ಇಸ್ಪೀಟ ಜೂಜಾಟದ ದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 28-03-2014 ರಂದು ರೈಲ್ವೆ ಸ್ಟೇಷನ ಹತ್ತಿರ ಖುಲ್ಲಾ
ಜಾಗೆಯಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ
ಬಾತ್ಮಿ ಬಂದ ಮೇರೆಗೆ ಮಾನ್ಯ ಶ್ರೀ ಸವಿಶಂಕರ ನಾಯ್ಕ ಡಿ.ಎಸ್.ಪಿ ಸಾಹೇಬರು “ಎ” ಉಪ ವಿಭಾಗ ಗುಲಬರ್ಗಾರವರ
ನೇತೃತ್ವದಲ್ಲಿ ಪಿಐ ಸ್ಟೇಷನ ಬಜಾರ ಠಾಣೆ ಹಾಗು
ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ರೈಲ್ವೆ ಸ್ಟೇಷನ ಹತ್ತಿರ
ಖುಲ್ಲಾ ಜಾಗೆಯಲ್ಲಿ 5 ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ
ಅಂದರ ಬಹಾರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು ತಮ್ಮ ಹೆಸರು 1. ಪರಮೇಶ್ವರ ತಂದೆ ಶರಣಪ್ಪ ಶಂಕದ ಸಾಃ
ಸಂಜೀವ ನಗರ ಗುಲಬರ್ಗಾ 2. ಮಲ್ಲಪ್ಪ ತಂದೆ ಗುರುಪಾದಪ್ಪ ಮಾಗಡಿ ಸಾಃ ಜಗತ ಗುಲಬರ್ಗಾ 3. ಸಂಗಪ್ಪ ತಂದೆ ಚನ್ನಬಸಪ್ಪ
ಪಾಟೀಲ ಸಾಃ ಜಗತ ಗುಲಬರ್ಗಾ 4.ಬಸವರಾಜ ತಂದೆ ಶಿವಣ್ಣ ಪಂಗರಗಿ ಸಾಃ ನ್ಯೂ ರಾಘವೇಂದ್ರ ನಗರ
ಕಾಲೋನಿ ಗುಲಬರ್ಗಾ ಹೀಗೆ ಒಟ್ಟು. 23,090/- ರೂ ಮತ್ತು 52 ಇಸ್ಪೆಟ್ ಎಲೆಗಳು ಪಂಚರ ಸಮಕ್ಷಮ
ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ
ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಧನಶೆಟ್ಟಿ ತಂದೆ
ಚಂದ್ರಶಾ ಪೂಜಾರಿ ಸಾ; ಕುದಮೂಡ ತಾ; ಆಳಂದ ಜಿ; ಗುಲಬರ್ಗಾ ರವರು ದಿನಾಂಕ
27-03-2014 ರಂದು ಮಧ್ಹಾನದ ಸಮಯ ತನ್ನ ಮೋಟಾರ್ ಸೈಕಲ್ ಕೆಎ-32-ಇಬಿ-1725 ನೇದರಲ್ಲಿ ಸಂಗಡ
ಮಲ್ಲಿಕಾರ್ಜುನ ತಂದೆ ಭಾಗಪ್ಪ ಪೂಜಾರಿಯವರಿಗೆ ಕರೆದುಕೊಂಡು ಜೀವಣಗಿಗೆ ಬಾಕಿ ಹಣ ತರಲು
ಹೋಗಿದ್ದನು, ಜೀವಣಗಿಯಿಂದ ಸಾಯಾಂಕಾಲ 7-30 ಗಂಟೆಯ ಸುಮಾರಿಗೆ ಮೋಟಾರ
ಸೈಕಲ್ ಹಿಂದೆ ಮಲ್ಲಿಕಾರ್ಜುನ ನನಗೆ ಕುಡಿಸಿಕೊಂಡು ಮೋಟಾರ ಸೈಕಲ್
ನಡೆಯಿಸಿಕೊಂಡು ಮರಳಿ ಕಮಲಾಪೂರ ಕಡೆಗೆ ಹೊರಟೆವು,ಬೇಳುರ ಭೂಯಾಂರ ಕ್ರಾಸ
ದಾಟಿ ಹೊರಟಿರುವಾಗ ಎದುರಗಡೆಯಿಂದ ಒಂದು ಟಂ.ಟಂ ಬರುವದನ್ನು ಕಂಡು , ಮೋಟಾರ್ ಸೈಕಲ್ ರೋಡಿನ ಎಡಗಡೆ ತೆಗೆದು ಕೊಂಡಾಗ
ಎದುರಿನಿಂದ ಮತ್ತೊಂದು ಟಂ.ಟಂ ಓವರಟೇಕ್ ಮಾಡಿ ಎದುರಗಡೆ ಬಂದು ನಮ್ಮ ಮೋ. ಸೈಕಲಕ್ಕೆ ಡಿಕ್ಕಿ ಹೊಡೆದನು, ಅದರಿಂದಾಗಿ ನಾವಿಬ್ಬರು ಕೆಳಗಡೆ ಮೋ ಸೈಕಲ್ ಸಮೇತ
ಬಿದ್ದೆವು, ಅದರಿಂದಾಗಿ ನಮ್ಮಿಬ್ಬರ ಬಲಕಾಲಗಳ ಮೋಣಕಾಲಗಳಲ್ಲಿ ಭಾರಿ
ರಕ್ತಗಾಯಗಳಾದವು , ಸದರಿ ಟಂ.ಟಂ ನಂ ನೋಡ ಬೇಕನ್ನುವಾಗ ಅದರ ಚಾಲಕನು ನಿಲ್ಲಿಸದೆ, ಟಂ.ಟಂ ನಡೆಯಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಆಳಂದ ಠಾಣೆ
: ಶ್ರೀ
ಉಸ್ಮನಅಲಿ
ತಂದೆ ಮಶಖಸಾಬ ತಾಶೆವಾಲೆ ಮು: ನುರಾನಿ ಮೊಹಲ್ಲಾ ಆಳಂದ ರವರ ಮಗಳು ದಿನಾಂಕ 28-03-2014 ರಂದು ಬೆಳಿಗ್ಗೆ ಸಾಯಮಾ ಇವಳು ಮನೆಯಿಂದ ಹೋರಗೆ ಆಟಆಡಲು ಹೋದಾಗ ನೂರಾನಿ ಮೊಹಲದಾ ಗಲ್ಲಿ ರಸ್ತೆಯಿಂದ ಒಬ್ಬ ಟ್ರಾಕ್ಟರ ಚಾಲಕನು ತನ್ನ ವಾಹನವನ್ನು ಅತಿ ವೇಗದಿಂದ ಹಾಗು ನಿಸ್ಕಾಳಜಿತದಿಂದ ಓಡಿಸಿಕೊಂಡು ಬಂದವನೇ ನನ್ನ ಮಗಳಿಗೆ ಹಾಯಿಸಿದಾಗ ಆಕೆ ಸಿ.ಸಿ ರೋಡಿನ ಮೇಲೆ ಬಿದ್ದಾಗ ಟ್ರಾಕ್ಟರದ ದೊಡ್ಡ ಗಾಲಿ ಆಕೆ ತೆಲೆಯ ಮೇಲೆ ಹಾದು ತಲೆ ಒಡೆದು ರಕ್ತ ಮೌಂಸ ಮೇದಳು ಹೊರ ಬಂದು ಸ್ಥಳಕ್ಕೆ ಅಂಟಿ ಮೃತಪಟ್ಟಿರುತ್ತಾಳೆ ಅಫಘಾತ ಪಡಿಸಿದ ಟ್ರಾಕ್ಟರ ಚಾಲಕನು ವಾಹನ ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗಿದ್ದು ನಂಬರ ನೋಡಲಾಗಿ ಎಮ್ಎಚ್ 24 7360 ಇದ್ದು ಅದರ ಚಾಲಕನು ಮಶಾಖ ತಂದೆ ಖಾಸಿಮ ಸಾಬ ಸಾವಳ್ಳೆ ಮು: ಮಟಕಿ ರೋಡ ಆಳಂದ ಇರುತ್ತಾನೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಡಾ|| ಮಮತಾ @ ಮುಮತಾಜ ಗಂಡ ತುರಬಾನಅಲಿ ಸಾ|| ಮನೆ ನಂ 11-1041/34/2&3 ಶಹಜಿಲಾನಿ ದರ್ಗಾಹಿಂದುಗಡೆ ಮದಿನಾಕಾಲೋನಿ ಎಂ.ಎಸ್.ಕೆ
ಮೀಲ್ ಗುಲಬರ್ಗಾ ಇವರು ದಿನಾಂಕ: 27-03-2014 ರಂದು ರಾತ್ರಿ 12.00 ಗಂಟೆಗೆ ನನ್ನ ಮನೆಯ ದರೋಡೆಯಾಗಿದ್ದು, ನಾನು ಹಾಗು ನ್ನ
ಗಂಡ ತುರಬಅಲಿ ಕೂಡ ಆಯೇಶ ಪರವೀನಾ ಗಂಡ ಅಬ್ದುಲಕರೀಮ್ ಇವರ ಮನೆಗೆ ಹೊದಾಗ ಅಲ್ಲಿ ತುರಬಾಅಲಿ
ಸಂಬಂದಿಕರಾದ ಆಯೇಶಾ ಪರವಿನರಿಗೆ ಮನೆಯ ಮಾಲಿಕರಾದ ಖಯ್ಯುಮ ವೆಲ್ಡರವರು ವಿನಾಃಕಾರಣವಾಗಿ ಜಗಳ ತೆಗೆದು
ಅವಾಚ್ಯಕ ಶಬ್ದಗಳಿಂದ ಬಯ್ಯುತ್ತಿದ್ದರು. ಸದರಿ ಆಯೇಶಾ ಪರವಿನರವರ ಮನೆಗೆ ಹೊದಾಗ ಅಲ್ಲಿ ಇದರ ಬಗ್ಗೆ
ಸದರಿ ಮನೆಯ ಮಾಲಿಕ ಖಯೂಮ್ ವೆಲ್ಡರ ಹಾಗು ಇವನ ಮೂರು ಮಕ್ಕಳು 1. ಮಹ್ಮದ್ ಇಬ್ರಾಹಿಂ ತಂದೆ ಖಯೂಮ್
2 ಮಹ್ಮದ್ ಮುಸ್ತಾಫ ತಂದೆ ಖಯೂಮ್ ಹಾಗು ಇನ್ನೋಬ್ಬ ಮಗ ಮತ್ತು ಇನ್ನಿತರ ಖಯೂಮನ ಸ್ನೆಹಿತರು ಹಾಗು
ಆತನ ಮಕ್ಕಳ ಸ್ನೆಹತರು ಕೊಚ್ಚಿದ್ದರು. ಇದರ ಬಗ್ಗೆ ಕೂಲಂಕುಶವಾಗಿ ವಿಚಾರಿಸಿದಾಗ ಅವರು ನಮ್ಮ ಮೇಲೆ
ಜಗಳ ಹಾಗು ನಿಂದನೆ ಮಾಡಿದ್ದಾರೆ. ಇದಾದ ಕೇಲವೆ ಸಮಯದಲ್ಲಿ ನಾನು ನನ್ನ ಗಂಡ ಹಾಗು ಆಯೇಶಾ ಪರ್ವೆನರವರು
ಕೂಡಿಕೊಂಡು ರಾಘವೇಂದ್ರನಗರ ಪೊಲೀಸ ಠಾಣೆಗೆ ಹೊದಾಗ, ಅಲ್ಲಿ ಸದರಿ ಜಗಳದ ಬಗ್ಗೆ ಮಾನ್ಯ ಸ್ಟೇಷನ ಪಿಎಸ್‌ಐರವರಿಗೆ ತಿಳಿಸಿದಾಗ ಆ ಸಂದರ್ಬದಲ್ಲಿ ಮೇಲೆ
ತಿಳಿಸಿದ ಎಲ್ಲಾ ಆರೋಪಿತರು ಈ ಮೇಲಿನ ಘಟನೆಯನ್ನು ಸಾಕ್ಷಿಯಾಗಿ ನೊಡಿದವರು 1 ಎಮ್‌ಡಿ ಗೌಸ್ ತಂದೆ
ಎಮ್‌ಡಿ ಅನ್ಸಾರಖಾನ 2. ಉದಯಕುಮಾರ ತಂದೆ ಶರಣಪ್ಪ . ನಮ್ಮ ಮನೆಗೆ ಮದಿನಾ ಕಾಲೋನಿಯಲ್ಲಿರುವ ನಮ್ಮ
ಸ್ವಂತ ಮನೆಗೆ ಹೊಗಿ ಅಲ್ಲ ಮನೆಯ ಮುಖ್ಯದ್ವಾರ ಒಡೆದು ಒಳನುಗ್ಗಿ ಸದರಿ ಕೋಣೆಯಲ್ಲಿರುವ ಒಂದು ಕಂಪ್ಯೂಟರ
ಸಿಪಿಯು ಸೇಟ್ ಮತ್ತು ಬೆಡ್‌ರೂಮ್‌ನಲ್ಲಿರುವ ಲಾಕರ್ ತೆಗೆದು ಅಲ್ಲಿದ್ದ 3 ಲಕ್ಷ ರೂಪಾಯಿ ಹಣವನ್ನು
ತೆಗೆದುಕೊಂಡು ಹೊಗಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment