ಮಟಕಾ ಜೂಜಾಟದಲ್ಲಿ ನಿರತ
ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 03-03-2014 ರಂದು ಕವಲಗಾ ಗ್ರಾಮದ ಬಾಬಾಶಾ
ದರ್ಗಾದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ
ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಮತ್ತು ಸಿಬ್ಬಂದಿ
ಪಂಚರೊಂದಿಗೆ ಕವಲಗಾ ಗ್ರಾಮಕ್ಕೆ ಹೋಗಿ ಬಾಬಾಶಾ ದರ್ಗಾದ ಮರೆಯಾಗಿ ನಿಂತು ನೋಡಲಾಗಿ ಬಾಬಾಶಾ ದರ್ಗಾದ ಕಟ್ಟೆಯ ಮೇಲೆ
ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1
ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ
ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವ ದನ್ನು
ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂಧಿ ಜನರು ಕೂಡಿ ಸದರಿ ವ್ಯಕ್ತಿಯ
ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ಸಿದ್ರಾಮಪ್ಪ ತಂದೆ ಶಿವರಾಯ ಅಮರೆ ಸಾ|| ಕವಲಗಾ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ
ನಗದು ಹಣ 317/-, ಒಂದು ಮಟಕಾ ಅಂಕಿ ಸಂಖ್ಯೆ
ಹಾಳೆ, ಒಂದು ಬಾಲ ಪೆನ್ನ
ನೇದ್ದವುಗಳನ್ನು ವಶಪಡಿಸಿಕೊಂಡು ಠಾಣೆಗೆ ಮರಳಿ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ
ಪ್ರಕರಣ ದಾಖಲಿಸಲಾಗಿದೆ.
ಸಿಡಿಲು ಬಡಿದು ವ್ಯಕ್ತಿ ಸಾವು
:
ಅಫಜಲಪೂರ ಠಾಣೆ : ದಿನಾಂಕ 03-03-2014 ರಂದು ಮದ್ಯಾಹ್ನ 3;00 ಗಂಟೆಗೆ ಶ್ರೀ ಮಲ್ಲಿಕಾರ್ಜುನ ತಂದೆ ತಿಪ್ಪಣ್ಣ ಚಂಬಾರ
ರವರ
ತಮ್ಮ ಬಾಕ್ಸರ ಇವನು ಮನೆಯಿಂದ ಹೊಲಕ್ಕೆ ಹೋಗಿದ್ದು 5;00 ಪಿ.ಎಂ ಸುಮಾರು ಜೋರಾಗಿ ಗುಡುಗು ಸಿಡಲಿನ ಸಪ್ಪಳ
ಕೇಳಿಸುತ್ತಿತ್ತು. ನಂತರ ಅದೇ ಸಮಯಕ್ಕೆ ನಮ್ಮೂರ ಹಣಮಂತ ತಂದೆ ಮಲ್ಕಪ್ಪ ಪುಲಾರಿ ರವರು ನನಗೆ ಫೋನ
ಮಾಡಿ ಹೇಳಿದ್ದೇನೆಂದರೆ, ನಿಮ್ಮ
ತಮ್ಮ ಬಾಕ್ಸರ ಇವನಿಗೆ ಹೊಲದಲ್ಲಿ ಸಿಡಿಲು ಬಡಿದು ಬಿದ್ದಿರುತ್ತಾನೆ ಬೇಗ ಬಾ ಅಂತಾ ಹೇಳಿದನು. ಆಗ
ನಾನು ಗಾಬರಿಯಾಗಿ ನಾನು ಮತ್ತು ನಮ್ಮ ತಂದೆ ಕೂಡಿಕೊಂಡು ಹೊಲಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮ
ಕೆಳಗೆ ಬಿದ್ದು ಒದ್ದಾಡುತ್ತಿದ್ದ. ನಂತರ ನಾನು ಮತ್ತು ನಮ್ಮ ತಂದೆ ಹಾಗು ಹಣಮಂತ ಪುಲಾರಿ
ರವರೆಲ್ಲರು ಕೂಡಿಕೊಂಡು ಒಂದು ಜೀಪನಲ್ಲಿ ನಮ್ಮ ತಮ್ಮನನ್ನು ಹಾಕಿಕೊಂಡು ಉಪಚಾರ ಕುರಿತು ಸರಕಾರಿ
ಆಸ್ಪತ್ರೆ ಅಫಜಲಪೂರಕ್ಕೆ ತಗೆದುಕೊಂಡು ಬರುತ್ತಿದ್ದಾಗ ಮದ್ಯಾ ಮಾರ್ಗದಲ್ಲಿ ಸೊನ್ನ ಕ್ರಾಸ ಬಳಿ
ನನ್ನ ತಮ್ಮ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಭೀಮಶಾ ತಂದೆ ಕರಬಸಪ್ಪ ನಿಂಬಗಾಳ ಸಾ; ದುತ್ತರಗಾಂವ ಇವರ ಮಗಳ ಕೈಯಲ್ಲಿ ಶ್ರೀಶೈಲ ತಂದೆ
ಕಾಶಪ್ಪ ಮಂಗಾಣೆ ಇತನು ಚೀಟಿ ಕೊಟ್ಟು ಬೇರೆಯವರಿಗೆ ಒಯ್ದು ಕೊಡಲು ತಿಳಿಸಿದ್ದು ನನ್ನ ಮಗಳು
ನಿರಾಕರಿಸಿ ಸದರಿ ವಿಷಯ ನನಗೆ ಹೇಳಿದಾಗ ನಾನು ದಿನಾಂಕ 02-03-2014 ರಂದು ಸದರಿಯವನ ಮನಗೆ ಹೋಗಿ
ವಿಚಾರಿಸಲು ಆತನು ಮಲಗಿದ್ದರಿಂದ ವೀರೇಶ್ವರ ಗುಡಿಯಲ್ಲಿ ನಾನು ಕುಳಿತಾಗ ಶ್ರೀಶೈಲ ತಂದೆ ಕಾಶಪ್ಪ ಮಂಗಾಣೆ ಇತನು ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಮನೆಗೆ
ಬಂದು ನನಗೆ ಕೇಳತಿ ಮಗನೆ ಅಂತಾ ಬೈದು ಎದೆಯ ಮೇಲಿನ ಅಂಗಿ ಹಿಡೆದು ಕೈಯಿಂದ ಬೆನ್ನ ಮೇಲೆ ಹಾಗೂ
ಕಲ್ಲಿನಿಂದ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡೆಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಮಾಹಾನಂದ ಗಂಡ ಹಣಮಂತ ಹುಲಿ ಸಾ: ಬೆಣ್ಣೆಶೀರೂರ ಹಾ:ವ
ಕೇರೂರು ತಾ: ಆಳಂದ ರವರ ಗಂಡ, ಅತ್ತೆ, ಮಾವ, ಬಾವ,ನಾದನಿಯರು ಸೇರಿಕೊಂಡು ದೈಹಿಕ ಮತ್ತು ಮಾನಸಿಕ ಕಿರುಕುಳ
ನೀಡಿ ದಿನಾಂಕ 25-02-2014 ರಂದು 10 ಗಂಟೆಗೆ ಗಂಡನ ಮನೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ
ಬಡೆ ಮಾಡಿ ತವರು ಮನೆಯಿಂದ 50,000=00 ರೂ ಹಣ ತರುವಂತೆ ಮನೆಯಿಂದ ಹೊರಗೆ ಹಾಕಿದ್ದು ಒಂದು ವೇಳೆ ತರದೆ ಇದ್ದರೆ ಕೋಲೆ
ಮಾಡುತ್ತೇನೆ ಅಂತಾ ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment