ಅಪಘಾತ ಪ್ರಕರಣ :
ಜೇವರ್ಗಿ
ಠಾಣೆ : ದಿನಾಂಕ 27-3-14 ರಂದು
ರಾತ್ರಿ 7-20 ಗಂಟೆಗೆ ಕೆಲ್ಲೂರ – ಆಂದೋಲಾ ರೋಡ ಕೆಲ್ಲೂರ ಯು.ಕೆ.ಪಿ ಕ್ಯಾಂಪ ಎದರು ರೋಡಿನ ಮೇಲೆ
ಶ್ರೀ ಮಹಾದೇವ ತಂದೆ ಮರೆಪ್ಪ ಯಾಳವಾರ ಸಾ:
ಜೈನಾಪೂರ ತಾ: ಜೇವರಗಿ ರವರ ತಂದೆ ಮರೆಪ್ಪ ಯಾಳವಾರ ಇತನು ಆಟೋ ರೀಕ್ಷಾ ನಂ
ಕೆ.ಎ-33-6604 ನೇದ್ದರಲ್ಲಿ ಕುಳಿತು ಜೈನಾಪೂರ ಕಡೆಗೆ ಬರುತ್ತಿದ್ದಾಗ ಅದೇ ವೇಳೆಗೆ ಆಂದೊಲಾ
ಕಡೆಯಿಂದ ಟ್ರಾಕ್ಟರ ನಂ ಕೆ.-32, ಟಿ-4758 ನೇದ್ದರ ಚಾಲಕನು ಟ್ರಾಕ್ಟರನ್ನು ಅತಿವೇಗ ಮತ್ತು
ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಆಟೋ ರೀಕ್ಷಾ ಬಲ ಸೈಡಿನಲ್ಲಿ ಕುಳಿತ ನಮ್ಮ ತಂದೆಗೆ ಡಿಕ್ಕಿ
ಪಡಿಸಿದ್ದರಿಂದ ನಮ್ಮ ತಂದೆಗೆ ಭಾರಿ ಗಾಯಗೊಂಡಿದ್ದನು ನೋಡಿ ಟ್ರಾಕ್ಟರ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ನಂತರ
ನಮ್ಮ ತಂದೆಗೆ ಉಪಚಾರ ಕುರಿತು ಜೇವರಗಿ ಸರಕಾಗಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದಾಗ ರಾತ್ರಿ
8-30 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮಧ್ಯ ಸಾಗಿಸುತ್ತಿದ್ದವನ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ 27-03-2014 ರಂದು ಮಾಹಾಗಾಂವ ಕಡೆಯಿಂದ
ವ್ಯಕ್ತಿ ಪಾಸ್ಟಿಕ ಚೀಲದಲ್ಲಿ
ಅಕ್ರಮವಾಗಿ ಮದ್ಯ ಸಂಗ್ರಹಿಸಿಕೊಂಡು
ದಸ್ತಾಪೂರ ಗ್ರಾಮದ ಕಡೆಗೆ ಹೊರಟಿದ್ದಾನೆ ಎಂದು ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ
ಮಾಹಾಗಾಂವ ಮತ್ತು ಸಿಬ್ಬಂದಿಯವರು ಹಾಗು ಪಂಚರೊಂದಿಗೆ ಮಾಹಾಗಾಂವ ಗ್ರಾಮದ ಹತ್ತಿರ ಇದ್ದ ನಾಲಾದ ಹತ್ತಿರ ಬಾತ್ಮಿ ವ್ಯಕ್ತಿ ಬರುವಿಕೆಗಾಗಿ ಕಾಯುತ್ತಾ ನಿಂತಾಗ ಮಧ್ಯಾಹ್ನ 12-45 ಗಂಟೆಗೆ ಮಾಹಾಗಾಂವ ಕ್ರಾಸ ರೋಡ ಕಡೆಯಿಂದ ಒಬ್ಬ
ವ್ಯಕ್ತಿ ತಲೆಯ ಮೇಲೆ ಒಂದು ಪ್ಲಾಸ್ಟಿಕ ಚೀಲ
ಇಟ್ಟುಕೊಂಡು ಬರುತ್ತಿದ್ದನ್ನು ನೋಡಿ, ನಾನು ಮತ್ತು
ಸಿಬ್ಬಂದಿಯವರು ಹಿಡಿದು,ಪಾಸ್ಟಿಕ ಚೀಲದಲ್ಲಿ
ಏನಿದೆ ಅಂತಾ ಕೇಳಲು ಅವನು ತಡವರಿಸುತ್ತಾ ಸರಾಯಿ ಬಾಟಲಿಗಳಿವೆ ಎಂದು ತಿಳಿಸಿದನು. ಅವನ ಹೆಸರು
ವಿಳಾಸ ವಿಚಾರಿಸಲೂ ಅವನು ತನ್ನ ಹೆಸರು ಮಾಹಾಂತಪ್ಪ ತಂದೆ
ಶಿವಲಿಂಗಪ್ಪ ದಮ್ಮೂರ ಸಾ: ಮಾಹಾಗಾಂವ ವಾಡಿ ಗ್ರಾಮ ಅಂತಾ ತಿಳಿಸಿದನು. ಅವನ ಹತ್ತಿರವಿದ್ದ
ಪಾಸ್ಟಿಕ ಚೀಲವನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಯು.ಎಸ್. ವಿಸ್ಕಿ 180 ಎಂಎಲವುಳ್ಳ 23 ಗಾಜಿನ ಬಾಟಲಿಗಳಿರುತ್ತೇವೆ.. ಅ:ಕಿ: 1104 ರೂ. ಅಗುತ್ತದೆ. ಸದರಿಒಯವನಿಗೆ ದಸ್ತಗೀರ
ಮಾಡಿಕೊಂಡು ಮುದ್ದೇಮಾಲಿನೊಂದಿಗೆ ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಮಾಹಾಗಾಂವ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶರಣಪ್ಪ @ ಬಾಬು ತಂದೆ ಸಿದ್ರಾಮಪ್ಪ ಮ್ಯಾಳಸಿ ಸಾ :
ಅಕ್ಕಮಾಹಾದೇವಿ ಕಾಲನಿ ಅಫಜಲಪೂರ ರವರ ಮಗಳಾದ ಸುಹಾಸಿನಿ ಇವಳಿಗೆ ಈಗ
5-6 ತಿಂಗಳ ಹಿಂದೆ ಹೇರಿಗೆ ಆಗಿದ್ದು, ಒಂದು ಗಂಡು ಮಗು ಆಗಿದ್ದು, ತನ್ನ ಮಗುವಿನೊಂದಿಗೆ ನನ್ನ ಮಗಳು ಈಗ ನನ್ನ ಮನೆಯಲ್ಲಿಯೆ ಇರುತ್ತಾಳೆ. ದಿನಾಂಕ
24-02-2014 ರಂದು ಬೆಳಿಗ್ಗೆ 9-00 ಗಂಟೆಗೆ ನಾನು ನಮ್ಮ ಅಂಗಡಿಗೆ ಹೊಗಿದ್ದು. ನನ್ನ ಹೆಂಡತಿ ಲಲೀತಾ ಇವಳು ನಮ್ಮ ಸಂಬಂದಿಕರಲ್ಲಿ ಸತ್ತಿದ್ದರಿಂದ ಆಲಮೇಲಕ್ಕೆ ಹೊಗಿರುತ್ತಾಳೆ. ನನ್ನ 2 ನೇ ಮಗಳು ಮತ್ತು ನನ್ನ ಮಗ ಇಬ್ಬರು ಶಾಲೆಗೆ ಹೊಗಿರುತ್ತಾರೆ. ಮನೆಯಲ್ಲಿ ನನ್ನ ಮಗಳಾದ ಸುಹಾಸಿನಿ ಮತ್ತು ನಾಗಣಸೂರ ಗ್ರಾಮದ ನಮ್ಮ ಸಂಭಂದಿಕನಾದ ಹಿರಿಗೆಪ್ಪ ಧನಶೇಟ್ಟಿ ಇವರ ಮಗಳಾದ ಅಂಬು ಇಬ್ಬರು ಮನೆಯಲ್ಲಿ ಇದ್ದಿರುತ್ತಾರೆ. ಅದೆ ದಿನ ಅಂದಾಜು ಮದ್ಯಾಹ್ನ 2:00 ಗಂಟೆ ಸುಮಾರಿಗೆ ಊಟಕ್ಕೆ ಎಂದು ಮನೆಗೆ ಬಂದಾಗ, ಮನೆಯಲ್ಲಿ ಅಂಬು ಒಬ್ಬಳೆ ಇದ್ದದ್ದು ನೋಡಿ, ನನ್ನ ಮಗಳಾದ ಸುಹಾಸಿನಿ ಇವಳು ಎಲ್ಲಿ ಹೊಗಿರುತ್ತಾಳೆ ಎಂದು ಕೇಳಿದೆನು, ಆಗ ಅಂಬು ಇವಳು ತಿಳಿಸಿದ್ದು, ಸುಹಾಸಿನಿ ಇವಳು ಅಂದಾಜು ಮದ್ಯಾಹ್ನ 1:00 ಗಂಟೆ ಸುಮಾರಿಗೆ ಸ್ವಲ್ಪ ಕೆಲಸ ಇದೆ, ಇಲ್ಲೆ ಹೊರಗೆ ಹೊಗಿ ಬರುತ್ತೆನೆ ಅಂತಾ ತನ್ನ ಮಗುವನ್ನು ಮನೆಯಲ್ಲಿಯೆ ಬಿಟ್ಟು ಮನೆಯಿಂದ ಹೊಗಿರುತ್ತಾಳೆ ಅಂತಾ ತಿಳಿಸಿದಳು, ನಂತರ ನನ್ನ ಹೆಂಡತಿ ಮತ್ತು ಮಕ್ಕಳು ಬಂದಿದ್ದು, ನನ್ನ ಮಗಳಾದ ಸುಹಾಸಿನಿ ಇವಳು ಮನೆಗೆ ಬರದೆ ಇದ್ದರಿಂದ, ನಾವು ಎಲ್ಲರೂ ಅಫಜಲಪೂರ ಪಟ್ಟಣದಲ್ಲಿ ಎಲ್ಲಾ ಕಡೆ ಹುಡುಕಾಡಿದೆವು, ಆದರೂ ನನ್ನ ಮಗಳು ಎಲ್ಲಿಯೂ ಸಿಗಲಿಲ್ಲ, ನಂತರ ಅಂದಿನಿಂದ ಇಂದಿನ ವರೆಗೆ ಅವಳ ಗಂಡನ ಮನೆಯವರಿಗೆ, ಮತ್ತು ಚೌಡಾಪೂರ, ಗುಲಬರ್ಗಾ, ಆಲಮೇಲ, ದುಧನಿ, ಸೊಲ್ಲಾಪೂರ, ಪೂನಾ ಎಲ್ಲಾ ಕಡೆ ಹುಡುಕಾಡಲಾಗಿ ನನ್ನ ಮಗಳು ಎಲ್ಲಿಯೂ ಸಿಕ್ಕಿರುವುದಿಲ್ಲ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನಿಂಬರ್ಗಾ
ಠಾಣೆ : ಶ್ರೀ
ಗಿರಿಮಲ್ಲತಂದೆ ಶಿವಲಿಂಗಪ್ಪ ವಾರದ ಸಾ: ಹಿತ್ತಲಶೀರೂರ ಇವರು ದಿನಾಂಕ 26,27-03-2014 ರಂದು ರಾತ್ರಿ 11-30 ಪಿ.ಎಮ್ ದಿಂದ 1-30 ಎ.ಎಮ್ ಮಧ್ಯಾವಧಿಯಲ್ಲಿ ಯಾರೋ ಕಳ್ಳರು
ತನ್ನ ಮನೆಗೆ ನುಗ್ಗಿ ಮನೆಯಲ್ಲಿನ ಕಬ್ಬಿಣದ ಪೆಟ್ಟಿಗೆಯ ಕೊಂಡಿ ಮುರಿದು ಪೆಟ್ಟಿಗೆಯಲ್ಲಿ ಇದ್ದ 80,000=00 ನಗದು ಹಣ ಹಾಗೂ 90,000=00 ರೂ ಮೌಲ್ಯದ ಒಂದು ತೋಲೆ ಬಂಗಾರದ ಲಾಕೀಟ್, ಎರಡುತೋಲೆಯ ಬಂಗಾರದ ಎರಡೆಳೆಯ ಸರ, ಅರ್ಧ ತೋಲೆ ಬಂಗಾರದ ಸುತ್ತುಂಗುರ ಹೀಗೆ ಒಟ್ಟು 1,70,000=00 ರೂ ಮೌಲ್ಯದ ಹಣಮತ್ತು ಬಂಗಾರವನ್ನು ನನ್ನ ಮನೆಯಿಂದ ಹಾಗೂ ನನ್ನಬಾಜು ಮನೆಯವರಾದ ಶ್ರೀಮತಿ ಮಾಹಾನಂದ ಗಂಡ ಕಲ್ಯಾಣಿ ವಾರದಇವರ ಮನೆಯ ಬಾಗಿಲು ಮುರಿದು ಅವರ ಮನೆಯಲ್ಲಿ ಇದ್ದ 10,000=00 ನಗದು ಹಣ ಹಾಗೂ 1500=00 ರೂ ಮೌಲ್ಯದ ಒಂದುಜೋತೆ ಬೆಳ್ಳಿ ಚೈನ್ ಹೀಗೆ ಒಟ್ಟು 1,81,500=00 ರೂಪಾಯಿ ಮೌಲ್ಯದ ಹಣ, ಬಂಗಾರ, ಬೆಳ್ಳಿ ಯನ್ನು ಯಾರೋ ಕಳ್ಳರು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment