Police Bhavan Kalaburagi

Police Bhavan Kalaburagi

Monday, March 3, 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಬಸವರಾಜ ತಂದೆ ಧಾನಪ್ಪ ಅವುಟೆ ಸಾ|| ಯಳಸಂಗಿ ಇವರು ದಿನಾಂಕ 02-03-2014 ರಂದು 1350 ಗಂಟೆಗೆ ತಾನು ಯಳಸಂಗಿ ಗ್ರಾಮದ ಪ್ರಕಾಶ ತಳವಾರ ಇವರ ಕಿರಾಣಿ ಅಂಗಡಿ ಹತ್ತಿರ ನಿಂತಾಗ ದಶರಥ ತಂದೆ ಹೊನ್ನಪ್ಪ ಜೋಗನ ಸಾ|| ಹಡಲಗಿ ಇತನು ಸರಾಯಿ ಕುಡಿಯಲು ಹಣ ಕೇಳಿದ್ದು ಅದಕ್ಕೆ ಫಿರ್ಯಾದಿಯು ಇಲ್ಲ ಅಂತ ಅಂದಿದ್ದಕ್ಕೆ ಆರೋಪಿತನು ಫಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡುತ್ತಾ ಕೈಯಿಂದ ಕಪಾಳ ಮೇಲೆ ಹೊಡೆದು ಹಣ ಕೊಡಲಿಲ್ಲ ಅಂದರೆ ನಿನಗೆ ಬಿಡುವದಿಲ್ಲ ಅಂತ ಭಯ ಹಾಕಿ ಕಲ್ಲಿನಿಂದ ತಲೆಕಪಾಳಎಡ ಕಣ್ಣಿನ ಮೇಲೆ ಜೋರಾಗಿ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 02-03-2014 ರಂದು ಬೆಳಿಗ್ಗೆ 10 ಗಂಟೆಗೆ ನಾಥುರಾಮ ತಂದೆ ಲಕ್ಷ್ಮಣ ರಾಠೋಡ ಸಾ : ಹಳ್ಯಾಳ ತಾಂಡ ಮತ್ತು ಮಾದಾಬಾಳ ತಾಂಡಾದ ನಮ್ಮ ಸಮಾಜದವರಾದ ಅಪ್ಪು ತಂದೆ ಬಾಬು ರಾಠೋಡ ರವರು ಕೂಡಿಕೊಂಡು ಬಳೂರಗಿ ಹೆಚ್.ಎನ್ ತಾಂಡಾಕೆ ಹೋಗಿ ಅಲ್ಲಿ ಕೋಟು ತಂದೆ ಹೀರೂ ರಾಠೋಡ ರವರಿಗೆ ಆಮಂತ್ರಣ ಪತ್ರ ಕೊಟ್ಟು ಮನೆಯ ಮುಂದೆ ರಸ್ತೆಯ ಮೇಲೆ ನಿಂತಾಗ ಅದೇ ಸಮಯಕ್ಕೆ ಆನಂದ ರಾಠೋಡ ಇವನು ಬಂದು ಏ ಭೋಸಡಿ ಮಕ್ಕಳ್ಯಾ ನಮ್ಮ ತಾಂಡಾಕ ಯಾಕ ಬಂದಿರಲೇ ಅಂತಾ ಅಂದನು ಆಗ ನಾನು ನಮಗ್ಯಾಕ ಬೈತಿರಿ ಅಂತಾ ಕೇಳಿದ್ದಕ್ಕೆ ಆನಂದ ಇವನು ನನ್ನ ಹೆಸರಿಗೆ ಮಂಜುರಾದ ಕೊಳವೆ ಬಾಯಿಯನ್ನು ಇಲ್ಲಸಲ್ಲದ ಹೇಳಿ ಕ್ಯಾನ್ಸಲ್ ಮಾಡಸಿರಿತ್ತಿರಿ ಅಂತಾ ಅಂದು ನಮ್ಮೊಂದಿಗೆ ತಕರಾರು ಮಾಡಿಕೊಳ್ಳುತ್ತಿದ್ದಾಗ ಅದೆ ಸಮಯಕ್ಕೆ ಆನಂದ ರಾಠೋಡ, ಮನೋಹರ ತಂದೆ ರತನ್ ಸಿಂಗ ರಾಠೋಡ ಮತ್ತು ರೋಹಿದಾಸ ರಾಠೋಡ ಇವರು ನಮ್ಮ ಹತ್ತಿರ ಬಂದು ಏನಲೇ ಭೋಸಡಿ ಮಕ್ಕಳ್ಯಾ ನಮ್ಮ ತಾಂಡಾದಲ್ಲಿ ಉಳಕೊಂಡು ಬಂದಿರಿ ಈಗ ಯಾರ ಬಿಡಸತಾರಲೆ ಅಂತಾ ಅಂದು ಆನಂದ ಇವನು ನನ್ನ ಕೈ ತಿರುವಿ ಬೆನ್ನಿನ ಮೇಲೆ ಹೊಡೆಯುತ್ತಿದ್ದನು ಮನೋಹರ ಇವನು ನನ್ನೊಂದಿಗೆ ಇದ್ದ ಅಪ್ಪು ಇವನನ್ನು ಕೈಯಿಂದ ಕಪಾಳ ಮೇಲೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 02-03-2014 ರಂದು ಬೆಳಿಗ್ಗೆ 10 ಗಂಟೆಗೆ ನಾತುರಾಮ ರಾಠೋಡ ಮತ್ತು ಅಪ್ಪು ರಾಠೋ ರವರು ನಮ್ಮ ತಾಂಡಾಕೆ ಬಂದಿದ್ದು ಅವರಿಗೆ ಕೊಳವೆ ಬಾವಿಯ ವಿಷಯದ ಬಗ್ಗೆ ಕೇಳಿದಕ್ಕೆ ನನ್ನೊಂದಿಗೆ ತಕರಾರು ಮಾಡಿಕೊಂಡರು ಆಗ ಅಲ್ಲೆ ಇದ್ದ ಕೋಲು ರಾಠೋಡ ರವರು ಬಿಡಿಸಿ ಕಳುಹಿಸಿರುತ್ತಾರೆ. ನಂತರ ನಾನು ಬೆಳಿಗ್ಗೆ 11 ಗಂಟೆಗೆ ಬಳುರ್ಗಿ ಬಸ್ಸ್ ನಿಲ್ದಾಣದ ಹತ್ತಿರ ಇದ್ದಾಗ ಸದರಿ ನಾತುರಾಮ ರಾಠೋಡ ಎಂಬುವವನಿಗೆ ಕರೆದುಕೊಂಡು ನನ್ನ ಹತ್ತಿರ ಬಂದು ನಾತುರಾಮ ಇವನು ಏನೋ ಭೋಸಡಿ ಮಗನಾ ನಿಮ್ಮ ತಾಂಡಾಕ ಬಂದರ ನಮ್ಮೊಂದಿಗೆ ಜಗಳ ತೆಗಿತಿ ಮಗನಾ ಅಂತಾ ಅಂದು ತನ್ನ ಕೈಯಿಂದ ನನ್ನ ಏದೆಯ ಮೇಲೆ ಹೊಡೆದನು ಅಪ್ಪು ರಾಠೋಡ ಇತನು ಅಲ್ಲೆ ಇದ್ದ ಕಲ್ಲನ್ನು ತೆಗೆದುಕೊಂಡು ನನ್ನ ಬೆನ್ನನ್ನ ಮೇಲೆ ಹೊಡೆದು ಜೀವ ಸಹಿತ ಬಿಡಬ್ಯಾಡರಿ ಅಂತಾ ಅಂದು ಕಾಲಿನಿಂದ ಬೆನ್ನಿನ ಮೇಲೆ ಒದ್ದು ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 11-09-2013 ರಂದು ಗುಲಬರ್ಗಾ ಜಿಲ್ಲಾ ಡಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ಶ್ರೀ ಎಸ್.ಎಸ್.ಹುಲ್ಲೂರ ರವರು ಮತ್ತು ಅವರ ಸಿಬ್ಬಂದಿಯವರು ಘತ್ತರಗಾ ಗ್ರಾಮದ ಹತ್ತಿರ ಇರುವ ಭೀಮಾನದಿಯ ಸೇತುವೆ ಬಳಿ ಲಾರಿ ನಂ: ಕೆಎ. 32-8421 ನೇದ್ದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ 280 ಚೀಲಗಳನ್ನು ಲಾರಿ ಸಮೇತ ನಿಲ್ಲಿಸಿ ಮುಂದಿನ ಕ್ರಮಕ್ಕಾಗಿ ಆಹಾರ ನಿರೀಕ್ಷಕರಾದ ಅನೀಲಕುಮಾರ ವಗ್ಗೇಕರ ಇವರಿಗೆ ದೂರವಾಣಿ ಮೂಲಕ ತಿಳಿಸಿದ್ದರಿಂದ ಅವರು ಮತ್ತು ಉಗ್ರಾಣ ವ್ಯವಸ್ಥಾಪಕರಾದ ಲೋಕೇಶಪ್ಪರವರು ಸಾಯಂಕಾಲ 6-00 ಗಂಟೆ ಸುಮಾರಿಗೆ ಸ್ಥಳಕ್ಕೆ ಹೋಗಿರುತ್ತಾರೆ. ಸ್ಥಳದಲ್ಲಿ ಸದರಿ ಲಾರಿ ಮಾಲಿಕನಾದ ಅಲ್ಲಾಭಕ್ಷ ಬಾಗವಾನ ಈತನಿರುತ್ತಾನೆ. ಡಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ರವರು ಅಕ್ಕಿ ಚೀಲಗಳಿದ್ದ ಲಾರಿಯನ್ನು ಮುಂದಿನ ಕ್ರಮಕ್ಕಾಗಿ ಆಹಾರ ನಿರೀಕ್ಷಕರಾದ ಅನೀಲಕುಮಾರರವರಿಗೆ ಒಪ್ಪಿಸಿ ಹೋಗಿರುತ್ತಾರೆ. ನಂತರ ಅಲ್ಲಾಭಕ್ಷ ಬಾಗವಾನ ಇವನು ಅನೀಲಕುಮಾರವರಿಗೆ ನಾನು ಇದೆ ದಂಧೆ ಮಾಡುತ್ತೇನೆ. ನೀನು ಯಾವುದೆ ಪ್ರಕರಣ ದಾಖಲು ಮಾಡಿಸಬೇಡ ಪ್ರಕರಣ ದಾಖಲು ಮಾಡಿಸಿದರೆ ನಿನಗೆ ಮುಂದೆ ನಾನು ಏನು ಮಾಡುತ್ತೇನೆ ನೋಡು, ನೀನು ಅಫಜಲಪೂರದಲ್ಲಿ ಹೇಗೆ ನೌಕರಿ ಮಾಡುತ್ತಿ ನೋಡುತ್ತೇನೆ ಅಂತ ಜೀವದ ಭಯ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಅನೀಲಕುಮಾರವರು ಹೆದರಿ ಅಕ್ಕಿಚೀಲಗಳನ್ನು ತುಂಬಿದ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಬಂದಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ನಮ್ಮ ಮೇಲಾಧಿಕಾರಿಯವರ ಆದೇಶದಂತೆ ಆಹಾರ ನಿರೀಕ್ಷಕರಾದ ಅನೀಲಕುಮಾರ ಮತ್ತು ಉಗ್ರಾಣ ವ್ಯವಸ್ಥಾಪಕರಾದ ಲೋಕೇಶಪ್ಪರವರಿಗೆ ವಿಚಾರಿಸಿ ಹೇಳಿಕೆಗಳು ಪಡೆದುಕೊಂಡಿದ್ದು ಅವರು ಮೇಲಿನಂತೆ ತಮ್ಮ ಹೇಳಿಕೆಗಳು ನೀಡಿರುತ್ತಾರೆ. ಈ ವಿಷಯದ ಬಗ್ಗೆ ನಮ್ಮ ಮೇಲಾಧಿಕಾರಿಯವರೊಂದಿಗೆ ಚರ್ಚಿಸಿ ದೂರು ಸಲ್ಲಿಸಲು ತಡವಾಗಿರುತ್ತದೆ. ಆರಕ್ಷಕ ವೃತ್ತ ನಿರೀಕ್ಷಕರು ಅಫಜಲಪೂರವರ ಸಮಕ್ಷಮ ಅನೀಲಕುಮಾರ ಆಹಾರ ನಿರೀಕ್ಷಕರು ಮತ್ತು ಲೋಕೇಶಪ್ಪ ಉಗ್ರಾಣ ವ್ಯವಸ್ಥಾಪಕರು ಅಫಜಲಪೂರರವರು ಹೇಳಿಕೆ ನೀಡಿದ್ದನ್ನು ಪರಿಶೀಲಿಸಿ ಮಾನ್ಯ ಪ್ರಾದೇಶಿಕ ಆಯುಕ್ತರು ಗುಲಬರ್ಗಾರವರು ಲಾರಿಯ ಮಾಲಿಕ (ಬಿಸಿ ಊಟದ ಕಾಂಟ್ರ್ಯಾಕ್ಟರ) ಆದ ಅಲ್ಲಾಬಕ್ಷ ಬಾಗವಾನ ಇವರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ  ಶಿವಕುಮಾರ ತಂದೆ ಮಹಾದೇವಪ್ಪ ಬಿರಾದಾರ ಸಾ: ಯಲ್ಹೇರಿ ತಾ:ಜಿ: ಯಾದಗಿರ ಹಾ:ವ: ದೂರದರ್ಶನ ಕ್ವಾಟರ್ಸ ನಂ: ಸಿ-5 ಹುಮನಾಬಾದ ರಸ್ತೆ ರೇವಣಾಸಿದ್ದೇಶ್ವರ ಕಾಲೋನಿ ಗುಲಬರ್ಗಾ.  ಇವರು  ದಿನಾಂಕ: 01-03-2014  ರಂದು 8:00 ಎಎಮ್ ಸುಮಾರಿಗೆ ನಾನು ಟಿಕೇಟ ಬುಕ್ ಮಾಡಲು ಗುಲಬರ್ಗಾ ಬಸ್ ನಿಲ್ದಾಣಕ್ಕೆ ಬಂದಾಗ ರಿಸರ್ವೆಷನ ಕೌಂಟರ ಹತ್ತಿರ ಒಬ್ಬ ಸಣ್ಣ ಹುಡುಗ ನಮ್ಮ ಹತ್ತಿರ ಬಂದು ಹೋಗಿದ್ದನ್ನು ಗಮನಿಸಿದೆ ನಂತರ ಬಸ್ ನಿಲ್ದಾಣದ ಹೋರಗಡೆ ಹೋಗಿ ನನ್ನ ಜೇಬಿನಲ್ಲಿ ಇಟ್ಟಿದ್ದ ಮೊಬೈಲ್ SONY EXPERIA. L WHITE ಐ.ಎಮ್.ಇ.ಐ ನಂ: 356605053532681 ಮತ್ತು ಅದರಲ್ಲಿದ್ದ ಸಿಮ್ ನಂ: 9611761455ಕೂಡಾ ಇದ್ದು ನೋಡಲು ಇರಲಿಲ್ಲ. ನಂತರ ಬಸ್ ನಿಲ್ದಾಣದಲ್ಲಿ ಹುಡುಕಾಡಿದ್ದು ನನ್ನ ಮೊಬೈಲಿಗೆ ಫೊನ ಮಾಡಿದಾಗ ಸ್ವೀಚ್ ಆಫ್ ಆಗಿರುತ್ತದೆ. ನಾನು ಗುಲಬರ್ಗಾ ಬಸ್ ನಿಲ್ದಾಣದಲ್ಲಿ ಟಿಕೆಟ ಬುಕ್ ಮಾಡಿಸುತ್ತಿರುವಾಗ ಒಬ್ಬ ಸಣ್ಣ ಹುಡುಗ ಡಿಕ್ಕಿ ಹೊಡೆದು ಹೋಗಿದ್ದು ಆ ಸಂದರ್ಭದಲ್ಲಿ ನನ್ನ ಮೊಬೈಲ್ ಕಳ್ಳತನವಾಗಿರುತ್ತದೆ. ಆ ಸಣ್ಣ ಹುಡುಗನ ಮೇಲೆ ಸಂಶಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಮಳಖೇಡ ಗ್ರಮದ ಉತ್ತರಾಧಿ ಮಠದಲ್ಲಿ ಸುಮಾರು 8 ವರ್ಷಗಳ ಹಿಂದೆ ಒಂಡು ಕಟ್ಟಿಗೆಯ ತೊಟ್ಟಿಲು ಮಾಡಿಸಿದ್ದು ಅದಕ್ಕೆ ಸುಮಾರು 8 ಕೆ.ಜಿ ಯಷ್ಟು ಬೆಳ್ಳಿಯ ತಗಡು ಬಡೆದಿದ್ದು ಅಂ.ಕಿ 3.84.000/-ರೂ ನೆದ್ದು ಮತ್ತು ಒಂದು ದೇವರ ಹುಂಡಿಯನ್ನು ಮಠದ ಪ್ರಾಕಾರದಲ್ಲಿ ಇಟ್ಟಿದ್ದು ನಿನ್ನೆ ದಿನಾಂಕ 02.03.2014 ರಂದು ರಾತ್ರಿ 10:30 ಪಿ.ಎಮ್ ಕ್ಕೆ ನಾವೆಲ್ಲ ಮಠದಲ್ಲಿ ಅದನ್ನು ನೋಡಿದ್ದು. ಇಂದು ದಿನಾಂಕ 03.03.2014 ರಂದು ಬೆಳಗ್ಗೆ ೦6:00 ಗಂಟೆಗೆ ಪೂಜೆ ಮಾಡಲು ಹೋಗಿ ನೋಡಿದಾಗ ಸದರಿ ಬೆಳ್ಳಿಯ ತಗಡು ಹಚ್ಚಿದ್ದ ತೊಟ್ಟಿಲು ಮತ್ತು ದೇವರ ಮುಂದೆ ಇಟ್ಟಿದ್ದ ಹುಂಡಿ  ಇರಲಿಲ್ಲ ಸದರಿ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ. ವೆಂಕಣ್ಣಾಚಾರಿ ತಂದೆ ಕ್ರೀಷ್ಣದಾಸ ಪುಜಾರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಮಹ್ಮದ ಲೈಕ ಉರ ರೇಹಮಾನ ತಂದೆ ಅಬ್ದುಲ ರೇಹಮಾನ್ ಸಾ|| ಐವನ ಇ ಶಾಹಿ ಮಜ್ಜಿದ ಹತ್ತಿರ ಗುಲಬರ್ಗಾ ಇವರು ದಿನಾಂಕ. 03.02.2014 ರಂದು 5.00 ಪಿ.ಎಂಕ್ಕೆ ನನ್ನ ಬಜಾಜ ಡಿಸ್ಕವರ ಮೊಟಾರ್ ಸೈಕಲ ನಂ. ಕೆಎ-23-ಎಸ್-7196  ಚಾ.ನಂ.  DSVBMG95333  ಇ.ನಂ. DSUBMG15465 ಅ.ಕಿ|| 19,000/- ರೂ ನೆದ್ದನ್ನು ಏಸಿಯನ ಮಹಲ ಹತ್ತಿರ ನಿಲುಗಡೆ ಮಾಡಿ ಕೆಲಸ ಮುಗಿಸಿಕೊಂಡು  7.00 ಪಿ.ಎಂಕ್ಕೆ ಮರಳಿ ಬಂದು ನೋಡಲಾಗಿ ಯಾರೋ ಕಳ್ಳರು ನನ್ನ ಮೊಟಾರ್ ಸೈಕಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.  

No comments: