ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ದೇವಲ ಗಾಣಗಾಪೂರ ಠಾಣೆ : ದಿನಾಂಕ:30-04-2014 ರಂದು
ಚವಡಾಪುರ ಗ್ರಾಮದ ಲಕ್ಷ್ಮೀ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಎಲೆಗಳ ಸಹಾಯದಿಂದ
ಅಂದಾರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ
ಸಾಹೇಬರು ಆಳಂದ ಮತ್ತು ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್ರ.ಐ.
ಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದುಕೊಂಡು ಅವರ
ಹೆಸರು ವಿಳಾಸ ವಿಚಾರಿಸಲಾಗಿ 1. ಬಸವಂತರಾಯ ತಂದೆ
ಸಿದ್ದಪ್ಪ ಗೋಪಣೆ 2. ಶ್ರೀಕಾಂತ ತಂದೆ ಯಲ್ಲಪ್ಪ
ಆಲಕುಂಟೆ 3. ಶಿವಾನಂದ ತಂದೆ ಶಂಕರ
ಬನಪಟ್ಟಿ 4. ಬೀಮಾಶಂಕರ ತಂದೆ ಬಾಬು ಆಲಕುಂಟೆ 5. ನಾಗೇಶ ತಂದೆ ಬಸವರಾಜ ಇಟಕಲ್ ಸಾ||ಎಲ್ಲರೂ ಚವಡಾಪೂರ ರವರನ್ನು ಹಿಡಿದು ಸದರಿಯವರಿಂದ ಒಟ್ಟು 3040=00 ರೂ ಮತ್ತು 52 ಇಸ್ಪೇಟ ಎಲೆಗಳನ್ನು
ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ
ದಾಖಲಿಸಲಾಗಿದೆ.
ದೇವಲ ಗಾಣಗಾಪೂರ ಠಾಣೆ : ದಿನಾಂಕ:30-04-2014 ರಂದು ಚಿನಮಳ್ಳಿ
ಗ್ರಾಮದ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದಾರ
ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ
ಮತ್ತು ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್ರ.ಐ. ಗಾಣಗಾಪೂರ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದುಕೊಂಡು ಅವರ ಹೆಸರು ವಿಳಾಸ
ವಿಚಾರಿಸಲಾಗಿ 1. ಸಂಗಪ್ಪ ತಂದೆ ಶೇಖಪ್ಪ ತಳವಾರ 2.ಗುರಣ್ಣ ತಂದೆ ಅಮೋಘಿ ಪೂಜಾರಿ 3.ರಾಜಶೇಖರ ತಂದೆ ಗುರುಶಾಂತ ಕೌದಿವ:
4.ಮಲ್ಕಪ್ಪ ತಂದೆ ಸೋಮರಾಯ ಮಾಂಗ ಸಾ|| ಎಲ್ಲರೂ ಚಿನಮಳ್ಳಿ ರವರನ್ನು ಹಿಡಿದು ಸದರಿಯವರಿಂದ ಒಟ್ಟು 2190-00 ರೂ ಮತ್ತು 52 ಇಸ್ಪೇಟ ಎಲೆಗಳುನ್ನು
ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ
ದಾಖಲಿಸಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ದಿನಾಂಕ 29-03-2014 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಶ್ರೀ
ಮಾರ್ಕಂಡೇಯ ದೇವಸ್ಥಾನದ ದಾನ ಪೆಟ್ಟಿಗೆ & ಶ್ರೀ ಗಣೇಶ ದೇವರ ದಾನ ಪೆಟ್ಟಿಗೆ ಒಡೆದು ಅದರಲ್ಲಿದ್ದ ಅಂದಾಜು 3000
ರೂಪಾಯಿ ಹಾಗೂ ಏಕಾಂತ ರಾಮಯ್ಯಾ ದೇವರ ದಾನಪೆಟ್ಟಿಗೆ ಒಡೆದು ಅದರಲ್ಲಿದ್ದ ಅಂದಾಜು 5000 ರೂಪಾಯಿ
ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಭಾರತ ತಂದೆ ಲೋಕಪ್ಪಾ ಸಂಗಾ ತನ ಸಾ|| ಚಕ್ರಿಕಟ್ಟಾ ಹತ್ತಿರ ಆಳಂದ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಕನಿರಾಮ ತಂದೆ
ದೇವಲಾ ಚವ್ಹಾಣ ಸಾ:ಗೋಗಿ(ಕೆ) ತಾಂಡಾ ತಾ:ಜಿ:
ಗುಲಬರ್ಗಾ ರವರು ದಿನಾಂಕ; 29-03-14 ರಂದು ರಾತ್ರಿ 7-00
ಗಂಟೆ ಸುಮಾರಿಗೆ ನಾನು ಹೊಲದಿಂದ ಬಂದು ನಮ್ಮಮನೆಯ ಮುಂದಿನ ಕಟ್ಟೆಯ ಮೇಲೆ ಊಟ ಮಾಡುತ್ತಾ
ಕುಳಿತುಕೊಂಡಾಗ ನಮ್ಮ ತಾಂಡಾದ 1) ಉಮಲಾಬಾಯಿ ಗಂಡ ಮನ್ನು ರಾಠೋಡ 2) ಮನ್ನು ತಂದೆ ಪುರು ರಾಠೋಡ
3) ಜೈರಾಮ ತಂದೆಮನ್ನು ರಾಠೋಡ 4) ಮಾರುತಿ ತಂದೆ ಮನ್ನು ರಾಠೋಡ 5) ವೆಂಕಟ ತಂದೆ ಚಂದ್ರು ಚವ್ಹಾಣ
ಎಲ್ಲರೂ ಕೂಡಿಕೊಂಡು ಬಂದವರೇ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ನಿಂತುಕೊಂಡು ನಮ್ಮ ಲಂಬಾಣಿ
ಭಾಷೆಯಲ್ಲಿ ನಮ್ಮ ಮನೆಯ ಮುಂದಿನ ಕಸ ರಸ್ತೆಯಲ್ಲಿ ಹಾಕಿದರೆ. ತಕರಾರು ಮಾಡುತ್ತಿ
ಅಂತಾಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಅಲ್ಲಿಗೆ ಹೋಗಿ ಯಾಕೆ ನನಗೆ ಬೈಯುತ್ತಿದ್ದಿರಿ, ನಿಮ್ಮ ಮನೆಯ ಕಸವನ್ನು ನಿಮ್ಮ ಮನೆಯ ಮುಂದೆ ಹಾಕಿಕೊಳ್ಳಿರಿ ನಮ್ಮ ಮನೆಯ ಮುಂದೆ ತಂದು ಯಾಕೆ
ಹಾಕುತ್ತಿದ್ದಿರಿ. ಅಂತಾ ಹೇಳಿ ಮರಳಿ ನನ್ನ ಮನೆ ಕಡೆಗೆ ಹೋಗುತ್ತಿರುವಾಗ ಎಲ್ಲರು ಕುಡಿಕೊಂಡು
ಹೊಡೆಬಡೆ ಮಾಡಿ ಬಡಿಗೆಯಿಂದ ಕಲ್ಲಿನಿಂದ ಹೊಡೆದು ರಕ್ತಗಾಯ ಗುಪ್ತಗಾಯಪಡಿಸಿರುತ್ತಾರೆ ಅಂತಾ
ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ
ಠಾಣೆ : ಶ್ರೀ ಜಯಕುಮಾರ ತಂದೆ
ಮಲ್ಲಿಕಾರ್ಜುನ ಮಡಕಿ ಸಾ: ಕುರಿಕೋಟಾ ರವರು ದಿನಾಂಕ
29-03-14 ರಂದು 10-25 ಗಂಟೆ ಸುಮಾರಿಗೆ
ರಾತ್ರಿ ಮೋಟಾರ ಸೈಕಲ ನಂ ಕೆಎ 28 ಎಸ್ 7890 ನೇದ್ದರ ಹಿಂದೆ ತನ್ನ ಗೆಳೆಯ ಅಶೋಕ ಕೂಡಿಸಿಕೊಂಡು ಮಾಹಾಗಾಂವ
ಕ್ರಾಸದಲ್ಲಿದ್ದ ದೋಸ್ತಿ ದಾಬಾದಲ್ಲಿ ಊಟ ಮಾಡಿ ಮನೆ ಕಡೆ ರೋಡ ಎಡ ಬದಿಯಿಂದ ಹೊರಟಾಗ ಹಿಂದಿನಿಂದ
ಯಾವುದೋ ವಾಹನ ಚಾಲಕ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನನ್ನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಹಾಗೇ ಓಡಿಸಿಕೊಂಡು
ಹೋಗಿದ್ದು, ಇದರಿಂದಾಗಿ ನನಗೆ ಮತ್ತು ಅಶೋಕ
ಇಬ್ಬರಿಗೂ ಬಲಗಾಲ ಮೊಳಕಾಲ ಕೆಳೆಗೆ ಕಾಲು ಮುರಿದಿದ್ದಲ್ಲದೇ ಮೈಮೇಲೆ ಅಲ್ಲಿಲ್ಲಿ ರಕ್ತಗಾಯ ಮತ್ತು
ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment