Police Bhavan Kalaburagi

Police Bhavan Kalaburagi

Wednesday, March 26, 2014

Gulbarga District Reported Crimes

ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಮಂಗಲಾ ಗಂಡ ಬಸವರಾಜ ಬೇಲೂರ ಸಾಃ ಆದರ್ಶ ನಗರ ಗುಲಬರ್ಗಾ ಇವರು ದಿನಾಂಕ 25/03/2014 ರಂದು ಸಾಯಂಕಾಲ 07:00 ಪಿ.ಎಂ. ಸುಮಾರಿಗೆ ಸ್ವಸ್ತಿಕ ನಗರದಲ್ಲಿರುವ ನನ್ನ ಅಕ್ಕ ಪ್ರಮೀಣಾ ಇವರಿಗೆ ಮತನಾಡಿಸಿನನ್ನ ಮಗಳು ಪೂಜಾ ಇವಳಿಗೆ ಕರೆದುಕೊಂಡು ನಾವಿಬ್ಬರೂ ಸ್ವಸ್ತಿಕ ನಗರದಲ್ಲಿ ಟೊಯೊಟೋ ಶೋರೂಮ ಹಿಂದುಗಡೆ ನಡೆದುಕೊಂಡು ಹೋಗುತ್ತಿರುವಾಗ ಅಂದಾಜು ಸಮಯ 07:25 ಪಿ.ಎಂ. ಸುಮಾರಿಗೆ ನನ್ನ ಹಿಂದುಗಡೆಯಿಂದ ಒಬ್ಬ ಅಪರಿಚಿತ ಮೋಟಾರ ಸೈಕಲ ಸವಾನು ಬಂದವನೇ ನನ್ನ ಕೊರಳಿಗೆ ಕೈ ಹಾಕಿ ಕೊರಳ್ಳಿದ್ದ 05 ತೊಲೆ ಬಂಗಾರದ ಮಂಗಳಸೂತ್ರ ಅಃಕಿಃ 1,25,000/- ರೂ ಬೆಲೆ ಬಾಳುವುದನ್ನು ಜಬರದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿದ್ದಲಿಂಗ ಗುಂಡಪ್ಪ ಹೂಗಾರ  ಸಾ: ಸಾವಳಗಿ (ಬಿ) ಹಾ:ವ: ಶರಣ ನಗರ ಗುಲಬರ್ಗಾ ರವರು ದಿನಾಂಕ 25-03-2014  ರಂದು ಮದ್ಯಾಹ್ನ 03-30  ಗಂಟೆ ಸುಮಾರಿಗೆ ಸುಪರ ಮಾರ್ಕೆಟ ಕಡೆಯಿಂದ ಲಾಲಗೇರಿ ಕ್ರಾಸ್ ಕಡೆಗೆ ಸಿಟಿ ಬಸ ನಿಲ್ದಾಣ ಮುಖಾಂತರ ನನ್ನ ಬೈಸಿಕಲ ಮೇಲೆ ಹೋಗುವಾಗ ಸಿಂದಗಿ ಅಂಭಾ ಭವಾನಿ ದೇವಸ್ಥಾನದ ಎದುರಿನ ರೋಡ ಮೇಲೆ ಎದುರಿನಿಂದ ಯಾವುದೊ ಒಂದು ಮೋಟಾರ ಸೈಕಲ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಬೈಸಿಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಗಾಯಗೊಳಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 25-03-2014 ರಂದು 9-30 ಎ.ಎಮ್ ಕ್ಕೆ ದರ್ಗಾ ರೋಡಿನಲ್ಲಿ ಇರುವ ಪರಾನಾ ಸ್ಕೂಲ ಎದರುಗಡೆ ಕಾರ ನಂ. ಕೆ.ಎ 22 ಎನ್ 2822 ನೇದ್ದರ ಚಾಲಕನು  ಮುಸ್ಲಿಂ ಚೌಕ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಶ್ರೀ ಮಹ್ಮದ ಅಜಮ ತಂದೆ ಮಹ್ಮದ ಅಫ್ಜಲ  ಸಾಃ ಜುಬೇರ ಕಾಲೂನಿ ಹಾಗರಗಾ ರೋಡ ಗುಲಬರ್ಗಾ ಚಲಾಯಿಸಿಕೊಂಡು ಹೋಗುತ್ತಿದ್ದ ಟಿವಿ.ಎಸ್ ಎಕ್ಸ.ಎಲ್ ನಂ ಕೆ.ಎ 32 ವಿ 4901 ನೇದ್ದಕ್ಕೆ ಡಿಕ್ಕಿ ಪಡಿಸಿ ಅದೇ ವೇಗದಲ್ಲಿ ಡಂಕಾ ಕ್ರಾಸದಲ್ಲಿ ತಿರುಗಿಸಿಕೊಂಡು ಸ್ಕೂಟಿ ನಂ. ಕೆ.ಎ 32 ಡಬ್ಲು 5632 ನೇದ್ದಕ್ಕೆ ಡಿಕ್ಕಿ ಪಡಿಸಿ ರೋಡಿನ ಪಕ್ಕದ ವಿದ್ಯುತ ಕಂಬಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಕಾರ ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಹಾಗೂ ಶ್ರೀಮತಿ ಪುಷ್ಪಾ ಹಾಗೂ ದ್ವಿಚಕ್ರ ಸೈಕಲ ಅಂಗವಿಕಲ ಜಗನಾಥ ಇವರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ  ಅಬ್ದುಲ್ ನಬಿ ತಂದೆ ಅಬ್ದುಲ್ ರಸೀದ ಜಮಾದಾರ ಸಾ: ವಡ್ಡಳ್ಳಿ ತಾ: ಅಫಜಲಪೂರ ಜಿ: ಗುಲಬರ್ಗಾ  ಮತ್ತು ಗೆಳೆಯ ಮೀರಾ ಪಟೇಲ ಪೊಲೀಸ್ ಬಿರಾದಾರ ಇಬ್ಬರು ಊಟ ಮಾಡಿಕೊಂಡು ಜೇವರ್ಗಿಗೆ ನಮ್ಮ ಮರಳಿನ ಟಿಪ್ಪರಗಳು ಶಹಾಪೂರದಿಂದ ಬರುತ್ತಿದ್ದುಅಲ್ಲಿಗೆ ಹೋಗೋಣಾ ಅಂತಾ ಮೀರಾ ಪಟೇಲ ತಿಳಿಸಿದನು. ನಂತರ ಗುಲಬರ್ಗಾದಿಂದ ರಾತ್ರಿ 11-30 ಗಂಟೆಯ ಸುಮಾರಿಗೆ ಜೇವರ್ಗಿಗೆ ಹೋಗಲು ಅವರ ಸ್ಪಿಟ್ ಕಾರ ನಂ: ಕೆಎ-26 ಎಮ-2595 ನೇದ್ದರಲ್ಲಿ ಕುಳಿತು ಹೊರಟೇವು. ಸದರಿ ಕಾರನ್ನು ನನ್ನ ಗೆಳೆಯ ಮೀರಾ ಪಟೇಲ ಪೊಲೀಸ್ ಬಿರಾದಾರ ಈತನು ಚಲಾಯಿಸುತ್ತಿದನು. ದಿನಾಂಕ: 25-3-2014 ರಂದು 00-30 ಗಂಟೆಯ ಸುಮಾರಿಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ನದಿಸಿನ್ನೂರ ಕ್ರಾಸ ದಾಟಿ ಸ್ವಲ್ಪ ಮುಂದೆ ರಸ್ತೆಯ ತಿರುವಿನಲ್ಲಿ ನಮ್ಮ ಗೆಳೆಯ ಮೀರಾ ಪಟೇಲ ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ವೇಗದ ನಿಯಂತ್ರಣ ತಪ್ಪಿ ರಸ್ತೆಯ ಎಡಗಡೆ ಬದಿಗೆ ಹೋಗಿ ಕಾರನ್ನು ಪಲ್ಟಿ ಗೊಳಿಸಿದನು. ಇದರಿಂದ ನನಗೆ ಎಡಗಡೆ ಸೊಂಟಕ್ಕೆ ಗುಪ್ತ ಗಾಯವಾಗಿರುತ್ತದೆ. ಮತ್ತು ಕಾರು ಚಲಾಯಿಸುತ್ತಿದ್ದ ಮೀರಾ ಪಟೇಲ ಈತನಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು ಮತ್ತು ಸೊಂಟದ ಹಿಂದಿನ ಭಾಗಕ್ಕೆ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಜಗನಾಥ ತಂದೆ ಸಿದ್ಧಣ್ಣಾ ಮುಕರಂಬಿ ಇವರು  ತನ್ನ  ಮೋಟಾರ ಸೈಕಲ ಸ್ಪೆಂಡರ ಪ್ಲಸ್ ನಂಬರ ಕೆಎ 32 ಎಕ್ಸ್ 6472  ನೇದ್ದನ್ನು ತೆಗೆದುಕೊಂಡು ಬಂದು ಮಾಹಾಗಾಂವ ಗ್ರಾಮದಲ್ಲಿ ತನ್ನ ಕೆಲಸ ಇದೆ ಮೋಟಾರ ಸೈಕಲ ಮೇಲೆ ಹೋಗಿ ಬರೋಣಾ ಅಂತಾ ಹೇಳಿದ್ದರಿಂದ ನಾವು ಇಬ್ಬರು ಆತನ ಮೋಟಾರ ಸೈಕಲ ಮೇಲೆ ಮಾಹಾಗಾಂವ ಗ್ರಾಮಕ್ಕೆ ಹೋಗಿದ್ದುಜಗನಾಥನ ಕೆಲಸ ಮುಗಿದ ನಂತರ 12-00 ಪಿಎಂಕ್ಕೆ ಮತ್ತೆ ಅದೇ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ನಮ್ಮೂರಿಗೆ ಬರುತ್ತಿರುವಾಗ ಜಗನಾಥ ಇತನು ಮೋಟಾರ ಸೈಕಲ ಚಲಾಯಿಸುತ್ತಿದ್ದುಹಿಂದೆ ನಾನು ಕುಳಿತಿದಿದ್ದೀ ಅಂಕಲಗಿ ಗ್ರಾಮದ ಹತ್ತಿರ ಬಂದಾಗಜಗನಾಥ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡ ಎಡಗಡೆ ಇದ್ದ ಒಂದು ಗೂಟದ ಕಲ್ಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದನನ್ನ  ಎಡಗಾಲಿಗೆ ಗೂಟಕಲ್ಲು ಜೋರಾಗಿ ಬಡಿದ್ದಿದ್ದರಿಂದ ನನ್ನ ಎಡಗಾಲಿನ ತೊಡೆಗೆ ಭಾರಿ ಗುಪ್ತಗಾಯವಾಗಿ   ತೊಡೆಯಲ್ಲಿ ಕಾಲು ಮುರಿದಿರುತ್ತದೆ. ಹಾಗೂ ಎಡಗಾಲಿನ ಮೊಳಕಾಲ ಕೆಳೆಗೆ ಭಾರಿ ರಕ್ತಗಾಯವಾಗಿದ್ದುಪಾದದ ಮಧ್ಯದ ಬೆರಳಿಗೆ ರಕ್ತಗಾಯವಾಗಿರುತ್ತದೆ  ಜಗನಾಥನಿಗೆ ಈ ಅಪಘಾತದಿಂದ ಯಾವುದೇ ಗಾಯವಾಗಿಲ್ಲಾ. ನಂತರ ಆತ ನನಗೆ ಮತ್ತು ಮೋಟಾರ ಸೈಕಲ ಬಿಟ್ಟು ಅಲ್ಲೇ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಭೀಮರಾಯ ತಂದೆ ಗುಂಡಪ್ಪಾ ವಾಲಿಕಾರ  ಸಾ: ಹನುಮಾನ ಟೆಂಪಲ ಹತ್ತಿರ ಗಂಗಾ ನಗರ ಗುಲಬರ್ಗಾ ರವರು ದಿನಾಂಕ 25-03-2014 ರಂದು ರಾತ್ರಿ 10-00 ಗಂಟೆ ಸುಮಾರಿಗೆ ರವಿ ತಂದೆ ಗುಂಡಪ್ಪ ಇವನು ಮೋಟಾರ ಸೈಕಲ ನಂಬರ ಕೆಎ-32 ಕೆ-1514 ನೇದ್ದರ ಮೇಲೆ ಹಿಂದುಗಡೆ ಕುಳಿತು ಸುಪರ ಮಾರ್ಕೆಟದಿಂದ ಲಾಲಗೇರಿ ಕ್ರಾಸ್ ರೋಡ ಕಡೆಗೆ ಬರುತ್ತಿದ್ದಾಗ ರವಿ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡಿನ ಎಡಬಲ ಕಟ್ಟ ಹೊಡೆದು ಕಲ್ಯಾಣಿ ಪೆಟ್ರೊಲ ಪಂಪ ಕಡೆಗೆ ಹೋಗುವ ರೋಡ ಕ್ರಾಸ ಹತ್ತಿರ ಸ್ಕಿಡ ಮಾಡಿ ಫಿರ್ಯಾದಿಗೆ ಭಾರಿಗಾಯ ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: