ಸುಲಿಗೆ ಪ್ರಕರಣಗಳು :
ಬ್ರಹ್ಮಪೂರ ಠಾಣೆ : ಶ್ರೀಮತಿ ಅನೀತಾ ಗಂಡ ಮಲ್ಲಿಕಾರ್ಜುನ ಬೋದನಕರ್ ಸಾ|| ಎಮ್.ಆರ್.ಎಮ್.ಸಿ. ಎದುರುಗಡೆ ಸುಂದರ ನಗರ
ಗುಲಬರ್ಗಾ.ರವರು ದಿನಾಂಕ:23-04-2014
ರಂದು ಬೆಳಿಗ್ಗೆ 4:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಸಲುವಾಗಿ ಮೀಲನ
ಚೌಕನಲ್ಲಿರುವ ನ್ಯಾಯಾಬೆಲೆ ಅಂಗಡಿಗೆ ಹೋಗಿ ಕೆರೋಸಿನ ಎಣ್ಣೆಯನ್ನು ತರುವದರ ಸಲುವಾಗಿ ಮನೆಯಿಂದ
ಹೋಗುತ್ತಿರುವಾಗ ಗಾಜೀಪೂರ ಬೀದಿ ಬಸವಣ್ಣ ಸ್ಕೂಲ ಹತ್ತಿರ ಅಂದಾಜು ಬೆಳಿಗ್ಗೆ 4:30 ಗಂಟೆ ಸುಮಾರಿಗೆ ಹೋಗುತ್ತಿದ್ದಂತೆ, ಅಂದಾಜ 20 ರಿಂದ 25 ವರ್ಷದ ಮೂರು ಜನ ಅಪರಚಿತ ಹುಡುಗರು ಮೋಟರ ಸೈಕಲ ಮೇಲೆ ಬಂದವರೆ
ಅವರೆಲ್ಲರೂ ಮೋಟರ ಸೈಕಲನಿಂದ ಕೆಳಗೆ ಇಳಿದು ಅವರಲ್ಲಿ ಇಬ್ಬರೂ ಆ ಕಡೆ - ಈ ಕಡೆ ರೋಡಿಗೆ
ನಿಂತುಕೊಂಡರು ನನ್ನ ಹತ್ತಿರ ಒಬ್ಬ ಹುಡಗ ಬಂದವನೆ ಒಮ್ಮಿದೊಮ್ಮೆಲೆ ನನ್ನ ಕೊರಳಗೆ ಕೈ ಹಾಕಿ
ಕೊರಳಲ್ಲಿದ್ದ ಬಂಗಾರದ 2 ತಾಳಿ ಬಟ್ಟಲು 2 ಹಾಗಲ ಕಾಯಿ 6 ಅಷ್ಟಪೈಲಿ ಗುಂಡುಗಳು ಕೆಳಗೆ ಇದ್ದದ್ದು ಮತ್ತು ಮೇಲಗಡೆ
ಬಂಗಾರದ ಅಷ್ಟಪೈಲಿ ಗುಂಡಿನ ಸರ ಒಳಗಡೆ ಕರಿಮಣಿ ಇದ್ದುದ್ದು ಹೀಗೆ ಒಟ್ಟು 12 ಗ್ರಾಂ ಬಂಗಾರದ ತಾಳಿ ಅ||ಕಿ||
32,000/-ರೂಪಾಯಿ
ಬೆಲೆ ಬಾಳುವದನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಪೂರ ಠಾಣೆ : ಶ್ರೀಮತಿ .ರಾಣಿ ಗಂಡ ಬಿಕಮಸಿಂಗ ಠಾಕೂರ ಸಾ|| ಅತ್ತರ ಕಂಪೌಂಡ ಗಾಜೀಪೂರ ಗುಲಬರ್ಗಾ ಇವರು ದಿನಾಂಕ: 23-04-2014
ರಂದು ಬೆಳಿಗ್ಗೆ 5:30 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದೆ ಕಸಗೂಡಿಸುತ್ತಿರುವಾಗ ಅಂದಾಜ 20
ರಿಂದ 25 ದ ವರ್ಷದ ಮೂರು ಜನ ಅಪರಚಿತ ಹುಡುಗರು ಮೋಟಾರ ಸೈಕಲ ಮೇಲೆ ಬಂದವರೆ ಅವರೆಲ್ಲರೂ ಕೆಳಗೆ
ಇಳಿದು ಅವರಲ್ಲಿ ಇಬ್ಬರೂ ಆಕಡೆ - ಈ ಕಡೆ ರೋಡಿಗೆ ನಿಂತುಕೊಂಡರು ನನ್ನ ಹತ್ತಿರ ಒಬ್ಬ ಹುಡಗ
ಬಂದವನೆ ಒಮ್ಮಿಂದೊಮ್ಮೆಲೆ ನನ್ನ ಕೊರಳಗೆ ಕೈ ಹಾಕಿ ಕೊರಳಲ್ಲಿದ್ದ ಬಂಗಾರದ
ತಾಳಿ ಹರಡಾ ಅದರಲ್ಲಿ 14 ಸಣ್ಣ ಅಷ್ಟಪೈಲಿ ಬಂಗಾರ ಗುಂಡುಗಳೊಂದಿಗೆ ಇದ್ದ ಕರಿಮಣಿ ಸರ ಹೀಗೆ
ಒಟ್ಟು 5 ಗ್ರಾಂ ಅ|ಕಿ|| 15,000/- ರೂಪಾಯಿ ಬೆಲೆ ಬಾಳುವುದನ್ನು ಜಬರದಸ್ತಿಯಿಂದ
ಕಸಿದುಕೊಂಡು ಅವರೆಲ್ಲರೂ ಅದೇ ಮೋಟಾರ ಸೈಕಲ ಮೇಲೆ ಕುಳಿತು ಕೊಂಡು ಹೋಗಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 22-04-14 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಅಂಬಿಕಾ ವೈನ್ಸ ಶಾಪದಲ್ಲಿ ಹೋಗಿ ಗಾರ್ಡನ ಜಾಗೆಯಲ್ಲಿ
ಕುಳಿತುಕೊಂಡು ಬಿಯರ ಅರ್ಡರ ಮಾಡಿ ಬಿಯರ ಕುಡಿದು ಹೊರೆಗಡೆ ಬರುತ್ತಿದ್ದಾಗ ಅಲ್ಲೇ ಕುಡಿಯುತ್ತಾ ಕುಳಿತಿದ್ದ ತನಗೆ ಪರಿಚಯದ ಮಾಳು ಸಾ: ಮಾಹಾಗಾಂವ
ಮತ್ತು ಜಗನ್ನಾಥ ಸಾ: ನಾಗೂರ ಇವರಿಬ್ಬರು ಕುಡಿಯುತ್ತಾ ಕುಳಿತಿದಿದ್ದು, ಮಾಳು ಇತನು
ಫಿರ್ಯಾದಿಗೆ ನೋಡಿ ಗುರುನಾಥ ಬಾ ಅಂತಾ ಕರೆಯಲು ಅವರ ಎದುರುಗಡೆ ಹೋಗಿ ಕುಳಿತು ಕೊಂಡಾಗ, ಮಾಳು ಇತನು 90 ಓ.ಟಿ. ಕ್ವಾಟರ ಕುಡಿ ಅಂತಾ ಹೇಳಿದ್ದು ಅದಕ್ಕೆ ನಾನು ಬಿಯರ ಕುಡಿದಿದ್ದೆನೆ ಕ್ವಾಟರ ಕುಡಿಯುವುದಿಲ್ಲಾ ಅಂತಾ ಹೇಳಿದಾಗ ಮಾಳು ಇತನು 90 ಕುಡಿ
ಎನಾಗುತ್ತದೆ ಅಂತಾ ಹೇಳಲು ಮಾಳುವಿಗೆ ನಾನು ನಿನೇ 90 ಓ.ಟಿ. ಕ್ವಾಟರ ಕುಡಿ ಅದರ ಬಿಲ್ಲು ಕೊಡುತ್ತೇನೆ ಎಂದು ಹೇಳಿದ್ದಕ್ಕೆ ಎದುರುಗಡೆ ಕುಳಿತ
ಜಗನ್ನಾಥ ಸಾ: ನಾಗೂರ ಇತನು ಫಿರ್ಯಾದಿಗೆ ಭೋಸಡಿ ಮಗನೇ ನಮಗೆ 90 ಓ.ಟಿ. ಕ್ವಾಟರ ಕುಡಿ ಅಂತಾ
ಹೇಳುವನನು ನಿನ್ಯಾರು ಅಂತಾ ಬೈಯ್ಯುತ್ತಾ ಅವನ ಕೈಯಲ್ಲಿದ್ದ ಗಾಜಿನ ಗ್ಲಾಸಿನಿಂದ ತಲೆಯ ಮೇಲೆ ಹೊಡೆದು
ರಕ್ತಗಾಯಗೊಳಿಸಿ ನೂಕಿಸಿಕೊಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment