ವಾರಸುದಾರರಿಲ್ಲದ
ಮಾಲು ಜಪ್ತಿ ಕಳ್ಳಿಯ ಬಂಧನ :
ಚೌಕ
ಠಾಣೆ : ದಿನಾಂಕ 03-02-2014 ರಂದು 1215 ಪಿ.ಎಂಕ್ಕೆ
ಶ್ರೀ ಕಲ್ಯಾಣಿ ಹೊಸಮನಿ ಪಿ.ಐ ಚೌಕ ಮತ್ತು
ಸಿಬ್ಬಂದಿಯವರು ಕೂಡಿ ಬಜಾರ, ಕಿರಾಣಾ ಬಜಾರ, ಹುಮನಾಬಾದ ಬೇಸ್, ಬಂಬೂಬಜಾರ ಮಾರ್ಗವಾಗಿ ಎಮ್.ಎ.ಟಿ ಕ್ರಾಸ್
ಹತ್ತಿರ ಹೋದಾಗ ಒಬ್ಬಳು ನಮ್ಮ ಜೀಪ ಬರುತ್ತಿರುವದನ್ನು ನೋಡಿ ಒಂದು ಚೀಲ ಹಿಡಿದು ಕೊಂಡು ಓಡುವ
ಪ್ರಯತ್ನದಲ್ಲಿದ್ದಾಗ ನಮಗೆ ಸದರಿಯವಳ ಮೇಲೆ ಸಂಶಯ ಬಂದು ಸದರಿಯವಳಿಗೆ ಸಿಬ್ಬಂದಿಯವರ ಸಹಾದಿಂದ
ಹಿಡಿದು. ಅವಳ ಹೆಸರು ವಿಚಾರಿಸಲಾಗಿ ತನ್ನ ಹೆಸರು ಶಬೀನಾ ಗಂಡ ಮಹಾಂತೇಶ ಕಾಳೆ ಉಃ ಪೇಪರ ಆಯುವದು
ಸಾಃ ಮಾಂಗರವಾಡಿಗಲ್ಲಿ ಬಾಪುನಗರ ಗುಲಬರ್ಗಾ ಅಂತ ತಿಳಿಸಿದ್ದು ಸದರಿಯವಳ ಹತ್ತಿರ ಇದ್ದ ಚೀಲ
ನೋಡಲು ಪರಿಶೀಲಿಸಿ ಚೀಲದಲ್ಲಿ ಬೆಳೆಗಳಿಗೆ ಕ್ರೀಮಿನಾಷಕ ಔಷದಿ ಹೋಡೆಯುವ ಕಂಚಿನ ಛಡಿಗಳು, ಅಟೋ ಫೀಸ್ಟ್ನ್ ಇದ್ದು. ಮಾಲೀಕರು ಇಲ್ಲದೆ ವಸ್ತುಗಳುನ್ನು ತೆಗೆದು
ಕೊಂಡು ಹೋಗುತ್ತಿದ್ದರಿಂದ ಇವುಗಳ ಬಗ್ಗೆ ವಿಚಾರಿಸಲು ಯಾವುದೇ ಸಮಪರ್ಕ ವಿವರಣೆ ನೀಡಿಲಿಲ್ಲ, ಮತ್ತು ಸದರಿ ಮಾಲಿನ ಬಗ್ಗೆ ಯಾವುದೆ
ದಾಖಲಾತಿಗಳು ತನ್ನ ಹತ್ತಿರ ಇರುವದಿಲ್ಲ ಅಂತ ತಿಳಿಸಿದ್ದು ಸದರಿ ವಸ್ತಗಳು ಕಳತನ ಮಾಡಿ ತಂದಿದ್ದು
ಇರಬಹುದೆಂದು ಸದರಿಯವಳ ಮೇಲೆ ಬಲವಾದ ಸಂಶಯ ಬಂದಿದರಿಂದ ಸದರಿಯವಳ ಹತ್ತಿರ ಇದ್ದ 23,000/- ರೂ
ಕಿಮ್ಮತ್ತಿನ ಕಂಚಿ ಛಡಿ ಮತ್ತು ಬಿಡಿಭಾಗಗಳನ್ನು ವಶಪಡಿಸಿಕೊಂಡು ಆರೋಪಿತಳೊಂದಿಗೆ ಠಾಣೆಗೆ ಬಂದು
ಸದರಿಯವಳ ವಿರುದ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊಲೆ ಪ್ರಕರಣ
:
ನಿಂಬರ್ಗಾ
ಠಾಣೆ : ಶಿವಪ್ಪ ನಿಗಶೆಟ್ಟಿ ಮತ್ತು ಆಪಾಧಿತ ರಾಜಶೇಖರ ನಿಗಶೆಟ್ಟಿ ಇಬ್ಬರು
ಖಾಸ ಅಣ್ಣ ತಮ್ಮಂದಿರರಿದ್ದು ಇವರ ಹೋಲ ಸರ್ವೇ ನಂ 177 ನೇದ್ದರಲ್ಲಿ ತಲಾ 3 ಎಕರೆ ಜಮೀನು ಇದ್ದು
ಮತ್ತು ರಾಜಶೇಖರ ಪಾಲಿಗೆ ಬಂದ ಹೊಲದಲ್ಲಿ ಒಂದು ನೀರಿನ ಭಾವಿ ಇದ್ದು ಆ ಭಾವಿಯ ನೀರಿನ ಪಾಲಿಗಾಗಿ
ಇಬ್ಬರ ಮಧ್ಯ ಆಗಾಗ ತಂಟೆ ತಕರಾರು ಆತುತ್ತಾ ಬಂದು ದ್ವೇಶ ಬೆಳೆದಿದ್ದು, ದಿನಾಂಕ
04-02-2014 ರಂದು ಬೆಳಿಗ್ಗೆ ವಿಜಯಕುಮಾರ ಮತ್ತು
ಆತನ ತಂದೆಯಾದ ಶಿವಪ್ಪ ನಿಗಶೆಟ್ಟಿ ಇಬ್ಬರು ಕೂಡಿಕೊಂಡು ಗದ್ದೆಗೆ ನೀರು ಬಿಡಲು ಹೊಲಕ್ಕೆ
ಹೋಗಿದ್ದು ಹೊಲದಲ್ಲಿ ಬೆಳಿಗ್ಗೆ 0700 ಗಂಟೆಗೆ ಶಿವಪ್ಪ ನಿಗಶೆಟ್ಟಿ ಇತನಿಗೆ ಆಪಾಧಿತ ರಾಜಶೇಖರ
ನಿಗಶೆಟ್ಟಿ ಇತನು ನೀರಿನ ಪಾಳಿಯ ವಿಷಯದಲ್ಲಿ ಜಗಳ ತಗೆದು ಅವಾಚ್ಯವಾಗಿ ಬೈದು ಕೆಳಗೆ ಕೆಡವಿ
ಕಲ್ಲಿನಿಂದ ಮುಖಕ್ಕೆ ಮತ್ತು ತಲೆಗೆ ಜೆಜ್ಜಿ ಭಾರಿ ರಕ್ತಗಾಯ ಪಡೆಸಿ ಮೌಂಸ ಕಂಡ ಹೊರಬರುವಂತೆ
ಮಾಡಿ ಕೋಲೆ ಮಾಡಿರುತ್ತಾನೆ ಅಂತಾ ಶ್ರೀ ವಿಜುಯಕುಮಾರ
ತಂದೆ ಶೀವಪ್ಪ ನಿಗಶೆಟ್ಟಿ ಸಾ: ನಿಂಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಷಯದಲ್ಲಿ ನಿಂಬರ್ಗಾ ಪೊಲೀಸ್ ಠಾಣೆಯ ಆಪಾಧಿತನ ಮೇಲೆ ಕೋಲೆ
ಪ್ರಕರಣ ದಾಖಲಾಗಿರುತ್ತದೆ.
No comments:
Post a Comment