Police Bhavan Kalaburagi

Police Bhavan Kalaburagi

Friday, March 14, 2014

Gulbarga District Reported Crimes

ಇಸ್ಪೀಟ ಜೂಜಾಟ ನಿರತ ವ್ಯಕ್ತಿಗಳ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 13-03-2014 ರಂದು 4:00 ಗಂಟೆಗೆ ವಿಶ್ವವಿದ್ಯಾಲಯ ಪೊಲೀಸ ಠಾಣಾ ಸರಹದ್ದಿಯಲ್ಲಿ ಇರುವ ಹಾಗರಗಾ ರೋಡಿನ ದುಬೈ ಫಹೀಮ ಇವರ ಹೊಲದ ಎದುರು ರೋಡಿನ ಪಕ್ಕದಲ್ಲಿ  ಕೆಲವು ಜನರು ಅಂದರ ಬಾಹರ ಇಸ್ಪೀಟ ಜೂಜಾಟ ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾರೆ ಎಂಬ ಖಚಿತ ಬಾತ್ಮಿ ಬಂದ ಮೇರೆಗೆ ಸಿ.ಪಿ.ಐ ಎಮ್.ಬಿ.ನಗರ ಪಿ.ಎಸ್.ಐ. ವಿಶ್ವವಿದ್ಯಾಲಯ ಹಾಗು ಸಿಬ್ಬಂದಿಯ ವರು ಮತ್ತು ಪಂಚರೊಂದಿಗೆ  ದುಬೈ ಫಹೀಮ ಇವರ ಹೊಲ ಇನ್ನು ಮುಂದೆ ಇರುವಂತೆ ರೋಡಿನ ಮೇಲೆ ಜೀಪ ನಿಲ್ಲಿಸಿ ಅಲ್ಲಿಂದ ಇಳಿದು ಎಲ್ಲರೂ ನಡೆದುಕೊಂಡು ಹೋಗಿ ಕಂಟಿಗಳ ಮರೆಯಲ್ಲಿ ನಿಂತು ನಾವು ಮತ್ತು ಪಂಚರು ನೋಡಲಾಗಿ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗೆಳ ಸಹಾಯದಿಂದ ಹಣವನ್ನು ಫಣಕ್ಕಿಟ್ಟು ಅಂದರ ಬಾಹರ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿಯಲು 7 ಜನರು ಸಿಕ್ಕಿ ಬಿದಿದ್ದು ಇಬ್ಬರು ಓಡಿ ಹೋಗಿದ್ದು. ಸಿಕ್ಕಿಬಿದ್ದವರ ಹೆಸರು ವಿಳಾಸ ವಿಚಾರಿಸಲಾಗಿ 1) ಆಸೀಪ ತಂದೆ ಮಹ್ಮದ ರಫೀಕ ಶೇಖ ಸಾ: ಮಹಿಬೂಬ ನಗರ ಗುಲಬರ್ಗಾ   2) ಮೈನೋದ್ದಿನ ತಂದೆ ರೇಹಮಾನ ಸಾಬ ಹಾಗರಗಾ ಸಾ: ಗುಲಬರ್ಗ 3) ಮಹ್ಮದ ರಫೀಕ ತಂದೆ ಅಬ್ದುಲ ಸುಕುರ, ಸಾ : ಗುಲಬರ್ಗಾ4) ಮಹ್ಮದ ಮಸ್ತಾನ ತಂದೆ ಶಬ್ಬಿರಸಾಬ ಸಾ: ಮಾಲಗತ್ತಿ ಕ್ರಾಸ ಗುಲಬರ್ಗಾ  5) ಚಂದ್ರಕಾಂತ ತಂದೆ ಗುಂಡಪ್ಪ ಸಿಂಗೆನವರ ಸಾ: ಬಾಬು ಜಗರಜೀವನರಾಮ ಕಾಲನಿ ಗುಲಬರ್ಗಾ 6) ಖಾಜಾ ತಂದೆ ಬಾಬುಮಿಯಾ ಸಾ: ಅಬುಬಕರ ಕಾಲನಿ ಗುಲಬರ್ಗಾ  7) ಅಮಜದ ತಂದೆ ಯುಸೂಫ  ಸಾ: ಅಬುಬ ಕರ ಕಾಲನಿ ಗುಲಬರ್ಗಾ ಸದರಿಯವರಿಂದ  ಒಟ್ಟು ಹಣ 7000 /- ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತ ಮಾಡಿಕೊಂಡು  ಸದರಿ ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಕಿಶನ ತಂದೆ ಠಾಕರು ಚವ್ಹಾಣ ಸಾ; ಹಾವನೂರ ತಾ;ಅಪ್ಜಲಪೂರ ಜಿ;ಗುಲಬರ್ಗಾ ಇವರ ಮಗಳಾದ ಶಾಂತಾಬಾಯಿ ವಯಸ್ಸು 17 ವರ್ಷ 9 ತಿಂಗಳು ಇವಳು ಸರಕಾರಿ ಮಹಿಳಾ ಕಾಲೇಜಿನಲ್ಲಿ ದ್ವೀತಿಯ ವರ್ಷದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ಳು. ದಿನಾಂಕ;04.03.2013 ರಂದು 9 ಎ.ಎಂಕ್ಕೆ ನಿಲಕಂಠರಾವ ತಂದೆ ಯಶವಂತರಾವ ಇಸ್ರಿ ಇವನು ನನ್ನ ಮಗಳಿಗೆ ಇಚ್ಚೆಯ ವಿರುದ್ದ ಬಲ ಪ್ರಯೋಗ ಮಾಡಿ ಅಪಹರಿಸಿರುತ್ತಾನೆ. ಆಗಾಗ ನನ್ನ ಮಗಳಿಗೆ ನೀಲಕಂಠ ಇತನು ಅಪಹರಣ ಮಾಡಿಕೊಂಡು ಹೋಗುತ್ತೇನೆ ಅಂತಾ ಕಿರುಕುಳ ಕೊಡುತ್ತಿದ್ದನು. ಈ ವಿಷಯವನ್ನು ನಾನು ನೀಲಕಂಠ ಇವರ ತಂದೆಯಾದ ಯಶವಂತರಾವ ಇಸ್ರಿ ಇವರಿಗೆ ತಿಳಸಿದಾಗ ಅವರು ನನಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ನಾನು ನಿನ್ನಿಂದ ಕಾನೂನು ಕಲಿಯಬೇಕಾಗಿಲ್ಲ. ನಿನ್ನ ಮಗಳಿಗೆ ಒಂದು ದಿವಸವಾದರೂ ಅಪಹರಿಸುವದರ ಸಲುವಾಗಿ ನಾನು ನೀಲಕಂಠ ಇತನಿಗೆ ಸಹಾಯ ಮಾಡುವದಾಗಿ ನನ್ನನ್ನು ಮನಬಂದಂತೆ ಬೈದು ಬೆದರಿಕೆ ಹಾಕಿರುತ್ತಾನೆ. ನನ್ನ ಮಗಳಿಗೆ ಅಪಹರಿಸಿ 8 ದಿನಗಳು ಕಳೆಯುತ್ತಿದ್ದರು ದೂರು ಕೊಡಲಾರದೆ ಹಾಗೆ ಭಯ ಹಾಕಿರುವದರಿಂದ ನಾವು ಭಯಬೀತರಾಗಿರುತ್ತೇವೆ. ನನ್ನ ಮಗಳಿಗೆ ಅಪಹರಿಸುವದರ ಸಲುವಾಗಿ ಯಶವಂತರಾವ ಇಸ್ರಿ ಮತ್ತು ಸಂಗಮ್ಮ ಇಸ್ರಿ ಸಾ;ಹಾವನೂರ ಇವರು ತಮ್ಮ ಮಗನಿಗೆ ಪ್ರಚೋದನೆ ಕೊಟ್ಟು ಪ್ರೇರೆಪಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರಾಜು ತಂದೆ ವಿಠ್ಠಲ ಜಮಾದಾರ ಸಾ||ಮಲ್ಲಾಬಾದ ರವರು ದಿನಾಂಕ 13-03-2014 ರಂದು ಬೆಳಿಗ್ಗೆ ನಮ್ಮ ತಾಯಿ ಮತ್ತು ನಮ್ಮ ತಮ್ಮ ಇಬ್ಬರು ಹೊಲ ಪಾಲಿಗೆ ಹಚ್ಚುವ ಸಂಭಂದ ಮ್ಲಲಾಬಾದ ಗ್ರಾಮಕ್ಕೆ ಬಂದಿರುತ್ತಾರೆ, ಅದರಂತೆ ನಾನು ನಮ್ಮ ತಾಯಿ ಮತ್ತು ತಮ್ಮ ಸಂತೋಷ ಇವರ ಹತ್ತಿರ ಹೋಗಿ, ನಮ್ಮ ತಾಯಿಗೆ ಸಾಲಾ ತಗೊಂಡಿರಿ, ಈಗ ಮಂದಿ ನನಗ ನಿಮ್ಮ ಅವ್ವ ಸಾಲಾ ತಗೊಂಡಾಳ, ಆ ರೋಕ್ಕಾ ನೀನು ಕೋಡು ಅಂತಾ ದಿನಾಲೂ ಕೇಳಾಕತ್ತಾರ, ಹೊಲದ ಬೇಳೆ ಬಂದಿದ ರೋಕ್ಕಾನು ನೀವೆ ತಗೊತಿರಿ, ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಲಿ ಮಾಡಿ ಸಾಲಾ ತಿರಿಸೊದು ಆಗಲ್ಲ, ಅದಕ್ಕ ಈಗ ರೋಕ್ಕಾ ಕೊಟ್ಟು ಹೋಗಿರಿ ಅಂತಾ ಅಂದೆನು, ಅದಕ್ಕೆ ನನ್ನ ತಾಯಿ ಮತ್ತು ನನ್ನ ತಮ್ಮ ಸಂತೋಷ ಇಬ್ಬರು ಸಾಲಾ ತಗೊಂಡೊರು ನಾವು-ಕೊಡೊರು ನಾವೆ, ನಡಬರಕ ನಿಂದೆನೊ ಮಗನಾ ಅಂತಾ ನನ್ನ ತಮ್ಮ ಸಂತೋಷ ಬೈದನು, ಆಗ ನಾನು ಸಾಲಾ ನಿವೇ ತಗೊಂಡಿರಿ ಆದರ ಮಂದಿ ನನಗ ಕೇಳಾಕತ್ತಾರ ಅದಕ್ಕೆ ಕೋಡ್ರಿ ಅಂತಾ ಹೋಳೇದಕ್ಕ ಬಂದಿನಿ ಅಂತಾ ಹೇಳಿ ಅಲ್ಲಿಂದ ಹೊಂಟೆನು, ಆಗ ನನ್ನ ತಮ್ಮ ಸಂತೋಷ ಈತನು ಎಲ್ಲಿಗಿ ಹೊಗ್ತಿ ತಡಿ ಮಗನಾ ಅಂತಾ ಹೇಳಿ ನನಗೆ ತಡೆದು ನಿಲ್ಲಿಸಿ ಹೊಲಸ ಹೊಲಸ ಬೈಯ ಹತ್ತಿದನು, ಆಗ ನನಗೆ ಮತ್ತು ನನ್ನ ತಮ್ಮ ಸಂತೋಷ ಇಬ್ಬರಿಗೂ ಬಾಯಿ ತಕರಾರು ಆಗುತ್ತಿತ್ತು, ಸಂತೋಷ ಈತನು ಅಲ್ಲಿಯೆ ಬಿದ್ದ ಒಂದು ಕಬ್ಬಿಣದ ಪಟ್ಟಿಯನ್ನು ತಗೆದುಕೊಂಡು ಬಲವಾಗಿ ನನ್ನ ಏಡ ಕಪಾಳದ ಮೇಲೆ ಹೊಡೆದು ಬಾರಿ ರಕ್ತಗಾಯ ಪಡಿಸಿದನು, ಆಗ ನಾನು ಕೇಳಗೆ ಬಿದ್ದಿದ್ದು ನನ್ನ ತಾಯಿ ಕೈಯಿಂದ ಏಡ ಮಗ್ಗಲಿಗೇ ಹೊಡೆದಿ ರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಆಳಂದ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಶರಣಪ್ಪಾ ವಿಭೂತಿ ಪಾಟೀಲ್ ಸಾ|| ಜೈನಗಲ್ಲಿ ಆಳಂದ ರವರ ಮಗ ಶಿವರಾಜ ಇತನಿಗೆ ಈ 3 ವರ್ಷದ ಹಿಂದೆ ಆಳಂದ ಪಟ್ಟಣದ ಪೂಜಾ ತಂದೆ ಸಿದ್ರಾಮಪ್ಪಾ ಪಾಟೀಲ್ ಇವಳೊಂದಿಗೆ ಮದುವೆ ಮಾಡಿದ್ದು ಮಕ್ಕಲಾಗಿರುವುದಿಲ್ಲ, ಸದರಿ ನನ್ನ ಸೊಸೆ ಎವ್ಹಿ ಪಾಟೀಲ್ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ಮೊದಲನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಾಳೆ, ನನ್ನ ಮಗ ಶಿವರಾಜನು ಹೊಟೇಲ್ ನೋಡಿಕೊಳ್ಳುತ್ತಾನೆ, ನಾವೆಲ್ಲರೂ ಮನೆಯಲ್ಲಿ ಒಟ್ಟಿಗೆಯಿಂದ ಅನ್ಯೋನ್ಯವಾಗಿ ಇರುತ್ತೇವೆ,   ದಿನಾಂಕ 12-03-2014  ರಂದು ಪ್ರತಿ ದಿವಸದಂತೆ ನನ್ನ ಸೊಸೆ ಪೂಜಾ ಇವಳು ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಕಾಲೇಜಿಗೆ ಹೋಗಿದ್ದು ಸಾಯಂಕಾಲವಾದರೂ ಮನೆಗೆ ಬರದೆ ಇದ್ದರಿಂದ ಆಕೆಯ ಮೋಬಾಯಿಲ್ ನಂ 9731292102 ನೇದಕ್ಕೆ ಕರೆ ಮಾಡಿದಾಗ ನಾಟ ರೀಚೇಬಲ್ ಬರುತ್ತಿದ್ದರಿಂದ ನಾವು ಕಾಲೇಜಿಗೆ  ಹೋಗಿ ವಿಚಾರಿಸಿದ್ದು ಸದರಿಯವಳು ಕಾಲೇಜಿಗೆ ಬಂದಿರುವುದಿಲ್ಲ ಅಂತಾ ತಳಿಸಿರುತ್ತಾರೆ, ನಾವು ನಮ್ಮ ನೆಂಟರಿಷ್ಟರಿಗೆ ಆಪ್ತರಿಗೆ ದೂರವಾಣಿ ಅಥವಾ ಫೋನ್ ಮೂಲಕ ಪೂಜಾ ಬಂದ ಬಗ್ಗೆ ವಿಚಾರಿಸಿದಾಗ ಬಂದಿರುವುದಿಲ್ಲ ಅಂತಾ ತಿಳಿಸಿರು ತ್ತಾರೆ, ನಾವು ಎಲ್ಲಾ ಕಡೆಗೂ ಹುಡುಕಾಡಿದರು ಅವಳ ಇರುವಿಕೆಯ ಬಗ್ಗೆ ಗೊತ್ತಾಗಿರುವುದಿಲ್ಲ,,ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: