ಅನಧಿಕೃತ ಮಧ್ಯ
ಮಾರಾಟಗಾರನ ಬಂಧನ :
ರಟಕಲ ಠಾಣೆ : ರಟಕಲ ಪೊಲೀಸ ಠಾಣೆಯ ಸರಹದ್ದಿನ ಸಾಸರಗಾಂವ ಗ್ರಾಮದಲ್ಲಿ ಯಾರೋ ಒಬ್ಬ
ಅನದಿಕೃತವಾಗಿ ಕ್ವಾಟರ ಬಾಟಲಗಳು ಮಾರಾಟ ಮಾಡುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಅಕ್ಕಮಹಾದೇವಿ
ವಿ. ನೀಲೆ ಪಿ.ಎಸ್.ಐ ಸಂಗಡ ಸಿಬ್ಬಂದಿ ಜನರನ್ನು ಹಾಗು ಇಬ್ಬರು ಪಂಚರನ್ನು ಕರೆದು ಕೊಂಡು ಸದರಿ
ಗ್ರಾಮಕ್ಕೆ ಹೋಗಿ ಬಾತ್ಮಿ ಇದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ಅನದಿಕೃತವಾಗಿ
ಕ್ವಾಟರ ಬಾಟಲಗಳನ್ನು ಮಾರಾಟ ಮಾಡುತ್ತಿರುವುದನ್ನು ನೋಡಿ ಸಿಬ್ಬಂದಿ ಸಹಾಯದಿಂದ ಸದರಿಯವನಿಗೆ
ದಾಳಿ ಮಾಡಿ ಸಿದ್ದಪ್ಪ ತಂದೆ ಸಾಯಬಣ್ಣ ಮಡಿವಾಳ ಸಾ||ಸಾಸರಗಾಂವಇವನನ್ನು ಹಿಡಿದು ಸದರಿಯವನಿಂದ ನಗದು ಹಣ 100/- ರೂ ಹಾಗು ಯು.ಎಸ್ ವಿಸ್ಕಿ 180 ಎಂ.ಎಲ್
40 ಬಾಟಲಗಳು, ನಾಕೌಟ ಸ್ಟ್ರಾಂಗ
ಬೀರ 330 ಎಂ.ಎಲ್ 22 ಬಾಟಲಗಳು ಒಟ್ಟು ಅ.ಕಿ 2950/- ರೂ ನೇದ್ದನ್ನು ಪಂಚರ ಸಮಕ್ಷಮ ಜಪ್ತಿ
ಪಡಿಸಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ರಟಕಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ
ಠಾಣೆ : ಶ್ರೀ ಮುರಳಿಧರ ತಂದೆ ನಾರಾಣರಾವ ರವರು ದಿನಾಂಕ: 10-02-2014 ರಂದು
ಮಧ್ಯಾಹ್ನ 12=15 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ಇಇ 6055 ನೆದ್ದರ ಮೇಲೆ ರಘುನಾಥರಾವ ಈತನಿಗೆ ಹಿಂದೆ ಕೂಡಿಸಿಕೊಂಡು ಮನೆಯಿಂದ ಕೇಂದ್ರ ಬಸ್ ನಿಲ್ದಾಣದ ಮುಖಾಂತರ ಎಸ್.ವಿ.ಪಿ.ಸರ್ಕಲ್
ಕಡೆಗೆ ಬರುವ ಕುರಿತು ಆರ್.ಪಿ.ಸರ್ಕಲ್ ದಾಟಿ ಬಸ್ ಡಿಪೊ ಎದುರು ರೋಡ ಮೇಲೆ ಹಿಂದಿನಿಂದ ಟ್ಯಾಂಕರ
ನಂ: ಕೆಎ 29-6611 ನೆದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಬಂದು ನ್ಯಾಶನಲ್ ಪೆಟ್ರೋಲ್ ಪಂಪ ಕಡೆಗೆ ತಿರುಗಿಸಲು ಹೊಗಿ ನನ್ನ ಮೋ/ಸೈಕಲ್ ಕ್ಕೆ ಡಿಕ್ಕಿ ಪಡಿಸಿ
ಅಪಘಾತಮಾಡಿ ಫಿರ್ಯಾದಿಗೆ ಮತ್ತು ಆತನ ಮೋ/ಸೈಕಲ್ ಹಿಂದೆ ಕುಳಿತಿದ್ದ ರಘುನಾಥರಾವ ಇವರಿಗೆ
ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ವೈದ್ಯರ
ನಿರ್ಲಕ್ಷದಿಂದ ಗೃಹಿಣಿ ಸಾವು :
ಅಶೋಕ ನಗರ
ಠಾಣೆ : ಶ್ರೀ ರಾಜಶೇಖರ ತಂದೆ ಭೀಮರಾವ ದಪ್ಪೆದಾರ ಸಾ: ಎಲ್.ಐ.ಜಿ-10 ಶಾಂತಿನಗರ
ಗುಲಬರ್ಗಾ ರವರ ಹೆಂಡತಿ ಶೀಲಾ ಇವಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ, ನಮ್ಮ ಮನೆಯ ಹತ್ತಿರದ ಡಾ|| ಶೋಭಾ ಪಾಟೀಲ ರವರ ಹತ್ತಿರ ದಿನಾಂಕ 22-01-2014 ರಂದು
ತೋರಿಸಿದ್ದೆವು. ಆಗ ಅವರು ಸ್ಕ್ಯಾನಿಂಗ ಮಾಡಿಕೊಂಡು ಬರಲು ಹೇಳಿದ್ದರಿಂದ ಗಿರೀಶ ಸ್ಕಾನಿಂಗ
ಹತ್ತಿರ ಸ್ಕ್ಯಾನಿಂಗ ಮಾಡಿಸಿ ವರದಿ ಕೊಟ್ಟಾಗ ಅಪೇಂಡಿಕ್ಸ ಆಗಿರುತ್ತದೆ. ಅಪರೇಶನ ಮಾಡಿಸಬೇಕು ಅಂತಾ ಹೇಳಿದಾಗ ನಾವು
ಅಪರೇಶನ ಎಷ್ಟು ಖರ್ಚಾಗುತ್ತದೆ ಅಂತಾ ಕೇಳಿದಕ್ಕೆ 12,000/- ರೂ ಆಗುತ್ತದೆ ಅಂತಾ ಹೇಳಿದರು. ದಿನಾಂಕ 27-01-2014 ರಂದು ನನ್ನ
ಹೆಂಡತಿಗೆ ವಿಪರೀತ ಹೊಟ್ಟೆನೋವು ಆಗುತ್ತಿದ್ದರಿಂದ ನಾನು ಮತ್ತು ನನ್ನ ಅತ್ತೆ ಲಕ್ಷ್ಮಿಬಾಯಿ, ಬಾಬು ಎಲ್ಲರೂ ಕೂಡಿ ಡಾ|| ಶೋಭಾ ಪಾಟೀಲ ಹತ್ತಿರ ತೋರಿಸಿ
ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸಾಯಂಕಾಲ 6-00ಗಂಟೆಗೆ ಅಪೇಂಡೆಕ್ಸ
ಅಪರೇಶನ ಮಾಡಿರುತ್ತಾರೆ. 3 ದಿವಸ ಆಸ್ಪತ್ರೆಯಲ್ಲಿ ಇದ್ದು ದಿನಾಂಕ 01-02-2014 ರಂದು ಡಿಸಜಾರ್ಜ
ಮಾಡಿದರು. ಒಂದು ದಿವಸದ ನಂತರ ಜ್ವರ ಬರುತ್ತಿದ್ದರಿಂದ ಡಾ: ಶೋಭಾ ಪಾಟೀಲ ರವರಿಗೆ ತೊರಿಸಿದಾಗ
ಡಾ: ವೆಂಕಟೇಶ ದೇಶಾಯಿ ರವರ ಹತ್ತಿರ ತೊರಿಸಲು ಹೇಳಿದ್ದು, ಅವರು ಗುಳಿಗೆ ಕೊಟ್ಟರು. ನಂತರ ಪುನ: ದಿನಾಂಕ 04-02-2014 ರಂದು ಹೊಟ್ಟೆ ಉಬ್ಬಿದಂತೆ ಆಗಿ ಉಸಿರಾಡದ ತೊಂದರೆ ಆಗುತ್ತಿದ್ದರಿಂದ
ಡಾ|| ಶೋಬಾ ಪಾಟೀಲ ಹತ್ತಿರ ತೊರಿಸುವಾಗ ಆಸ್ಪತ್ರೆಯಲ್ಲಿಯೇ ನನ್ನ ಹೆಂಡತಿ ಬೆಹುಶಃ
ಆಗಿದಳು. ಆಗ ಡಾ|| ಶೋಬಾ ಪಾಟೀಲ ರವರು ಲೋ- ಬಿಪಿ ಮತ್ತು ಪಿತ್ತ ಹೆಚ್ಚಾಗಿರುತ್ತದೆ ಅಂತಾ
ಹೇಳಿ ಬಸವೇಶ್ವರ ಆಸ್ಪತ್ರೆಯಲ್ಲಿ ತೋರಿಸುವಂತೆ ರೇಪರ್ಡ ಮಾಡಿದರು. ಅಗ ಬಸವೇಶ್ವರ ಆಸ್ಪತ್ರೆಯಲ್ಲಿ ತೋರಿಸಿದಾಗ ಡಾಕ್ಟರ ರವರು ಅಪರೇಶನ
ಮಾಡಿದ ಜಾಗದಲ್ಲಿ ಪಸ್ಸ (ಕಿವಾ) ಆಗಿದೆ. ಅಂತಾ ಹೇಳಿ ಹೊಲಿಗೆಗಳನ್ನು ಬಿಚ್ಚಿ ಕಿವಾ
ತೆಗೆದಿದರು. ನಂತರ ನನ್ನ ಹೆಂಡತಿಯ ಸ್ಥೀತಿ ಗಂಭೀರ ಆಗಿದ್ದರಿಂದ ಅಲ್ಲಿಯೇ ಡಾಕ್ಟರ ರವರು
ಸೊಲ್ಲಾಪೂರಕ್ಕೆ ಒಯ್ಯಲು ಹೇಳಿದ್ದರಿಂದ ದಿನಾಂಕ 06-02-2014 ರಂದು ರಾತ್ರಿ ವೇಳೆಗೆ ಸೊಲ್ಲಾಪೂರದ
ಅಶ್ವಿನಿ ಆಸ್ಪತ್ರೆಗೆ ಒಯ್ದು ತೋರಿಸಿದಾಗ ಅಲ್ಲಿಯ ಡಾಕ್ಟರ ರವರು ಪೇಶಂಟ ಕಂಡಿಶನ ಕಾರಾಬ ಆಗಿದೆ
ಇದಕ್ಕೆ ನಾವು ಜವಾಬ್ದಾರರು ಅಲ್ಲಾ ಏನಾದರೂ ಆಗಲೀ ನಾವು ಜವಾಬ್ದಾರರು ಅಲ್ಲಾ ಅಂತಾ ಹೇಳಿದರು. ಆಗ ನಾವು ಏನಾದರೂ ಆಗಲೀ ನೀವು ಚಿಕಿತ್ಸೆ ಕೊಡುವಂತೆ ಕೇಳಿಕೊಂಡಾಗ 3 ದಿವಸ
ಸೊಲ್ಲಾಪೂರದ ಅಶ್ವಿನಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುವಾಗ ಅಪರೇಶನ ಮಾಡಿದ
ಡಾಕ್ಟರವರು ನೆಗಲಿಜನ್ಸಿ ಮಾಡಿದರಿಂದ ಈ ರೀತಿ ಆಗಿರುತ್ತದೆ ಎಂದು ಹೇಳಿದರು. ಚಿಕಿತ್ಸೆ
ಪಲಕಾರಿಯಾಗದೇ ಇಂದು ದಿನಾಂಕ 10-2-2014 ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ
ನನ್ನ ಹೆಂಡತಿ ಶೀಲಾ ಇವಳು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment