ಸರಗಳ್ಳತನ ಮಾಡಿದ ಕಳ್ಳನ ಬಂಧನ :
ಅಶೋಕ
ನಗರ ಠಾಣೆ : ಶ್ರೀಮತಿ ಪಾರ್ವತಿ ಗಂಡ ಶಾಂತಮಲ್ಲಪ್ಪ ಶಿವಕೇರಿ ಸಾ|| ಪ್ಲಾಟ ನಂ. 163 ಕಾಂತ ಕಾಲೋನಿ
ಗುಲಬರ್ಗಾ ಇವರು ಒಬ್ಬರೆ ಮನೆಯಲಿದ್ದಾಗ ಒಬ್ಬ ಗಂಡು ಮತ್ತು ಹೆಣ್ಣು
ಇಬ್ಬರು ಮೊಟಾರ ಸೈಕಲ ಮೇಲೆ ಬಂದು ಬಾಡಿಗೆ ಮನೆ ಬೇಕಾಗಿದೆ ಅಂತಾ ಕೇಳಲು ಬಂದು ಚಾಕು ತೊರಿಸ
ಹೇದರಿಸಿ ಹಲ್ಲೆಮಾಡಿ, ಪಿರ್ಯಾದಿ ಪಾರ್ವತಿ ಇವಳ ಕೊರಳಲ್ಲಿದ್ದ ಬಂಗಾರದ ಮಂಗಳಸೂತ್ರ ಸರವನ್ನು
ಕಿತ್ತುಕೊಂಡು ಹೋಗಿದ್ದು ಈ ಬಗ್ಗೆ ಅಶೋಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು ಶ್ರೀ ಕಾಶಿನಾಥ ತಳಿಕೇರಿ, ಅಪರ
ಎಸ್.ಪಿ.ಗುಲಬರ್ಗಾ, ಮತ್ತು ಶ್ರೀ ಸವಿಶಂಕರ ನಾಯಕ್ ಡಿವೈಎಸ್.ಪಿ “ಎ”
ಉಪ ವಿಬಾಗ ಗುಲಬರ್ಗಾ ರವರು ಸ್ಥಳಕ್ಕೆ ಭೇಟಿ ನೀಡಿ ಸರಗಳ್ಳರ ಬಂಧನ ಕುರಿತು ಅಶೋಕನಗರ ಪೊಲೀಸ ಠಾಣೆಯ
ಶ್ರೀಮತಿ ವಿಜಯಲಕ್ಷ್ಮಿ ಪಿಐ, ಕೆ.ಎಸ್.ಕಲ್ಲದೇವರು ಪಿ.ಎಸ್.ಐ (ಕಾ.ಸು), ಸತ್ಯನಾರಾಯಣ ಪಿ.ಎಸ್.ಐ
(ಅ.ವಿ), ಸಿಬ್ಬಂದಿಜನರಾದ ಸೇವುನಾಯಕ ಹೆಚ್.ಸಿ 250,ಸುರೇಶ ಪಿಸಿ 534, ರಫಿಯೊದ್ದಿನ್ ಪಿಸಿ 370, ಗುರುಮೂರ್ತಿ ಪಿಸಿ 269,
ಶಿವಪ್ರಕಾಶ ಪಿಸಿ 615, ಚಂದ್ರಕಾಂತ ಪಿಸಿ 176, ಪ್ರವಿಣ ಪಿಸಿ 907, ಬಸವರಾಜ ಪಿಸಿ 765, ಉಮ್ಮಣ್ಣ ಪಿಸಿ 998, ಡ್ರೈವರ
ಶಿವಯ್ಯ ಎಪಿಸಿ ರವರ ಒಳಗೊಂಡ ತಂಡವನ್ನು ರಚನೆ
ಮಾಡಿದ್ದು ಈ ತಂಡವು ಮಾನ್ಯ ಎಸ್.ಪಿ ಗುಲಬರ್ಗಾ, ಅಪರ ಎಸ್.ಪಿ ಗುಲಬರ್ಗಾ, ಡಿ.ಎಸ್.ಪಿ ಎ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ, ಕಮಲಾಪೂರ, ಹುಮನಾಬಾದ ಕಡೆ ಹೋಗಿ ಸರಗಳ್ಳತನ ಮಾಡಿದ
ಆರೋಪಿ ಮುಜೀಬ ತಂದೆ ಶೇಖ ಮಸ್ತಾನ ಮಚಕುರಿ ವಯಾ: 34 ವರ್ಷ ಸಾ:ಹುಡಗಿ ಗ್ರಾಮ ತಾ:ಹುಮನಾಬಾದ
ಜಿ:ಬಿದರ ಇತನನ್ನು ದಸ್ತಗಿರಿ ಮಾಡಿ ಒಂದು ಹೀರೊಹೊಂಡಾ ಫ್ಯಾಶನ್
ದ್ವಿ ಚಕ್ರ ವಾಹನ ನಂ: ಕೆಎ-32 ಎಸ್-9068,
ಬಂಗಾರದ ಮಂಗಳಸೂತ್ರ, ಒಂದು ಮೊಬೈಲ್, ಒಂದು ಬಟನ್ ಚಾಕು ಹೀಗೆ ಒಟ್ಟು ಅ.ಕಿ. 80,000/- ರೂ
ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
No comments:
Post a Comment