ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಬಾಬುರಾವ್ ತಂದೆ
ಸುಬ್ಬಣ್ಣ ವಾಲಿ, ಸಾಃ ಹೊನ್ನಕಿರಣಗಿ, ಫರತಾಬಾದ್ ಹಾ.ವ/ ಪ್ಲಾಟ್ ನಂ. 170 ಮಾತೃಛಾಯಾ
ನಿಲಯ, ಗ್ರೀನ್ ಹಿಲ್ಸ್ ಗಣೇಶ ನಗರ ಗುಲಬರ್ಗಾ ಇವರು ದಿನಾಂಕಃ 29-01-2014 ರಂದು ಮನೆಗೆ ಬೀಗ
ಹಾಕಿಕೊಂಡು ಮಗಳಿಗೆ ಭೇಟಿಯಾಗಲು ಮೈಸೂರಿಗೆ ಹೋಗಿರುತ್ತಾರೆ. ಮರಳಿ ಮೈಸೂರಿನಿಂದ ಇಂದು ದಿನಾಂಕ
11-12-2013 ರಂದು ಬೆಳಿಗ್ಗೆ 7.30 ಗಂಟೆಗೆ
ಗುಲಬರ್ಗಾದ ಮನೆಗೆ ಬಂದು ನೋಡಲು, ಮನೆಯ ಮುಖ್ಯ ಬಾಗಿಲ ಕೀಲಿ ಮುರಿದು ಜಜ್ಜಿದಂತಾಗಿರುತ್ತದೆ ಮತ್ತು ತೆರೆಯಲು ಪ್ರಯತ್ನಿಸಿದರು
ಸಹ ಬಾಗಿಲು ತೆರೆದಿರುವುದಿಲ್ಲ. ನಂತರ ಹಿಂದಿನ ಬಾಗಿಲಿಗೆ ಹೋಗಿ ನೋಡಲು ಬಾಗಿಲ ಚಿಕಲ ಮುರಿದು
ತೆರೆದಿದ್ದು ಇರುತ್ತದೆ. ಮನೆಯೊಳಗೆ ಹೋಗಿ ಚೆಕ್ ಮಾಡಿ ನೋಡಲು ಬೆಡ್ ರೂಮಿನಲ್ಲಿರುವ ಎಲ್ಲಾ
ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು ಮತ್ತು ಅಲೆಮಾರಿಯಲ್ಲಿಟ್ಟ ನಗದು ಹಣ ಮತ್ತು ಬಂಗಾರದ
ಆಭರಣಗಳು ಹೀಗೆ ಒಟ್ಟು 40,000/- ರೂ. ಬೆಲೆ
ಬಾಳುವಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಸೇಡಂ ಠಾಣೆ : ಶ್ರೀಮತಿ ಅಕ್ಕನಾಗಮ್ಮ ಗಂಡ ಭೀಮರಾಯ ಕೊಂಬಿನ್, ಸಾ: ಬೆನಕನಳ್ಳಿ ಗ್ರಾಮ, ಇವರು ದಿನಾಂಕ 11-02-2014
ರಂದು ಬೆಳಗ್ಗೆ 09-00 ಗಂಟೆಯ ಸುಮಾರಿಗೆ ನಾನು ನಮ್ಮ ತಮ್ಮ ಲಕ್ಷ್ಮಣ ಇತನ ಮನೆಯ ಹತ್ತಿರ ಇದ್ದಾಗ
ನಮ್ಮ ಪಕ್ಕದ ಮನೆಯಲ್ಲೇ ವಾಸವಾಗಿದ್ದ ನನ್ನ ಇನ್ನೊಬ್ಬ ತಮ್ಮ ರಾಮು ಈತನು ಅವಾಚ್ಯ ಶಬ್ದ್ಗಳಿಂದ
ಬೈದು ನೀ ದುಡದ ರೊಕ್ಕಾ ನನಗೂ ಕೊಡು
ಬೈಯುತ್ತಿದ್ದನು ಆಗ ಅವನಿಗೆ “ನಾನು ನಿನ್ನ ಹತ್ತಿರ ಇರಂಗಿಲ್ಲಾ, ನನ್ನ ಖರ್ಚಿಗೆ ರೊಕ್ಕಾ ಸಾಲಂಗಿಲ್ಲಾ ನಾ ನಿನಗ್ಯಾಕೆ ರೊಕ್ಕಾ ಕೊಡಲಿ” ಅಂತಾ ಹೇಳಿದ್ದಕ್ಕೆ ಅವನು ನನಗೆ ಕೈಯಿಂದ ನನ್ನ ಕಪಾಳಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು ಮತ್ತು ಬಡಿಗೆಯಿಂದ ನನ್ನ ಬಲಗೈ
ಮುಂಗೈನ ಮಣಿಕಟ್ಟಿಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಟಕಲ ಠಾಣೆ : ಶ್ರೀಮತಿ ದೇವಕಿ ಗಂಡ ನಾಗಪ್ಪ ಮರಗುತ್ತಿ ಸಾ :ಚಂದನಕೇರಾ ರವರಿಗೆ ದಿನಾಂಕ
10.02.2014 ರಂದು 8.00 ಪಿ.ಎಂಕ್ಕೆ ಹಣಮಂತ ತಂದೆ ಹುಸೇನಿ ಸಾ : ಚಂದನಕೇರಾ ಇವನು ಅವಾಚ್ಯ ಶಬ್ದ್ಗಳಿಂದ ಬೈದು ಕೈಯಿಂದ ಹಾಗು ಕಟ್ಟಿಗೆಯಿಂದ ಹೊಡೆದು ಸೀರೆ ಸೆರಗು ಹಿಡಿದು ಜಗ್ಗಿ
ಅವಮಾನ ಮಾಡಿ ಜೀವದ ಬೆದರಿಕೆ ಹಾಕಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಸರೋಜನಿ ಗಂಡ ಬಸವರಾಜ ಮತ್ತು ಗುರುಲಿಂಗಮ್ಮಾ
ಗಂಡ ಬಸವಣಪ್ಪ ಸಾ:ಬೆಣ್ಣೂರ (ಬಿ) ರವರು ದಿನಾಂಕ 11-02-2014 ರಂದು ಮಧ್ಯಾಹ್ನ 03-30 ಗಂಟೆಗೆ ಡಾ;;ಅರುಣಕುಮಾರ ಶಾಹ ಆಸ್ಪತ್ರೆಯಲ್ಲಿ ಕಣ್ಣು ತೋರಿಸಿಕೊಂಡು ಗಾರ್ಡನ
ಕಡೆಗೆ ಹೋಗುವ ಕುರಿತು ಜಗತ ಸರ್ಕಲ್ ದಿಂದ ಎಸ್.ವಿ.ಪಿ.ಸರ್ಕಲ್ ಮೇನ ರೋಡಿನಲ್ಲಿ ಬರುವ ಮಹಾನಗರ
ಪಾಲಿಕೆಯ ಎದುರಿನ ರೋಡ ಮೇಲೆ ನಡೆದುಕೊಂಡು ರೋಡ ದಾಟುತ್ತಿದ್ದಾಗ ಜಗತ ಸರ್ಕಲ್ ಕಡೆಯಿಂದ ಮೋ/ಸೈಕಲ್ ನಂ:ಕೆಎ 32 ಇಸಿ 0291 ನೆದ್ದರ ಸವಾರನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಗುರುಲಿಂಗಮ್ಮ ಇವರಿಗೆ ಭಾರಿಗಾಯಗೊಳಿಸಿ ತನ್ನ ಮೋ/ಸೈಕಲ್ ಅಲ್ಲೆ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 10-2-14 ರಂದು ರಾತ್ರಿ 10-00ಗಂಟೆಗೆ ಅಟೋರಿಕ್ಷಾ ನಂಬರ ಕೆ.ಎ.32ಬಿ 4290 ನೇದ್ದರ ಚಾಲಕ ಈಶ್ವರ ಈತನು ತನ್ನ ಅಟೋರಿಕ್ಷಾದಲ್ಲಿ ಶ್ರೀ ಅನೀಲ ತಂದೆ ಕಲ್ಯಾಣರಾವ ಬಿರಾದಾರ ಸಾಃ
ಚನ್ನಮಲ್ಲೇಶ್ವರ ನಗರ ಶಹಾಬಜಾರ ಗುಲ್ಬರ್ಗಾ. ರವರನ್ನು ಕೂಡಿಸಿಕೊಂಡು ಖಾದ್ರಿ ಚೌಕ
ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಶಹಾಬಜಾರ ನಾಕಾ ಹತ್ತಿರ ಇರುವ
ವೆಲ್ಡಿಂಗ ವರ್ಕಶಾಪ ಎದುರು ಒಮ್ಮೇಲೆ ಕಟ್ ಹೋಡೆದು ಅಟೋರಿಕ್ಷಾ ಪಲ್ಟಿ ಮಾಡಿ ಗಾಯಗೋಳಿಸಿ ತನ್ನ
ಅಟೋರಿಕ್ಷಾ ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 4-2-2014 ರಂದು ರಾತ್ರಿ 10 ಘಂಟೆಯ ಸುಮಾರಿಗೆ ಶ್ರೀಮತಿ ಜೈನುಬೀ ಗಂಡ ಭಾಬುಮಿಯಾ ಸಾಃ ಬಿಲಾಲಾಬಾದ ಕೆ.ಬಿ.ಎನ್
ಕಾಲೇಜ ಹತ್ತಿರ ಗುಲ್ಬರ್ಗಾ. ರವರ ಗಂಡನಾದ ಬಾಬುಮಿಯಾ ಈತನು ತನ್ನ
ಅಟೋರಿಕ್ಷಾವನ್ನು ಸೇಡಂ ರೋಡಿನ ಮೇಲೆ ಸೇಡಂ ರಿಂಗ ರೋಡ ಕಡೆಯಿಂದ ಸರ್ಕಾರಿ ಆಸ್ಪತ್ರೆಗೆ ಬರುವ
ರಸ್ತೆಯ ಮಧ್ಯ ಆರ್ ಟಿ ಓ ಆಫಿಸ ಹತ್ತಿರ ತನ್ನ ಅಟೋರಿಕ್ಷಾವನ್ನು ಅತೀವೇಗವಾಗಿ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಮೋಟಾರ ಸೈಕಲ್ಗೆ ಓವರ ಟೇಕ ಮಾಡಲು
ಹೋಗಿ ಒಮ್ಮೇಲೆ ಕಟ್ ಹೋಡೆದು ಬ್ಯಲನ್ಸ ತಪ್ಪಿ ಪಲ್ಟಿಯಾಗಿ ರೋಡಿನ ಮೇಲೆ ಬಿದ್ದು ಭಾರಿಗಾಯಗಳಾಗಿ ರುತ್ತವೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment