ಹಲ್ಲೆ ಪ್ರಕರಣಗಳು :
ಬ್ರಹ್ಮಪೂರ ಠಾಣೆ : ಶ್ರೀ.ರಾಜಸಿಂಗ ತಂದೆ ದೀಲಿಪಸಿಂಗ ಟಾಕ ಸಾ|| ಮೇತಾರಗಲ್ಲಿ ಗಾಜೀಪೂರ ಗುಲಬರ್ಗಾ ಇವರು ಕಳೆದ ಒಂದು ವರ್ಷದ ಹಿಂದೆ ನಮ್ಮ ಓಣಿಯ ಗೀತಾ ಗಂಡ
ರಾಮಕುಮಾರ ಬಿಡ್ಲಾನ ಇವಳು ನಮ್ಮ ಮಗನಾದ ವಿಕಾಶ ಇತನ ವಿರುದ್ದ ದೂರ ದಾಖಲಿಸಿದ್ದು ಗೀತಾ ಮತ್ತು
ಅವಳ ಕುಟುಂಬದ ಸದಸ್ಯರು ನಮ್ಮ ಮೇಲೆ ವೈಮನಸ್ಸು ಬೇಳೆಸಿಕೊಂಡು ಬಂದಿದ್ದು ದಿನಾಂಕ: 14-02-2014
ರಂದು 1900 ಗಂಟೆಗೆ ನಾನು ಹಾಗು ನನ್ನ ಹೆಂಡತಿಯಾದ ಉಮಾದೇವಿ ಮತ್ತು ನಮ್ಮ ಮಗಳಾದ ಸರೀತಾ ಎಲ್ಲರೂ
ಕೂಡಿ ನಮ್ಮ ಮನೆಯ ಮುಂದೆ ಕುಳಿತಿರುವಾಗ ಗೀತಾ ಬಿಡ್ಲಾನ ಇವಳು ತಮ್ಮ ಸಂಗಡ ಸುನೀಲ ತಂದೆ ಜಗದೀಶ ಟಾಕ 2. ಸಂಜು ತಂದೆ ರಮೇಶ ಟಾಕ 3. ಪುನಮ ತಂದೆ ರಾಮಕುಮಾರ 4. ಗುಡ್ಡೊ ಗಂಡ ಸುನೀಲ ಟಾಕ ಇವರೊಂದಿಗೆ ಗುಂಪು ಕಟ್ಟಿಕೊಂಡು ಬಂದು ನನ್ನೊಂದಿಗೆ ಜಗಳಕ್ಕೆ
ಬಿದ್ದು ಆಗ ಗೀತಾ ಇವಳು ನನಗೆ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮ ಮಗ ವಿಕ್ಯಾ ಎಲ್ಲಿದ್ದಾನೆ ಅವನು
ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಚೂಡಾಯಿಸುತ್ತಿದ್ದಾನೆ ಅಂತಾ ಅನ್ನುತ್ತಿದ್ದನು ಆಗ ಸುನೀಲ ಮತ್ತು
ಸಂಜು ಇವರು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿದ್ದು
ಅಲ್ಲದೆ ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಮತ್ತು ಮಗಳಿಗೂ ಕೂಡಾ ಪುನಮ ಮತ್ತು ಗುಡ್ಡೊ ಇವರು
ಕೈಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಪೂರ ಠಾಣೆ : ಶ್ರೀಮತಿ ಗೀತಾ ಗಂಡ ರಾಮಕುಮಾರ ಟಾಕ ಸಾ|| ಮೆತಾರಗಲ್ಲಿ ಗಾಜೀಪೂರ ಗುಲಬರ್ಗಾ ಇವರು ತಮ್ಮ ಬಡಾವಣೆಯ ವಿಕಾಸ ತಂದೆ
ರಾಜಸಿಂಗ್ ಟಾಕ ಈತನು ಆಗಾಗ ಜಗಳ ಮಾಡುತ್ತಿದ್ದು ಇವನ ಮೇಲೆ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ
ದೂರು ನೀಡಿ ಪ್ರಕರಣ ದಾಖಲಿಸಿರುತ್ತೆನೆ. ದಿನಾಂಕ 14-02-2014 ರಂದು ಮದ್ಯಾಹ್ನ ವೇಳೆಯಲ್ಲಿ ಸದರಿ ವಿಕಾಸ ಈತನು ನನ್ನೊಂದಿಗೆ
ಜಗಳಕ್ಕೆ ಬಿದ್ದು ನಾನು ಈ ಮೊದಲು ದಾಖಲಿಸಿದ ಪ್ರಕರಣಗಳು ವಾಪಸ್ಸ ತೆಗೆದುಕೊ ರಂಡಿ ಬೋಸಡಿ ಅಂತಾ
ಅವಾಚ್ಯ ಶಬ್ದಗಳಿಂದ ಬೈದು ಬಾಯಿ ಮಾತಿನ ಜಗಳ ಮಾಡಿರುತ್ತಾನೆ. ಆಗ ನಾನು ಅವನಿಗೆ ಈಗಲು ಕೂಡಾ
ನೀನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತೆನೆ ಎಂದು ಹೇಳಿದಾಗ ಸದರಿಯವನು ಅಲ್ಲಿಂದ ಓಡಿ
ಹೋಗಿದ್ದು ಇರುತ್ತದೆ. ಸಾಯಂಕಾಲ 7 ಗಂಟೆಯ ಸುಮಾರಿಗೆ ನಾನು ಮತ್ತು
ನನ್ನ ಮಕ್ಕಳಾದ ಪೂಜಾ, ಪೂನಂ ಮತ್ತು ನಮ್ಮ ನೆಗಣಿ
ಸರೀತಾ ಇವರೊಂದಿಗೆ ನನ್ನ ಮನೆಯ ಮುಂದೆ ಕುಳಿತಾಗ ವಿಕಾಸ ಮತ್ತು ಅವನ ತಂದೆ ರಾಜಸಿಂಗ್ ತಾಯಿ
ಉಮಾಬಾಯಿ ಅವನ ಸೋದರಿಯರಾದ ಸರೀತಾ ಸುಮನ್ ಮತ್ತು ಅವನ ಚಿಕ್ಕಪ್ಪ ರಾಮ ನಿವಾಸ್ ಇವರೆಲ್ಲರೂ
ಸೇರಿಕೊಂಡು ಬಂದು ಕೈಯಲ್ಲಿ ಕಲ್ಲು ಇಟ್ಟಂಗಿ ತೆಗೆದುಕೊಂಡು ಬಂದು ನಮ್ಮ ಮನೆಯ ಮೇಲೆ ತೂರಾಟ
ಮಾಡಲು ಶೂರು ಮಾಡಿದರು. ಆಗ ನಾನು ಮತ್ತು ನನ್ನ ಮಕ್ಕಳು ಪೂಜಾ, ಪೂನಂ ಕೂಡಿಕೊಂಡು ಮನೆಯ ಮೇಲೆ ಯಾಕೇ ಕಲ್ಲು ತುರಾಟ ಮಾಡುತ್ತಿದ್ದಿರಿ
ಅಂತಾ ಕೇಳಿದಾಗ ಸದರಿಯವರು ವಿಕಾಸ ಮೇಲಿಂದ ಹಾಕಿದ ಕೇಸು ವಾಪಸ್ಸ ತೆಗೆದುಕೋ ರಂಡಿರೇ ಬೋಸಡರೇ
ಅಂತಾ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಮೇಲೆ ಕಲ್ಲು ಇಟ್ಟಂಗಿ ತೂರಾಟ ಮಾಡಿದಾಗ ನಮಗೆ ಹತ್ತಿ
ರಕ್ತಗಾಯ ಗುಪ್ತಗಾಯಗಳಾಗಿರುತ್ತವೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ಶ್ರೀ ಅಂಬರಾಯ ತಂದೆ ಗುರುಲಿಂಗಪ್ಪ ಕಾಳಮೈಂದರ್ಗಿ ಸಾಃ
ಪಲ್ಲವಿ ಹೊಟೇಲ ಫೊರ್ಟರೋಡ ಗುಲಬರ್ಗಾ ಮತ್ತು
ಅನಿಲಕುಮಾರ ತಂದೆ ದೇವಿಂದ್ರಪ್ಪ ಸಾಗರ ಸಾಃ ಹೊಸಳ್ಳಿ ತಾಃ ಚಿಂಚೊಳಿ ಜಿಃ ಗುಲಬರ್ಗಾ ಹೆರಿಟೇಜ ಇನ್ ಹೊಟೇಲದಲ್ಲಿ ಮದ್ಯ ಸೇವನೆ ಮಾಡಿ ತಮ್ಮ ತಮ್ಮ
ಬಿಲ್ಲು ತಾವು ಕೊಟ್ಟು ಹೊರಗಡೆ ಬಂದಾಗ ಫಿರ್ಯಾದಿಗೆ ಸುಸ್ತಾಗಿದ್ದರಿಂದ ಬಿ.ಎಸ್.ಎನ್.ಎಲ್ ಆಪೀಸ
ಮುಂದುಗಡೆ ಖುಲ್ಲಾ ಜಾಗೆಯ ಗಿಡದ ಕೆಳಗಡೆ ಬಂದು ಮಲಗಿಕೊಂಡಾಗ ಆರೋಪಿತನು ಅಲ್ಲಿಗೆ ಬಂದು ನಿನ್ನ
ಬಿಲ್ಲು ಅಷ್ಟೆ ಕೊಟ್ಟು ಬಂದಿದ್ದಿ, ನನ್ನ ಬಿಲ್ಲು ಏಕೆ ಕೊಟ್ಟಿಲ್ಲ ರಂಡಿ ಮಗನೆ ಅಂತ ಅವಾಚ್ಯವಾಗಿ ಬೈದು ಅಲ್ಲೆ ಬಿದ್ದ ಚೂಪಾದ
ಕಲ್ಲು ತೆಗದುಕೊಂಡು ಫಿರ್ಯಾದಿಯ ತಲೆಯ ಮೇಲೆ ಎತ್ತಿಹಾಕಿ ಭಾರಿ ರಕ್ತಗಾಯ ಪಡಿಸಿ ಜೀವದ ಬೆದರಿಕೆ
ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ
14-02-2013 ರಂದು ರಾತ್ರಿ 09-15 ಗಂಟೆಯ ಸುಮಾರಿಗೆ ಅಖಂಡಪ್ಪಾ ತಂದೆ
ಶಿವಶರಣಪ್ಪಾ ಹೊಸಮನಿ, ಸಾಃ ಜೆ.ಆರ್ ನಗರ ಗುಲಬರ್ಗಾ ರವರ ಅಣ್ಣನಾದ ಗೌಡಪ್ಪಾಗೌಡ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಡಬ್ಲು 3420
ನೇದ್ದನ್ನು ಚಲಾಯಿಸಿಕೊಂಡು ಮನೆಗೆ ಬರುವ ಕುರಿತು
ಆಳಂದ ಚೆಕ್ ಪೊಸ್ಟ ಕಡೆಯಿಂದ ಗಜರಾಜ ಪೆಟ್ರೊಲ ಬಂಕ ಹತ್ತಿರ ಬರುತ್ತಿದ್ದಾಗ ಒಂದು ಅಟೊರಿಕ್ಷಾ
ಚಾಲಕನು ತನ್ನ ಅಟೋರಿಕ್ಷಾವನ್ನು ಆಳಂದ ಚೆಕ್
ಪೊಸ್ಟ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ಗೌಡಪ್ಪಗೌಡ ಈತನು
ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ
ಪಡಿಸಿದ್ದರಿಂದ ಮೃತ ಗೌಡಪ್ಪಗೌಡ ಇತನು ಮೋಟಾರ
ಸೈಕಲ ಸಮೇತ ಬಿದ್ದು ರೋಡ ಮದ್ಯದ ಡಿವೈಡರಗೆ
ಬಿದ್ದು ತಲೆಗೆ ಮತ್ತು ಕುತ್ತಿಗೆಗೆ ಕೊಯ್ದು ಭಾರಿ ರಕ್ತಗಾಯ ಹೊಂದಿದ್ದು ಆತನಿಗೆ ಉಪಚಾರ ಕುರಿತು
ಅಟೊರಿಕ್ಷಾದಲ್ಲಿ ಬಸವೇರ್ಶವರ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 13-02-2014 ರಂದು
ಮದ್ಯಾಹ್ನ 1200 ಗಂಟೆಯ ಸುಮಾರಿಗೆ ಶ್ರೀ ಬಾಬುರಾವ ತಂದೆ ಶಿವಪ್ಪಾ ಹವಲ್ದಾರ, ಸಾಃ ಕಟಗರಪೂರ ಶಹಾಬಜಾರ ಗುಲಬರ್ಗಾ ರವರ ತಂದೆಯಾದ ಶಿವಪ್ಪಾ ಹವಾಲ್ದಾರ ಇವರು ನಡೆದುಕೊಂಡು
ಗಂಜ ಬಸ್ ಸ್ಟ್ಯಾಂಡ ಹತ್ತಿರ ಲಕ್ಷ್ಮಿ ನಿವಾಸ ಎದರುಗಡೆ ರೋಡ ದಾಟುತ್ತಿದ್ದಾಗ ಆರೋಪಿ ದತ್ತಾತ್ರಯ
ಪಿ.ಸಿ ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಇ. 7985 ನೇದ್ದನ್ನು ಗಂಜ ಬಸ್
ನಿಲ್ದಾಣ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ
ಫಿರ್ಯಾದಿಯ ತಂದೆಯಾದ ಶಿವಪ್ಪಾ ಹವಾಲ್ದಾರ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತಲೆಗೆ ಬಾರಿ ಗಾಯಪಡಿಸಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ
ಠಾಣೆ : ಶ್ರೀ ರಾಮಪ್ಪ
ತಂದೆ ಆಶಪ್ಪಾ ಹರಿಜನ ಸಾ|| ಈರನಾಪಲ್ಲಿ ಗ್ರಾಮ ರವರ ಮಗ ಶಿವಪ್ಪ ಇವರು ದಿನಾಂಕ: 13.02.14 ರಂದು 7:30 ಪಿ ಎಮ್ ಕ್ಕೆ ಸುಮಾರಿಗೆ
ಮುಧೋಳಕ್ಕೆ ಹೋಗಿ ಇರುವದಕ್ಕೆ ಪುಸ್ತಕ ತರುತ್ತೇನೆ ಅಂತಾ ಹೇಳಿ ಹೋದನು. ರಾತ್ರಿ 9:45 ಗಂಟೆ
ಸುಮಾರಿಗೆ ನಮ್ಮೂರ ಯಲ್ಲಪ್ಪ ತಂದೆ ನರಸಪ್ಪ ಡಬ್ಬು ಇತನು ನನಗೆ ನಮ್ಮೂರ ಗೇಟ ಹತ್ತಿರ ಅಟೊ
ಪಲ್ಟಿಯಾಗಿದ್ದು ಇದರಿಂದ ಶಿವಪ್ಪ ಇತನಿಗೆ ಅಟೊ ಎದೆಯ ಮೇಲೆ ಬಿದ್ದು ಬಾರಿ ಗಾಯವಾಗಿ ಬಹಳ
ಸೀರಿಯಸ್ ಇದ್ದಾನೆ ನೀವು ಬೆಗೆ ಬರ್ರಿ ಅಂತಾ ತಿಳಿಸಿದನು ಆಗಾ ನಾನು ಹಾಗೂ ನನ್ನ ಹೆಂಡತಿ
ಲಕ್ಷಮಮ್ಮ ಹಾಗೂ ನಮ್ಮ ಅಣ್ಣನಾದ ಶಂಕ್ರಮ್ಮ ತಂದೆ ನಾಗಪ್ಪ ನಮ್ಮ ತಮ್ಮನಾದ ಜಯಪ್ಪ ತಂದೆ ಯಂಕಪ್ಪ
ಹರಿಜನ ಇತರರೂ ಕೂಡಿ ರಾತ್ರಿ 10:15 ಗಂಟೆ ಸುಮಾರಿಗೆ ನಮ್ಮೂರ ಗೇಟ ಹತ್ತಿರ ಬಂದು ನೊಡಲಾಗಿ
ಲಿಂಗಂಪಲ್ಲಿ ಗೇಟ ಹತ್ತಿರ ತಿರುವಿನಲ್ಲಿ ನನ್ನ ಮಗ ಶಿವಪ್ಪ ಇತನು ಗಾಯ ಹೊಂದಿ ಸತ್ತಂತೆ
ಬಿದ್ದಿದ್ದನು. ಇತನಿಗೆ ನೊಡಲಾಗಿ ಇತನ ಎಡಗಡೆ ಎದೆಯ ಮೇಲೆ ಅಟೋ ಬಿದ್ದಿದ್ದರಿಂದ ಬಾರಿ ಗುಪ್ತಗಾಯ
ಹಾಗೂ ತರುಚಿಯ ಗಾಯವಾಗಿದ್ದು, ಅಲ್ಲದೆ ಬಲಗೈ ರೆಟ್ಟೆಗೆ , ಬಲಗೈ ಮುಂಗೈಗೆ ಬಲಮಗ್ಗಲಿಗೆ, ಸೊಂಟಕ್ಕೆ
ಹಾಗೂ ಎರಡು ಕಾಲುಗಳಿಗೆ ಅಲ್ಲಲ್ಲಿ ತರುಚಿದ ಗಾಯಗಳಾಗಿ ಸ್ಥಳದಲ್ಲೆ
ಮೃತಪಟ್ಟಿದ್ದು ನಮ್ಮೂರ ಜಗದೀಶ ತಂದೆ ತುಳಜಪ್ಪ
ಕಲಾಲ ಇವರ ಅಟೊ ಇದ್ದು ಇದರ ನಂ. ಕೆ ಎ-32 ಎ-7598 ಅಂತಾ ಇದ್ದು ಸದರಿ ಅಟೊ ಚಾಲಕ ಜಗದೀಶ ಇವನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ
ಠಾಣೆ : ದಿನಾಂಕ 14-02-2014 ರಂದು ಸಾಯಂಕಾಲ 6-45 ಗಂಟೆಗೆ ಮಾನ್ಯ ಆರಕ್ಷಕ ವೃತ್ತ ನಿರೀಕ್ಷಕರು ಗ್ರಾಮೀಣ
ವೃತ್ತ ಗುಲಬರ್ಗಾ ರವರು ಕಮಲಾಫೂರ ಬಸ್ ನಿಲ್ದಾಣದ ಹತ್ತಿರ ಒಂದು ಕ್ರೂಜರ್ ಜೀಫ್ ನಂ: ಎಪಿ-22 – ವಿ – 1418 ನೇದ್ದ ರ ಚಾಲಕನು ತನ್ನ ವಾಹನದಲ್ಲಿ
ಪ್ರಯಾಣಿಕರನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಮ್ಮ ಜೀಪಿಗೆ ಓವರಟೇಕ್ ಮಾಡಿಕೊಂಡು ಹೋಗುತ್ತಿದ್ದಾಗ ನಾನು ಮತ್ತು ಸಿಬ್ಬಂದಿಯವರಾದ ದತ್ತಾತ್ರೇಯ ಸಿಪಿಸಿ 284 ಮತ್ತು ರಾಜಕುಮಾರ ಗಂಧೆ ಸಿಪಿಸಿ 550 ಗ್ರಾಮೀಣ ಪೊಲೀಸ್ ಠಾಣೆ ರವರು ಕೈ ಸನ್ನೆ ಮಾಡಿ ಸದರಿ ಕ್ರೂಜರ ಜೀಪ್ ಚಾಲಕನಿಗೆ ತನ್ನ ವಾಹನವನ್ನು ನಿಲ್ಲಿಸಲು ಸೂಚಿಸಿದರೂ ಸಹ ನಿಲ್ಲಿಸದೇ ಅತೀವೇಗವಾಗಿ ತನ್ನ ವಾಹನ ತೆಗೆದುಕೊಂಡು ಹೋದನು. ಆಗ ನಾವು ನಮ್ಮ ಜೀಪಿನಲ್ಲಿ ಬೆನ್ನಟ್ಟಿ ಬೆಳಕೋಟಾ ಕ್ರಾಸ್ ಹತ್ತಿರ ಸದರಿ ಕ್ರೂಜರ ಜೀಫನ್ನು ತಡೆದು ನಿಲ್ಲಿಸಿ ಅದರ ಚಾಲಕನಿಗೆ ವಿಚಾರಿಸಲಾಗಿ ಆತನು ತನ್ನ ಹೆಸರು ಅನೀಲಕುಮಾರ ತಂದೆ ಶಿವಾಜಿ ಕಲಾಲ ವ: 25 ವರ್ಷ ಜಾ:ಶೇರಿಗಾರ ಉ: ಚಾಲಕ ಸಾ: ಡೊಂಗ ರಗಾಂವ ತಾ:ಜಿ: ಗುಲಬರ್ಗಾ ಅಂತಾ ತಿಳಿಸಿದ್ದು, ಕ್ರೂಜರ ಜೀಫಿನಲ್ಲಿ ಇದ್ದ ಪ್ರಯಾಣಿಕರನ್ನು ಕೆಳಗೆ
ಇಳಿಸಿ ಸದರಿ ಕ್ರೂಜರ ಜೀಪನ್ನು ಜಪ್ತುಪಡಿಸಿಕೊಂಡು ಕ್ರೂಜರ ಜೀಪ ಚಾಲಕನೊಂದಿಗೆ ಕಮಲಾಪೂರ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಮಲಾಪೂರ ಠಾಣೆ
: ದಿನಾಂಕ 14-02-2014 ರಂದು
ಸಾಯಂಕಾಲ 7-00 ಗಂಟೆಗೆ ಮಾನ್ಯ ಆರಕ್ಷಕ ವೃತ್ತ ನಿರೀಕ್ಷಕರು ಗ್ರಾಮೀಣ ವೃತ್ತ ಗುಲಬರ್ಗಾ ರವರು ದಿನಾಂಕ:
14-02-2014 ರಂದು ಸಾಯಂಕಾಲ 06-30 ಗಂಟೆಗೆ ನಾನು ಬೀದರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಸಾಕ್ಷಿ
ಕುರಿತು ಹೋಗಿ ಮರಳಿ ಗುಲಬರ್ಗಾಕ್ಕೆ ಹೋಗುವಾಗ ಕಮಲಾಫೂರ ಬಸ್ ನಿಲ್ದಾಣದ ಹತ್ತಿರ ಒಂದು ಕ್ರೂಜರ್ ಜೀಫ್ ನಂ: ಕೆಎ – 32 – ಬಿ – 8588 ನೇದ್ದ ರ ಚಾಲಕನು ತನ್ನ ವಾಹನದಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಮ್ಮ ಜೀಪಿಗೆ ಓವರಟೇಕ್ ಮಾಡಿಕೊಂಡು
ಹೋಗುತ್ತಿದ್ದಾಗ ನಾನು ಮತ್ತು ಸಿಬ್ಬಂದಿಯವರಾದ ದತ್ತಾತ್ರೇಯ ಸಿಪಿಸಿ 284 ಮತ್ತುರಾಜಕುಮಾರ ಗಂಧೆ ಸಿಪಿಸಿ 550 ಗ್ರಾಮೀಣ ಪೊಲೀಸ್ ಠಾಣೆ ರವರು ಕೈ ಸನ್ನೆ ಮಾಡಿ ಸದರಿ ಕ್ರೂಜರ ಜೀಪ್ ಚಾಲಕನಿಗೆ ತನ್ನ ವಾಹನವನ್ನು ನಿಲ್ಲಿಸಲು ಸೂಚಿಸಿದರೂ ಸಹ ನಿಲ್ಲಿಸದೇ ಅತೀವೇಗವಾಗಿ ತನ್ನ ವಾಹನ ತೆಗೆದುಕೊಂಡು ಹೋದನು. ಆಗ ನಾವು ನಮ್ಮ ಜೀಪಿನಲ್ಲಿ ಬೆನ್ನಟ್ಟಿ ಬೆಳಕೋಟಾ ಕ್ರಾಸ್ ಹತ್ತಿರ ಸದರಿ ಕ್ರೂಜರ ಜೀಫನ್ನು ತಡೆದು ನಿಲ್ಲಿಸಿ ಅದರ ಚಾಲಕನಿಗೆ ವಿಚಾರಿಸಲಾಗಿ ಆತನು ತನ್ನ ಹೆಸರು ಆನಂದ ತಂದೆ ಸಂಗಣ್ಣ ಕುಂಬಾರ ವ: 25 ವರ್ಷ ಜಾ; ಕುಂಬಾರ ಉ:ಚಾಲಕ ಸಾ:
ಮನೆ ನಂ: 1/885 ಪ್ಲಾಟ್ ನಂ: 198 ಬಿ ಸರ್ವೆ ನಂ: 65 , ರಾಠಿ ಆಸ್ಪತ್ರೆ
ಎದುರುಗಡೆ ವೆಂಕಟೇಶ ನಗರ ಗುಲಬರ್ಗಾ ತಾ:ಜಿ: ಗುಲಬರ್ಗಾ ಅಂತಾ ತಿಳಿಸಿದ್ದು, ಕ್ರೂಜರ ಜೀಫಿನಲ್ಲಿ ಇದ್ದ ಪ್ರಯಾಣಿಕರನ್ನು ಕೆಳಗೆ
ಇಳಿಸಿ ಸದರಿ ಕ್ರೂಜರ ಜೀಪನ್ನು ಜಪ್ತುಪಡಿಸಿಕೊಂಡು ಕ್ರೂಜರ ಜೀಪ ಚಾಲಕನೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ
ನಗರ ಠಾಣೆ : ಶ್ರೀನಿವಾಸ ತಂದೆ ಶಿವಯ್ಯಾ ಗುತ್ತೇದಾರ
ಸಾ: ಮನೆ ನಂ 1-74/ಎ ಜಯಶಿವದಾಮ ಪರಿವಾರ ಹೋಟಲ್ ಹಿಂದುಗಡೆ ಸ್ಟೇಷನ ರೋಡ ಗುಲಬರ್ಗಾ ಇವರು ದಿನಾಂಕ : 31-01-2014 ರಂದು ರಾತ್ರಿ 09-30 ಗಂಟೆ ಸುಮಾರಿಗೆ ತಾನು ತನ್ನ ಹೀರೋಹೊಂಡಾ
ಸ್ಪೇಂಡರ್ ಪ್ರೂ ಮೋಟಾರ ಸೈಕಲ ನಂ ಕೆಎ 32 ಎಕ್ಸ್ 7367 ನೇದ್ದನ್ನು ಗುಲಬರ್ಗಾ ನಗರದ ಬ್ರಹ್ಮಪೂರ ಬಡಾವಣೆಯ ಏಷ್ಯನ ಆರ್ಕೇಟ ಕಾಂಪ್ಲೇಕ್ಸ್ ದ ವಾಹನದ ಪಾರ್ಕಿಂಗ ಸ್ಥಳದಲ್ಲಿ ಮೋಟಾರ ಸೈಕಲ ನಿಲ್ಲಿಸಿ ನಾನು ಮೇಲೆ ಹೋಗಿ ನನ್ನ ಖಾಸಗಿ ಕೆಲಸ ಮುಗಿಸಿಕೊಂಡು ಮರಳಿ ರಾತ್ರಿ 10-15
ಗಂಟೆಗೆ ಕೆಳಗೆ ಬಂದು ನೋಡಲು ನನ್ನ ಮೋಟಾರ ಸೈಕಲ ಇರಲಿಲ್ಲ ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ಮೋಟಾರ
ಸೈಕಲ ಪತ್ತೆ ಯಾಗಿರುವದಿಲ್ಲ ನನ್ನ ಮೋಟಾರ ಸೈಕಲ ನಂ
ಕೆಎ 32 ಎಕ್ಸ್ 7367 ಅದರ ಅ.ಕಿ. 40000/- ರೂ. ಬೆಲೆ ಬಾಳುವದನ್ನು ಯಾರೊ ಅಪರಿಚಿತ
ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment