Police Bhavan Kalaburagi

Police Bhavan Kalaburagi

Thursday, April 10, 2014

Gulbarga District Reported Crimes

ಕೊಲೆ ಮಾಡಿ ದರೋಡೆಮಾಡಿದ ಆರೋಪಿತನ ಬಂಧನ :

ರೋಜಾ ಠಾಣೆ : ದಿನಾಂಕ: 25/03/2014 ರಂದು ಮಧ್ಯಾನ 13:15 ಗಂಟೆಗೆ ಫಿರ್ಯಾದಿ ಶ್ರೀ ಸೈಯ್ಯದ ರಫತ ರಹೆನ ತಂದೆ ಸೈಯ್ಯದ ಅಬ್ದುಲ ಸತ್ತಾರ ಸಾ: ನ್ಯಾಶನಲ್ ಪ್ಲಾವರ ಸ್ಕೂಲ ಹತ್ತಿರ ಮುಸ್ಲಿಂ ಚೌಕ್ ಮೋಮಿನಪುರ ಇವರು ಕೊಟ್ಟ ದೂರು ಅರ್ಜಿಯ ಸಂಕ್ಷಿಪ್ತ ಸಾರಾಂಶ ಏನೆಂದರೆ ತನ್ನ ಅಣ್ಣ ಸೈಯ್ಯದ ಜಾವೀದ ನುಮಾನ ಸಾ: ಮನೆ ನಂ. 7-1105/34/38 ನೆಹರು ಗಂಜ ಬ್ಯಾಂಕ ಕಾಲೋನಿ ಗುಲಬರ್ಗಾ ಇವರು ದಿನಾಂಕ: 24/03/2014 ರಂದು ಬೆಳಿಗ್ಗೆ 5:00 ಗಂಟೆಯ ಸುಮಾರಿಗೆ ತಮ್ಮ ಕುಟುಂಬಸಮೇತ ದೆಹಲಿ ಪ್ರವಾಸಕ್ಕೆ ಹೋಗಿದ್ದು ಮನೆಯ ಕಾಯಲು ನಂಬಿಗಸ್ತವಾಚಮನ ಅಬ್ದುಲ ನಬಿ ತಂದೆ ಅಲಾವುದ್ದಿನ ಸಾಬ ಬಿದನೂರ ಸಾ: ಗ್ರೀನ ಸರ್ಕಲ್ ಮದೀನಾ ಕಾಲೋನಿ ಜಿಲಾನಾಬಾದ ಇವರಿಗೆ ಮನೆಯಲ್ಲಿ ಬಿಟ್ಟು ಹೋಗಿದ್ದು ಈ ವಿಷಯವನ್ನು ಮನಗಂಡು ಅಪರಿಚಿತ ದುಷ್ಕರ್ಮಿಗಳು ಉಪಾಯದಿಂದ ಮನೆಯಲ್ಲಿ ಪ್ರವೇಶ ಮಾಡಿ ವಾಚಮನ ಈತನಿಗೆ ಯಾವುದೋ ಮತ್ತುಬರುವ ಪದಾರ್ಥವನ್ನು ಕುಡಿಸಿ ಅವನು ಮೂರ್ಚೆ ಹೋದ ನಂತರ ಅವನ ಕೈಕಾಲು ಕಟ್ಟಿ ಮನೆಯಲ್ಲಿಯ ಅಲಮಾರಗಳ ಒಡೆದು ಒಟ್ಟು ಅಂದಾಜು 21,43,800/-ರೂಪಾಯಿ ಬೆಲೆಯುಳ್ಳ ಒಟ್ಟು 726 ಗ್ರಾಂ ಬಂಗಾರದ ಆಭರಣ ಮತ್ತು ನಗದು ಸೇರಿ ಮನೆ ದರೋಡೆ ಮಾಡಿ ಯಾವುದೇ ಸಾಕ್ಷಿಪುರಾವೆ ಸಿಗದಹಾಗೆ ವಾಚಮನ ಅಬ್ದುಲ ನಬಿ ಈತನಿಗೆ ಹರಿತವಾದ ಮಾರಕಾಸ್ತ್ರದಿಂದ ಕುತ್ತಿಗೆ ಕೊಯ್ದು ಕೊಲೆಮಾಡಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಅಲ್ಲದೇ ಫಿರ್ಯಾದಿ ಅಣ್ಣನವರ ರೀಯಲ ಎಸ್ಟೆಟ್ ದಾಖಲಾತಿಗಳಿಗೂ ಬೆಂಕಿ ಹಚ್ಚಿ ಸುಟ್ಟು ಹೋಗಿದ್ದು ಇರುತ್ತದೆ. ಅಪರಿಚಿತ ಆರೋಪಿತರಿಗೆ ಪತ್ತೆಹಚ್ಚುವಂತೆ ಕೊಟ್ಟ ಫಿರ್ಯಾದಿಯ ಮೇಲಿಂದ ರೋಜಾ ಠಾಣೆಯಲ್ಲಿ ಗುನ್ನೆ ನಂ. 11/2014 ಕಲಂ.302,201,396,120[ಬಿ] ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಮಾನ್ಯ ಎಸ್.ಪಿ. ಸಾಹೇಬ ಗುಲಬರ್ಗಾ ಮಾನ್ಯ ಅಪರ ಎಸ್.ಪಿ. ಸಾಹೇಬರು ಗುಲಬರ್ಗಾ ಮತ್ತು ಮಾನ್ಯ ಡಿ.ಎಸ್.ಪಿ.ಬಿ”  ಉಪ ವಿಭಾಗ ಗುಲಬರ್ಗಾರವರ ರವರ ಮಾರ್ಗದರ್ಶನದಲ್ಲಿ ಗುಲಬರ್ಗಾ ವಾಚಮನ ಅಬ್ದುಲ ನಬಿ ಈತನಿಗೆ ಕೈಕಾಲು ಕಟ್ಟಿ ಕೊಲೆಮಾಡಿ ಸೈಯ್ಯದ ಜಾವೀದ ನೂಮಾನ ಇವರ ಮನೆಯಿಂದ ದರೋಡೆ ಮಾಡಿದ ಬಂಗಾರ ಮತ್ತು ನಗದು ಹಣ ದೋಚಿರುವ ಅಪರಿಚಿತ ದುಷ್ಕರ್ಮಿ ಆರೋಪಿತರ ಪತ್ತೆ ಕುರಿತು ವಿಷೇಶ ತಂಡ ರಚಿಸಿ ಶ್ರೀ ಎಂ. ನಾರಾಯಣಪ್ಪಾ ಪಿ.ಐ ರೋಜಾ ಠಾಣೆ ಗುಲಬರ್ಗಾ , ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ[ಕಾ.ಸು] ರೋಜಾ ಠಾಣೆ, ಶ್ರೀ ಭೀಮಶಾ ಎಎಸ್ ಐ, ಪಿಸಿ-645 ಮದರ ಸಾಬ, ಪಿಸಿ-248 ವೈಜನಾಥ, ಪಿಸಿ-954 ಅಂಬಾಜಿ, ಪಿಸಿ-256 ಅಂಬಾದಾಸ   ಈ ತಂಡವು  ದರೋಡೆ ಮಾಡಿದ ಆರೋಪಿತರ ಬಗ್ಗೆ ಮಾಹಿತಿ ಕಲೆಹಾಕಿ ಮೊಬಾಯಿಲ ದೂರವಾಣಿಯ ಜಾಲ ಹಿಡಿದು ಖಚಿತಬಾತ್ಮಿ ಬಂದ ಮೇರೆಗೆ ಆರೋಪಿ 1] ಮಹ್ಮದ ನಯೀಮ ಶೇಖ ತಂದೆ ಅಬ್ದುಲ ಮಜ್ಜೀದ ವಯ: 20ವರ್ಷ, ಉ: ಬಿ.ಇ ವಿದ್ಯಾರ್ಥಿ ಸಾ: ಇಸ್ಲಾಮಾಬಾದ ಕಾಲೋನಿ ಗುಲಬರ್ಗಾ ಈತನಿಗೆ ದಿನಾಂಕ: 09/04/2014 ರಂದು ರಾತ್ರಿ 11: 45 ಪಿಎಮ್ ಕ್ಕೆ ಗುಲಬರ್ಗಾ ರೈಲ್ವೆ ಸ್ಟೇಷನ ಪ್ಲಾಟ ಫಾರಂ ನಂ.1 ರಲ್ಲಿ ದಸ್ತಗಿರಿ ಮಾಡಿ ಆರೋಪಿತನಿಂದ ಕೃತ್ಯಕ್ಕೆ ಸಂಬಂದಿಸಿದ ನಗದು ಹಣ 40,000/-ರೂಪಾಯಿ ಒಂದು ಸೋನಿ ಮೊಬಾಯಿಲ ಅ.ಕಿ.10000/-ರೂ, ಒಂದು ನೋಕಿಯಾ ಮೊಬಾಯಿಲ್ ಅ.ಕಿ.500/-ರೂ. ಒಂದು ಯಮಹಾ ಆರ್ 15 ನಂ. ಕೆ.ಎ 32 ಯು 8000 ಅ.ಕಿ. 25000/- ರೂ.  ಬೆಲೆಯುಳ್ಳದ್ದನ್ನು ಜಪ್ತಿಮಾಡಿಕೊಂಡಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿತರು ತಲೆಮರೆಸಿಕೊಂಡಿದ್ದು ಪತ್ತೆಕ್ರಮ ಜಾರಿಯಲ್ಲಿ ಇರುತ್ತದೆ. ಸದರಿ ದಸ್ತಗಿರಿಯಾದ ಆರೋಪಿತನಿಗೆ ನ್ಯಾಯಾಂಗ ಬಂದನಕ್ಕೆ ಕಳುಹಿಸಿರುತ್ತಾರೆ.
ದರೋಡೆ ಮಾಡುತ್ತಿದ್ದವರ ಬಂಧನ :
ಸ್ಟೇಷನ ಬಜಾರ ಠಾಣೆ : ಶ್ರೀ ಬಿ.ಬಿ.ಬಜಂತ್ರಿ ಪಿ. ಸ್ಟೇಷನ ಬಜಾರ ಪೊಲೀಸ್ ಠಾಣೆ ಗುಲಬರ್ಗಾ ರವರು ಠಾಣೆಗೆ ಮೂರು ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಸರ್ಕಾರಿ ತರ್ಪೆ ಫಿರ್ಯಾದಿ ಎನೆಂದರೆ. ದಿನಾಂಕ 10-04-2014 ರಂದು ರಾತ್ರಿ 02:00 ಗಂಟೆ ಸುಮಾರಿಗೆ ನಾನು ಮತ್ತು ಸುರೇಶ ಪಿ.ಎಸ್. (ಅವಿ) ಹಾಗು ಶಿವಶಂಕರ ಪಿ.ಎಸ್.(ಕಾಸು) ಹಾಗು ಸಿಬ್ಬಂದಿಯವರಾದ ಚನ್ನಮಲ್ಲಪ್ಪಾ ಪಿಸಿ, ಅಶೋಕ ಪಿಸಿ, ಹಾಜಿಮಲಂಗ ಪಿಸಿ, ಶಿವರಾಜ ಪಿಸಿ ರವರುಗಳೊಂದಿಗೆ ವಿಶೇಷ ರಾತ್ರಿ ಗಸ್ತಿನಲ್ಲಿರುವಾಗ ಮಾಹಿತಿ ಬಂದಿದ್ದೆನೆಂದರೆ, ಮೋಹನ ಲಾಡ್ಜ ಹತ್ತಿರ ಹೊಸದಾಗಿ ರೋಡ ಮಾಡುತ್ತಿರುವ ಜಾಗೆಯಲ್ಲಿ ಕೆಲವು ಜನರು ಹೋಗಿ ಬರುವ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ಅಂಜೀಸಿ ಹೊಡೆ ಬಡೆ ಮಾಡಿ ದರೋಡೆ ಮಾಡುತ್ತಿದ್ದಾರೆ ಅಂತಾ ಬಂದ ಖಚೀತ ಭಾತ್ಮಿ ಮೇರೆಗೆ 02:30 ಗಂಟೆಗೆ ಸ್ಧಳಕ್ಕೆ ಹೋಗಿ ನೋಡಲಾಗಿ 5 ಜನರು ಇದ್ದು ವಾಹನಗಳಗೆ ತಡೆದು ಮತ್ತು ಪಾದಚಾರಿಗಳಿಗೆ ಅಂಜೀಸುತ್ತಿದ್ದು ನಾವು ಒಮ್ಮೆಲೆ ಸುತ್ತುವರಿದು ಹಿಡಿದುಕೊಳ್ಳುವಷ್ಟರಲ್ಲಿ ಎರಡು ಜನ ಓಡಿ ಹೋಗಿದ್ದು ಮೂರು ಜನ ಸಿಕ್ಕಿಬಿದ್ದದ್ದು ಅದೆ. ಸಿಕ್ಕಿಬಿದ್ದವರ ಹೆಸರು 1) ಅಂಬರೀಶ ತಂದೆ ರಾಮಚಂದ್ರ ಬನ್ಸೊಡೆ ವಯಃ 18 ವರ್ಷ ಸಾಃ ಬಸವ ನಗರ, 2) ಪ್ರಕಾಶ ತಂದೆ ಸಾಯಬಣ್ಣ ವಯಃ 18 ವರ್ಷ ಸಾಃ ಇಂದ್ರಾ ನಗರ 3) ಶಿವು ತಂದೆ ತಿಪ್ಪಣ್ಣ ಧರ್ಮಾಪೂರ ವಯಃ 20 ವರ್ಷ ಸಾಃ ಇಂದ್ರಾ ನಗರ ಅಂತಾ ತಿಳಿಸಿದ್ದು ಸದರಿಯವರ ಹತ್ತಿರ ದೊರೆತ ವಸ್ತುಗಳ ಪಂಚನಾಮೆ ಕುರಿತು ಪಂಚರಾದ 1) ಶಂಕರ ತಂದೆ ಶರಣಪ್ಪಾ ಸಾಃ ತಾರಫೈಲ, 2) ಕಾಶಿನಾಥ ತಂದೆ ಚಂದ್ರಪ್ಪಾ ಸುಲೇಪೆಠ ಸಾ|| ಸ್ಟೇಷನ್ ಬಜಾರ ಅಪ್ಪರಗಲ್ಲಿ ಗುಲಬರ್ಗಾ ರವರುಗಳ ಸಮಕ್ಷಮ ನೂಲಿನ ಹಗ್ಗ, ಮುಖಕ್ಕೆ ಕಟ್ಟಿಕೊಳ್ಳುವ ಬಟ್ಟೆ, ಖಾರದ ಪೂಡಿ ಹಾಗು ಚಾಕು ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ದಾಳಿಯ ಕಾಲಕ್ಕೆ 1) ಬಂಗಾರಿ, 2) ಸೂರ್ಯ ಗಂಗಾನಗರ ಇವರುಗಳೂ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ನಿಂಬರ್ಗಾ ಠಾಣೆ : ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಠಾಣೆ ರವರು ಠಾಣೆಯಲ್ಲಿ ಹಾಜರಾಗಿ ಒಬ್ಬ ಆರೋಪಿ, ಒಂದು ವರದಿ,ಅಸಲು ಜಪ್ತಿ ಪಂಚನಾಮೆ ಲಗತ್ತಿಸಿ ಮುದ್ದೆ ಮಾಲಿನೊಂದಿಗೆ ಹಾಜರುಪಡಿಸಿದ್ದು ಸದರಿ ವರದಿಯ ವಿವರವೇನೆಂದರೆ  ಇಂದು ದಿನಾಂಕ  10-04-2014  ರಂದು 0900 ಗಂಟೆಗೆ  ಭಟ್ಟರ್ಗಾ ಗ್ರಾಮದ ಬಸ ನಿಲ್ದಾಣದ ಹತ್ತಿರ ಭಟ್ಟರ್ಗಾದಿಂದ  ಆಳಂದ ಕಡೆಗೆ ಹೋಗುವ ಡಾಂಬರ ರೋಡಿನ ಮೇಲೆ  ಒಬ್ಬ ವ್ಯಕ್ತಿಯು ಅಕ್ರಮವಾಗಿ ಮಧ್ಯವನ್ನು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ನಾನು ಕೂಡಲೇ ಸಿಬ್ಬಂದಿ ಹಾಗು ಪಂಚರೋಂದಿಗೆ ಬಾತ್ಮಿ ಬಂದ ಸ್ಥಳವಾದ ಭಟ್ಟರ್ಗಾ ಗ್ರಾಮದ ಬಸ ನಿಲ್ದಾಣದ ಹತ್ತಿರ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ಭಟ್ಟರ್ಗಾದಿಂದ  ಆಳಂದ ಕಡೆಗೆ ಹೋಗುವ ಡಾಂಬರ ರೋಡಿನ ಮೇಲೆ ತನ್ನ ಮುಂದೆ ಒಂದು ಪ್ಲಾಸ್ಟೀಕ ಚೀಲದಲ್ಲಿ ಮಧ್ಯದ ಪಾಕೇಟಗಳನ್ನು ಅಕ್ರಮವಾಗಿ ಯಾವುದೆ ಲೈಸನ್ಸ ಇಲ್ಲದೆ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಮಧ್ಯದ ಪಾಕೀಟಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಹಿಡಿದು ಹೆಸರು ವಿಚಾರಿಸಲು ಅವನು ತನ್ನ ಹೆಸರು ಯಮನಯ್ಯ ತಂದೆ ನಾಗಯ್ಯ ಗುತ್ತೇದಾರ ಸಾ|| ಭಟ್ಟರ್ಗಾ ಅಂತ ತಿಳಿಸಿದನು, ಅವನಿಗೆ ಈ ಮಧ್ಯದ ಮಾರಾಟದ ಬಗ್ಗೆ ಲೈಸನ್ಸ ವಗೈರೆ ಕೇಳಿದ್ದು ಅದಕ್ಕೆ ಆತನು ತನ್ನ ಹತ್ತಿರ ಯಾವುದೆ ಲೈಸನ್ಸ ವಗೈರೆ ಇರುವದಿಲ್ಲ ಅಂತ ತಿಳಿಸಿದನು, ಅವನ ಮುಂದೆ ಇದ್ದ ಮಧ್ಯದ ಪಾಕೀಟಗಳನ್ನು ಪರಿಶೀಲಿಸಲಾಗಿ 01] 180 ML 36 ORIGINAL CHOICE DELUXE WHISKY PACKETS WORTH RS. 1700/-ರೂಪಾಯಿಯ ಮೌಲ್ಯದ ಮಧ್ಯದ ಪಾಕೇಟಗಳನ್ನು, 02] ಮಧ್ಯ ಮಾರಿದ ನಗದು ಹಣ 110/- ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮದರಸಾಬ ತಂದೆ ಮೌಲಾಸಾಬ ದಫೆದಾರ ಸಾ|| ದುಧನಿ ತಾ|| ಅಕ್ಕಲಕೊಟ್ ಜಿ || ಸೋಲಾಪೂರ  ರವರು 2007 ನೇ ಸಾಲಿನಲ್ಲಿ ತನ್ನ ಹೆಂಡತಿಯ ತಮ್ಮ ರಹೀಮ ತಂದೆ ಮೊದಿನ ಸಾಬ ಇವರಿಗೆ ಆಟೋ ತೆಗೆದುಕೊಳ್ಳುವ ಸಲುವಾಗಿ 30 ಸಾವಿರ ರೂಪಾಯಿ ಕೊಟ್ಟಿದ್ದು ದಿನಾಂಕ|| 08/04/2014 ರಂದು ಸದರ ಹೆಂಡತಿ ತಮ್ಮ ರಹೀಮ ಈತನ ಮದುವೆಗೆ ಅಂತಾ ನಮ್ಮೂರಿನಿಂದ ಗುಲಬರ್ಗಾಕ್ಕೆ ಮಧ್ಯಾಹ್ನ 03-00 ಗಂಟೆಗೆ ಮದಿನಾ ಕಾಲೋನಿಯಲ್ಲಿರುವ ತನ್ನ ಮಾವನ ಮನೆಗೆ ಬಂದು ಮದುವೆಯ ಹಲ್ದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಯಂಕಾಲ ಉಟ ಮಾಡಿ ಮಾವನ ಮನೆಯಲ್ಲಿ ಮಲಗಿಕೊಂಡಿದ್ದು ಹೆಂಡತಿಯ ತಮ್ಮಂದಿರಾದ ರಹೀಮ ಮತ್ತು ಅಲೀಮ ಇಬ್ಬರು ಕೂಡಿ ಬೊಸಡಿಕೆ ಶಾದಿಸೇ ಜಾದಾ ತೆರೆಕೊ ಪೈಸೆ ಜಾದಾ ಹೊಗಾಯೆ ಪೈಸೆ ದಿಯಾ ತೊ ಮೇರೆ ಬಹಿನಾ ಕೊ ಶಾದಿ ಮೇ ಬೇಜದೇತಾ ಹೈ ಅಂತಾ ಅವಾಚ್ಯ ಶಬ್ದಗಳಿಂದ ಬೈ ಹತ್ತಿದರು ಅದಕ್ಕೆ ನಾನು ಅಲ್ಲಿಂದ ಹೊಗಬೇಕು ಅಂತಾ ಮನೆಯಿಂದ ಹೊರಗೆ ಬರುತ್ತಿರಬೇಕಾದರೆ ನನಗೆ ತಡೆದು ನಿಲ್ಲಿಸಿ ಇಬ್ಬರು ಕೂಡಿ ಕೈಮುಷ್ಟಿ ಮಾಡಿ ಹೊಟ್ಟೆಯ ಮೇಲೆ  ಬೆನ್ನಿನ ಮೇಲೆ, ಹೆಡಕಿನ ಮೇಲೆ ಹೊಡೆದು ಗಾಯಗೊಳೀಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: