಪಿ.ಎಮ ಸುಮಾರಿಗೆ ಬಂದು ಲಾರಿಯಲ್ಲಿ ನಮ್ಮ
ತಮ್ಮನಿಗೆ ನೋಡಲು ಆತನು ಮೃಪಟ್ಟಿದ್ದು ಅಲ್ಲದೆ ಅವನ ಮೈಮೇಲೆ ಬಲಗಡೆ ಎದೆಯ ಮೇಲೆ ಕಂದುಗಟ್ಟಿದ ಗಾಯ, ಹೊಟ್ಟೆಯ ಮೇಲೆ ಕಂದುಗಟ್ಟಿದ
ಗಾಯ, ಹಾಗೂ ಎಡಗಡೆ ಬೆನ್ನ ಹಿಂದೆ ಕಂದುಗಟ್ಟಿದ ಗಾಯ ಹಾಗೂ
ಇತರ ಕಡೆ ತರಚಿದ ಗಾಯಗಳೂ ಇರುತ್ತದೆ. ನನ್ನ ತಮ್ಮ ಅಂದಾಜ ನಸುಕಿನ 0200 ಎ.ಎಮ ಸುಮಾರಿಗೆ
ಮೃತಪಟ್ಟಿದ್ದು ಆತನ ಮರಣದಲ್ಲಿ ನನಗೆ ಸಂಶಯ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಲಿಂಗಪ್ಪ ತಂದೆ ಮಲ್ಲಿಕಾರ್ಜುನ ಸಾವಳಗಿ ಸಾ:ಕುಸನೂರ ತಾ:ಗುಲಬರ್ಗಾ ರವರು
ದಿನಾಂಕ: 10-02-2014 ರಂದು 7-15 ಪಿ.ಎಮ್.ಕ್ಕೆ ಮನೆಗೆ ಹೋಗುವ
ಕುರಿತು ತನ್ನ ಮೋ/ಸೈಕಲ್ ನಂ: ಕೆಎ 32 ಇಸಿ 6236 ನೆದ್ದರ ಮೇಲೆ
ಎಸ್.ವಿ.ಪಿ.ಸರ್ಕಲ್ ಮುಖಾಂತರ ಹೋಗುವಾಗ ಟೌನ ಹಾಲ
ಕ್ರಾಸ್ ಹತ್ತಿರ ಬಂದಾಗ ಸಂಚಾರ ಸಿಗ್ನಲ್
ಜಿಲ್ಲಾ ಆಸ್ಪತ್ರೆಯ ಕಡೆಗೆ ಹೋಗಲು ಚಾಲು ಇರುವದರಿಂದ ಜಿಲ್ಲಾ ಆಸ್ಪತ್ರೆಯ ಕಡೆಗೆ ಹೋಗುವ ಕುರಿತು
ಮೋಟಾರ ಸೈಕಲ್ ತಿರುಗಿಸಿ ಟೌನ ಹಾಲ ಕ್ರಾಸ್ ದಿಂದ ಹೋಗುವಾಗ ಜಗತ ಸರ್ಕಲ್ ಕಡೆಯಿಂದ ಮೋ/ಸೈಕಲ್ ನಂ;ಕೆಎ 05 ಹೆಚ್.ಇ 5621 ರ ಸವಾರನು ತನ್ನ ಮೋ/ಸೈಕಲನ್ನು
ಸಿಗ್ನಲ್ ಎಸ್.ವಿ.ಪಿ.ಸರ್ಕಲ್ ಕಡೆಗೆ ಬಂದ ಇದ್ದರೂ ಕೂಡಾ ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲ್ ಗೆ ಡಿಕ್ಕಿ ಅಪಘಾತಮಾಡಿ ಗಾಯಗೊಳಿಸಿ ತನ್ನ ಮೋ/ಸೈಕಲ್
ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿವೇಕಾನಂದ ತಂದೆ ಹಣಮಂತಪ್ಪ ಗಡಬಳ್ಳಿ ಸಾ:ರೈಲ್ವೆ ಗೇಟ ಹತ್ತಿರ ಕಾಂತಾ ಕಾಲೋನಿ ಗುಲಬರ್ಗಾ ರವರು
ದಿನಾಂಕ 10-02-2014 ರಂದು ಮಧ್ಯಾಹ್ನ 3=30 ಗಂಟೆಗೆ ತನ್ನ ಮೋ/ಸೈಕಲ್ ನಂ:
ಕೆಎ 32 ಇಡಿ 5303 ನೆದ್ದರ ಮೇಲೆ ವಿರೇಂದ್ರಕುಮಾರ
ಈತನಿಗೆ ಹಿಂದೆ ಕೂಡಿಸಿಕೊಂಡು ಹಳೆ ಡಿ.ಪಿ.ಓ, ಲಾಹೋಟಿ ಕ್ರಾಸ್ ಮುಖಾಂತರ ಐ ವಾನ ಈ ಶಾಹಿ ಕಡೆಗೆ ಹೋಗುವಾಗ ಗುಲ್ಲಾಬವಾಡಿ
ಹತ್ತಿರವಿರುವ ವಿಜಯ ವಿಧ್ಯಾಲಯ ಕಾಲೇಜ ಹಿಂದುಗಡೆ ರೋಡ ಮೇಲೆ ಒಬ್ಬ ಮೋ/ಸೈಕಲ್ ಸವಾರನು
ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲ್ ಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ
ಭಾರಿ ಗಾಯಗೊಳಿಸಿ ತನ್ನ ಮೋ/ಸೈಕಲ್ ಸಮೇತ ಸವಾರನು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಕುಮಾರಿ ಅಂಬಿಕಾ ತಂದೆ ಕಲ್ಯಾಣಿ ಕಾಂಬಳೆ ಸಾ|| ಪಂಚಶೀಲ
ನಗರ ರವರು ಬ್ರಹ್ಮಪೂರ
ಬಡಾವಣೆಯ ವಿಜಯನಗರ ಕಾಲೋನಿಯಲ್ಲಿ ನನ್ನ ತಂದೆಯ ಖಾಸ ಅಕ್ಕ ರೇಣುಕಾಬಾಯಿ ಇವರು ಇರುತಿದ್ದು ಇವರ
ಮನೆಗೆ ನಾನು ಇಂದು ದಿನಾಂಕ 10-02-2014 ರಂದು 08-00
ಪಿ.ಎಮ್ಮಕ್ಕೆ ಮನೆಗೆ ಬಂದಾಗ ನನ್ನ ಸೋದರ ಅತ್ತೆಯ ಮಗ ಚಂದ್ರಕಾಂತ ತಂದೆ ಮಹಾದೇವಪ್ಪಾ ಜಂಬಗಿ
ಇವರು ನನ್ನ ಅತ್ತೆ ರೇಣುಕಾಬಾಯಿ ಇವರಿಗೆ ವಿನಾ: ಕಾರಣ ಹೊಡೆ ಬಡೆ ಮಾಡುತ್ತಿದ್ದ ಆಗ ನಾನು
ಚಂದ್ರಕಾಂತ ಈತನಿಗೆ ಏಕೆ ತಾಯಿಗೆ ಹೊಡೆಯುತ್ತಿಯಾ ಅಂತಾ ಕೇಳಿದಕ್ಕೆ ನೀನು ಯಾರು ನನಗೆ ಹೇಳು
ಅಂತಾ ರಂಡಿ ಬೊಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೆ ಮನೆಯಲ್ಲಿ ಇದ್ದು ಒಂದು ಉರುವಲು
ಕಟ್ಟೆಗೆ ತೆಗೆದುಕೊಂಡು ಅದರಿಂದ ನನ್ನ ಎಡಗಡೆ ತೆಲೆಯ ಮೇಲೆ ಹೊಡೆದಿದ್ದರಿಂದ ನನ್ನ ತೆಲೆ ಒಡೆದು
ರಕ್ತ ಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಬ್ರಹ್ಮಪೂರ ಠಾಣೆ : ಶ್ರೀ.ಪ್ರಕಾಶ ತಂದೆ ಮರಲಿಂಗಪ್ಪ ರಾಜನಾಳ ಉ|| ಕೆ.ಎಸ್.ಆರ್.ಟಿ ಸಿ ಬಸ ಚಾಲಕ ಸಾ|| ರೋಜಾ (ಬಿ) ಗುಲಬರ್ಗಾ ಇವರು ದಿನಾಂಕ: 10-02-2014 ರಂದು ನಾನು ಮತ್ತು ರಮೇಶ ನಾಟೀಕಾರ ಬಸ ನಿರ್ವಾಹಕ ಇಬ್ಬರೂ ಕೂಡಿ ಗುಲಬರ್ಗಾ ನಗರ ಸಾರಿಗೆ ನೃಪತುಂಗಾ ಬಸ್ಸಿನ ಮೇಲೆ
ಕರ್ತವ್ಯದ ಮೇಲೆ ಇದ್ದು ಖರ್ಗೆ ಪೇಟ್ರೋಲ ಪಂಪ, ಬಸವೇಶ್ವರ ಆಸ್ಪತ್ರೆ ಮುಖಾಂತರ ಕೇಂದ್ರ ಬಸ ನಿಲ್ದಾಣಕ್ಕೆ ಹೊಗುತ್ತಿರುವಾಗ
ಎಮ್.ಆರ್.ಎಮ್.ಸಿ ಮೇಡಿಕಲ್ ಕಾಲೇಜು ಎದರುಗಡೆ ದ್ವಿ ಚಕ್ರ ವಾಹನ ನಂ: ಕೆ.ಎ 32-ಯು-900 ನೇದ್ದರ ಚಾಲಕನು ನಮ್ಮ ಬಸ್ಸನ್ನು ತಡೆದು ವಿನಾಕಾರಣವಾಗಿ
ಭೋಸಡಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈ ಮುಷ್ಠಿ ಮಾಡಿ ಮುಗಿನ ಮೇಲೆ ಹೊಡೆದು ರಕ್ತ ಗಾಯ
ಪಡಿಸಿ ಕರ್ತವ್ಯಕ್ಕೆ ಅಡೆತಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಾಹಾಗಾಂವ ಠಾಣೆ : ಶ್ರೀ ಬಾಬುರಾವ ತಂ ಬಾಳಪ್ಪ ಬಜಂತ್ರಿ ಸಾ|| ಕುರಿಕೋಟ ತಾ||ಜಿ|| ಗುಲಬರ್ಗಾ ರವರು ದಿನಾಂಕ 09-02-2014 ರಂದು 4.00 ಗಂಟೆಯ ಸೂಮಾರಿಗೆ ಮಟನ
ಅಂಗಡಿಗೆ ಹೋಗಿ ಮಟನ ಖರೀದಿ ಮಾಡಿಕೊಂಡು ಪಾಶ ಕಿರಾಣಿ ಅಂಗಡಿ ಮುಂದುಗಡೆ ಹೊರಟಾಗ 1. ಶಿವಕುಮಾರ ತಂ ಪ್ರಭು ಒಡ್ಡರ 2. ಸಂಜುಕುಮಾರ ತಂ ಪ್ರಭು
ಒಡ್ಡರ ಸಾ|| ಇಬ್ಬರು ಕುರಿಕೋಟ ಇಬ್ಬರು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ
ಬೈದು ಅಲ್ಲೆ ಬಿದ್ದ ಕಲ್ಲು ತೆಗೆದುಕೊಂಡು ನನ್ನ ತುಟಿಯ ಮೇಲೆ ಹೊಡೆದನು ಇದರಿಂದ ಮೇಲಿನ 2
ಹಲ್ಲುಗಳು ಮತ್ತು ಕೆಳಗಿನ 1 ಹಲ್ಲಿಗೆ ಒಳಪೆಟ್ಟಾಗಿರುತ್ತದೆ ಸಂಜುಕುಮಾರ ಇತನು ಕೈಮುಷ್ಠಿಮಾಡಿ
ಎಡಪಕ್ಕೆಗೆ ಹೊಡೆದು ಗುಪ್ತಗಾಯಗೊಳಿಸಿದೆನು ಈ ಜಗಳದ ವಿಷಯ ಗೊತ್ತಾಗಿ ನಮ್ಮ ತಾಯಿ ಪಾರ್ವತಿ
ಅಲ್ಲಿಗೆ ಬಂದು ಶಿವಕುಮಾರಿನಿಗೆ ನನ್ನ ಮಗನಿಗೆ ಯಾಕೆ ಹೊಡೆದಿದ್ದು ಅಂತಾ ಕೆಳಿದಕ್ಕೆ ತಾಯಿಗೆ
ಶಿವಕುಮಾರ ಕೈಯಿಂದ ಕಪಾಳ ಮೇಲೆ ಒಂದೇಟು ಹೊಡೆದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಒಂದು ವರ್ಷದ ಹಿಂದೆ ನಮ್ಮ ಮನೆಯ ಬಾಗಿಲು ಕೀಲಿ ಮುರಿದು
ಯಾರೊ ಆಪರಿಚಿತ ಕಳ್ಳರು ಮನೆಯಲ್ಲಿದ್ದ 1.
ಬಂಗಾರದ ಕೀವಿ ಉಂಗರು 8 ಗ್ರಾಂ ಅ.ಕಿ 24,000-00 ರೂ. 2. ಬೆಳ್ಳಿಯ ನಾಣ್ಯಗಳು 100 ಗ್ರಾಂ ಅ.ಕಿ 6000/- ರೂ. 3. ಲ್ಯಾಪ್ ಟ್ಯಾಪ
ಹೆಚ್.ಪಿ. ಕಂಪನಿ ಅ.ಕಿ 25000/- ರೂ. 4.
ಟಿ.ವಿ. ಎಲ್.ಜಿ. ಕಂಪನಿ 21 ಇಂಚ್ ಅ.ಕಿ 13000/- ರೂ. 5. ನೀರಿನ ಪಂಪ ಮಶೀನ
ಅ.ಕಿ 1800/- ರೂ. 6. ಪ್ರೇಶರ ಕುಕ್ಕರ್ ಅ,ಕಿ
900 7. ಮಿಕ್ಸರ ಅ.ಕಿ 3000/- ಹೀಗೆ ಒಟ್ಟು ಎಲ್ಲಾ ಸೇರಿ
73700/- ರೂ. ಕಿಮ್ಮತ್ತಿನ ಬೆಲೆ ಬಾಳುವ ಬಂಗಾರ, ಬೆಳ್ಳಿ, ಮತ್ತು ಇನ್ನಿತರ ಸಾಮಾನುಗಳು ಯಾರೋ
ಆಪರಿಚಿತ ಕಳ್ಳರು ಮನೆಯ ಬಾಗಿಲು ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀಮತಿ ಮೇಹುರುನಿಸ್ಸಾ ಸಾ|| ಮನೆ ನಂ ಇ-11-6766/1,
ಮದಿನಾ ಕಾಲೋನಿ, ಶಹಾಜೀಲಾನಿ ದರ್ಗಾ ಹತ್ತಿರ, ಎಂ.ಎಸ್.ಕೆ ಮಿಲ್ ಗುಲಬರ್ಗಾ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment