Police Bhavan Kalaburagi

Police Bhavan Kalaburagi

Wednesday, March 12, 2014

Gulbarga District Reported Crimes

ಕೊಲೆ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ  ಲಕ್ಷ್ಮಿ ಗಂಡ ಹಣಮಂತು ಕುರಬುರ ಸಾ: ಕೊನಾಪೂರ ಗ್ರಾಮ ತಾ: ಸೇಡಂ ಇವರ  ಗಂಡನ ಅಣ್ಣ-ತಮ್ಮಂದಿರು ಒಟ್ಟು 3 ಜನರಿದ್ದು, 1] ಚನ್ನಪ್ಪ ತಂದೆ ಮಾಳಪ್ಪ 2] ಬೀರಪ್ಪ ತಂದೆ ಮಾಳಪ್ಪ 3] ನನ್ನ ಗಂಡನಾದ ಹಣಮಂತು ತಂದೆ ಮಾಳಪ್ಪ ಈ ರೀತಿಯಾಗಿ ಇರುತ್ತಾರೆ. ಈ 3 ಜನರು ಬೇರೆ-ಬೇರೆಯಾಗಿ ಬೇರೆ ಮನೆ ಮಾಡಿಕೊಂಡು, ಜೀವನ ಮಾಡುತ್ತಿದ್ದೇವು, ಪ್ರತಿಯೊಬ್ಬರಿಗೆ ಕೊನಾಪೂರ ಸಿಮೇಯಲ್ಲಿರುವ ಹಿರಿಯರ ಆಸ್ತಿಯಲ್ಲಿ, ತಲಾ 2 ಎಕರೆಗಳು ಬಂದಿದ್ದು, ನಮಗೆ 2 ಏಕರೆ ಜಮೀನು ಇರುತ್ತದೆ. ಮುಂದಿನ ವರ್ಷಕ್ಕಾಗಿ, ನಮ್ಮ 2 ಏಕರೆ ಜಮೀನು ಒಂದು ವರ್ಷಕ್ಕೆ 30 ಸಾವಿರ ರೂಪಾಯಿಗಳೂ ಕೊಟ್ಟು ನಮ್ಮೂರಿನ ರಾಮುಲು ತಂದೆ ಸಾಬಣ್ಣಾ ಇತನು ಕಡತಿ ಹಾಕಿಕೊಳ್ಳುವ ಕುರಿತು ಕೆಲವು ದಿವಸಗಳ ಹಿಂದೆ, ಮಾತಾಗಿತ್ತು, ಆದರೆ, ರಾಮುಲು ಇತನು ಮಾತಾಡಿದ ಪ್ರಕಾರ 25,000/- ರೂಪಾಯಿಗಳು ಕೊಡುತ್ತೇನೆ ಇನ್ನು 05,000/- ರೂಪಾಯಿಗಳು ಆಮೇಲೆ ಕೊಡುತ್ತೇನೆ ಅಂದಾಗ ನಾವು ಪೂರ್ತಿ ಹಣ ಕೊಡು ಅಂದಾಗ ನಮ್ಮೂರಿನ ವೆಂಕಟಪ್ಪ ಇತನು ಉಳಿದ 05,000/- ರೂಪಾಯಿ ನಾನು ಕೊಡುತ್ತೇನೆ ಅಂತಾ ಅಡ್ಡಬಂದು ಮಾತನಾಡಿದಾಗ, ನನ್ನ ಗಂಡನು ಇದಕ್ಕೆ ಒಪ್ಪಲಿಲ್ಲಾ. ಈ ವಿಷಯದಲ್ಲಿ ವೆಂಕಟಪ್ಪ ತಂದೆ ಹಾಶಪ್ಪ ಕುರಬುರ ಇತನು ನನ್ನ ಗಂಡನ ಸಂಗಡ ತಕರಾರು ಮಾಡುತ್ತಾ ಬಂದನು, ಆಗಾಗ ಕಿರಿಕಿರಿ ಮಾಡುತ್ತಿದ್ದನು. ದಿನಾಂಕ: 11-03-2014 ರಂದು ರಾತ್ರಿ 08:00 ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಗಂಡನ ಅಣ್ಣನ ಹೆಂಡತಿಯಾದ ಕಮಲಮ್ಮ ಗಂಡ ಬೀರಪ್ಪ ಮತ್ತು ನಮ್ಮ ಸಂಬಂದಿಕನಾದ ಬಸ್ಸಪ್ಪ ತಂದೆ ನರಸಪ್ಪ ಸಾ: ರಿಬ್ಬನಪಲ್ಲಿ ಇವರು ಕೂಡಿ ಮನೆಯಲ್ಲಿ ಮಾತನಾಡುತ್ತಾ ಕುಳಿತ್ತಿದ್ದೇವು. ಮತ್ತು ನನ್ನ ಗಂಡನಾದ ಹಣಮಂತು ತಂದೆ ಮಾಳಪ್ಪ ಇವರು ಊರಾಗಿನಿಂದ ನಮ್ಮ ಮನೆಯೋಳಗೆ ಬಂದರು, ಸ್ವಲ್ಪ ಸಮಯದ ನಂತರ ನಮ್ಮೂರಿನ ವೆಂಕಟಪ್ಪ ತಂದೆ ಹಾಶಪ್ಪ ಕುರಬುರ ಇತನು ನಮ್ಮ ಮನೆಯಲ್ಲಿ ಬಂದು, ನನ್ನ ಗಂಡನ ಸಂಗಡ ಜಗಳಕ್ಕೆ ಬಿದ್ದು, ಏ ಭೋಸಡಿ ಮಗನೆ, ನಿಮ್ಮ ಹೊಲ ಕಡತಿ ಹಾಕುವ ವಿಷಯದಲ್ಲಿ ನನ್ನ ಸಂಗಡ ಜಗಳಾ ಮಾಡಿ, ಮರ್ಯಾದಿ ತೆಗಿತಿ ಮಗನೆ ಅನ್ನುತ್ತಾ. ನಿನಗೆ ಖಲಾಸ ಮಾಡೇ ಬಿಡುತ್ತೇನೆ ಅಂದು, ತನ್ನ ಕಾಲಿನಿಂದ ನನ್ನ ಗಂಡನ ನಾಜುಕು ಜಾಗವಾದ ತೊರಡಿಗೆ ಒದ್ದು, ಒಳಪೇಟ್ಟು ಮಾಡಿದನು. ಮತ್ತು ನನ್ನ ಗಂಡನಿಗೆ ಜೋರಾಗಿ ದಬ್ಬಿಸಿಕೊಟ್ಟಾಗ, ನನ್ನ ಗಂಡನು ಕೆಳಗೆ ಬಿದ್ದನು. ಮತ್ತು ಇತನ ತಲೆಗೆ ಒಳಗಿನ ಮನೆಯ ಬಾಗಿಲ ವಸ್ತಿಲು ತಲೆಗೆ ಬಡಿದು, ಒಳಪೇಟ್ಟಾಗಿ ಸ್ಥಳಲ್ಲಿಯೇ ಒದ್ದಾಡುತ್ತಾ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಪ್ರದೀಪ ತಂದೆ ಬಂಡೆಪ್ಪ ನಿಂಬೂರಕರ್ ಸಾ: ಮ.ನಂ:157 ಕಾಂತಾಕಾಲೋನಿ ಗುಲಬರ್ಗಾ ರವರು ದಿನಾಂಕ: 01-03-2014 ರಂದು 10:30 ಎಎಮ್ ಕ್ಕೆ ಹಾರಕೂಡ ಗ್ರಾಮದಲ್ಲಿ ನನ್ನ ತಾಯಿಯವರ ತಂದೆಯವರು ಮೃತಪಟ್ಟಿರುವದರಿಂದ ನಾನು & ಕುಟುಂಬದ ಎಲ್ಲಾ ಸದಸ್ಯರು ಹಾರಕೂಡ ಗ್ರಾಮಕ್ಕೆ ತೆರಳಿರುತ್ತೇವೆ. ನಮ್ಮ ಮನೆಗೆ ಬೀಗ ಹಾಕಿಕೊಂಡು ಮನೆಯ ಇನ್ನೊಂದು ಭಾಗದಲ್ಲಿ ಬಾಡಿಗೆ ಇರುವ ಶ್ರೀ ರವಿಕುಮಾರ ತಂದೆ ಸಾಯಬಣ್ಣ ಮೋರೆ ಇವರಿಗೆ ತಿಳಿಸಿ ಹಾರಕುಡಕ್ಕೆ ಹೋಗಿರುತ್ತೇವೆ. ದಿನಾಂಕ 12-03-2014 ರಂದು ಬೆಳಗ್ಗೆ 9:15 ಗಂಟೆಗೆ ನಮ್ಮ ಬಾಡಿಗೆದಾರರ ಗಮನಕ್ಕೆ ಕಳ್ಳತನ ಆಗಿರುವ ಕಂಡಿರುವದರಿಂದ ಅವರು ನಮಗೆ ಫೊನ  ಮೂಲಕ ತಿಳಿಸಿರುತ್ತಾರೆ. ನಾನು ಹಾರಕೂಡ ಗ್ರಾಮದಿಂದ ಗುಲಬರ್ಗಾ ಕ್ಕೆ ಬಂದು, ನನ್ನ ಮನೆಯಲ್ಲಿ ಬಂದು ನೋಡಿದಾಗ, ಮನೆಯ ಬಾಗಿಲಿನ ಕೊಂಡಿ ಮುರಿದಿದ್ದು ಒಳಗೆ ಹೋಗಿ ನೊಡಲು ಅಲಮಾರಗಳು ಎರಡು ತೆರೆದಿದ್ದು, ಅಲಮಾರದಲ್ಲಿನ  ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದವು. ಅಲಮಾರದಲ್ಲಿ ಇಟ್ಟಿದ್ದ ಬಂಗಾರದ ಬೆಳ್ಳಿಯ ಆಭರಣಗಳು ಒಟ್ಟು 1,75,000/- ರೂ ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳವು ಮಾಡಿಕಮಾಡಿಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿಮಿತ್ರಪ್ಪ ತಂದೆ ಭೀಮಶಪ್ಪ ರವರು ದಿನಾಂಕ 11-03-2014 ರಂದು ತಮ್ಮ ಅಳಿಯನಾದ ಜಾನ ಇಬ್ಬರು ಕೂಡಿಕೊಂಡು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಕೆಬಿಎನ್ ಆಸ್ಪತ್ರೆಯಲ್ಲಿ ಅವರ ಸಂಬಂದಿಕರನ್ನು ಭೇಟಿಯಾಗುವ ಸಲುವಾಗಿ ಐವಾನ ಈ ಶಾಹಿ ರೋಡ ಮುಖಾಂತರವಾಗಿ ಲಾಹೋಟಿ ಕ್ರಾಸ್ ಕಡೆಗೆ ಇಬ್ಬರು ನಡೆದುಕೊಂಡು ಹೋಗುತ್ತಿರುವಾಗ ಸ್ಟೇಡಿಯಂ ಕಡೆಗೆ ಹೋಗುವ ರೋಡ ಹತ್ತಿರ ಮೋ/ಸೈಕಲ ನಂ ಕೆಎ-32 ಯು – 190  ನೇದ್ದರ ಸವಾರ ಪರಶುರಾಮ ಇತನು ಲಾಹೋಟಿ ಕ್ರಾಸ ಕಡೆಯಿಂದ ಎದುರಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತಾನು  ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: