Police Bhavan Kalaburagi

Police Bhavan Kalaburagi

Wednesday, March 5, 2014

GULBARGA DIST REPORTED CRIMES

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ  04-03-2014 ರಂದು 2040 ಗಂಟೆಗೆ ನಿಂಬರ್ಗಾ ಗ್ರಾಮದ ಮರಗಮ್ಮ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಮತ್ತು ಸಿಬ್ಬಂಧಿ ಹಾಗೂ ಇಬ್ಬರು ಪಂಚರೊಂದಿಗೆ ಮರಗಮ್ಮ ದೇವರ ಗುಡಿಯ ಮರೆಯಾಗಿ ನಿಂತು ನೋಡಲಾಗಿ ಮರಗಮ್ಮ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ಮಲ್ಲಿಕಾರ್ಜುನ ತಂದೆ ಶರಣಪ್ಪ ಬಿದನಕರ  ಸಾ|| ನಿಂಬರ್ಗಾ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 2210/- ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ,  ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 04-03-2014 ರಂದು 1820 ಗಂಟೆಗೆ ಸಿಪಿಐ ಸಾಹೇಬ ಆಳಂದ ಮತ್ತು ನಾನು ಹಾಗೂ ಸಿಬ್ಬಂಧಿಯವರು ಸುಂಟನೂರ ಗ್ರಾಮದ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದ ಮಾಹಿತಿ ಮೇರೆಗೆ ಸಿಪಿಐ ಸಾಹೇಬ ಆಳಂದ ರವರು ಹಾಗೂ ನಾನು ಮತ್ತು ಸಿಬ್ಬಂಧಿಯವರು ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ಬಾಬು ತಂದೆ ಲಕ್ಷ್ಮಣ ವಗ್ಗನ ಸಾ|| ಸುಂಟನೂರ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 2205/-ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿಎರಡು ಮಟಕಾ ಅಂಕೆ ಸಂಖ್ಯೆಯುಳ್ಳ ಚಾರ್ಟಗಳನ್ನು ವಶಪಡಿಸಿಕೊಂಡು ಮರಳಿ ನಿಂಬರ್ಗಾ ಠಾಣೆಗೆ ಬಂದು ಸದರಿಯವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 04-03-2014 ರಂದು ದಂಗಾಪೂರ ಗ್ರಾಮದ ಮಲ್ಲಿಕಾರ್ಜುನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ಸಾಹೇಬರು ಆಳಂದ, ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಪಂಚರೊಂದಿಗೆ  ದಂಗಾಪೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವರ ಗುಡಿಯ ಮರೆಯಾಗಿ ನಿಂತು ನೋಡಲಾಗಿ 04 ಜನ ವ್ಯಕ್ತಿಗಳು ಮಲ್ಲಿಕಾರ್ಜುನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿಮಾಡಿ  04 ಆಸಾಮಿ ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಲು 01.  ಸಂತೋಷ ತಂದೆ ಶಿವಪುತ್ರಪ್ಪ ಶೇಗಜಿ 02. ದಾವಲಸಾಬ ತಂದೆ ಮೈಬೂಬಸಾಬ ಭೈರಾಮಡಗಿ 03. ಶರಣು ತಂದೆ ಈರಣ್ಣಾ ಮುಜ್ಜಿ 04. ಮೈಬೂಬ ತಂದೆ ಮದರಸಾಬ ಪಟೇಲ ಸಾ|| ಎಲ್ಲರು ದಂಗಾಪೂರ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ 2620/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಪಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಘಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ವಾಡಿ ಠಾಣೆ : ದಿನಾಂಕ 04-03-2014 ರಂದು ಕ್ರೊಜರ ಜೀಪ ನಂ ಕೆಎ-37 4552 ನೆದ್ದರಲ್ಲಿ ಹಲಕಟ್ಟಾ ಗ್ರಾಮದ ರಾಧಾ ಗಂಡ ಸಂತೊಷ ಅವಳ ಗಂಡ ಸಂತೊಷ ತಂದೆ ದುರ್ಗಣ್ಣಾ , ಅವರ ಮಕ್ಕಳು ಲಕ್ಷ್ಮಿ, ಮಲ್ಲು ಹಾಗು ಲಕ್ಷ್ಮಿ ಗಂಡ ವಿರೇಶ ಮತ್ತು ನಾಗರಾಜ ಕುಂಬಾರಹಳ್ಳಿ ಹಾಗು ಜರಿನಾಬೆಗಂ ಗಂಡ ಶೌಕತಲಿ, ದ್ಯಾವಮ್ಮಾ ಕರದಳ್ಳಿ ಹಾಗು ಇತರೆ 4,5 ಜನರು ಕೂಡಿಕೊಂಡು ಹೊರಟಾಗ ಲಾಡ್ಲಾಪೂರ ಆಚೆ ಭೊಜು ನಾಯಕ ತಾಂಡಾಕ್ಕೆ ಹೊಗುವ ಕ್ರಾಸ ಸಮೀಪ ಮುಖ್ಯ ರಸ್ತೆಗೆ ಹೊರಟಾಗ ಎದುರುಗಡೆಯಿಂದ ಅಂದರೆ ನಾಲವಾರ ಕಡೆಯಿಂದ ಲಾರಿ ನಂ ಕೆಎ-24 -7595 ನೆದ್ದರ ಚಾಲಕ ಅತಿವೇಗ ಹಾಗು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಕ್ರೊಜರ ಜೀಪಿ ನಂ ಕೆಎ-37 -4552 ನೆದ್ದಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಜೀಪ ಪಲ್ಟಿಯಾಗಿ ರೊಡಿನ ಕೆಳಗಡೆ ಬಿದ್ದು ಅದರಲ್ಲಿ ಕುಳಿತ ಮೇಲೆ ನಮೂದು ಮಾಡಿದವರಲ್ಲಿ ಝರಿನಾಬೆಗಂ ಇವಳ ತಲೆಗೆ ಭಾರಿ ರಕ್ತಗಾಯವಾಗಿ ಕೈಗಳೆರಡು ಮುರಿದು ಸ್ಥಳದಲ್ಲೆ ಮರಣ ಹೊಂದಿದ್ದು ಅಲ್ಲದೆ, ದ್ಯಾವಮ್ಮಾ ಇವಳು ಆಸ್ಪತ್ರೆಗೆ ತರುವ ಕಾಲಕ್ಕೆ ದಾರಿಯ ಮದ್ಯದಲ್ಲಿ ಮರಣ ಹೊಂದಿದ್ದು ಉಳಿದವರಿಗೆ ಮೈಕೈಗೆ ಅಲ್ಲಲ್ಲಿ ರಕ್ತ ಹಾಗು ಗುಪ್ತಗಾಯಗಳಾಗಿದ್ದು ಅಲ್ಲದೆ ಜೀಪಿನಲ್ಲಿದ್ದ ಇನ್ನು 4, 5 ಜನರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 04-03-2014 ರಂದು ಬೆಳಿಗ್ಗೆ 11-30 ಗಂಟೆಗೆ ಟೌನಹಾಲ ಕ್ರಾಸ ಹತ್ತಿರ ಅಟೋರಿಕ್ಷಾ ನಂಬರ ಕೆಎ-32 ಎ-9062 ರ ಚಾಲಕನು ಅಟೋರಿಕ್ಷಾ ವಾಹನದಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟೌನಹಾಲ ಕ್ರಾಸ ರೋಡ ಪಕ್ಕದಲ್ಲಿರುವ ನಮ್ಮ ಸಂಚಾರಿ ಸಿಗ್ನಲ ಲೈಟ ಕಂಬಗಳ ಕಟ್ಟಡಕ್ಕೆ  ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಟ್ಟಡ ಡ್ಯಾಮೇಜ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಸೇಡಂ ಠಾಣೆ : ಮಾದನ ಹಿಪ್ಪರಗಾ ಠಾಣೆ : ಶ್ರೀ.ಮಹಾಂತಪ್ಪಾ ತಂದೆ ಗುಂಡಪ್ಪಾ ಸಣ್ಣಮನಿ ಸಾ: ಮದಗುಣಕಿ ತಾ:ಆಳಂದ   ದಿನಾಂಕ 04-03-2014  ರಂದು ರಾತ್ರಿ 12:00 ಗಂಟೆಯಿಂದ 3 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರೂ ನಮ್ಮ ಮನೆಯ ಬಾಗಿಲು ಮುರಿದು ಒಳಗೆ ಹೋಗಿ ಮನೆಯಲ್ಲಿನ ಕಬ್ಬಿಣ ಪೇಟಿಗೆ ಮತ್ತು ಅದರಲ್ಲಿದ ನಗದು ಹಣ: 20,000/- ರೂಪಾಯಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮತ್ತು ನಮ್ಮೂರಲ್ಲಿ ರಮೇಶ ತಂದೆ ಶಿವರಾಚಪ್ಪಾ ಆಳಂದ ಇವರ ಮನೆಯ ಬಾಗಿಲು ಸಹ ಯಾರೋ ಕಳ್ಳರೂ ಮುರಿದು ಒಳಗೆ ಹೋಗಿ ಮನೆಯಲ್ಲಿನ ಪೇಟಿಗೆ,ಬಟ್ಟೆಬರೆ ಚೆಲ್ಲಾಪಿಲ್ಲಿ ಮಾಡಿದ್ದು ಮತ್ತು ನಮ್ಮೂರ ಅಪ್ಪಸಾಬ ತಂದೆ ರಾಚಪ್ಪಾ ಪಾಟೀಲ ಇವರ ಮನೆಗೂ ಸಹ ಹೋಗಿ ಬಾಗಿಲು ಮನೆಯಲ್ಲಿನ ಪೇಟಿಗೆ,ಬಟ್ಟೆಬರೆ ಚೆಲ್ಲಾಪಿಲ್ಲಿ ಮಾಡಿ ಕಳ್ಳತನ ಮಾಡಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ. ಭೀಮಶ್ಯಾ ತಂದೆ ಬಸವಣ್ಣಪ್ಪಾ ಆಳಂದ ಸಾ:ಮದಗುಣಕಿ ತಾ:ಆಳಂದ  ಇವರು ದಿನಾಂಕ 04-03-2014 ರಂದು ರಾತ್ರಿ 01:30 ಗಂಟೆಯಿಂದ 3 ಗಂಟೆಯ ಮಧ್ಯದ ಅವಧಿಯಲ್ಲಿ.ನನ್ನ ಅಣ್ಣನ ಮಗನಾದ ರಮೇಶ ಆಳಂದ ಇವರ ಮನೆಯ ಪಕ್ಕದಲ್ಲಿ ನಿಲ್ಲಿಸಿದ ನನ್ನ ಹಿರೋ ಹೂಂಡಾ ಕಂಪನಿಯ ಪ್ಯಾಶನ್ ಪ್ಲಸ್ ಮೋಟರ್ ಸೈಕಲ್ ನಂಬರ ಕೆ.ಎ:32 ಎಸ್:2848 ನೇದ್ದನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ನನ್ನ ಮೋಟರ್ ಸೈಕಲ್ ಅ.ಕಿಮ್ಮತ್ತು 24,000=00 ರೂಪಾಯಿಗಳು ಆಗಿರುತ್ತದೆ ಮತ್ತು ನನ್ನಂತೆ ನಮ್ಮೂರ ಮರಯ್ಯಾ ತಂದೆ ಸಿದ್ದಯ್ಯಾ ಹಿರೇಮಠ ಇವರ ಟಿ.ವಿ.ಎಸ್ ಎಕ್ಸ್.ಎಲ್. ಮೋಟರ್ ಸೈಕಲ್ ನಂ: ಎಮ್.ಹೆಚ್: 13 ಜಿ.ಬಿ.: 1628 ಅ.ಕಿ. 24,000/- ಇದನ್ನು ಸಹ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮೋಸ ಮಾಡಿದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಇಂದು ದಿನಾಂಕ ಎಸ್.ಎನ್ ಪಂಚಾಳ ಸರಕಾರಿ ಐಟಿಐ ಕಾಲೇಜ ಪ್ರಿನ್ಸಿಪಾಲ ಗುಲಬರ್ಗಾ ರವರು ದಿನಾಂಕ 30-05-2013  ರಂದು ಐಟಿಐ ಕಾಲೇಜಿನ ವಿಧ್ಯಾರ್ಥಿಗಳಾದ 1. ಸುನಿಲ ಕುಮಾರ ತಂದೆ ಬಸಣಗೌಡ ಮಾಲಿ ಪಾಟೀಲ, 2. ಶಿವರಾಜ ತಂದೆ ಶಾಂತವೀರಪ್ಪಾ ವೇದಶೇಟ್ಟಿ ಇವರಿಗೆ ಒಬ್ಬ ಅಪರಿಚಿತ ವ್ಯಕ್ತಿಯೊಬ್ಬನು ನಿಮಗೆ ಶಿಶ್ಯ ವೇತನ ಸಿಗುತ್ತದೆ ನಿಮ್ಮ ಜಾಹಿರಾತಿನ ಸಲುವಾಗಿ ಫೋಟೊ ತೆಗೆಯಬೇಕಾಗಿದೆ ಒಳ್ಳೆಯ ಬಟ್ಟೆ ಬಂಗಾರ ಸಾಮಾನುಗಳು ಹಾಕಿಕೊಂಡು ಬರಲು ತಿಳಿಸಿದ ಮೇರೆಗೆ ಸದರಿ ಇಬ್ಬರು ಹುಡುಗರು ಎರಡೆರಡು ತೊಲೆ ಬಂಗಾರ ಚೈನುಗಳು ಹಾಕಿಕೊಂಡು ಬಂದಿದ್ದು ಸದರಿ ಹುಡುಗರಿಗೆ ಏಷಿಯನ ಮಾಲಗೆ ಕರೆದುಕೊಂಡು ಹೋಗಿ ಬ್ಯೂಟಿ ಪಾರ್ಲರನಲ್ಲಿ ಕಳುಹಿಸುವಾಗ ಸದರಿ ಚೈನುಗಳು ತನ್ನ ಹತ್ತಿರ ಇಟ್ಟುಕೊಂಡು ಹುಡುಗರಿಗೆ ಬ್ಯೂಟಿ ಪಾರ್ಲರ ಅಂಗಡಿಯಲ್ಲಿ ಕಳುಹಿಸಿ ಮೋಸ ಮಾಡಿ ತೆಗೆದುಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :

ಅಫಜಲಪೂರ ಠಾಣೆ : ಶ್ರೀಮತಿ ಭುವನೇಶ್ವರಿ ಗಂಡ ಗುರುಶಾಂತಪ್ಪ ರಾಂಪುರ  ರವರಿಗೆ  ಸುಮಾರು 15 ವರ್ಷದ ಹಿಂದೆ ಅಫಜಲಪೂರ ಪಟ್ಟಣದ ಮಳೆಪ್ಪ ತಂದೆ ಗುರುಶಾಂತಪ್ಪ ರಾಂಪುರ ರವರೊಂದಿಗೆ ಮದುವೆಯಾಗಿದ್ದು ಇರುತ್ತದೆ. ಸದ್ಯ ನಮಗೆ 3 ಜನ ಮಕ್ಕಳಿದ್ದು ನನ್ನ ಗಂಡನ ಅಣ್ಣ ತಮ್ಮಂದಿರರೆಲ್ಲರು ಬೇರೆ ಬೇರೆಯಾಗಿ ಉಪಜೀವಿಸುತ್ತಿದ್ದಾರೆ, ಅದರಂತೆ ನಾವು ಸಹ ಬೇರೆಯಾಗಿ ಸಂಸಾರ ಮಾಡುತ್ತಿದ್ದೇವು. ನನ್ನ ಗಂಡ ಈಗ ಸುಮಾರು 4-5 ವರ್ಷಗಳಿಂದ ನನ್ನ ಮೇಲೆ ವಿನಾಕಾರಣ ಸಂಶಯ ಪಟ್ಟು ಅವಾಚ್ಯವಾಗಿ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ಈ ವಿಷಯವನ್ನು ನಾನು ನನ್ನ ತವರು ಮನೆಯವರಿಗೆ ಆಗಾಗ ಹೇಳುತ್ತಾ ಬಂದಿರುತ್ತೇನೆ. ನನ್ನ ತವರು ಮನೆಯವರು ಕೂಡ ನನ್ನ ಗಂಡನಿಗೆ ಬುದ್ದಿವಾದ ಹೇಳಿರುತ್ತಾರೆ. ಆದರು ಸಹ ನನ್ನ ಗಂಡ ನನಗೆ ಹಿಂಸಿಸುತ್ತಾ ಬಂದಿರುತ್ತಾನೆ. ದಿನಾಂಕ 27-02-2014 ರಂದು ಬೆಳಿಗ್ಗೆ 6 ಗಂಟೆಗೆ ನಾನು ಅಫಜಲಪೂರದ ನಮ್ಮ ಮನೆಯಲ್ಲಿ ಇದ್ದಾಗ ನನ್ನ ಗಂಡ ನನಗೆ ಅವಾಚ್ಯವಾಗಿ ಬೈಯುತ್ತಿದ್ದನು. ನಾನು ಯಾಕ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ನನ್ನೊಂದಿಗೆ ವಾದ ಮಾಡತಿಯೇನೆ ಅಂತಾ ಅಂದು ಕೈಯಿಂದ ನನ್ನ ಕಪಾಳ ಮೇಲೆ ಹೋಡೆದು  ನಾನು ವಿರೊಧ ಮಾಡಿದ್ದಕ್ಕೆ ಅಲ್ಲೆ ಮನೆಯಲ್ಲಿದ್ದ ರಾಡನ್ನು ತೆಗೆದುಕೊಂಡು ನನ್ನ ಎರಡು ಮೊಳಕಾಲ ಕೆಳಗೆ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: