ಮಾಂಗಲ್ಯ ಸರ ಕಿತ್ತುಂಕೊಂಡು ಹೋದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಸ್ನೇಹಲತಾ ಗಂಡ ಅನೀಲಕುಮಾರ ಸಾ||
ರಾಮ ನಗರ ಗುಲಬರ್ಗಾ ರವರು ದಿನಾಂಕ 01-04-2014 ರಂದು ಬೆಳಗ್ಗೆ ನಾನು ನನ್ನ ಕೆಲಸದ ನಿಮಿತ್ಯ ಶಾಮಸುಂದರ ನಗರದಿಂದ ಕಾಲೇಜಗೆ ಬರುತ್ತಿದ್ದಾಗ 09-30 ಗಂಟೆ ಸುಮಾರಿಗೆ ನಡೆದುಕೊಂಡು ಬರುತ್ತಿರುವಾಗ ಯಾರೊ ಇಬ್ಬರು ಅಪರಿಚಿತರು ವ್ಯಕ್ತಿಗಳು ಮೋಟಾರ ಸೈಕಲ ಮೇಲೆ ನನ್ನ ಪಕ್ಕದಿಂದ ಮುಂದೆ ಹೊಗಿ ಮರಳಿ ಎದರು ಗಡೆಯಿಂದ ಮೋಟಾರ ಸೈಕಲ ಮೇಲೆ ಬಂದು ನನ್ನ ಕೊರಳ್ಳಿಲಿದ್ದ 35 ಗ್ರಾಂ ಬಂಗಾರದ ಮಂಗಳ ಸೂತ್ರ ಕಿತ್ತಿಕೊಂಡು ಹೋಗಿದ್ದು ಅ.ಕಿ 1 ಲಕ್ಷ 5 ಸಾವಿರ ರೂ /- ಇದ್ದು ಸದರಿ ಮಂಗಳ ಸೂತ್ರ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಉದಯಕುಮಾರ ತಂದೆ ಶಿವಯೋಗಿ ಸಾ: ಕೋರಿ ಮಠದ ಹತ್ತಿರ ಧನಗರಗಲ್ಲಿ ಬ್ರಹ್ಮಪೂರ ಗುಲಬರ್ಗಾ ರವರು ದಿನಾಂಕ 01-04-2014 ರಂದು ಬೆಳಿಗ್ಗೆ 5-30 ಗಂಟೆಗೆ ಜಗತ ಸರ್ಕಲದಿಂದ ಎಸ್.ವಿ.ಪಿ ಸರ್ಕಲ ಮೇನ ರೋಡಿನಲ್ಲಿ ಬರುವ ಮಿನಿ ವಿಧಾನ ಸೌಧ ಮೇನ ಗೇಟ ಎದುರು ರೋಡಿನ ಮೇಲೆ ಫಿರ್ಯಾದಿಯು ತನ್ನ ಮೋಟಾರ ಸೈಕಲ ನಂಬರ ಕೆಎ-32 ಇಎ-0026 ರ ಮೇಲೆ ಹಿಂದುಗಡೆ ಸಂಗಮೇಶ ಇತನಿಗೆ ಕೂಡಿಸಿಕೊಂಡು ಹೋಗುತ್ತಿದ್ದಾಗ ಕಾರ ನಂಬರ ಎಪಿ-25 ಎಸಿ-4951 ರ ಚಾಲಕನು ಜಗತ ಸರ್ಕಲ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಮತ್ತು ಸಂಗಮೇಶ ಇತನಿಗೆ ಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಶಾಹಾಬಾದ ನಗರ
ಠಾಣೆ : ಶ್ರೀಮತಿ ಪ್ರಬಾವತಿ ಗಂಡ ಜಗದೀಶ ಮಡಿವಳ ಸಾ|| ರಾಮ ಮಂದಿರ ಹತ್ತಿರ ಜೆ.ಪಿ. ಕಾಲೋನಿ ಶಹಾಬಾದ ಇವರು ದಿನಾಂಕ 28.03.2014 ರಂದು 1.30 ಪಿ.ಎಮ್. ಸುಮಾರಿಗೆ ನನ್ನ ಗಂಡ ಜಗದೀಶ ಇವನು ಏ ರಂಡಿ ನೀನು ನೋಡಲು ಚನ್ನಾಗಿರುವದಿಲ್ಲಾ, ನೀನು ದರಿದ್ರದವಳು, ನಿನಗೆ ಅಡುಗೆ ಮಡಲು
ಬರುವದಿಲ್ಲಾ. ಮತ್ತು ನನ್ನ
ತಂದೆ , ತಾಯಿ ಹಾಗೂ ಮೈದುನ ಮತ್ತು ನಾದಿನಿಗೆ ಚನ್ನಾಗಿ ನೋಡಿಕೊಳ್ಳುವದಿಲ್ಲಾ.
ನನಗೆ ಹೊರದೇಶಕ್ಕೆ ಹೋಗಲು ನಿನ್ನ ತವರು
ಮೆನಯಿಂದ ವರದಕ್ಷಿಣೆ ರೂಪದಲ್ಲಿ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಬೈಯ್ದು ಕೈಯಿಂದ ಕಪಾಳದ ಮೇಲೆ ಹೊಡೆದನು. ಮತ್ತು ಅತ್ತೆ ಮಾವ, ಮೈದುದುನ, ನಾದಿನಿ, ರವರು ಅಕ್ರಮ ಕೂಟ ಕಟ್ಟಿಕೊಂಡು
ಏಕೋದ್ದೇಶದಿಂದ ನನಗೆ ತಡೆದು
ನಿಲ್ಲಿಸಿ ಕೈಯಿಂದ ಹೊಡೆದು ಅವಾಛ್ಯವಾಗಿ ಬೈಯ್ದು ಜಿವ ಬೆದರಿಕೆ ಹಾಕಿ ತವರು ಮನೆಯಿಂದ ಹೆಚ್ಚಿಗೆ ವರದಕ್ಷಿಣೆ ರೂಪದಲ್ಲಿ
ಹಣವನ್ನು ತೆಗೆದುಕೊಂಡು ಬಾ ಎಂದು ದೈಹೀಕವಾಗಿ ಮತ್ತು ಮಾನಸೀಕವಾಗಿ ಕಿರುಕುಳ ಕೊಟ್ಟರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment